ಹೆದ್ದಾರಿಗಳಲ್ಲಿ ವಾಹನ ನಿಲ್ಲಿಸಿ ಪೊಲೀಸರು ತಪಾಸಣೆ ನಡೆಸುವುದು ಸಾಮಾನ್ಯ. ಹೀಗೆ ಕರ್ನಾಟಕದ ಬೈಕ್ ಸವಾರ ಪಾಂಡಿಚೇರಿ ತೆರಳುತ್ತಿದ್ದ ವೇಳೆ ತಮಿಳುನಾಡು ಪೊಲೀಸ್ ತಡೆದು ನಿಲ್ಲಿಸಿದ್ದಾರೆ. ಡ್ರೈವಿಂಗ್ ಲೆಸೆನ್ಸ್, ವಿಮೆ ಸೇರಿದಂತೆ ಯಾವುದೇ ದಾಖಲೆ ಕೇಳಿಲ್ಲ. ಬದಲಾಗಿ ಪೊಲೀಸ್ ಮಾಡಿದ ಮನವಿ ಎಲ್ಲರ ಹೃದಯ ತಟ್ಟಿದೆ. ಈ ವಿಡಿಯೋ ವೈರಲ್ ಆಗಿದೆ.
ಪಾಂಡಿಚೇರಿ(ಮಾ.25): ಇತ್ತೀಚೆಗೆ ವಾಹನ ತಡೆದು ನಿಲ್ಲಿಸಿ ಪೊಲೀಸರ ತಪಾಸಣೆಗೆ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಕೆಲ ಅಹಿತಕರ ಘಟನೆಗಳೇ ಇದಕ್ಕೆ ಸಾಕ್ಷಿ. ಆದರೆ ಪಾಂಡಿಚೇರಿಗೆ ತೆರಳುವ ಹೆದ್ದಾರಿಯಲ್ಲಿ ತಮಿಳುನಾಡು ಪೊಲೀಸರು ಕರ್ನಾಟಕದ ಬೈಕ್ ಸವಾರನನ್ನು ನಿಲ್ಲಿಸಿ ಮಾಡಿದ ಮನವಿ ಇದೀಗ ಭಾರಿ ವೈರಲ್ ಆಗಿದೆ.
ಕರ್ನಾಟಕದ ಬೈಕ್ ಸವಾರ ಪಾಂಡೇಚೇರಿಗೆ ತೆರಳುತ್ತಿದ್ದ ವೇಳೆ, ಹೆದ್ದಾರಿಯಲ್ಲಿ ಸವಾರನಿಗೆ ದೂರದಿಂದಲೇ ಪೊಲೀಸರು ನಿಲ್ಲಿಸಲು ಮನವಿ ಮಾಡಿದ್ದಾರೆ. ಬೈಕ್ ಸವಾರ ಬೈಕ್ ನಿಲ್ಲಿಸಿದ ವೇಳೆ ತಮಿಳುನಾಡು ಪೊಲೀಸ್, ಕರ್ನಾಟಕವಾ? ಎಂದು ಕೇಳಿದ್ದಾನೆ. ಅದಕ್ಕೆ ಹೌದು ಎಂದ ಸವಾರನ ಬಳಿ ಪೊಲೀಸರು, ತನ್ನ ಕೈಯಲ್ಲಿರುವ ಔಷಧವನ್ನು ತೋರಿಸಿ, ಇದನ್ನು ಬಸ್‌ನಲ್ಲಿರುವ ಒಬ್ಬರು ತಾಯಿಯಿಂದ ಈ ಔಷಧ ಬಿದ್ದಿದೆ. ಅವರು ಈಗಷ್ಟೆ ಹೋಗಿರುವ ಸರ್ಕಾರಿ ಬಸ್‌ನಲ್ಲಿದ್ದಾರೆ. ಅವರಿಗೆ ಈ ಔಷಧ ತಲುಪಿಸಿ ಎಂದಿದ್ದಾರೆ.
undefined
ಪೊಲೀಸರ ಮೇಲೆ ಹಲ್ಲೆ : 13 ಮಂದಿ ಬಂಧನ.
ಹೆದ್ದಾರಿಯಲ್ಲಿ ಪೊಲೀಸರು ತಪಾಸಣೆ ಮಾಡುತ್ತಿದ್ದ ವೇಳೆ ಬಸ್‌ನ ಬದಿಯಲ್ಲಿ ಕುಳಿತಿದ್ದ ತಾಯಿಯ ಔಷಧಿ ಹೊರಬಿದ್ದಿದೆ. ಬಸ್ ವೇಗವಾಗಿ ಮುಂದೆ ಸಾಗಿದ ಕಾರಣ ಕೂಗಿದರೂ ಬಸ್ ಮುಂದೆ ಸಾಗಿದೆ. ಹೀಗಾಗಿಪೊಲೀಸ್, ಔಷಧಿಯನ್ನು ಬೈಕ್ ಸವಾರನ ಬಳಿ ತಲುಪಿಸಲು ಹೇಳಿದ್ದಾರೆ. ಬೇಗ ತಲುಪಿಸಿ, ಮುಂದಿನ ನಿಲುಗಡೆಯಲ್ಲಿ ಆ ತಾಯಿ ಇಳಿಯಲಿದ್ದಾರೆ ಎಂದಿದ್ದಾರೆ.
ಔಷಧ ಸ್ವೀಕರಿಸಿದ ಕರ್ನಾಟಕದ ಬೈಕ್ ಸವಾರ ವೇಗವಾಗಿ ಬೈಕ್ ಚಲಾಯಿಸಿ ಬಸ್ ಚೇಸ್ ಮಾಡಿದ್ದಾನೆ. ಬಳಿಕ ಡ್ರೈವರ್ ಬಳಿ ಬಸ್ ನಿಲ್ಲಿಸುವಂತೆ ಸೂಚನೆ ನೀಡಿದ್ದಾನೆ. ಬಸ್ ನಿಲ್ಲಿಸಿದ ವೇಳೆ ತನ್ನ ಬ್ಯಾಗ್‌ನಿಂದ ಔಷಧ ತೆಗೆದು, ಪೊಲೀಸರು ಇದನ್ನು ನೀಡಿದ್ದಾರೆ. ಈ ಬಸ್‌ನನಲ್ಲಿ ತಾಯಿಯೊಬ್ಬರು ಔಷಧ ಮರೆತಿದ್ದಾರೆ. ನೀಡಲು ಸೂಚಿಸಿದ್ದರು ಎಂದು ಕೊಟ್ಟಿದ್ದಾನೆ.
ಈ ಸಂಪೂರ್ಣ ಘಟನೆ ಬೈಕ್ ಸವಾರ ಹೆಲ್ಮೆಟ್ ಕ್ಯಾಮಾರದಲ್ಲಿ ರೆಕಾರ್ಡ್ ಆಗಿದೆ. ಇಷ್ಟೇ ಅಲ್ಲ ಭಾರಿ ವೈರಲ್ ಆಗಿದೆ.