
ನವದೆಹಲಿ(ಮಾ.13) ಪುಟ್ಟ ಮಗುವನ್ನು ಎತ್ತಿಕೊಂಡು ತಿರುಗುವ ಕಾಲ ಬದಲಾಗಿ ವರ್ಷಗಳೇ ಉರುಳಿದೆ. ಈಗ ಮಗುವಿನ ಆರಾಮವಾಗಿ ಕುಳ್ಳಿರಿಸಿ ತಿರುಗಾಡಿಸುವ, ಬೇಬಿ ಸ್ಟ್ರೋಲರ್ ಸಾಮಾನ್ಯ. ಭಾರತದಲ್ಲಿ 2 ಸಾವಿರ ರೂಪಾಯಿಯಿಂದ ಬೇಬಿ ಸ್ಟ್ರೋಲರ್ ಬೆಲೆ ಆರಂಭಗೊಳ್ಳುತ್ತದೆ. ಇದಕ್ಕಿಂತ ಕಡಿಮೆ ಬೆಲೆಯ ಸ್ಟ್ರೋಲರ್ ಕೂಡ ಲಭ್ಯವಿದೆ. ಇನ್ನು ಉತ್ತಮ ಗುಣಮಟ್ಟ,ಬಾಳಿಕೆ,ಬಣ್ಣ, ಕುಶನ್ ಸೇರಿದಂತೆ ಫೀಚರ್ಸ್ ಹೆಚ್ಚಾಗುತ್ತಾ ಹೋದಂತೆ ಬೆಲೆಯಲ್ಲಿ ಏರಿಕೆಯಾಗುತ್ತೆ. 20 ಸಾವಿರ, 40 ಸಾವಿರ, 50 ಸಾವಿರ ರೂಪಾಯಿಯ ಬೇಬಿ ಸ್ಟ್ರೋಲರ್ ಕುರಿತು ಕೇಳಿರುತ್ತೇವೆ. ಆದರೆ ಇದೀಗ ಜನಪ್ರಿಯ ಕಾರು ಬ್ರ್ಯಾಂಡ್ ಲ್ಯಾಂಬೋರ್ಗಿನಿ ಇದೀಗ ಬೇಬಿ ಸ್ಟ್ರೋಲರ್ ಉತ್ಪನ್ನ ಲಾಂಚ್ ಮಾಡಿದೆ. ಇದರ ಬೆಲೆ ಇದೀಗ ಭಾರಿ ಸದ್ದು ಮಾಡುತ್ತಿದೆ.
ಲ್ಯಾಂಬೋರ್ಗಿನಿ ಬೇಬಿ ಸ್ಟ್ರೋಲರ್ ಬೆಲೆ ಎಷ್ಟು?
ಲ್ಯಾಂಬೋರ್ಗಿನಿ ಕಾರು ಬ್ರ್ಯಾಂಡ್ ಇದೀಗ ಬ್ರಟಿಷ್ ನರ್ಸರಿ ಬ್ರ್ಯಾಂಡ್ ಸಿಲ್ವರ್ ಕ್ರಾಸ್ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಈ ಮೂಲಕ ಲ್ಯಾಂಬೋರ್ಗಿನಿ ಅತ್ಯುತ್ತಮ ಗುಣಮಟ್ಟದ ಬೇಬಿ ಸ್ಟ್ರೋಲರ್ ಬಿಡುಗಡೆ ಮಾಡಿದೆ. ಅತೀ ದುಬಾರಿ ಲ್ಯಾಂಬೋರ್ಗಿನಿ ಕಾರು ಹೊಂದಿದ ಕುಟುಂಬ, ಮಗುವಿನ ಜೊತೆ ತೆರಳುವಾಗ ಲ್ಯಾಂಬೋರ್ಗಿನಿ ಬಿಟ್ಟು ಬೇರೆ ಬ್ರ್ಯಾಂಡ್‌ನ ಬೇಬಿ ಸ್ಟ್ರೋಲರ್ ಬಳಕೆ ಮಾಡಿದರೆ ಹೇಗೆ? ಹೀಗಾಗಿ ಇದೀಗ ಲ್ಯಾಂಬೋರ್ಗಿನಿ ತನ್ನದೇ ಬ್ರ್ಯಾಂಡ್‌ನಲ್ಲಿ ಬೇಬಿ ಸ್ಟ್ರೋಲರ್ ಬಿಡುಗಡೆ ಮಾಡಿದೆ. ಇದರ ಬೆಲೆ ಸರಿಸುಮಾರು 5 ಲಕ್ಷ ರೂಪಾಯಿ.
ಹಮ್ಮರ್, ಲ್ಯಾಂಬೋರ್ಗಿನಿ ಸೇರಿ ಕಿಚ್ಚ ಸುದೀಪ್ ಬಳಿ ಇರುವ ಐಷಾರಾಮಿ ಕಾರುಗಳೆಷ್ಟು?
ಲ್ಯಾಂಬೋರ್ಗಿನಿ ಕಾರು ಬ್ರ್ಯಾಂಡ್‌ನ ಬೇಬಿ ಸ್ಟ್ರೋಲರ್ ಖರೀದಿಸಲು ಬರೋಬ್ಬರಿ 5 ಲಕ್ಷ ರೂಪಾಯಿ ನೀಡಬೇಕು. ಭಾರತದಲ್ಲಿ ಈ ಬೆಲೆಗೆ ಸಣ್ಣ ಹ್ಯಾಚ್ ಬ್ಯಾಕ್ ಕಾರು ಲಭ್ಯವಿದೆ. ಇಷ್ಟೇ ಅಲ್ಲ ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳ ಪೈಕಿ ಸಣ್ಣ ಕಾರುಗಳ ಸಂಖ್ಯೆ ಕೂಡ ಹಚ್ಚಿದೆ. ಆದರೆ ಇಲ್ಲಿ ಬೆಲೆಗಿಂತ ಬ್ರ್ಯಾಂಡ್ ಪ್ರಮುಖ ಪಾತ್ರವಹಿಸಿದೆ. ಲ್ಯಾಂಬೋರ್ಗಿನಿ ಕಾರುಗಳು ಆರಂಭಗೊಳ್ಳುವುದೇ 3.5 ಕೋಟಿ ರೂಪಾಯಿಂದ ಇನ್ನು ಗರಿಷ್ಠ 8.5 ಕೋಟಿ ರೂಪಾಯಿ. ಇದು ಎಕ್ಸ್ ಶೋ ರೂಂ ಬೆಲೆಯಾಗಿದೆ. ಹೀಗಾಗಿ ಈ ಮೊತ್ತಕ್ಕೆ ಹೋಲಿಸಿದರೆ 5 ಲಕ್ಷ ರೂಪಾಯಿ ದೊಡ್ಡ ಬೆಲೆಯಲ್ಲ.
ಲ್ಯಾಂಬೋರ್ಗಿನಿ ಬೇಬಿ ಸ್ಟ್ರೋಲರ್ ವಿಶೇಷತೆ ಏನು?
5 ಲಕ್ಷ ರೂಪಾಯಿ ಬೆಲೆಯ ಲ್ಯಾಂಬೋರ್ಗಿನಿ ಬೇಬಿ ಸ್ಟ್ರೋಲರ್‌ನಲ್ಲಿ ಹಲವು ವಿಶೇಷತೆ ಇದೆ. ಕೇವಲ ಬ್ರ್ಯಾಂಡ್ ಮಾತ್ರವಲ್ಲ. ಅತ್ಯುತ್ತಮ ಗುಣಮಟ್ಟದ ಜೊತೆಗೆ ಹಲವು ಫೀಚರ್ಸ್ ಇದರಲ್ಲಿದೆ. ಪ್ರಮುಖವಾಗಿ ಇದು ಫ್ಲೋರ್, ರಸ್ತೆ, ಪಾದಾಚಾರಿ ರಸ್ತೆ ಸೇರಿದಂತೆ ಬಹುತೇಕ ಮಕ್ಕಳನ್ನು ಕರೆದುಕೊಂಡು ಹೋಗುವ ಎಲ್ಲಾ ಸ್ಥಗಳಿಗಳೂ ಸರಿಹೊಂದುವ ಹಾಗೂ ಎಲ್ಲಾ ಮಾರ್ಗದಲ್ಲಿ ಬಳಕೆ ಮಾಡಬಹುದಾಗ ಚಕ್ರಗಳನ್ನು ಬಳಸಿಕೊಳ್ಳಲಾಗಿದೆ. ಇದರ ಚಕ್ರಗಳು ಸಂಪೂರ್ಣ ಸಸ್ಪೆನ್ಶನ್ ಹೊಂದಿದೆ. ಹೀಗಾಗಿ ರಸ್ತೆ ಹೇಗೆ ಇದ್ದರೂ ಕುಳಿತಿರುವ ಮಗುವಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಲ್ಯಾಂಬೋರ್ಗಿನಿ ಸೂಪರ್ ಕಾರುಗಳಂತೆ ಬ್ರೇಕ್ ಪೆಡಲ್ ಕೂಡ ಈ ಬೇಬಿ ಸ್ಟ್ರೋಲರ್‌ಗೆ ನೀಡಲಾಗಿದೆ. ಇಟಾಲಿಯನ್ ಲೆಥರ್, ಕಾರಿನಲ್ಲಿರುವಂತೆ ಆರೇಂಜ್ ಸ್ಟಿಚ್, ಸ್ಲೀಕ್ ಬ್ಲಾಕ್ ಫ್ಯಾಬ್ರಿಕ್ಸ್, ಬೇಬಿ ಕ್ಯಾರಿಕಾಟ್, ಪುಶ್ ಚೇರ್ ಸೀಟ್, ಸೂರ್ಯನ ಪ್ರಕರಮ ಬೆಳಕು ಮಗುವಿಗೆ ತಾಗದಂತೆ ಸನ್ ಸೈಲ್, ಸೊಳ್ಳೆ ಪರದೆ, ಜೊತೆಗೆ ಮಳೆ ಬಂದರೂ ಮಗುವ ಸ್ವಲ್ಪವೂ ಒದ್ದೆಯಾಗದಂತೆ ರೈನ್ ಕವರ್ ಕೂಡ ಹೊಂದಿದೆ.
ಲ್ಯಾಂಬೋರ್ಗಿನಿಯ ಕಾರು ತಯಾರಿಕೆ ಸುದೀರ್ಘ ದಿನ ಹಿಡಿಯುತ್ತದೆ. ಇದರ ಡಿಸೈನ್‌ಗೆ ವರ್ಷಗಳು ತೆಗೆದುಕೊಳ್ಳುತ್ತಾರೆ. ಬಳಿಕ ಉತ್ಪಾದನೆ, ಟೆಸ್ಟಿಂಗ್ ಹೀಗೆ ವರ್ಷಗಳು ಉರುಳುತ್ತದೆ. ವಿಶೇಷ ಅಂದರೆ ಈ ಬೇಬಿ ಸ್ಟ್ರೋಲರ್ ಡಿಸೈನ್ ಮಾಡಲು ಬರೋಬ್ಬರಿ 2 ವರ್ಷ ತೆಗೆದುಕೊಳ್ಳಲಾಗಿದೆ. ಕೇವಲ 500 ಬೇಬಿ ಸ್ಟ್ರೋಲರ್ ಮಾತ್ರ ಉತ್ಪಾದನೆ ಮಾಡಲಾಗಿದೆ. ಹೀಗಾಗಿ ಮೊದಲು ಬಂದವರಿಗೆ, ಬುಕ್ ಮಾಡಿದವರಿಗೆ ಮಾತ್ರ ಸಿಗಲಿದೆ. ಇನ್ನು ಸದ್ಯ ಈ ಬೇಬಿ ಸ್ಟ್ರೋಲರ್ ಲಂಡನ್‌ನಲ್ಲಿ ಮಾತ್ರ ಲಭ್ಯವಿದೆ. ಶೀಘ್ರದಲ್ಲೇ ಭಾರತಕ್ಕೂ ಬರಲಿದೆ.
ಭಾರತದ ಇಲ್ಲಿ ಮನೆ ಖರೀದಿಸಿದರೆ ನಿಮಗೆ 4 ಕೋಟಿ ರೂ ಲ್ಯಾಂಬೋರ್ಗಿನಿ ಕಾರು ಉಚಿತ!