48 ಗಂಟೆಯಲ್ಲಿ ಹೆದ್ದಾರಿ, ಅಂಡರ್ ಪಾಸ್ ಸಂಚಾರಕ್ಕೆ ಮುಕ್ತ, ಮಹೀಂದ್ರ ಹಂಚಿಕೊಂಡ ಕಾಮಗಾರಿ ವಿಡಿಯೋ ವೈರಲ್!

By Suvarna News  |  First Published Mar 4, 2023, 5:17 PM IST

ಆನಂದ್ ಮಹೀಂದ್ರ ಹಂಚಿಕೊಳ್ಳುವ ಪ್ರತಿ ವಿಡಿಯೋ ಕುತೂಹಲಗಳ ಆಗರವಾಗಿರುತ್ತದೆ. ಇದೀಗ ಕೇವಲ 48 ಗಂಟೆಯಲ್ಲಿ ಹೆದ್ದಾರಿಯಲ್ಲಿ ಅಂಡರ್ ಪಾಸ್ ಸುರಂಗ ಕಾಮಗಾರಿ ಪೂರ್ಣಗೊಳಿಸಿದ ವಿಡಿಯೋವನ್ನು ಆನಂದ್ ಮಹೀಂದ್ರ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ಅಷ್ಟಕ್ಕೂ ಮಹೀಂದ್ರ ಹಂಚಿಕೊಂಡ ಈ ವಿಡಿಯೋದಲ್ಲಿ ಏನಿದೆ?


ನವದೆಹಲಿ(ಮಾ.04): ಹೆದ್ದಾರಿ ಸೇರಿದಂತೆ ಯಾವುದೇ ರಸ್ತೆ ಕಮಾಗಾರಿಗಳು ಬೇಗನೆ ಪೂರ್ಣಗೊಳಿಸುವುದು ಹರಸಹಾಸ. ಹೀಗಾಗಿ ಭಾರತದಲ್ಲಿ ಹಲವು ರಸ್ತೆಗಳು ಅಮೆಗತಿಯಲ್ಲಿ ಕಾಮಗಾರಿ ಸಾಗತ್ತದೆ. ಜನರು ಹಿಡಿ ಶಾಪ ಹಾಕಿ ಪ್ರಯಾಣ ಮಾಡುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ರಸ್ತೆ ಕಾಮಗಾರಿ ಹಾಗೂ ರಸ್ತೆಗಳ ಸ್ವರೂಪ ಬದಲಾಗಿದೆ. ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳ್ಳುತ್ತಿದೆ. ಗುಣಮಟ್ಟದ ರಸ್ತೆಗಳು ನಿರ್ಮಾಣವಾಗುತ್ತಿದೆ. ಇದೀಗ ಆನಂದ್ ಮಹೀಂದ್ರ ಇದೇ ರಸ್ತೆ ಕಾಮಗಾರಿ ಕುರಿತು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದು ಭಾರತವನ್ನೇ ನಾಚಿಸುವಂತಿದೆ. ಕಾರಣ ಕೇವಲ 48 ಗಂಟೆಯಲ್ಲಿ ಅಂದರೆ ಎರಡೇ ದಿನದಲ್ಲಿ ಹೆದ್ದಾರಿ ಅಗೆದು, ಅಂಡರ್ ಪಾಸ್ ಸುರಂಗ ಅಳವಡಿಸಿ, ಸಂಚಾರಕ್ಕೆ ಮುಕ್ತ ಮಾಡಲಾಗಿದೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.

ಆನಂದ್ ಮಹೀಂದ್ರ  ಹಂಚಿಕೊಂಡಿರುವ ವಿಡಿಯೋ ನೆದರ್ಲೆಂಡ್ ದೇಶದ ಕಾಮಗಾರಿ ವಿಡಿಯೋ. ರಾತ್ರಿಯಾಗುತ್ತಿದ್ದಂತೆ ಜೆಸಿಬಿ, ಕೆಲಸಗಾರರು, ಕ್ರೇನ್ ಸೇರಿದಂತೆ ಭಾರಿ ವಾಹನಗಳು ಆಗಮಿಸಿ ಏಕಾಏಕಿ ಹೆದ್ದಾರಿಯನ್ನೇ ಅಗೆಯಲು ಶುರು ಮಾಡಿದೆ. ಹತ್ತಾರು ಜೆಸಿಬಿ, ಕ್ರೇನ್, ಟಿಪ್ಪರ್ ಸೇರಿದಂತೆ ಹಲವು ವಾಹನಗಳು ಕಾಮಗಾರಿ ಶುರುವಮಾಡಿದೆ. ಕ್ರೇನ್ ಮೂಲಕ ಅಂಡರ್ ಪಾಸ್ ಸುರಂಗ ಅಳವಡಿಸಿ ಮತ್ತೆ ಮಣ್ಮು ಹಾಕಲಾಗಿದೆ. ಬಳಿಕ ಹೆದ್ದಾರಿಗೆ ಡಾಂಬರೀಕರಣವೂ ಮಾಡಲಾಗಿದೆ. ಈ ಎಲ್ಲಾ ಕೆಲಸಗಳು ಕೇವಲ 48 ಗಂಟೆಯಲ್ಲಿ ಮಾಡಿ ಮುಗಿಸಲಾಗಿದೆ.

Tap to resize

Latest Videos

ಬೆಂಗ​ಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಬೈಕ್ ಆಟೋಗೆ ಪ್ರವೇಶವಿಲ್ಲ!

ಒಂದು ವಾರಾಂತ್ಯದಲ್ಲಿ ಡಚ್‌ನಲ್ಲಿ ಹೆದ್ದಾರಿ ಅಗೆದು ಕಾಮಗಾರಿ ಪೂರ್ಣಗೊಳಿಸಲಾಗಿದೆ. ಈ ಕೌಶಲ್ಯವನ್ನು ನಾವು ಬೆಳೆಸಿಕೊಳ್ಳಬೇಕಿದೆ. ಇದು ಕಾರ್ಮಿಕರ ಶ್ರಮ ಉಳಿತಾಯ ಮಾತ್ರವಲ್ಲ, ಸಮಯದ ಉಳಿತಾಯವಾಗಿದೆ. ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗೆ ಇದು ಮುಖ್ಯವಾಗಿದೆ. ಅತೀವೇಗದ ಮೂಲಭೂತ ಸೌಕರ್ಯಗಳ ನಿರ್ಮಾಣ, ಅತೀ ವೇಗದ ಬೆಳವಣಿಗೆ ಕಾರಣವಾಗಲಿದೆ ಎಂದು ಆನಂದ್ ಮಹೀಂದ್ರ ಟ್ವೀಟ್ ಮೂಲಕ ಹೇಳಿದ್ದಾರೆ.

 

The Dutch built a tunnel under a highway in just one weekend! Skills we must acquire. It’s not about labour-saving, but about time-saving. That’s also critical in emerging economy. Faster infrastructure creation means faster growth & benefits to all. pic.twitter.com/SoU3NEsgpE

— anand mahindra (@anandmahindra)

 

ಆನಂದ್ ಮಹೀಂದ್ರ ಈ ವಿಡಿಯೋ ಹಂಚಿಕೊಂಡ ಬೆನ್ನಲ್ಲೇ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಭಾರತದಲ್ಲಿ ಕಾಮಗಾರಿ ವೇಗ ಪಡೆದುಕೊಂಡಿದೆ. ಆದರೆ ಈ ರೀತಿಯ ಕಾಮಾಗಾರಿ ಹಾಗೂ ಕೌಶಲ್ಯದ ಅವಶ್ಯಕತೆ ಇದೆ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೆ ಕೆಲವರು ಭಾರತದಲ್ಲಿ ಕಾಮಗಾರಿ ಆರಂಭಿಸಿದ ರಸ್ತೆ ಪೂರ್ಣಗೊಳ್ಳುವಾದ ಮತ್ತೊಂದು ಪೀಳಿಗೆ ಬಂದಿರುತ್ತದೆ. ಇಷ್ಟೇ ಅಲ್ಲ ಕಾಮಗಾರಿ ಮುಕ್ತಾಯವಾಗುವಾಗ ಇದರ ಹಿಂದಿನ ಎಲ್ಲಾ ಶಕ್ತಿಗಳು ಶ್ರೀಮಂತರಾಗಿರುತ್ತಾರೆ ಎಂದು ಭಾರತದ ವ್ಯವಸ್ಥಯನ್ನು ಟೀಕಿಸಿದ್ದಾರೆ.

ಶನಿವಾರ ಹಾಗೂ ಭಾನುವಾರ ಕಾಮಗಾರಿ ಪೂರ್ಣಗೊಳಿಸಿ, ಸೋಮವಾರ ಸಾರ್ವಜನಿಕರಿಗೆ ಸಂಚಾರಕ್ಕೆ ಮುಕ್ತಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ರೀತಿಯ ಆಲೋಚನೆ, ತುಡಿತ ಭಾರತದಲ್ಲಿ ಬರವುವುದು ಸಾಧ್ಯವಿಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ. 

ಇಲ್ಲಿ ಕಾರಿಗಿಂತ ಪಾರ್ಕಿಂಗ್ ಬಲು ದುಬಾರಿ, ವಾಹನ ನಿಲ್ಲಿಸಲು ನೀಡಬೇಕು 6 ಕೋಟಿ ರೂ!

ಭಾರತದಲ್ಲಿ ರಸ್ತೆ ಅಭಿವೃದ್ಧಿ ವೇಗ ಪಡೆದುಕೊಂಡರೂ ಹಲವು ರಾಜ್ಯಗಳಲ್ಲಿ ಸಾವಿರ ಸಮಸ್ಯೆಗಳಿಂದ ಕಾಮಗಾರಿ ಅಮೆಗತಿಯಲ್ಲಿ ಸಾಗುತ್ತಿದೆ. ಇತ್ತೀಚೆಗೆ ಸದನದಲ್ಲಿ ರಸ್ತೆ ಸಚಿವ ನಿತಿನ್ ಗಡ್ಕರಿ ಈ ಕುರಿತು ಮಹತ್ವದ ಹೇಳಿಕೆ ನೀಡಿದ್ದರು. ಆರಂಭದಲ್ಲಿ ಕೇರಳ ಸರ್ಕಾರ ರಸ್ತೆ ಅಗಲೀಕರಣಕ್ಕೆ ಸ್ಥಳ ವಶಪಡಿಸಿಕೊಳ್ಳುವುದು ಸೇರಿದಂತೆ ಎಲ್ಲಾ ಪ್ರಕ್ರಿಯೆಗೆ ಪ್ರೋತ್ಸಾಹ ನೀಡುವುದಾಗಿ ಹೇಳಿ ಬಳಿಕ ಕೈಚೆಲ್ಲಿತು. ಹೀಗಾಗಿ ಕೇರಳದಲ್ಲಿ ಒಂದು ಕಿಲೋಮೀಟರ್ ರಸ್ತೆ ಕಾಮಗಾರಿಗೆ ಕೇಂದ್ರ ಸರ್ಕಾರಕ್ಕೆ 100 ಕೋಟಿ ರೂಪಾಯಿ ವೆಚ್ಚ ತಗುಲುತ್ತಿದೆ ಎಂದಿದ್ದರು.

click me!