Union Budget 2023 ಕೈಗೆಟುಕುವ ದರದಲ್ಲಿ ಸಿಗಲಿದೆ ಎಲೆಕ್ಟ್ರಿಕ್ ವಾಹನ!

Published : Feb 01, 2023, 04:09 PM ISTUpdated : Feb 01, 2023, 04:19 PM IST
Union Budget 2023 ಕೈಗೆಟುಕುವ ದರದಲ್ಲಿ ಸಿಗಲಿದೆ ಎಲೆಕ್ಟ್ರಿಕ್ ವಾಹನ!

ಸಾರಾಂಶ

ಈ ಬಾರಿಯ ಬಜೆಟ್ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆಗೆ ಮತ್ತಷ್ಟು ಉತ್ತೇಜನ ನೀಡಲಿದೆ. ಇಷ್ಟೇ ಅಲ್ಲ ಲಿಥಿಂಯ ಹಾಗೂ ಐಯಾನ್ ಬ್ಯಾಟರಿ ಮೇಲಿನ ಸುಂಕ ಕಡಿತಗೊಳಿಸಿರುವ ಕಾರಣ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ. ಇದರ ಜೊತೆಗೆ ಭಾರತೀಯ ಆಟೋಮೊಬೈಲ್ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ನೀಡಿರುವ ಕೊಡುಗೆ ಏನು? ಇಲ್ಲಿದೆ.  

ನವದೆಹಲಿ(ಫೆ.01): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ 2023-24ರ ಸಾಲಿನ ಬಜೆಟ್ ಮಂಡಿಸಿದ್ದಾರೆ. ಎಲ್ಲಾ ಕ್ಷೇತ್ರಗಳಿಗೆ ಬಜೆಟ್ ಮೂಲಕ ಪ್ರೋತ್ಸಾಹ ನೀಡಲಾಗುತ್ತದೆ. ಅದರಲ್ಲೂ ದೇಶದ ಆರ್ಥಿಕತೆ ಹಾಗೂ ಉತ್ಪಾದಕತೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಆಟೋಮೊಬೈಲ್ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಅಳೆದು ತೂಗಿ ಕೂಡುಗೆ ನೀಡಿದೆ. ಆಟೋಮೊಬೈಲ್ ಉತ್ಪಾದಕತೆಗಿಂತ ಎಲೆಕ್ಟ್ರಿಕ್ ವಾಹನ ಉತ್ಪಾದನೆಗೆ ಈ ಬಾರಿಯ ಬಜೆಟ್ ಹೆಚ್ಚಿನ ಒತ್ತು ನೀಡಿದೆ. ಪ್ರಮುಖವಾಗಿ ಲಿಥಿಯಂ ಹಾಗೂ ಐಯಾನ್ ಬ್ಯಾಟರಿ ಆಮದು ಮೇಲಿನ ಸುಂಕ ಕಡಿತಗೊಳಿಸಲಾಗಿದೆ. ಇದರಿಂದ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಬೆಲೆ ಮತ್ತಷ್ಟು ಕಡಿಮೆಯಾಗಲಿದೆ. ಇದರಿಂದ ದೇಶದಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿ ವೇಗ ಹೆಚ್ಚಾಗಲಿದೆ. ಸದ್ಯ ಭಾರತದಲ್ಲಿ 8.49  ಲಕ್ಷ ರೂಪಾಯಿ ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರು ಲಭ್ಯವಿದೆ. ಇದೀಗ ಈ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ.

2023-24ರ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಬಂಡವಾಳ ಸರಕು, ಯಂತ್ರೋಪಕರಣ ಮೇಲಿನ ಆಮದು ಸುಂಕ, ಎಲೆಕ್ಟ್ರಿಕ್ ವಾಹನದಲ್ಲಿ ಬಳಸುವ ಲೀಥಿಂಯ ಐಟಾನ್ ಬ್ಯಾಟರಿ ಸೆಲ್ ಮೇಲಿನ ಆಮದು ಸುಂಕ ಕಡಿತಗೊಳಿಸಲಾಗಿದೆ. ಇದರಿಂದ ಭಾರತದಲ್ಲಿ ಉತ್ಪಾದನೆಯಾಗುವ ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ವೆಚ್ಚ ಕಡಿಮೆಯಾಗಲಿದೆ.  

ಮದ್ಯಮ ವರ್ಗದ ಬಯಕೆ ಈಡೇರಿಸಿದ ನಿರ್ಮಲಾ, 7 ಲಕ್ಷ ರೂ.ಆದಾಯಕ್ಕೆ ತೆರಿಗೆ ಇಲ್ಲ

ಗ್ರೀನ್ ಹೈಡ್ರೋಜನ್ ಮಿಷನ್
ಹಸಿರು ಸಾರಿಗೆಗೆ ಕೇಂದ್ರ ಸರ್ಕಾರ ಹೆಚ್ಚು ಒತ್ತು ನೀಡಿದೆ. ಇದರಲ್ಲಿ ಪ್ರಮಖವಾಗಿ ಇತ್ತೀಚೆಗೆ ರಾಷ್ಟ್ರೀಯ ಗ್ರೀನ್ ಹೈಡ್ರೋಜನ್ ಮಿಷನ್‌ಗೆ ಚಾಲನೆ ನೀಡಲಾಗಿದೆ. ಗ್ರೀನ್ ಹೈಡ್ರೋಜನ್ ಇಂಧನದಿಂದ ಭಾರತ ಮೇಲಿನ ಅತೀ ದೊಡ್ಡ ಹೊರೆ ಇಳಿಕೆಯಾಗಲಿದೆ. ಇಂಧನ ಬಳಕೆ ಹಾಗೂ ಆಮದು ಕಡಿಮೆ ಮಾಡಿ ದೇಶದಲ್ಲಿ ಗ್ರೀನ್ ಹೈಡ್ರೋಜನ್ ಇಂಧನ ಬಳಕೆಗೆ ಈ ಬಾರಿಯ ಬಜೆಟ್‌ನಲ್ಲಿ ಒತ್ತು ನೀಡಿದೆ. ಇದಕ್ಕಾಗಿ 19,700 ಕೋಟಿ ರೂಪಾಯಿ ಮೀಸಲಿಟ್ಟಿದೆ. 2023ರ ವೇಳೆ ದೇಶದಲ್ಲಿ 5 MMT ಹೈಡ್ರೋಜನ್ ಫ್ಯೂಯೆಲ್ ಉತ್ಪಾದನೆ ಗುರಿ ಇಟ್ಟುಕೊಂಡಿದೆ.

ಹಳೇ ವಾಹನ ಸ್ಕ್ರಾಪ್ ಪಾಲಿಸಿ
2021-22ರ ಸಾಲಿನ  ಬಜೆಟ್‌ನಲ್ಲಿ ಹಳೇ ವಾಹನ ಸ್ಕ್ರಾಪ್ ಪಾಲಿಸಿ ಜಾರಿಗೆ ತರಲಾಗಿದೆ. ಈ ಬಾರಿ ಹಳೇ ವಾಹನ ಗುಜುರಿ ಪಾಲಿಸಿಗೆ ಕೇಂದ್ರ ಸರ್ಕಾರ ಶೇಕಡಾ 20 ರಷ್ಟು ಆರ್ಥಿಕತೆ ಒದಗಿಸಲಿದೆ. ಉಳಿದ ಮೊತ್ತವನ್ನು ಆಯಾ ರಾಜ್ಯ ಸರ್ಕಾರಗಳು ಭರಿಸಬೇಕು. ಈ ಮೂಕ ಹಳೇ ವಾಹನವನ್ನು ಸ್ಕ್ರಾಪ್ ಮಾಡಿ ವಾಯು ಮಾಲಿನ್ಯ ಹಾಗೂ ದೇಶದ ಆರ್ಥಿಕತೆಗೆ ಮತ್ತಷ್ಟು ಬಲ ನೀಡಲು ಕೇಂದ್ರ ಮುಂದಾಗಿದೆ. ಮೊದಲ ಹಂತವಾಗಿ ಹಳೇ ಸರ್ಕಾರಿ ವಾಹನಗಳು, ಆ್ಯಂಬುಲೆನ್ಸ್ ವಾಹನಗಳ ಸ್ಕ್ರಾಪ್‌ಗೆ ಯೋಜನೆ ರೂಪಿಸಲಾಗಿದೆ. ಹಂತ ಹಂತವಾಗಿ ಸ್ಕ್ರಾಪ್ ಪಾಲಿಸಿ ವಿಸ್ತರಣೆಗೊಳ್ಳಲಿದೆ.

Union Budget 2023 ಮಧ್ಯಮ ವರ್ಗ ಸೇರಿದಂತೆ ಪ್ರತಿ ಕ್ಷೇತ್ರಕ್ಕೆ ಭರಪೂರ ಕೊಡುಗೆ, ಬಜೆಟ್ ಮೇಲೆ ಮೋದಿ ಭಾಷಣ!

ಇನ್ನುಳಿದಂತೆ ಆಟೋಮೊಬೈಲ್ ಕ್ಷೇತ್ರದ ಹಲವು ಬಿಡಿ ಭಾಗಗಳ ಮೇಲಿನ ಆಮದು ಸುಂಕ, ಸೆಸ್ ಕಡಿತಗೊಳಿಸಲಾಗಿದೆ. ಇದರಿಂದ ವಾಹನ ಉತ್ಪಾದನೆ ವೆಚ್ಚದಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ಆಟೋಮೊಬೈಲ್ ಕಂಪನಿಗಳು ವಾಹನ ಬೆಲೆ ಹೆಚ್ಚಳ ಮಾಡುತ್ತಲೇ ಇದೆ. ಈ ಪರಿಪಾಠಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ಕಸ್ಟಮ್ ಡ್ಯೂಟಿ ಕಡಿತ ಹೊರತಪಡಿಸಿದಂತೆ ವಾಹನ ಉತ್ಪಾದನ ವಲಯಕ್ಕೆ ಇತರ ಕೊಡುಗೆ ಈ ಬಾರಿಯ ಬಜೆಟ್‌ನಲ್ಲಿ ಇಲ್ಲ. 

PREV
Read more Articles on
click me!

Recommended Stories

ಭಾರತದ ಅತೀ ದುಬಾರಿ ನಂಬರ್ ಪ್ಲೇಟ್, ₹1.17 ಕೋಟಿಗೆ 8888 ಖರೀದಿಸಿದ ಯುವ ಉದ್ಯಮಿ ಯಾರು?
Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು