ಸರಕು ತುಂಬಿದ ಟ್ರಕ್, ಎಲ್ಲವೂ ಸರಿ ಇದೆ ಆದರೆ ಬ್ರೇಕ್ ಮಾತ್ರ ಇಲ್ಲ. ಆದರೆ ಚಾಲಕ ತನ್ನ ಉಪಾಯದಿಂದ 3 ಕಿ.ಮೀ ರಿವರ್ಸ್ ಗೇರ್‌ನಲ್ಲಿ ತೆರಳಿ ಬಹುದೊಡ್ಡ ಅಪಾಯವನ್ನು ತಪ್ಪಿಸಿದ ಘಟನೆ ನಡೆದಿದೆ.
ಮಹಾರಾಷ್ಟ್ರ(ಜ.18): ವಾಹನ ಬ್ರೇಕ್ ಫೇಲ್ ಆದಾಗ, ಯಾವ ಗೇರ್ ಬೀಳುವುದಿಲ್ಲ. ವಾಹನ ನಿಲ್ಲಿಸುವುದು ಅಸಾಧ್ಯದ ಮಾತು. ಇನ್ನು ಭಾರತದ ರಸ್ತೆಗಳಲ್ಲಿ ಅಡ್ಡಾದಿಡ್ಡಿ ಬರುವ ವಾಹನಗಳ ನಡುವೆ ಬ್ರೇಕ್ ಫೇಲ್ ವಾಹನವನ್ನು ಅಪಾಯವಿಲ್ಲದೆ ನಿಲ್ಲಿಸಲು ಹರಸಾಹಸವೇ ಪಡಬೇಕು. ಮಹಾರಾಷ್ಟ್ರದ ಜಲ್ನ-ಸಿಲ್ಲೋಡ್ ರಸ್ತೆಯಲ್ಲಿ ಬಹುದೊಡ್ಡ ಅಪಾಯವನ್ನು ಟ್ರಕ್ ಚಾಲಕ ತಪ್ಪಿಸಿದ್ದಾನೆ.
ಕಾರು ವಾಶ್ ಸಿಬ್ಬಂದಿಯ ಎಡವಟ್ಟು, 5 ಕೋಟಿ ರೂ ಫೆರಾರಿ ಕಾರು ಪುಡಿ ಪುಡಿ!.
undefined
ಸರಕು ತುಂಬಿದ ಟ್ರಕ್ ಇದಕ್ಕಿದ್ದಂತೆ ಬ್ರೇಕ್ ಫೇಲ್ ಆಗಿದೆ. ರಿವರ್ಸ್ ಗೇರ್‌ನಲ್ಲಿದ್ದ ವಾಹನವನ್ನು ನಿಲ್ಲಿಸುವುದಾದರೂ ಹೇಗೆ? ಅದು ಕೂಡ ಕಿರಿದಾದ ರಸ್ತೆ, ಜೊತೆಗೆ ವಾಹನ ಸಂಚಾರ ಇರುವ ರಸ್ತೆಯಲ್ಲಿ ವಾಹನಗಳು ಎಂದಿನಂತೆ ಓಡಾಡುತ್ತಲೇ ಇದೆ. ಇದರ ನಡುವೆ ಟ್ರಕ್ ಚಲಾಯಿಸುವುದೇ ದೊಡ್ಡ ಸವಾಲು. 3 ಕಿ.ಮೀ ರಿವರ್ಸ್ ಗೇರ್‌ನಲ್ಲಿ ತೆರಳವುದು ದೊಡ್ಡ ಸಾಹಸವೇನಲ್ಲ. ಆದರೆ ಸರಕು ತುಂಬಿದ ಟ್ರಕ್‌ನಲ್ಲಿ ಬ್ರೇಕ್ ಇಲ್ಲ ಎಂದಾಗ ರಿವರ್ಸ್ ಗೇರ್‍ನಲ್ಲಿ ತೆರಳುವುದು ಅತ್ಯಂತ ಅಪಾಯಕಾರಿ ಹಾಗೂ ಸವಾಲೇ ಸರಿ.
ಟ್ರಾಫಿಕ್ ನಿಯಮ ಮತ್ತಷ್ಟು ಕಠಿಣ; ಕಾರಿನ ಹಿಂಬದಿ ಸೀಟ್ ಬೆಲ್ಟ್ ಹಾಕದಿದ್ರೂ ದಂಡ!.
ಟ್ರಕ್ ಚಾಲಕ ಸುಮಾರು 3 ಕಿ.ಮೀ ರಿವರ್ಸ್ ಗೇರ್‌ನಲ್ಲಿ ಪ್ರಯಾಣ ಮಾಡಿದ್ದಾನೆ. ಟ್ರಕ್ ವೇಗ ಪಡೆದುಕೊಳ್ಳದ ಕಾರಣ ತಿರುವು ಮುರುವು ರಸ್ತೆಗಳನ್ನು ದಾಟಿದ್ದಾನೆ. ಈ ವೇಳೆ ಕೆಲ ಬೈಕ್ ಸವಾರರು ಚಾಲಕನಿಗೆ ಸಹಾಯ ಮಾಡಿದ್ದಾರೆ. ಕೊನೆಗೆ ಟ್ರಕನ್ನು ರೈತನೋರ್ವನ ಹೊಲಕ್ಕೆ ಇಳಿಸಿದ ಚಾಲಕ ಟ್ರಕ್ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾನೆ. ಈ ವಿಡಿಯೋವನ್ನು ಖಾಸಗಿ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಕಲಾಗಿದ್ದು, ವಿಡಿಯೋ ವೈರಲ್ ಆಗಿದೆ.