ಟ್ರಾಫಿಕ್ ನಿಯಮ ಮತ್ತಷ್ಟು ಕಠಿಣ; ಕಾರಿನ ಹಿಂಬದಿ ಸೀಟ್ ಬೆಲ್ಟ್ ಹಾಕದಿದ್ರೂ ದಂಡ!

By Suvarna News  |  First Published Jan 15, 2021, 7:55 PM IST

ಟ್ರಾಫಿಕ್ ನಿಯಮದಲ್ಲಿ ಈಗಾಗಲೇ ಸಾಕಷ್ಟು ತಿದ್ದುಪಡಿ ತರಲಾಗಿದೆ. ದಂಡ ಏರಿಸಲಾಗಿದೆ. ಇದೀಗ ಕೆಲ ನಿಯಮ ಕಠಿಣಗೊಳ್ಳುತ್ತಿದೆ.  ಈ ಕುರಿತ ವಿವರ ಇಲ್ಲಿದೆ.


ದೆಹಲಿ(ಜ.15): ವಾಹನ ಸವಾರರು, ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಇದೀಗ ಟ್ರಾಫಿಕ್ ನಿಯಮ ಮತ್ತಷ್ಟು ಕಠಿಣಗೊಂಡಿದೆ. ಕಾರಿನಲ್ಲಿ ಡ್ರೈವರ್ ಹಾಗೂ ಕೋ ಡ್ರೈವರ್‌ಗೆ ಸೀಟ್ ಬೆಲ್ಟ್ ಕಡ್ಡಾಯ ಮಾಡಲಾಗಿದೆ. ಇದೀಗ ದೆಹಲಿಯಲ್ಲಿ ಕಾರಿನ ಹಿಂಬದಿ ಸೀಟ್‌ನಲ್ಲಿ ಪ್ರಯಾಣಿಕರಿಗೂ ಸೀಟ್ ಬೆಲ್ಟ್ ಕಡ್ಡಾಯ ಮಾಡಲಾಗಿದೆ. 

ಅಪಘಾತದಲ್ಲಿ ಕಾರು 4 ಪಲ್ಟಿಯಾದರೂ ಪ್ರಯಾಣಿಕರು ಸೇಫ್; ಟಾಟಾಗೆ ಸಲಾಂ ಹೇಳಿದ ಮಾಲೀಕ !.

Tap to resize

Latest Videos

undefined

ಹೆಚ್ಚಿನ ಸುರಕ್ಷತೆಯ ದೃಷ್ಟಿಯಿಂದ ದೆಹಲಿ ಪೊಲೀಸರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇನ್ನು ದ್ವಿಚಕ್ರ ವಾಹನದಲ್ಲಿ ಮಿರರ್ ಕಡ್ಡಾಯ ಮಾಡಲಾಗಿದೆ. ಮಿರರ್ ಇಲ್ಲದಿದ್ದರೆ ದುಬಾರಿ ದಂಡ ಹಾಕಲಾಗುತ್ತದೆ. ಈಗಾಗಲೇ ದೆಹಲಿ ಪೊಲೀಸರು ಈ ಕುರಿತು ತಪಾಸಣೆ ನಡೆಸಿ ಹಲವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. 

ರತನ್ ಟಾಟಾ ಕಾರು ನಂಬರ್ ಫೋರ್ಜರಿ ಮಾಡಿದ ಮಹಿಳೆ; BMW ಸೀಝ್, ಮಹಿಳೆ ಅರೆಸ್ಟ್!.

ಜನರಲ್ ಮೋಟಾರ್ ವೆಹಿಕಲ್ ಕಾಯ್ದೆಯ ಸೆಕ್ಷನ್ 6 ಮತ್ತು 7ರಲ್ಲಿ ದ್ವಿಚಕ್ರ ವಾಹನದಲ್ಲಿ ರೇರ್ ವಿವ್ಯೂ ಮಿರರ್ ಕಡ್ಡಾಯ ಎಂದು ಹೇಳಿದೆ. ಆದರೆ ಭಾರತದ ಬಹುತೇಕ ಈ ನಿಯಮವನ್ನು ಪಾಲಿಸಿಲ್ಲ. ಇನ್ನು ಮಿರರ್ ಬೈಕ್ ಅಥವೂ ಸ್ಕೂಟರ್ ಅಂದ ಕೆಡಿಸಲಿದೆ ಅನ್ನೋ ಕಾರಣಕ್ಕೆ ಹಲವರು ಮಿರರ್ ತೆಗೆದು ಹಾಕುತ್ತಾರೆ. ಇನ್ನು ದೆಹಲಿಯಲ್ಲಿ ಇದು ನಡೆಯುವುದಿಲ್ಲ.

ದ್ವಿಚಕ್ರ ವಾಹನಕ್ಕೆ ಮಿರರ್ ಕಡ್ಡಾಯ ನಿಯಮ ಹೊಸದಲ್ಲ. ಆದರೆ ದೆಹಲಿ ಪೊಲೀಸರು ಈ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲು ಮುಂದಾಗಿದ್ದಾರೆ. ಇನ್ನು ರೇರ್ ಸೀಟ್ ಬೆಲ್ಟ್ ಕೂಡ ಕಡ್ಡಾಯ ಮಾಡಲಾಗಿದೆ. ದೆಹಲಿಯಲ್ಲಿ ಜಾರಿಗೊಳಿಸುವ ಈ ನಿಯಮ ಸುರಕ್ಷತೆಯ ದೃಷ್ಟಿಂದ ಅತೀ ಮುಖ್ಯವಾಗಿದೆ. ಹೀಗಾಗಿ ಇತರ  ನಗರ ಹಾಗೂ ರಾಜ್ಯಗಳಲ್ಲೂ ನಿಯಮ ಶೀಘ್ರದಲ್ಲೇ ಜಾರಿಗೊಳ್ಳುವ ಸಾಧ್ಯತೆ ಇದೆ.

click me!