ಬೊಕ್ಕಸ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ಎಲ್ಲಾ ಮೂಲಗಳನ್ನು ಹುಡುಕುತ್ತಿದೆ. ಇದೀಗಗ ಹೊಸ ಟ್ರಾನ್ಸ್‌ಪೋರ್ಟ್ ವಾಹನ ರಿಜಿಸ್ಟ್ರೇಶನ್‌ಗೆ ಹೆಚ್ಚುವರಿ 3 ಶೇಕಡಾ ಸೆಸ್ ಹಾಗೂ 25 ಲಕ್ಷ ರೂಪಾಯಿ ಮೇಲಿನ ಎಲೆಕ್ಟ್ರಿಕ್ ವಾಹನಗಳಿಗೆ ಲೈಫ್ ಟೈಮ್ ತೆರಿಗೆ ಹಾಕಲಾಗಿದೆ.
ಬೆಂಗಳೂರು(ಮಾ.08) ಕರ್ನಾಟಕದಲ್ಲಿ ಇದೀಗ ವಾಣಿಜ್ಯ ಸಾರಿಗೆ ವಾಹನಗಳ ಖರೀದಿ ಮತ್ತಷ್ಟು ದುಬಾರಿಯಾಗಿದೆ. ಇಷ್ಟೇ ಅಲ್ಲ ಒಂದೆಡೆಯಿಂದ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಉತ್ತೇಜನ ನೀಡಿದರೆ, ಮತ್ತೊದೆಡೆಯಿಂದ ಎಲೆಕ್ಟ್ರಿಕ್ ವಾಹನಗಳ ಮೇಲೆ ಲೈಫ್ ಟೈಮ್ ತೆರೆಗಿ ವಿಧಿಸುತ್ತಿದೆ. ಕರ್ನಾಟಕದಲ್ಲಿ ಹೊಸ ವಾಣಿಜ್ಯ ವಾಹನಗಳ ರಿಜಿಸ್ಟ್ರೇಶನ್ ವೇಳೆ ಹೆಚ್ಚುವರಿ 3 ಶೇಕಡಾ ಸೆಸ್ ವಿಧಿಸಲಾಗಿದೆ. ಇನ್ನು 25 ಲಕ್ಷ ರೂಪಾಯಿಗೂ ಮೇಲಿನ ಎಲೆಕ್ಟ್ರಿಕ್ ವಾಹನಗಳಿಗೆ ಲೈಫ್ ಟೈಮ್ ತೆರಿಗೆ ವಿಧಿಸಲಾಗಿದೆ. ಇದರಿಂದ ಕರ್ನಾಟಕದಲ್ಲಿ ವಾಣಿಜ್ಯ ವಾಹನ ಹಾಗೂ ಎಲೆಕ್ಟ್ರಿಕ್ ವಾಹನ ಖರೀದಿ ಇದೀಗ ದುಬಾರಿಯಾಗಿದೆ.
ಕರ್ನಾಟಕ ಸರ್ಕಾರ ಕಳುಹಿಸಿರುವ ಮೋಟಾರು ವಾಹನ ತೆರಿಗೆ ಕಾಯ್ದೆ(ತಿದ್ದುಪಡಿ)2024ನ್ನುರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಮಾರ್ಚ್ 6 ರಂದು ಸ್ವೀಕರಿಸಿದ್ದರು. ಈ ಕುರಿತು ಮಾರ್ಚ್ 7 ರಂದು ಗೆಜೆಟ್ ಹೊರಡಿಸಲಾಗಿದೆ. ನೂತನ ಕಾಯ್ದೆ ಪ್ರಕಾರ ಹೊಸ ವಾಣಿಜ್ಯ ಸಾರಿಗೆ ವಾಹನ ರಿಜಿಸ್ಟ್ರೇಶನ್ ವೇಳೆ ಹೆಚ್ಚುವರಿಯಾಗಿ ಶೇಕಡಾ 3 ರಷ್ಟು ಸೆಸ್ ಪಾವತಿಸಬೇಕು. ಪ್ರಮುಖವಾಗಿ ಹಳದಿ ಬೋರ್ಡ್ ವಾಹನಗಳಾದ ಟ್ಯಾಕ್ಸಿ, ಬಸ್ ಆಟೋ ರಿಕ್ಷಾ ಸೇರಿದಂತೆ ಇತರ ವಾಣಿಜ್ಯ ವಾಹನಗಳ ಮೇಲೆ ಶೇಕಡಾ 3 ರಷ್ಟು ಸೆಸ್ ಪಾವತಿಸಬೇಕು.
undefined
ಬೆಂಗಳೂರಿಗೆ ಉಪರಾಷ್ಟ್ರಪತಿ ಆಗಮನದಿಂದ ನಾಳೆ ಈ ಮಾರ್ಗ ಬಂದ್, ಟ್ರಾಫಿಕ್ ಮಾರ್ಗಸೂಚಿ!
ಇಷ್ಟು ಮಾತ್ರವಲ್ಲ, 25 ಲಕ್ಷ ರೂಪಾಯಿ ಮೇಲಿನ ಎಲಕ್ಟ್ರಿಕ್ ವಾಹನಗಳ ಖರೀದಿ ವೇಳೆ ಹೊಸದಾಗಿ ಲೈಫ್ ಟೈಮ್ ಟ್ಯಾಕ್ಸ್ ಎಂದು ಹೊಸದಾಗಿ ಪಾವತಿ ಮಾಡಬೇಕು. ವಾಹನದ ಒಟ್ಟು ಮೊತ್ತದ ಶೇಕಡಾ 10 ರಷ್ಟು ಲೈಫ್ ಟೈಮ್ ಟ್ಯಾಕ್ಸ್ ಪಾವತಿಸಬೇಕು. ಇದರಿಂದ ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳ ಮತ್ತಷ್ಟು ಖರೀದಿ ದುಬಾರಿಯಾಗಲಿದೆ.
ಭಾರತದಲ್ಲಿ ಅತೀ ಹೆಚ್ಚು ರಸ್ತೆ ತೆರಿಗೆ ವಿಧಿಸುತ್ತಿರುವ ರಾಜ್ಯ ಕರ್ನಾಟಕ. ರಾಜ್ಯದಲ್ಲಿ ಶೇಕಡಾ 13 ರಿಂದ 20 ರಷ್ಟು ರಸ್ತೆ ತೆರಿಗೆ ವಿಧಿಸಲಾಗುತ್ತಿದೆ. ರಾಜ್ಯದಲ್ಲಿ ಶೇಕಡಾ 10 ರಷ್ಟು ಮೂಲಭೂತ ಸೌಕರ್ಯ ಸೆಸ್ ಹಾಗೂ ಶೇಕಡಾ 1 ರಷ್ಟು ಪಟ್ಟಣ ಸಾರಿಗೆ ಸೆಸ್ ಮೂಲಕ ಒಟ್ಟು ಶೇಕಡಾ 11 ರಷ್ಟು ಸೆಸ್ ವಿಧಿಸಲಾಗುತ್ತಿದೆ. ಇದರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲೇ ದುಬಾರಿಯಾಗಿದೆ.
ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಕಾದಿದೆ ಆಪತ್ತು, ಎರಡೇ ನಿಮಿಷಕ್ಕೆ ದಂಡ ಪಾವತಿ ಮಸೇಜ್!
ಇದರ ಜೊತೆಗೆ ಇತರ ಕೆಲ ಮಹತ್ತರ ಬದಲಾವಣೆಯನ್ನು ರಾಜ್ಯ ಸರ್ಕಾರ ತಂದಿದೆ. ಬಿಹೆಚ್ ರಿಜಿಸ್ಟ್ರೇಶನ್ ಸೀರಿಸನ್‌ನ್ನು ಇದೀಗ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೂ ವಿಸ್ತರಿಸಲು ರಾಜ್ಯ ಸರ್ಕಾರ ಮುಂದಾಗಿದೆ.