ಪೊಲೀಸರು ಇಲ್ಲ, ಆ ಸಿಗ್ನಲ್‌ನಲ್ಲಿ ಇದುವರೆಗೆ ಕ್ಯಾಮೆರಾ ಇಲ್ಲ ಎಂದು ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ನಿಮಗೆ ಆಪತ್ತು ಖಚಿತ. ಇನ್ನುಂದೆ ಕರ್ನಾಟಕದಲ್ಲಿ ಟ್ರಾಫಿಕ್ ರೂಲ್ಸ್ ಮುರಿದ ಎರಡೇ ನಿಮಿಷಕ್ಕೆ ದಂಡ ಪಾವತಿ ಸಂದೇಶ ಬರಲಿದೆ.
ಬೆಂಗಳೂರು(ಫೆ.26) ಟ್ರಾಫಿಕ್ ನಿಯಮ ಉಲ್ಲಂಘನೆ ತಗ್ಗಿಸಿ ವಾಹನ ಸವಾರರು, ಪ್ರಯಾಣಿಕರಿಗೆ ಸುರಕ್ಷತೆ ಒದಗಿಸಲು ಪೊಲೀಸರು, ಸಾರಿಗೆ ಇಲಾಖೆ ಅವಿರತ ಪ್ರಯತ್ನ ಮಾಡುತ್ತಿದೆ. ದುಬಾರಿ ದಂಡ, ಲೈಸೆನ್ಸ್ ರದ್ದು ಸೇರಿದಂತೆ ಹಲವು ನಿಯಮಗಳು ಈಗಾಗಲೇ ಜಾರಿಯಲ್ಲಿದೆ. ಆದರೂ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಜೊತೆಗೆ ಹಲವು ಪ್ರಕರಣಗಳ ದಂಡ ಪಾವತಿ ಬಾಕಿ ಉಳಿಸಿಕೊಂಡು ಸಂಕಷ್ಟೆ ಸಿಲುಕುತ್ತಿದ್ದಾರೆ. ಇದೀಗ ರಾಜ್ಯ ಸಂಚಾರ ಹಾಗೂ ಸುರಕ್ಷತಾ ವಿಭಾಗ ಹೊಸ ನಿಯಮ ಜಾರಿಗೊಳಿಸಿದೆ. ಇನ್ಮುಂದೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಎರಡೇ ನಿಮಿಷಕ್ಕೆ ಸವಾರರ ನೋಂದಣಿ ಮೊಬೈಲ್ ನಂಬರ್‌ಗೆ ನಿಯಮ ಉಲ್ಲಂಘನೆ ವಿವರ ಹಾಗೂ ದಂಡ ಪಾವತಿ ಸಂದೇಶ ಬರಲಿದೆ.
ಸಿಗ್ನಲ್ ಜಂಪ್ ಮಾಡಿದರೆ, ಹೆಲ್ಮೆಟ್, ಸೀಟ್ ಬೆಲ್ಟ್, ರಾಂಗ್ ಸೈಡ್, ಹೈಸ್ಪೀಡ್ ಸೇರಿದಂತೆ ಯಾವುದೇ ಟ್ರಾಫಿಕ್ ನಿಯಮ ಉಲ್ಲಂಘಿಸಿದೆ ಎರಡರಿಂದ ಮೂರು ನಿಮಿಷಕ್ಕೆ ನೋಂದಾಯಿತ ಮೊಬೈಲ್ ಸಂಖ್ಯೆಗೆ ಸಂದೇಶ ಬರಲಿದೆ. ಈ ಲಿಂಕ್ ಕ್ಲಿಕ್ ಮಾಡಿದರೆ ಟ್ರಾಫಿಕ್ ನಿಯಮ ಉಲ್ಲಂಘನೆಯ ಫೋಟೋ ಜೊತೆಗೆ ದಂಡ ಪಾವತಿಯ ಲಿಂಕ್ ಕೂಡ ಬರಲಿದೆ. ಈ ಲಿಂಕ್ ಕ್ಲಿಕ್ ಮಾಡಿ ಅಲ್ಲೇ ದಂಡವನ್ನು ಪಾವತಿಸಬಹುದು.
undefined
ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ವಾಹನ ಸೀಜ್ ಮಾಡಿ ಗುಜುರಿಗೆ, ಹೊಸ ರೂಲ್ಸ್ ಎಚ್ಚರ!
ವಾಹನ ಖರೀದಿಸುವ ವೇಳೆ ನೀಡಿರುವ ಮೊಬೈಲ್ ಸಂಖ್ಯೆ, ಬಳಸಿದ ವಾಹನ ಖರೀದಿಸುವಾಗ ಆರ್‌ಸಿ ಬದಲಾವಣೆ ವೇಳೆ ನೀಡಿರುವ ಹೊಸ ಮಾಲೀಕನ ಮೊಬೈಲ್ ನಂಬರ್‌ಗೆ ಟ್ರಾಫಿಕ್ ನಿಯಮ ಉಲ್ಲಂಘನೆ ಸಂದೇಶ ಬರಲಿದೆ. ಇದರಿಂದ ಸವಾರರಿಗೂ ತಮ್ಮ ವಾಹನ ಎಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿದೆ ಅನ್ನೋ ಮಾಹಿತಿ ತಕ್ಷಣವೇ ಗೊತ್ತಾಗಲಿದೆ. ಜೊತೆಗೆ ಅನಗತ್ಯ ಗೊಂದಲಗಳಿಗೂ ತೆರೆ ಬೀಳಲಿದೆ.
ನಿಮ್ಮ ಮೊಬೈಲ್‌ಗೆ ದಂಡ ಪಾವತಿ ಲಿಂಕ್ ಬಂದಾಗ, ಪರಿಶೀಲಿಸಿ ಪಾವತಿ ಮಾಡಬಹುದು. ಹಾಗಂತ ದಂಡ ಕಟ್ಟದೇ ಇದ್ದರೆ ಮತ್ತೊಂದು ಸಂಕಷ್ಟ ಎದುರಾಗಲಿದೆ. ಹೆಚ್ಚು ಹಣ ಬಾಕಿ ಉಳಿಸಿಕೊಂಡವರ ವಾಹನಗಳನ್ನು ಜಪ್ತಿ ಮಾಡಿ ಗುಜುರಿಗೆ ಹಾಕುವ ಹೊಸ ನಿಯಮವನ್ನು ಸಾರಿಗೆ ಇಲಾಖೆ ಸರ್ಕಾರಕ್ಕೆ ಸಲ್ಲಿಸಿದೆ. ಈ ನಿಯಮದ ಪ್ರಕಾರ ಮೊದಲ ಹಂತದಲ್ಲಿ 50 ಸಾವಿರ ರೂಪಾಯಿ ಹಾಗೂ ಅದಕ್ಕಿಂತ ಹೆಚ್ಚುಹಣ ಬಾಕಿ ಉಳಿಸಿಕೊಂಡವರ ವಾಹನ ಜಪ್ತಿ ಮಾಡಿ ಗುಜುರಿಗೆ ಹಾಕುವ ನಿಯಮ ಶೀಘ್ರದಲ್ಲೇ ಜಾರಿಯಾಗಲಿದೆ.
30,000 ಮೌಲ್ಯದ ಸ್ಕೂಟರ್‌ಗೆ 3.2 ಲಕ್ಷ ರೂ ಟ್ರಾಫಿಕ್ ದಂಡ, ವಿನಾಯಿತಿ ಕೇಳಿದ ಬೆಂಗಳೂರಿಗನಿಗೆ ವಾರ್ನಿಂಗ್!
ಎರಡು ನಿಮಿಷದಲ್ಲಿ ದಂಡ ಪಾವತಿ ಸಂದೇಶ ನಿಯಮ ಮೊದಲ ಹಂತದಲ್ಲಿ ಮೈಸೂರು, ತುಮಕೂರು, ಶಿವಮೊಗ್ಗ, ಬಳ್ಳಾರಿ, ಬೆಳಗಾವಿ, ದಾವಣಗೆರೆಯಲ್ಲಿ ಈ ನಿಯಮ ಜಾರಿಗೆ ಬರಲಿದೆ. ಎರಡೇ ಹಂತದಲ್ಲಿ ಬೆಂಗಳೂರಿನಲ್ಲಿ ಜಾರಿಯಾಗಲಿದೆ. ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚಿರುವ ಕಾರಣ ತಕ್ಷಣಕ್ಕೆ ಸಂದೇಶ ಕಳುಹಿಸುವುದು ಸವಾಲಾಗಲಿದೆ. ಜೊತೆಗೆ ಹಲವೆಡೆ ಕ್ಯಾಮೆರಾ ಅಳವಡಿಕೆ ಕಾರ್ಯಗಳು ನಡೆಯುತ್ತಿದೆ.