ನಮ್ಮ ಮೆಟ್ರೋದಿಂದ ಸಾರ್ವಜನಿಕ ಸಂಪರ್ಕಕ್ಕೆ ಮಹಿಳಾ ಚಾಲಕರನ್ನೊಳಗೊಂಡ ಇ ರೈಡ್ ಸೇವೆ ಆರಂಭ!

By Suvarna News  |  First Published Feb 28, 2024, 7:13 PM IST

ಪ್ರಾಯೋಗಿಕ ಹಂತದಲ್ಲಿ 12 ಇ-ಆಟೊಗಳನ್ನು ಯಲಚೇನಹಳ್ಳಿ ಮತ್ತು ಇಂದಿರಾನಗರ ಸ್ಟೇಷನ್ ಗಳಲ್ಲಿ ನಿಯೋಜಿಸಲಾಗಿದ್ದು ಪ್ರತಿ ಸ್ಟೇಷನ್ ನಿಂದ 4 ಕಿ.ಮೀ. ಸುತ್ತಲಿನ ಪ್ರದೇಶಗಳಲ್ಲಿ ಪ್ರಯಾಣಿಕರಿಗೆ ಸೇವೆ ಒದಗಿಸುತ್ತವೆ. ಸಂಪೂರ್ಣ ಮಹಿಳೆಯರು ಚಾಲಿಸುವ ಎಲೆಕ್ಟ್ರಿಕ್ ಆಟೋ ರಿಕ್ಷಾ ರೈಡ್ ಹಾಗೂ ಅತ್ಯುತ್ತಮ ಸೇವೆ ಪ್ರಯಾಣಿಕರಿಗೆ ಸಿಗಲಿದೆ.


ಬೆಂಗಳೂರು(ಫೆ.28): ಸ್ಮಾರ್ಟ್ ಮತ್ತು ಸುಸ್ಥಿರ ಮೊಬಿಲಿಟಿಯ ಆಲ್‌ಸ್ಟೊಮ್  ಲೋ ಎಮಿಷನ್ ಅಕ್ಸೆಸರ್ ಟು ಪಬ್ಲಿಕ್ ಟ್ರಾನ್ಸ್ ಪೋರ್ಟ್(ಲೀಪ್) ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆರಂಬಿಸಲಾಗಿದೆ. ಕೊನೆಯ ಹಂತದ ಸಂಪರ್ಕವನ್ನು ಸಾಧ್ಯವಾಗಿಸುವ ಹಾಗೂ ಹೆಚ್ಚಿನ ಸಾರ್ವಜನಿಕ ಸಾರಿಗೆ ಬಳಕೆಯನ್ನು ಉತ್ತೇಜಿಸುವ ಗುರಿ ಹೊಂದಿದೆ. ಮೊದಲ ಹಂತದಲ್ಲಿ ನಮ್ಮ ಮೆಟ್ರೋದ ಯಲಚೇನಹಳ್ಳಿ ಮತ್ತು ಇಂದಿರಾನಗರ ಸ್ಟೇಷನ್ ಗಳಿಂದ ಕೊನೆಯ ಹಂತದ ಸೇವೆಗೆ ವಿದ್ಯುಚ್ಛಾಲಿತ ಆಟೊರಿಕ್ಷಾಗಳನ್ನು ಮೆಟ್ರೋರೈಡ್ ನಿಯೋಜಿಸಿದೆ. ಇದಕ್ಕಾಗಿ  ಇವಿ ರೈಡ್ ಪರಿಹಾರವಾಗಿರುವ ಮೆಟ್ರೋರೈಡ್ 25 ಮಹಿಳಾ ಚಾಲಕರನ್ನು ಈ ಪ್ರದೇಶದಲ್ಲಿ ವಿದ್ಯುಚ್ಛಾಲಿತ ರಿಕ್ಷಾಗಳ ಚಾಲನೆ ಮಾಡಲು ತರಬೇತಿ ನೀಡಲಾಗಿದೆ. ಈ ರೈಡ್ ಗಳನ್ನು ಮೆಟ್ರೋರೈಡ್ ಆಪ್ ಮೂಲಕ ಕಾಯ್ದಿರಿಸಬಹುದು. 

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ರಸ್ತೆಯ ಚಲನೆಯ ಸವಾಲುಗಳನ್ನು ಸುಲಭಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಸುಸ್ಥಿರ ಚಲನೆಯಲ್ಲಿ ನಾಯಕರಾಗಿ ಲೀಪ್ ಗಿಂತಲೂ ಸಾರ್ವಜನಿಕ ಸಾರಿಗೆ ಉತ್ತೇಜಿಸಲು ಬೇರೆ ಉತ್ತಮ ವಿಧಾನವಿಲ್ಲ ಎಂದು ಆಲ್ ಸ್ಟಂ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಒಲಿವಿಯರ್ ಲಾಯ್ಸನ್ ಹೇಳಿದ್ದಾರೆ.  ಡಬ್ಲ್ಯೂ.ಅರ್.ಐ. ಇಂಡಿಯಾದೊಂದಿಗೆ ನಮ್ಮ ಸಹಯೋಗ ಮತ್ತು ಆಲ್ ಸ್ಟಂ ಮಾರ್ಗದರ್ಶನದ ಸ್ಟಾರ್ಟಪ್ ಮೆಟ್ರೋರೈಡ್ ಅನ್ನು ಒಳಗೊಂಡಿರುವ ಮೂಲಕ ನಾವು ಕೊನೆಯ ಹಂತದ ಕನೆಕ್ಟಿವಿಟಿಯ ಅಂತರವನ್ನು ತುಂಬುತ್ತಿದ್ದೇವೆ. ಒಟ್ಟಿಗೆ ನಾವು ಮೆಟ್ರೋ ಅನುಭವ ಉನ್ನತೀಕರಸುವ ಆವಿಷ್ಕಾರ ಮತ್ತು ಪರಿಣಿತಿಯನ್ನು ಅನುಷ್ಠಾನಗೊಳಿಸಲಿದ್ದು ಮೆಟ್ರೋ ಅನುಭವವನ್ನು ಹೆಚ್ಚು ಲಭ್ಯ, ದಕ್ಷ ಮತ್ತು ಪರಿಸರ ಸ್ನೇಹಿಯಾಗಿಸುತ್ತೇವೆ ಎಂದರು.

Tap to resize

Latest Videos

undefined

ಜಗತ್ತನ್ನೇ ಅಚ್ಚರಿಗೊಳಿಸಿದ ಭಾರತ, ಮದ್ಯ ಕುಡಿದರೆ ಸ್ಟಾರ್ಟ್ ಆಗಲ್ಲ ಈ ಬೈಕ್!

ಬೆಂಗಳೂರು ವಿಶ್ವದ ಅತ್ಯಂತ ವಾಹನದಟ್ಟಣೆಯ ನಗರಗಳಲ್ಲಿ ಒಂದಾಗಿದೆ ಮತ್ತು ಅತ್ಯಂತ ಹೆಚ್ಚಿನ ಸಂಖ್ಯೆಯ ಖಾಸಗಿ ಕಾರುಗಳನ್ನು ಹೊಂದಿದೆ. ಮೆಟ್ರೋ ಸೇವೆಯು ಹಲವು ವರ್ಷಗಳಿಂದ ತೀವ್ರವಾಗಿ ವಿಸ್ತರಿಸುತ್ತಿದ್ದು ಇತ್ತೀಚಿನ ಡಬ್ಲ್ಯೂ.ಆರ್.ಐ. ಇಂಡಿಯಾ ನಡೆಸಿದ ಸಮೀಕ್ಷೆಯಲ್ಲಿ ಶೇ.70ರಷ್ಟು ಪ್ರಯಾಣಿಕರು ಬೆಂಗಳೂರು ಮೆಟ್ರೋಗೆ ಕೊನೆಯ ಹಂತದ ಸಂಪರ್ಕದ ಕೊರತೆಯಿಂದ ಹಿಂಜರಿಯುತ್ತಾರೆ ಎಂದು ಹೇಳಿದೆ. ಮಹಿಳೆಯರು ಮೆಟ್ರೋ ಸಂಚಾರ ಮಾಡುವವರ ಪ್ರಮುಖ ಪಾಲು ಹೊಂದಿದ್ದು ಅವರು ಅಸುರಕ್ಷಿತ ಮತ್ತು ಅನನುಕೂಲದ ಕೊನೆಯ ಹಂತದ ಸಂಪರ್ಕಗಳು ಮತ್ತು ಪುರುಷ ಪ್ರಧಾನ ಸಾರಿಗೆ ಕಾರ್ಯಪಡೆಯಲ್ಲಿ ತೀವ್ರವಾದ ಕಡಿಮೆ ಪ್ರಾತಿನಿಧ್ಯದ ಸಮಸ್ಯೆ ಎದುರಿಸುತ್ತಿದ್ದಾರೆ. ಲೀಪ್ ಈ ಸಮಸ್ಯೆಗಳನ್ನು ಎದುರಿಸಲು ಮಹಿಳೆಯರಿಗೆ ಬೆಂಗಳೂರು ಮೆಟ್ರೋ ಲಭ್ಯತೆ ಹೆಚ್ಚಿಸುವಂತೆ ಮಾಡುವುದೇ ಅಲ್ಲದೆ ಸಾರಿಗೆಯ ಉದ್ಯೋಗಪಡೆಯಲ್ಲಿ ಚಾಲಕಿಯರಾಗಿ ಅವರ ಭಾಗವಹಿಸುವಿಕೆ ಹೆಚ್ಚಿಸುವ ಮೂಲಕ ಹೆಚ್ಚು ಅವರನ್ನು ಒಳಗೊಳ್ಳುವ ಮತ್ತು ಸುಸ್ಥಿರ ನಗರ ಚಲನೆಯ ವ್ಯಾಪ್ತಿ ತರುವ ಉದ್ದೇಶ ಹೊಂದಿದೆ. 

ಲೀಪ್  ಯಶಸ್ಸಿನಲ್ಲಿ ಡಬ್ಲ್ಯೂ.ಆರ್.ಐ ಇಂಡಿಯಾದ ಪ್ರಮುಖ ಪಾತ್ರವು ವಿವರವಾದ ಪ್ರಯಾಣಿಕರ ಸಮೀಕ್ಷೆಗಳನ್ನು ನಡೆಸುವಲ್ಲಿ ಹಾಗೂ ಪ್ರಯಾಣಿಕರು ಮತ್ತು ಆಟೊ ಚಾಲಕರ ಆದ್ಯತೆಯ ಗುಂಪುಗಳಿಗೆ ಗುಂಪು ಚರ್ಚೆಗಳಿಗೆ ಅವಕಾಶ ನೀಡುವುದು ಒಳಗೊಂಡಿದೆ. ಅವರ ಪ್ರಸ್ತುತ ಬೆಂಬಲವು ಮೆಟ್ರೋರೈಡ್ ಜೊತೆಯಲ್ಲಿ ಲೀಪ್ ನ ಕಾರ್ಯ ನಿರ್ವಹಣೆಯ ಮಾದರಿಯ ವಿನ್ಯಾಸ ಮತ್ತು ಪರೀಕ್ಷಿಸುವಲ್ಲಿ ಹತ್ತಿರದ ಸಹಯೋಗಕ್ಕೆ ಶ್ರಮಿಸುವಲ್ಲಿ ಈ ಸೇವೆಯ ಪ್ರಗತಿಯ ಮೌಲ್ಯಮಾಪನ ಮಾಡುವಲ್ಲಿ ಮತ್ತು ಒಳನೋಟಗಳ ವಿಶ್ಲೇಷಣೆಯಲ್ಲಿಯೂ ವಿಸ್ತರಿಸಿದ್ದು ಅದು ಪ್ರಾಜೆಕ್ಟ್ ನ ಡೇಟಾ-ಪ್ರೇರಿತ ವಿಧಾನ ಮತ್ತು ಸಮಗ್ರ ಪರಿಣಾಮಕಾರಿತ್ವಕ್ಕೆ ಕೊಡುಗೆ ನೀಡಲು ನೆರವಾಗಿದೆ. 

ಸೋಲೋ ಬೈಕ್ ರೈಡ್ ಮಾಡೋದಾದ್ರೆ ಈ 9 ತಾಣಗಳನ್ನು ಮಿಸ್ ಮಾಡಲೇಬೇಡಿ

ಆಲ್ ಸ್ಟಂ ಸಿ.ಎಸ್.ಆರ್. ಮಾರ್ಗದ ಮೂಲಕ ಕಾರ್ಯತಂತ್ರೀಯ ಸಹಯೋಗದ ಹೂಡಿಕೆಗಳಿಗೆ ತನ್ನ ಬದ್ಧತೆಯನ್ನು ನಿರೂಪಿಸಿದೆ. ಎನ್‌ಆರ್‌ಎಸ್‌ಸಿಇಎಲ್ ಹಾಗೂ .ಐ.ಐ.ಎಂ. ಬೆಂಗಳೂರಿನ ಸ್ಟಾರ್ಟಪ್ ಗಳ ಇನ್ ಕ್ಯುಬೇಷನ್ ಕೇಂದ್ರದ ಸಹಯೋಗವು ಸ್ಟಾರ್ಟಪ್ ಗಳಿಗೆ ವಾತಾವರಣದ ಬದಲಾವಣೆಯನ್ನು ನಿಯಂತ್ರಿಸುವಲ್ಲಿ ಹಾಗೂ ಸುಸ್ಥಿರತೆ ಹಾಗೂ ಚಲನೆಯ ಸವಾಲುಗಳನ್ನು ಎದುರಿಸುವಲ್ಲಿ ಬೆಂಬಲಿಸುತ್ತದೆ. ಸಸ್ಟೇನಬಿಲಿಟಿ ಇನ್ ಕ್ಯುಬೇಷನ್ ‍ಪ್ರೋಗ್ರಾಮ್ ನ ಮೊದಲ ಸಮೂಹ ಕಾರ್ಯಕ್ರಮವಾಗಿದ್ದು ಹತ್ತು ಉದ್ಯಮಗಳನ್ನು ಯಶಸ್ವಿಯಾಗಿ ಆಯ್ಕೆ ಮಾಡಿದೆ ಮತ್ತು ಪೋಷಿಸಿದೆ ಮತ್ತು ಪ್ರಸ್ತುತ ನಡೆಯುತ್ತಿರುವ ಎರಡನೆಯ ಸಮೂಹ ಕಾರ್ಯಕ್ರಮವಾಗಿದೆ. 

ಇದರ ಮೇಲೆ ನಿರ್ಮಾಣ ಮಾಡಿದ ಆಲ್ ಸ್ಟಂ ತನ್ನ ಇಂಪ್ಯಾಕ್ಟ್ ಪಿಲ್ಲರ್ ಅಡಿಯಲ್ಲಿ ಲೀಪ್ ಪರಿಚಯಿಸಿದ್ದು ಕೊನೆಯ ಹಂತದ ಕನೆಕ್ಟಿವಿಟಿ ಸಮಸ್ಯೆಗಳನ್ನು ಪರಿಹರಿಸುವ ಗುರಿ ಹೊಂದಿದೆ ಮತ್ತು ಭಾರತದಲ್ಲಿ ಸುಸ್ಥಿರ ಚಲನೆಯ ಅಳವಡಿಕೆಯನ್ನು ಸು‍ಧಾರಿಸಲಿದೆ. ಈ ಕಾರ್ಯಕ್ರಮವು ಇತರೆ ಮೆಟ್ರೋ ನಿಲ್ದಾಣಗಳಿಗೂ ವಿಸ್ತರಿಸಲಿದ್ದು ಅದು ಹೈ-ಫ್ರೀಕ್ವೆನ್ಸಿ ಹಬ್ ಗಳಿಗೆ ಕನೆಕ್ಟಿವಿಟಿ ನೀಡಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಿಸಲು ನೆರವಾಗಲಿದೆ. 

click me!