ದೇಶದ ಮೊದಲ ಸಿಎನ್‌ಜಿ ಟ್ರಾಕ್ಟರ್ ಬಿಡುಗಡೆ: ಈ ಟ್ರಾಕ್ಟರ್ ಯಾರದ್ದು ಗೊತ್ತಾ?

By Suvarna News  |  First Published Feb 15, 2021, 4:35 PM IST

ರಾವ್‌ಮ್ಯಾಟ್ ಟೆಕ್ನೋ ಸೆಲೂಷನ್ಸ್ ಮತ್ತು ತೋಮಸೆಟ್ಟೊ ಅಚಿಲ್ಲೆ ಇಂಡಿಯಾ ಜಂಟಿಯಾಗಿ ಈ ಡೀಸೆಲ್‌ ಟ್ರಾಕ್ಟರ್‌ ಅನ್ನು ಸಿಎನ್‌ಜಿ ಟ್ರಾಕ್ಟರ್ ಆಗಿ ಪರಿವರ್ತಿಸುವ ಕಿಟ್ ಅನ್ನು ಅಭಿವೃದ್ಧಿಪಡಿಸಿವೆ. ಈ ಸಿಎನ್‌ಜಿ ಕಿಟ್ ಅಳವಡಿಸುವುದರಿಂದ ವರ್ಷಕ್ಕೆ 1.5 ಲಕ್ಷ ರೂಪಾಯಿ ಉಳಿಸಹುದಾಗಿದೆ ಮತ್ತು ಪರಿಸರ ಮಾಲಿನ್ಯವನ್ನೂ ತಡೆಗಟ್ಟಬಹುದಾಗಿದೆ.


ಇತ್ತೀಚೆಗೆಷ್ಟೇ ಸೋನಾಲಿಕಾ ಕಂಪನಿ ದೇಶದ ಮೊದಲ ಎಲೆಕ್ಟ್ರಿಕ್ ಟ್ರಾಕ್ಟರ್ ಟೈಗರ್ ಬಿಡುಗಡೆ ಮಾಡಿತ್ತು. ಇದೀಗ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ದೇಶದ ಮೊಟ್ಟ ಮೊದಲ ಸಿಎನ್‌ಜಿ ಆಧಾರಿತ ಟ್ರಾಕ್ಟರ್‌ಗೆ ಚಾಲನೆ ನೀಡಿದ್ದಾರೆ. ಈ ಸಿಎನ್‌ಜಿ ಇಂಧನ ಆಧರಿತ ಟ್ರ್ಯಾಕ್ಟರ್‌ನಿಂದ ರೈತರಿಗೆ ವರ್ಷಕ್ಕೆ ಕನಿಷ್ಠ ಒಂದೂವರೆ ಲಕ್ಷ ರೂಪಾಯಿ ಉಳಿತಾಯವಾಗಲಿದೆ ಎಂಬುದು ಗಡ್ಕರಿ ಅವರ ಅಭಿಪ್ರಾಯವಾಗಿದೆ.

ದೇಶದ ಮೊದಲ ಎಲೆಕ್ಟ್ರಿಕ್ ಟ್ರಾಕ್ಟರ್ ಸೋನಾಲಿಕಾ ‘ಟೈಗರ್’ ಬಿಡುಗಡೆ

Tap to resize

Latest Videos

undefined

ಸಿಎನ್‌ಜಿ ಟ್ರಾಕ್ಟರ್ ಒಡೆತನವನ್ನು ಕೇಂದ್ರ ಸಚಿವ ಗಡ್ಕರಿ ಅವರು ಹೊಂದಿದ್ದಾರೆ. 2012ರಲ್ಲಿ ಖರೀದಿಸಲಾದ ಟ್ರಾಕ್ಟರ್‌ ಅನ್ನು ಸಿಎನ್‌ಜಿ ಟ್ರಾಕ್ಟರ್ ಆಗಿ ಪರಿವರ್ತಿಸಲಾಗಿದೆ. ರಾವ್‌ಮ್ಯಾಟ್ ಟೆಕ್ನೋ ಸೊಲ್ಯೂಷನ್ಸ್ ಮತ್ತು ತೋಮಸೆಟ್ಟೊ ಅಚಿಲ್ಲೆ ಇಂಡಿಯಾ ಎಂಬ ಕಂಪನಿಗಳು ಡಿಸೇಲ್ ಟ್ರಾಕ್ಟರ್ ಅನ್ನು ಸಿಎನ್‌ಜಿ ಟ್ರಾಕ್ಟರ್ ಆಗಿ ಪರಿವರ್ತಿಸಿವೆ.

ಆರು ತಿಂಗಳಗಳ ಕಾಲ ಸಿಎನ್‌ಜಿ ಟ್ರಾಕ್ಟರ್ ಅನ್ನು ಪ್ರಯೋಗಕ್ಕೆ ಒಳಪಡಿಸಿದ ನಂತರವಷ್ಟೇ ಲಾಂಚ್ ಮಾಡಲಾಗಿದೆ. ಈ ಟ್ರಾಕ್ಟರ್ ಅನ್ನು ಪರಿಚಯಿಸುವ ಮೊದಲ ಅಗತ್ಯವಿರುವ ಎಲ್ಲ ಒಪ್ಪಿಗೆಗಳನ್ನು ಪಡೆಯಲಾಗಿದೆ ಎಂದು ಗಡ್ಕರಿ ಅವರು ಹೇಳಿಕೊಂಡಿದ್ದಾರೆ. ಸಿಎನ್‌ಜಿ ಟ್ರಾಕ್ಟರ್ ಆಗಿ ಬದಲಾಗಿರುವ ಈ ಡಿಸೇಲ್ ಟ್ರಾಕ್ಟರ್ ಇದೀಗ ಪ್ರಯೋಗಾತ್ಮಕ ಹಂತದಲ್ಲಿದೆ. ಮುಂದಿನ ಕೆಲವು ದಿನಗಳಲ್ಲಿ ಭಾರತದಲ್ಲಿ ಈ ಸಿಎನ್‌ಜಿ ಆಧರಿತ ಟ್ರಾಕ್ಟರ್‌ಗಳು ರೈತರಿಗೆ ದೊರೆಯುವ ಸಾಧ್ಯತೆಗಳಿವೆ. ಈ ಟ್ರಾಕ್ಟರ್‌ಗಳು ಹೊರೆಯನ್ನು ತಗ್ಗಿಸುವುದು ಮಾತ್ರವಲ್ಲದೇ ಪರಿಸರ ರಕ್ಷಣೆಗೂ ಸಹಾಯ ಮಾಡಲಿವೆ ಎಂಬುದು ಕೇಂದ್ರ ಸಚಿವರ ಅಭಿಪ್ರಾಯವಾಗಿದೆ.

ಸಿಎನ್‌ಜಿ ಶುದ್ಧ ಇಂಧನವಾಗಿದೆ. ಏಕೆಂದರೆ ಇದು ಇಂಗಾಲ ಮತ್ತು ಇತರ ಮಾಲಿನ್ಯಕಾರಕಗಳ ಕಡಿಮೆ ಅಂಶವನ್ನು ಹೊಂದಿದೆ. ಇದು ಶೂನ್ಯ ಸೀಸವನ್ನು ಹೊಂದಿರುವುದರಿಂದ ಇದು ಆರ್ಥಿಕವಾಗಿರುತ್ತದೆ ಮತ್ತು ನಾಶಕಾರಿ, ದುರ್ಬಲವಲ್ಲದ ಮತ್ತು ಮಾಲಿನ್ಯಕಾರಕವಲ್ಲ. ಸಿಎನ್‌ಜಿ ಎಂಜಿನ್‌ನ ಜೀವಿತಾವಧಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಇದಕ್ಕೆ ಕಡಿಮೆ ನಿಯಮಿತ ನಿರ್ವಹಣೆ ಅಗತ್ಯವಿರುತ್ತದೆ. ಸಿಎನ್‌ಜಿ ಬೆಲೆಗಳು ಏರಿಳಿತದ ಪೆಟ್ರೋಲ್ ಬೆಲೆಗಳಿಗಿಂತ ಹೆಚ್ಚು ಸ್ಥಿರವಾಗಿರುವುದರಿಂದ ಇದು ಅಗ್ಗವಾಗಿದೆ. ಸಿಎನ್‌ಜಿ ವಾಹನಗಳ ಸರಾಸರಿ ಮೈಲೇಜ್ ಡೀಸೆಲ್, ಪೆಟ್ರೋಲ್ ಚಾಲಿತ ವಾಹನಗಳಿಗಿಂತ ಉತ್ತಮವಾಗಿದೆ ಎಂದು ಗಡ್ಕರಿ ಅವರು ತಿಳಿಸಿದ್ದಾರೆ.

PiMo ಇ-ಬೈಕ್ ಬೆಲೆ 30 ಸಾವಿರ ರೂ; ಇದನ್ನು ಓಡಿಸೋಕೆ ಬೇಕಿಲ್ಲ ಡಿಎಲ್

ಈ ಸಿಎನ್‌ಜಿ ಟ್ರಾಕ್ಟರ್ ತಿಂಗಳುಗಳ ಕಾಲ ಟ್ರಯಲ್ ಆಂಡ್ ರನ್‌ ಹಂತದಲ್ಲಿದೆ ಇರಲಿದೆ. ಡೀಸೆಲ್‌ ಟ್ರಾಕ್ಟರ್‌ಗೆ ಹೋಲಿಸಿದಸೆ ಸಿಎನ್‌ಜಿ ಆಧರಿತ ಟ್ರಾಕ್ಟರ್ ಶೇ.75ರಷ್ಟು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ. ಹೀಗಿದ್ದಾಗ್ಯೂ, ಡೀಸೆಲ್‌ ಟ್ರಾಕ್ಟರ್ ಅನ್ನು ಸಿಎನ್‌ಜಿ ಆಧರಿತ ಟ್ರಾಕ್ಟರ್ ಆಗಿ ಪರಿವರ್ತಿಸಲು ಎಷ್ಟು ವೆಚ್ಚವಾಗುತ್ತಿದೆ ಎಂಬ ಮಾಹಿತಿಯನ್ನು ಬಿಟ್ಟು ಕೊಟ್ಟಿಲ್ಲ.

ರಾವ್‌ಮ್ಯಾಟ್ ಟೆಕ್ನೋ ಸೆಲೂಷನ್ಸ್ ಮತ್ತು ಟೊಮೆಸೆಟ್ಟೋ ಆಚಿಲ್ಲೆ ಇಂಡಿಯ ಜಂಟಿಯಾಗಿ ಈ ಡೀಸೆಲ್‌ ಟ್ರಾಕ್ಟರ್‌ ಅನ್ನು ಸಿಎನ್‌ಜಿ ಟ್ರಾಕ್ಟರ್ ಆಗಿ ಪರಿವರ್ತಿಸುವ ಕಿಟ್ ಅನ್ನು ಅಭಿವೃದ್ಧಿಪಡಿಸಿವೆ. ಈ ಡೀಸೆಲ್ ಟ್ರಾಕ್ಟರ್‌ಗಳನ್ನು ಸಿಎನ್‌ಜಿ ಟ್ರಾಕ್ಟರ್‌ಗಳನ್ನಾಗಿ ಪರಿವರ್ತಿಸುವ ಕೇಂದ್ರಗಳನ್ನು ಪ್ರತಿ ಜಿಲ್ಲೆಯಲ್ಲಿ ತೆರೆಯುವ ಯೋಜನೆಯೂ ಇದೆ  ಎನ್ನಲಾಗುತ್ತಿದೆ.

ಈಗಾಗಲೇ ಚಾಲ್ತಿಯಲ್ಲಿರುವ ಡೀಸೆಲ್‌ ಟ್ರಾಕ್ಟರ್‌ಗಳಿಗೆ ಸಿಎನ್‌ಜಿ ಕಿಟ್ ಅಳವಡಿಸುವುದರಿಂದ ರೈತರ ಆದಾಯವನ್ನು ಹೆಚ್ಚಿಸಲು ಸಾಧ್ಯವಾಗಲಿದೆ. ವೆಚ್ಚಗಳನ್ನು ಕಡೆಮೆ ಮಾಡುವ ಮೂಲಕ ಈ ಆದಾಯವನ್ನು ಹೆಚ್ಚಿಸಬಹುದಾಗಿದೆ. ಒಬ್ಬ ರೈತ ತನ್ನ ಟ್ರಾಕ್ಟರ್‌ಗೆ ಡೀಸೆಲ್ ಖರೀದಿಸಲು ವರ್ಷಕ್ಕೆ ಕನಿಷ್ಠ 3ರಿಂದ 3.5 ಲಕ್ಷ ರೂಪಾಯಿ ವೆಚ್ಚ ಮಾಡುತ್ತಾನೆ. ಒಂದು ವೇಳೆ, ಈ ಸಿಎನ್‌ಜಿ ಪರ್ಯಾಯ ಇಂಧನ ವ್ಯವಸ್ಥೆಯನ್ನು ಅಳವಡಿಸಿಕೊಂಡರೆ ವರ್ಷಕ್ಕೆ 1.5 ಲಕ್ಷ ರೂಪಾಯಿಯಷ್ಟು ಇಂಧನ ವೆಚ್ಚವನ್ನು ಉಳಿಸಬಹುದಾಗಿದೆ. ಹಾಗೆಯೇ, ಈ ಸಿಎನ್‌ಜಿ ಟೆಕ್ನಾಲಜಿ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಎಂದು ಗಡ್ಕರಿ ತಿಳಿಸಿದ್ದಾರೆ.

ಶಾರುಖ್ ಬಳಿ ಇದೆ ವಿರಳ, ವಿಶಿಷ್ಟ ಲೆಕ್ಸಸ್ ಕಾರು. ಬೆಲೆ ಎಷ್ಟು ಗೊತ್ತಾ?

 

click me!