ಕರ್ನಾಟಕಕ್ಕೆ ಬೇರೆ ರಾಜ್ಯದ ವಾಹನ ತರುವ ಮುನ್ನ ನಿಯಮಗಳೇನು? ಮರು ನೋಂದಣಿ, ತೆರಿಗೆ ಪಾವತಿ, NOC ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ.
DL, MH, HR, UP, MP, RJ, TN, TS, AP,BR, KL, PY.... ಏನಿದು? ಬೆಂಗಳೂರಿನಲ್ಲಿ ಓಡಾಡುವ ಕಾರ್‌ಗಳ ನಂಬರ್ ಪ್ಲೇಟ್‌ಗಳ ಮೇಲೆ ಕಣ್ಣಾಡಿಸಿದ್ರೆ, ಇದು ಬೆಂಗ್ಳುರೋ ಅಥ್ವಾ ಬೇರೆ ಯಾವುದೋ ಊರೋ ಅಂತಾ ಡೌಟ್ ಬರೋದು ಪಕ್ಕಾ! ಬೆಂಗ್ಳೂರಿನಂಥ ಮೆಟ್ರೋ ಸಿಟಿಗೆ ದೇಶದ ಎಲ್ಲಾ ಮೂಲೆಗಳಿಂದ ಬೇರೆ ಬೇರೆ ಕಾರಣಕ್ಕೆ ಜನ್ರು ಬರ್ತಾರೆ-ಹೋಗ್ತಾರೆ. ತುಂಬಾ ಮಂದಿ ಇಲ್ಲೇ ಕೆಲಸ ಗಿಟ್ಟಿಸಿ ಸೆಟ್ಲ್ ಆಗ್ತಾರೆ. ಅವ್ರ ಜೊತೆಗೆ ಅವ್ರ ಕಾರ್ ಇತರೆ ವಾಹನಗಳು ಇಲ್ಲೇ ಸೆಟ್ಲ್ ಆಗ್ತಾವೆ! ಬೇರೆ ರಾಜ್ಯಗಳ ಜನ್ರಿಗೆ ಇಲ್ಲಿ ಬೇರೆ ರೂಲ್ಸ್ ಇಲ್ಲ, ಆದ್ರೆ ಅವ್ರ ವಾಹನಗಳಿಗಂತೂ ಇದೆ! ಹೌದು, ವಿಶೇಷವಾಗಿ ತೆರಿಗೆ ಸಂಬಂಧಿಸಿ ಸ್ಪಷ್ಟವಾದ ಕಾನೂನು- ನಿಯಮಗಳಿವೆ. ಹಾಗಾದ್ರೆ, ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ವಾಹನ ತರ್ಬೇಕಾದ್ರೆ ಇರೋ ನಿಯಮಗಳೇನು? ರೋಡ್ ಟ್ಯಾಕ್ಸ್ ಕಥೆ ಏನು? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳೋಣ.
ಒಂದು ಕಡೆ ದೇಶದಲ್ಲಿ ಇವಿ ಕ್ರೇಜ್ ಹೆಚ್ಚುತ್ತಿದ್ರೆ, ಇನ್ನೊಂದು ಕಡೆ ದೆಹಲಿಯಲ್ಲಿ ಪೆಟ್ರೋಲ್- ಡೀಸೆಲ್ ವಾಹನಗಳ ಮೇಲೆ ಸರ್ಕಾರದ ವಕ್ರದೃಷ್ಟಿ ಹಾಗೂ ಸಂಪೂರ್ಣ ನಿರ್ಬಂಧದ ತೂಗುಗತ್ತಿ ಇದೆ. ಅಲ್ಲಿನ ಜನ ಬಹಳ ಕಡಿಮೆ ಬೆಲೆಗೆ ಒಳ್ಳೊಳ್ಳೆ ಹೈಎಂಡ್ ವಾಹನಗಳನ್ನು ಮಾರ್ತಿದ್ದಾರೆ, ಹಾಗೂ ನಮ್ ರಾಜ್ಯದ ಮಂದಿ ಮುಗಿಬಿದ್ದು ಖರೀದಿಸ್ತಿದ್ದಾರೆ. ಈ ವಾಹನ ಮಾರಾಟ-ಖರೀದಿಗೆಂದೇ ಅದೆಷ್ಟು ದಲ್ಲಾಳಿ ಏಜೆನ್ಸಿಗಳು ಬೆಂಗ್ಳೂರಲ್ಲಿ ಇವೆ. ಸೋ, ನಿಮ್ ಬಳಿ ಪಕ್ಕಾ ಮಾಹಿತಿಯಿಲ್ಲದಿದ್ರೆ ಮೋಸ ಹೋಗೋ ಚಾನ್ಸ್ ಇದ್ದೇ ಇದೆ. ಹೊರರಾಜ್ಯದ ವಾಹನ ಖರೀದಿಸೋ ಮುನ್ನ ಈ ವಿಚಾರಗಳನ್ನು ತಿಳಿದುಕೊಂಡ್ರೆ ಉತ್ತಮ!
ಕರ್ನಾಟಕ ಬಿಟ್ಟು ಹೊರರಾಜ್ಯಗಳಲ್ಲಿ ನೋಂದಣಿಯಾಗಿರುವ ವಾಹನಗಳಿಗಿರುವ ರೂಲ್ಸ್ ಏನು?
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಪ್ರಕಾರ, ಒಂದು ರಾಜ್ಯದಲ್ಲಿ ನೋಂದಣಿಯಾಗಿರುವ ವಾಹನ ಇನ್ನೊಂದು ರಾಜ್ಯದಲ್ಲಿ 12 ತಿಂಗಳುಗಳಿಗೆ ಮೀರಿ ಇಡಲಾಗಿದ್ದರೆ, ಮೋಟಾರ್ ವಾಹನ ಕಾಯ್ದೆ 1988ರ ಸೆಕ್ಷನ್ 47ರ ಪ್ರಕಾರ ವಾಹನ ಮಾಲೀಕರು ಸ್ಥಳೀಯ ಸಾರಿಗೆ ಪ್ರಾಧಿಕಾರದಲ್ಲಿ ಮರು ನೋಂದಣಿ ಮಾಡಿಸಿ ಹೊಸ ನಂಬರ್ ಪ್ಲೇಟ್ ಪಡೆಯಬೇಕು.
ಹೊರರಾಜ್ಯದಿಂದ ಕರ್ನಾಟಕಕ್ಕೆ ವಾಹನ ತರ್ತೀರಾ? ಹಾಗಾದ್ರೆ ಇದನ್ನ ತಿಳಿದುಕೊಳ್ಳಿ:
1. NOC ಪಡೆಯಿರಿ:
ವಾಹನ ನೋಂದಣಿಯಾಗಿರುವ ರಾಜ್ಯದಿಂದ No Objection Certificate (NOC) ಪಡೆಯಬೇಕು.
2. RC ವಿಳಾಸ ಅಪ್ಡೇಟ್ ಮಾಡಿ:
ಕರ್ನಾಟಕದಲ್ಲಿ ದೀರ್ಘಾವಧಿ ವಾಸ್ತವ್ಯ ಹೂಡುವುದಾದರೆ Registration Cerificate (RC) ನಲ್ಲಿ ನಿಮ್ಮ ಸ್ಥಳೀಯ ವಿಳಾಸವನ್ನು ಅಪ್ಡೇಟ್ ಮಾಡಿ.
3. ವಾಹನದ ಮರುನೋಂದಣಿ:
ಕರ್ನಾಟಕದಲ್ಲಿ 12 ತಿಂಗಳು ಮೀರಿ ವಾಹನ ಬಳಸಿದ್ದಲ್ಲಿ, ಮರುನೋಂದಣಿ ಮೂಲಕ ನಿಮ್ಮ ವಾಹನಕ್ಕೆ ಕರ್ನಾಟಕ ರಿಜಿಸ್ಟ್ರೇಷನ್ ಪಡೆಯಿರಿ.
4. ರಸ್ತೆ ತೆರಿಗೆ ಪಾವತಿಸಿ:
ದಂಡದಿಂದ ಪಾರಾಗಲು ಇಲ್ಲಿ ಅನ್ವಯವಾಗುವ ರಸ್ತೆ ತೆರಿಗೆಯನ್ನು ಪಾವತಿಸಿ.
5. ಟ್ಯಾಕ್ಸ್ ರೀಫಂಡ್ ಕ್ಲೇಮ್ ಮಾಡಿ: ನಿಮಗೆ ಅನ್ವಯವಾಗೋದಾದ್ರೆ, ವಾಹನ ನೋಂದಣಿಯಾಗಿರುವ ಮೂಲ-ರಾಜ್ಯದಲ್ಲಿ ರೋಡ್ ಟ್ಯಾಕ್ಸ್ ರೀಫಂಡ್‌ಗೆ ಅರ್ಜಿ ಸಲ್ಲಿಸಿ
ಕಾರು ನೋಂದಣಿ ಆಗಿರುವ ರಾಜ್ಯದಿಂದ ಎನ್‌ಓಸಿ ಪಡೆದುಕೊಳ್ಳುವುದು
ಬೇರೆ ರಾಜ್ಯದಿಂದ NOC ಗೆ ಅರ್ಜಿ ಸಲ್ಲಿಸುವುದು ಹೇಗೆ?
NOC ಎಂದರೆ ನಿಮ್ಮ ವಾಹನವನ್ನು ನೋಂದಾಯಿಸಿರುವ RTO ನಿಂದ ನೀಡಲಾಗುವ ನಿರಾಕ್ಷೇಪಣಾ ಪ್ರಮಾಣಪತ್ರ. ವಾಹನದ ಮೇಲೆ ಯಾವುದೇ ತೆರಿಗೆ ಬಾಕಿ ಇಲ್ಲ ಎಂದು NOC ಪ್ರಮಾಣೀಕರಿಸುತ್ತದೆ.
ಈ ಕೆಳಗಿನ ಸಂದರ್ಭಗಳಲ್ಲಿ NOC ಅಗತ್ಯವಿದೆ
*ವಲಸೆ ಬಂದ ರಾಜ್ಯದಲ್ಲಿ ಹೊಸ ನೋಂದಣಿ ಗುರುತು ಪಡೆಯಲು ಬಯಸಿದಾಗ.
*ವಾಹನದ ಮಾಲೀಕತ್ವವನ್ನು ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸಿದಾಗ. ಈ ಸಂದರ್ಭದಲ್ಲಿ ವಾಹನವು ಯಾವುದೇ ಘಟನೆಯಲ್ಲಿ ಭಾಗಿಯಾಗಿದೆಯೇ ಎಂದು ಪರಿಶೀಲಿಸಲು NOC ಅಗತ್ಯವಿದೆ.
NOC ಗೆ ಅಗತ್ಯವಿರುವ ದಾಖಲೆಗಳು
ಕರ್ನಾಟಕದ ವಿಳಾಸದೊಂದಿಗೆ ನಿಮ್ಮ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ (ಆರ್‌ಸಿ) ಅಪ್‌ಡೇಟ್
ಕರ್ನಾಟಕದಲ್ಲಿ ಆರ್‌ಸಿಯಲ್ಲಿ ವಾಹನದ ವಿಳಾಸ ಬದಲಾವಣೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಕರ್ನಾಟಕದಲ್ಲಿ ಆರ್‌ಸಿಯಲ್ಲಿ ವಾಹನದ ವಿಳಾಸ ಬದಲಾವಣೆಗೆ ಅಗತ್ಯವಿರುವ ದಾಖಲೆಗಳು
ಕರ್ನಾಟಕ ನೋಂದಣಿಗೆ ನಿಮ್ಮ ವಾಹನವನ್ನು ಮರು ನೋಂದಾಯಿಸಿ
ಕರ್ನಾಟಕದಲ್ಲಿ ವಾಹನ ನೋಂದಣಿ ಸಂಖ್ಯೆಯ ಮರು ನೋಂದಣಿಗೆ ಅರ್ಜಿ ಸಲ್ಲಿಸುವುದು ಹೇಗೆ?
ವಾಹನ ಮರು ನೋಂದಣಿಗೆ ಅಗತ್ಯವಿರುವ ದಾಖಲೆಗಳು
ಕರ್ನಾಟಕದಲ್ಲಿ ಅನ್ವಯವಾಗುವ ರಸ್ತೆ ತೆರಿಗೆಯನ್ನು ಪಾವತಿಸಿ
ಕರ್ನಾಟಕದಲ್ಲಿ ರಸ್ತೆ ತೆರಿಗೆ ಪಾವತಿಸುವುದು ಹೇಗೆ?
ನಿಮ್ಮ ಹಿಂದಿನ ರಾಜ್ಯದಿಂದ ರಸ್ತೆ ತೆರಿಗೆ ಮರುಪಾವತಿಯನ್ನು ಪಡೆದುಕೊಳ್ಳಿ: ನೀವು ವಾಹನವನ್ನು ಖರೀದಿಸಿದಾಗ, ಅದರ ಇನ್‌ವಾಯ್ಸ್ ಮೌಲ್ಯದ ಆಧಾರದ ಮೇಲೆ ನೀವು ರಾಜ್ಯ ಸರ್ಕಾರಕ್ಕೆ ರಸ್ತೆ ತೆರಿಗೆಯನ್ನು ಪಾವತಿಸುತ್ತೀರಿ. ನೀವು ಆ ವಾಹನವನ್ನು ಕರ್ನಾಟಕಕ್ಕೆ ಸ್ಥಳಾಂತರಿಸಿದರೆ, ನೀವು ಮತ್ತೆ ಜೀವಮಾನದ ರಸ್ತೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ - ವಾಹನದ ಉಳಿದ ವಯಸ್ಸಿಗೆ ಮಾತ್ರ. ನೀವು ಹಿಂದಿನ ರಾಜ್ಯದಲ್ಲಿ ಈಗಾಗಲೇ ರಸ್ತೆ ತೆರಿಗೆಯನ್ನು ಪಾವತಿಸಿರುವುದರಿಂದ, ವಾಹನವನ್ನು ಇನ್ನು ಮುಂದೆ ಅಲ್ಲಿ ಬಳಸಲಾಗುತ್ತಿಲ್ಲವಾದ್ದರಿಂದ ನೀವು ಅವರಿಂದ ಮರುಪಾವತಿಯನ್ನು ಪಡೆಯಬಹುದು.