BMTC ಗುಡ್ ನ್ಯೂಸ್, 921 ಎಲೆಕ್ಟ್ರಿಕ್ ಬಸ್ ಕಾರ್ಯಾಚರಣೆಗೆ ಟಾಟಾ ಮೋಟಾರ್ಸ್ ಜೊತೆ ಒಪ್ಪಂದ!

By Suvarna News  |  First Published Dec 16, 2022, 9:25 PM IST

ಪ್ರಯಾಣಿಕರಿಗೆ ಅತ್ಯುತ್ತಮ ಹಾಗೂ ಮಾಲಿನ್ಯ ರಹಿತ ಸೇವೆ ನೀಡಲು ಬಿಎಂಟಿಸಿ ಈಗಾಗಲೇ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಉತ್ತೇಜನ ನೀಡಿದೆ. ಇದೀಗ 921 ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆ ನಡೆಸಲು ಟಾಟಾ ಮೋಟರ್ಸ್ ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ.


ಬೆಂಗಳೂರು(ಡಿ.16):  ಬಿಎಂಟಿಸಿ ಸಂಸ್ಥೆ ಇದೀಗ ಹೆಚ್ಚು ಎಲೆಕ್ಟ್ರಿಕ್ ಬಸ್‌ ಕಾರ್ಯಾಚರಣೆ ಆರಂಭಿಸಿದೆ. ಈಗಾಗಲೇ ಹಲವು ಇವಿ ಖರೀದಿಸಿದೆ. ಶೀಘ್ರದಲ್ಲೇ ಬಿಎಂಟಿಸಿ ಸಂಪೂರ್ಣವಾಗಿ ಎಲೆಕ್ಟ್ರಿಕ್ ಮಯವಾಗಲಿದೆ. ಇದೀಗ  ಬೆಂಗಳೂರು ನಗರದಲ್ಲಿ 921 ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಗಾಗಿ ಟಾಟಾ ಮೋಟಾರ್ಸ್ ಅಧೀನ ಸಂಸ್ಥೆ ಟಿಎಮ್‌ಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸಲ್ಯೂಶನ್ಸ್ ಲಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಒಪ್ಪಂದದ ಭಾಗವಾಗಿ, ಟಿಎಮ್‌ಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸಲ್ಯೂಶನ್ಸ್ ಲಿ., 12 ವರ್ಷಗಳವರೆಗೆ , 921 ಯೂನಿಟ್‌ಗಳ 12-ಮೀಟರ್ ಲೋ-ಫ್ಲೋರ್ ಎಲೆಕ್ಟ್ರಿಕ್  ಬಸ್‌ಗಳನ್ನು ಸರಬರಾಜು ಮಾಡಿ, ಕಾರ್ಯಾಚರಣೆ ನಡೆಸಿ ನಿರ್ವಹಿಸುತ್ತದೆ. ಟಾಟಾ ಸ್ಟಾರ್ ಬಸ್ ಎಲೆಕ್ಟ್ರಿಕ್ ದೀರ್ಘಕಾಲ ಇರುವಂತಹ ಮತ್ತು ಆರಾಮದಾಯಕ ಪ್ರಯಾಣಕ್ಕಾಗಿ ಅತ್ಯುತ್ಕೃಷ್ಟ ವಿನ್ಯಾಸ ಮತ್ತು ವರ್ಗದಲ್ಲೇ ಅತ್ಯುತ್ತಮವಾದ ಅಂಶಗಳೊಂದಿಗೆ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ವಾಹನವಾಗಿದೆ. 
 
ಬೆಂಗಳೂರಿನಲ್ಲಿ 921 ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಗಾಗಿ ಟಿಎಮ್‌ಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸಲ್ಯೂಶನ್ಸ್ ಲಿ.,ಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದಕ್ಕೆ ನಮಗೆ ಬಹಳ ಹರ್ಷವಾಗುತ್ತಿದೆ. ಶೂನ್ಯ-ಉಗುಳುವಿಕೆ, ಪರಿಸರ ಸ್ನೇಹಿಯಾದ ಈ ಬಸ್‌ಗಳು, ವಾಯು ಮಾಲಿನ್ಯವನ್ನು ತಡೆಗಟ್ಟುವಲ್ಲಿ ನೆರವಾಗುವುದರ ಜೊತೆಗೆ ಎಲ್ಲಾ ಭಾಗೀದಾರರಿಗೂ ಪ್ರಯೋಜನವನ್ನುಂಟು ಮಾಡುತ್ತದೆ ಎಂಬ ವಿಶ್ವಾಸ ನಮಗಿದೆ. ಎಲೆಕ್ಟ್ರಿಕ್ ಮೊಬಿಲಿಟಿ ಕ್ಷೇತ್ರದಲ್ಲಿ ಟಾಟಾ ಮೋಟರ್ಸ್ ಅವರ ಅಪಾರ ಅನುಭವ ಖಂಡಿತವಾಗಿಯೂ ನಗರದಲ್ಲಿ ತಡೆರಹಿತವಾದ, ಸುರಕ್ಷಿತವಾದ ಮತ್ತು ಆರಾಮದಾಯಕವಾದ ಪಯಣವನ್ನು ಒದಗಿಸುವಲ್ಲಿ ನೆರವಾಗುತ್ತದೆ ಎಂದು ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಶನ್‌ನ ವ್ಯವಸ್ಥಾಪಕ ನಿರ್ದೇಶಕಿ ಜಿ. ಸತ್ಯವತಿ ಹೇಳಿದ್ದಾರೆ.

ಎಲೆಕ್ಟ್ರಿಕ್ ವಾಹನ ಖರೀದಿಗೆ ಸುಲಭವಾಗಿಸಲು ಟಾಟಾ ಮೋಟಾರ್ಸ್ ಭರ್ಜರಿ ಸ್ಕೀಮ್!

Latest Videos

undefined

ಬೃಹತ್ ಸಿಇಎಸ್‌ಎಲ್ ಟೆಂಡರ್ ಅಡಿ ಪ್ರಪ್ರಥಮ ನಿಶ್ಚಿತ ಒಪ್ಪಂದಕ್ಕೆ ಸಹಿ ಹಾಕಿರುವುದು ನಮಗೆ ಸ್ಮರಣೀಯ ಸಂದರ್ಭವಾಗಿದೆ ಮತ್ತು ಬೆಂಗಳೂರು ನಗರದಲ್ಲಿ ಸಾರ್ವಜನಿಕ ಸಾರಿಗೆಯನ್ನು ಆಧುನೀಕರಣ ಮತ್ತು ವಿದ್ಯುತ್ತೀಕರಣಗೊಳಿಸ ಬೇಕೆಂದಿರುವ ಬಿಎಮ್‌ಟಿಸಿಯೊಂದಿಗೆ ಸಹಭಾಗಿತ್ವ ಏರ್ಪಡಿಸಿಕೊಂಡಿರುವುದಕ್ಕೆ ನಮಗೆ ಸಂತೋಷವಾಗುತ್ತಿದೆ. ಟಾಟಾ ಮೋಟರ್ಸ್‌ನಲ್ಲಿ ನಾವು ಸ್ಮಾರ್ಟ್ ಆದ, ಹಸಿರು ಹಾಗೂ ಶಕ್ತಿ ಸಾಮರ್ಥ್ಯವಿರುವ ಸಮೂಹ ಸಂಚಾರ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ನಿರಂತರವಾಗಿ ಪ್ರಯತ್ನಿಸುತ್ತಿರುತ್ತೇವೆ. ಈ ಎಲೆಕ್ಟ್ರಿಕ್ ಬಸ್‌ಗಳು, ಬೆಂಗಳೂರಿನ ಪ್ರಯಾಣಿಕರಿಗೆ, ದೀರ್ಘಕಾಲ ಇರುವಂತಹ, ಸುರಕ್ಷಿತವಾದ ಮತ್ತು ಆರಾಮದಾಯಕವಾದ ಸಾರ್ವಜನಿಕ ಸಾರಿಗೆ ಒದಗಿಸುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ಟಿಎಮ್‌ಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸಲ್ಯೂಶನ್ಸ್ ಲಿಮಿಟೆಡ್‌ನ ಸಿಇಒ  ಅಸೀಮ್ ಕುಮಾರ್ ಮುಖೋಪಾಧ್ಯಾಯ ಹೇಳಿದ್ದಾರೆ.

ಟಾಟಾ ಮೋಟರ್ಸ್‌ನ ಅತ್ಯಾಧುನಿಕ ಸಂಶೋಧನೆ ಮತ್ತು ಅಭಿವೃದ್ಧಿ ಘಟಕಗಳು, ಬ್ಯಾಟರಿ ಎಲೆಕ್ಟ್ರಿಕ್, ಹೈಬ್ರಿಡ್, ಸಿಎನ್‌ಜಿ, ಎಲ್‌ಎನ್‌ಜಿ, ಮತ್ತು ಹೈಡ್ರೋಜನ್ ಫ್ಯುಯೆಲ್ ಸೆಲ್ ಟೆಕ್ನಾಲಜಿ ಒಳಗೊಂಡಂತೆ ಪರ್ಯಾಯ ಇಂಧನ ತಂತ್ರಜ್ಞಾನದ ಶಕ್ತಿಯಿರುವ ವಿನೂತನ ಸಂಚಾರ ಪರಿಹಾರಗಳನ್ನು ಇಂಜಿನಿಯರ್ ಮಾಡಲು ನಿರಂತರವಾಗಿ ಕೆಲಸಮಾಡುತ್ತಿವೆ. ಇಂದಿನವರೆಗೂ ಟಾಟಾ ಮೋಟರ್ಸ್, ಭಾರತದ ಅನೇಕ ನಗರಗಳಾದ್ಯಂತ 730ಕ್ಕಿಂತ ಹೆಚ್ಚಿನ ಎಲೆಕ್ಟ್ರಿಕ್ ಬಸ್‌ಗಳನ್ನು ಸರಬರಾಜು ಮಾಡಿದ್ದು, ಇವೆಲ್ಲವೂ, 95%ಗಿಂತ ಹೆಚ್ಚಿನ ಅಪ್‌ಟೈಮ್‌ನೊಂದಿಗೆ, ಸಂಘಟಿತವಾಗಿ 55 ದಶಲಕ್ಷ ಕಿಲೋಮೀಟ್‌ಗಳನ್ನು ಪೂರೈಸಿವೆ.

ಹೊಸ ದಾಖಲೆ ಬರೆದ ಟಾಟಾ ಮೋಟಾರ್ಸ್, ರೋಡ್‌ವೇಸ್‌ನಿಂದ 1,000 ಬಸ್ ಆರ್ಡರ್!

click me!