ಕರ್ನಾಟಕದಲ್ಲಿ ಬರೋಬ್ಬರಿ 11,000 ಕೋಟಿ ರೂಪಾಯಿ ಹೆದ್ದಾರಿ ಕಾಮಾಗಾರಿ ಯೋಜನೆಗೆ ನಿತಿನ್ ಗಡ್ಕರಿ ಚಾಲನೆ ನೀಡಿದ್ದಾರೆ. ಹಾಗಾದರೆ ಕರ್ನಾಟಕದ ಯಾವೆಲ್ಲಾ ರಸ್ತೆಗಳು ಹೊಸ ಸ್ಪರ್ಶ ಪಡೆದುಕೊಳ್ಳಲಿದೆ. ಇಲ್ಲಿದೆ ವಿವರ.
ನವದೆಹಲಿ(ಡಿ.19): ದೇಶದ ಉದ್ದಗಲಕ್ಕೂ ಹೆದ್ದಾರಿಗಳು ಅತ್ಯುತ್ತಮಗಳೊಳ್ಳುತ್ತಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಕರ್ನಾಟಕದಲ್ಲಿ ಬೃಹತ್ ಹೆದ್ದಾರಿ ಕಾಮಾಗಾರಿ ಉದ್ಘಾಟಿಸಿದ್ದಾರೆ. ವಿಡಿಯೋ ಕಾನ್ಫೆರನ್ಸ್ ಮೂಲಕ ಕಾಮಗಾರಿ ಉದ್ಘಾಟಿಸಿದ ಗಡ್ಕರಿ, ಯೋಜನೆ ಮಾಹಿತಿ ಬಹಿರಂಗ ಪಡಿಸಿದರು.
ಹುಲಿ ಸಂರಕ್ಷಿತ ಅರಣ್ಯಕ್ಕೆ ಧಕ್ಕೆ ಬರದ ರೀತಿ ಹೆದ್ದಾರಿ ನಿರ್ಮಾಣ, ನಿತಿನ್ ಗಡ್ಕರಿ ಯೋಜನೆಗೆ ಮೆಚ್ಚುಗೆ!..
ಸಮಾರಂಭದಲ್ಲಿ ಬಿಎಸ್ ಯಡಿಯೂರಪ್ಪ, ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸಚಿವರಾದ ಸದಾನಂದ ಗೌಡ, ಪ್ರಹ್ಲಾದ್ ಜೋಶಿ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು. ಒಟ್ಟು 1,197 ಕಿ.ಮೀ ಉದ್ದದ ಹೆದ್ದಾರಿ ಯೋಜನೆ ಇದಾಗಿದ್ದು, 10,904 ಕೋಟಿ ರೂಪಾಯಿ ತಗುಲಲಿದೆ. ಕಳೆದ 6 ವರ್ಷಗಳಲ್ಲಿ ಕರ್ನಾಟಕದಲ್ಲಿ 900 ಕಿ.ಮೀ ಹೆದ್ದಾರಿ ಕಾಮಗಾರಿ ಹೆಚ್ಚುವರಿಯಾಗಿ ಸೇರಿಸಲಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಒಟ್ಟು ಹೆದ್ದಾರಿ ಕಾಮಗಾರಿ 7652 ಕಿ.ಮೀಗೆ ಏರಿಕೆಯಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
71 ಕಡೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಇದರ ಒಟ್ಟು ಮೊತ್ತ 37,311 ಕೋಟಿ ರೂಪಾಯಿ. ಇದರಲ್ಲಿ ಶೇಕಡಾ 70ರಷ್ಟು ಕಾಮಗಾರಿಗಳು ಪೂರ್ಣಗೊಂಡಿದೆ. ಈ ಬಾರಿ ಕರ್ನಾಟಕದ ಬಹುತೇಕ ಎಲ್ಲಾ ಹೆದ್ದಾರಿಗಳು ಅತ್ಯುತ್ತಮ ದರ್ಜೆಯನ್ನಾಗಿ ಮಾಡಲಾಗುತ್ತದೆ. ಗೋವಾ ಗಡಿಯಿಂದ ಕೇರಳ ಗಡಿವರೆಗೂ ಹೆದ್ದಾರಿ ಕಾಮಗಾರಿ ನಡೆಯಲಿದೆ. ಇದರಲ್ಲಿ ಬೆಲೆಕೇರಿ, ಕಾರವಾರ ಹಾಗೂ ಮಂಗಳೂರು ಕೂಡ ಸೇರಿಕೊಂಡಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.