ಹುಲಿ ಸಂರಕ್ಷಿತ ಅರಣ್ಯಕ್ಕೆ ಧಕ್ಕೆ ಬರದ ರೀತಿ ಹೆದ್ದಾರಿ ನಿರ್ಮಾಣ, ನಿತಿನ್ ಗಡ್ಕರಿ ಯೋಜನೆಗೆ ಮೆಚ್ಚುಗೆ!
ಉದ್ಯಮಿ ಆನಂದ್ ಮಹೀಂದ್ರ ವಿದೇಶದಲ್ಲಿನ ಹೆದ್ದಾರಿ ಹಾಗೂ ವನ್ಯ ಜೀವಿಗಳು ಹೆದ್ದಾರಿ ದಾಟಲು ನೆರವಾಗುವ ಕಾರಿಡಾರ್ ಕುರಿತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಗಮನಸೆಳೆದಿದ್ದರು. ಈ ವೇಳೆ ಗಡ್ಕರಿ ಸಲೆಹೆಗೆ ಧನ್ಯವಾದ ಹೇಳಿ, ತಮ್ಮ ನೂತನ ಹೆದ್ದಾರಿ ಕುರಿತು ಮಾಹಿತಿ ನೀಡಿದ್ದರು. ಇದೀಗ ನಿತಿನ್ ಗಡ್ಕರಿ ಸಾರಥ್ಯದಲ್ಲಿ ನಿರ್ಮಾಣವಾಗಿರುವ ಮಧ್ಯಪ್ರದೇಶದ ಈ ರಸ್ತೆ ವಿಶ್ವದಲ್ಲೇ ಸದ್ದು ಮಾಡುತ್ತಿದೆ.
ನವದೆಹಲಿ(ಸೆ.01): ಕಾಡು ಪ್ರದೇಶ, ವನ್ಯ ಜೀವಿ ಸಂರಕ್ಷಿತ ತಾಣಗಳಲ್ಲಿ ಹಾದು ಹೋಗುವ ಹೆದ್ದಾರಿಗಳಿಗೆ ವಿಶೇಷ ಮಹತ್ವ ನೀಡಬೇಕಾದ ಅಗತ್ಯವಿದೆ. ಕಾರಣ ವನ್ಯ ಜೀವಿಗಳಿಗೆ ಯಾವುದೇ ಸಮಸ್ಯೆಯಾಗದ ರೀತಿ ರಸ್ತೆ ನಿರ್ಮಾಣ ಮಾಡಬೇಕಿದೆ. ವಿದೇಶಗಳಲ್ಲಿ ತಂತ್ರಜ್ಞಾನ, ಆಧುನಿಕತೆಯನ್ನು ಬಳಸಿಕೊಂಡ ವನ್ಯ ಜೀವಿಗಳಿಗೆ ಕಾರಿಡಾರ್ ಯೋಜನೆ ದಶಕಗಳ ಹಿಂದಿನಿಂದಲೇ ಚಾಲ್ತಿಯಲ್ಲಿದೆ. ಇದೀಗ ಭಾರತದಲ್ಲೂ ಈ ರೀತಿಯ ರಸ್ತೆ ನಿರ್ಮಾಣವಾಗಿದೆ.
ಆನಂದ್ ಮಹೀಂದ್ರ ಹೃದಯ ಗೆದ್ದ ಫೋಟೋ ಇದು, ಗಡ್ಕರಿಗೆ ವಿಶೇಷ ಮನವಿ!.
ಉದ್ಯಮಿ ಆನಂದ್ ಮಹೀಂದ್ರ ವಿದೇಶದಲ್ಲಿನ ಹೆದ್ದಾರಿ ಹಾಗೂ ವನ್ಯಜೀವಿ ಕಾರಿಡಾರ್ ಕುರಿತು ಬೆಳಕು ಚೆಲ್ಲಿದರು. ಈ ಕುರಿತು ಕೇಂದ್ರ ರಸ್ತೆ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಗಮನಸೆಳೆದಿದ್ದರು. ಗಡ್ಕರಿ ಕೂಡ ಭಾರತದಲ್ಲಿನ ಇದೇ ರೀತಿ ನಿರ್ಮಿಸಿದ ಹೆದ್ದಾರಿ ಕುರಿತು ಮಾಹಿತಿ ನೀಡಿದ್ದರು. ಇದೀಗ ನಿತಿನ್ ಗಡ್ಕರಿ ಹಂಚಿಕೊಂಡ ಮಧ್ಯಪ್ರದೇಶದ ಸಿಯೊನಿ ಹಾಗೂ ಮಹಾರಾಷ್ಟ್ರದ ನಾಗ್ಪುರ ಸಂಪರ್ಕ ರಸ್ತೆ ವಿಶ್ವದಲ್ಲೇ ಭಾರಿ ಸಂಚಲನ ಮೂಡಿಸಿದೆ.
ಮಂದಿನ 5 ವರ್ಷದಲ್ಲಿ 5 ಕೋಟಿ ಉದ್ಯೋಗ ಸೃಷ್ಠಿ: ಅಂಕಿ ಅಂಶ ತೆರೆದಿಟ್ಟ ನಿತಿನ್ ಗಡ್ಕರಿ!
ಈ ರಾಷ್ಟ್ರೀಯ ಹೆದ್ದಾರಿ 44 ವಿಶೇಷವಾಗಿ ಪೆಂಚ್ ಹುಲಿ ಸಂರಕ್ಷಿತ ವಲಯದ ಮಧ್ಯದಿಂದ ಹಾದು ಹೋಗುತ್ತಿದೆ. ಪೆಂಚ್ ಟೈಗರ್ ರಿಸರ್ವ್ ವಲಯದ ದಟ್ಟ ಕಾಡಿನ ಮಧ್ಯೆಯಿಂದ 37 ಕಿಲೋಮೀಟರ್ ರಸ್ತೆ ನಿರ್ಮಾಣ ಸವಾಲಿನಿಂದ ಕೂಡಿತ್ತು. ಕಾರಣ ವನ್ಯ ಪ್ರಾಣಿಗಳಿಗೆ ಯಾವುದೇ ಸಮಸ್ಯೆಯಾಗದ ರೀತಿ ರಸ್ತೆ ನಿರ್ಮಾಣ ಮಾಡಬೇಕಿತ್ತು. 37 ಕಿಲೋಮೀಟರ್ ದೂರದ ರಸ್ತೆ5 ಅಂಡರ್ ಪಾಸ್ ಹಾಗೂ 4 ಸೇತುವೆಗಳನ್ನು ಒಳಗೊಂಡಿದೆ.
ಕಾಡಿನ ರಸ್ತೆ ನಿರ್ಮಾ ಕಾರ್ಯವನ್ನು ಕಳದ ವರ್ಷ ಪೂರ್ಣಗೊಳಿಸಲಾಗಿದೆ. ಇದಕ್ಕಾಗಿ 240 ಕೋಟಿ ರೂಪಾಯಿ ವ್ಯಯಿಸಲಾಗಿದೆ. ಇದರಲ್ಲಿ 750 ಮೀಟರ್ ಉದ್ದನೆಯ ಅಂಡರ್ ಪಾಸ್ ಕೂಡ ನಿರ್ಮಾಣ ಮಾಡಲಾಗಿದೆ. ಹುಲಿ ಸಂರಕ್ಷಿತ ತಾಣದಲ್ಲಿ ರಸ್ತೆ ನಿರ್ಮಾಣದ ವೇಳೆ ಸುಮಾರು 4,450 ಪ್ರಾಣಿಗಳ ಚಿತ್ರಗಳನ್ನು ಸೆರೆ ಹಿಡಿಯಲಾಗಿದೆ. ಹುಲಿ ಚಿರತೆ, ಕಾಡು ನಾಯಿ, ಹಂದಿ ಸೇರಿದಂತೆ ಹಲವು ಪ್ರಾಣಿಗಳು ಪ್ರತ್ಯಕ್ಷವಾಗಿತ್ತು.
ಸಿಯೋನಿ ಹಾಗೂ ನಾಗ್ಪುರ ಸಂಪರ್ಕ ಕಲ್ಪಿಸುವ 117 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಗೆ 1,170 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. 2011ರಲ್ಲಿ ಈ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತ್ತು. ವನ್ಯ ಜೀವಿಗಳಿಗೆ ಅಪಾಯ ಎದುರಾಗಲಿದೆ ಎಂದು ಸೂಚಿಸಿತ್ತು. ನಿತಿನ್ ಗಡ್ಕರಿ ವನ್ಯ ಜೀವಿಗಳಿಗೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ರಸ್ತೆ ನಿರ್ಮಾಣದ ಯೋಜನೆಯನ್ನು ಕೋರ್ಟ್ ಮಂದಿಟ್ಟಿದ್ದರು. ಹೀಗಾಗಿ 2015ರಲ್ಲಿ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿತ್ತು. 2019ರಲ್ಲಿ ರಸ್ತೆ ನಿರ್ಮಾಣ ಕಾರ್ಯ ಸಂಪೂರ್ಣಗೊಂಡಿದೆ