ಕಠಿಣ ಶಿಕ್ಷೆ, ಅದೆಷ್ಟೇ ಜಾಗೃತಿ ಮೂಡಿಸಿದರೂ ಮೂಕ ಪ್ರಾಣಿಗಳ ಮೇಲೆ ವಿಕೃತಿ ಮಾತ್ರ ಕಡಿಮೆಯಾಗುತ್ತಿಲ್ಲ. ಇದೀಗ ಕಾರಿಗೆ ನಾಯಿಯನ್ನು ಕಟ್ಟಿ, ತಾನು ವೇಗವಾಗಿ ಕಾರು ಚಲಾಯಿಸಿಕೊಂಡು ನಾಯಿಯನ್ನು ಎಳೆದೊಯ್ದ ಘಟನೆ ನಡೆದಿದೆ. ಸುಮಾರು 2 ಕಿ.ಮೀಗೂ ಅಧಿಕ ದೂರ ಈ ರೀತಿ ವಿಕೃತಿ ಮೆರೆಯಲಾಗಿದೆ. ಈ ಕುರಿತು ಸ್ವಯಂ ಕೇಸ್ ದಾಖಲಿಸಿದ ಪೊಲೀಸರು ಕಾರಿನ ಚಾಲಕನಿಗೆ ತಕ್ಕ ಶಾಸ್ತಿ ಮಾಡಿದ್ದಾರೆ
ಎರ್ನಾಕುಳಂ(ಡಿ.12): ಭಾರತದಲ್ಲಿ ಮೂಕ ಪ್ರಾಣಿಗಳ ಮೇಲೆ ಹಿಂಸೆ, ವಿಕೃತಿ ಮೆರೆದ ಘಟನೆಗಳು ಸಾಕಷ್ಟಿವೆ. ಹಲವು ಘಟನೆಗಳು ಬೆಳಕಿಗೆ ಬಂದಿಲ್ಲ. ಪೊಲೀಸ್ ಠಾಣೆ ಮೆಟ್ಟಿಲೇರಿದ ಎಲ್ಲಾ ಪ್ರಕರಣಗಳಿಗೆ ತಾರ್ಕಿಕ ಅಂತ್ಯವೂ ಸಿಕ್ಕಿಲ್ಲ. ಹೀಗೆ ಹಿಂಸೆ ಅಥವಾ ವಿಕೃತಿ ಮೆರೆಯುವವರಿಗೆ ಕಠಿಣ ಶಿಕ್ಷೆ ಜಾರಿಯಲ್ಲಿದೆ. ಇಷ್ಟೇ ಅಲ್ಲ ಈ ಕುರಿತು ಜಾಗೃತಿ ಕಾರ್ಯಕ್ರಮಗಳು ನಡೆದಿದೆ. ಆದೆರೆ ಪ್ರಕರಣಗಳಿಗೇನು ಕಡಿಮೆ ಇಲ್ಲ. ಇದೀಗ ಮತ್ತೊಂದು ಮನಕಲಕುವ ಘಟನೆ ವರದಿಯಾಗಿದೆ.
ದಂಡ ಬಾಕಿ ಉಳಿಸಿಕೊಂಡ 2,000 ಮಂದಿ ಲೈಸೆನ್ಸ್ ರದ್ದು ಮಾಡಿದ ಪೊಲೀಸ್!
ಕೇರಳದ ಎರ್ನಾಕುಳಂನಲ್ಲಿ ಈ ಘಟನೆ ವರದಿಯಾಗಿದೆ. ಶುಕ್ರವಾರ(ಡಿ.11) ಬೆಳಗ್ಗೆ 11 ಗಂಟೆ ಬೈಕ್‌ನಲ್ಲಿ ತೆರಳುತ್ತಿದ್ದ ಅಖಿಲ್ ನಾಯಿಯೊಂದು ಕಾರಿನ ಹಿಂಬಂದಿಯಲ್ಲಿ ಓಡುತ್ತಿರುವುದನ್ನು ಗಮನಿಸಿದ್ದಾರೆ. ಬೈಕ್ ವೇಗ ಹೆಚ್ಚಿಸಿ ಚಲಿಸುತ್ತಿದ್ದ ಕಾರಿನ ಬಳಿ ತೆರಳಿದಾಗ ಸ್ಪಷ್ಟತೆ ಸಿಕ್ಕಿದೆ. ಹಗ್ಗದ ಮೂಲಕ ನಾಯಿನ್ನು ಕಾರಿಗೆ ಕಟ್ಟಿ ಎಳೆದೊಯ್ಯುವ ದೃಶ್ಯ ಕಣ್ಣಿಗೆ ಬಿದ್ದಿದೆ.
ಚೀನಾ ಕಾರು ಖರೀದಿಸಿದ ಸಿಎಂ BSY ಕಾರ್ಯದರ್ಶಿ ರೇಣುಕಾಚಾರ್ಯ!
ಅಖಿಲ್ ಮೊಬೈಲ್ ಮೂಲಕ ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ಇನ್ನು ವೇಗವಾಗಿ ರೈಡ್ ಮಾಡಿ ಕಾರನ್ನು ತಡೆದು ನಿಲ್ಲಿಸಿ ನಾಯಿಯನ್ನು ರಕ್ಷಿಸಿದ್ದಾನೆ. ಸುಮಾರು 2 ಕಿ.ಮೀ ಗಿಂತಲೂ ಹೆಚ್ಚು ದೂರ ಈ ರೀತಿ ನಾಯಿಯನ್ನು ಎಳೆದೊಯ್ಯಲಾಗಿದೆ. ಕಾರಿನ ವೇಗ, ಸತತ ಓಟದಿಂದ ದಣಿದ ನಾಯಿ ಹಲವು ಬಾರಿ ರಸ್ತೆಯಲ್ಲಿ ಉರುಳಿ ಬಿದ್ದಿದೆ.
ನಾಯಿ ಕಾಲು ಗಾಯಗೊಂಡಿದೆ. ದೇಹದ ಹಲವು ಭಾಗದಲ್ಲಿ ರಕ್ತ ಚಿಮ್ಮಿದೆ. ನಾಯಿಯನ್ನು ರಕ್ಷಿಸಿದ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಕ್ಷಣಾರ್ಧದಲ್ಲೇ ಈ ವಿಡಿಯೋ ನೋಡಿದ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇರಳ ಪೊಲೀಸರು ಸ್ವಯಂ ಪ್ರೇರಿತ ಕೇಸ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಕಾರಿನ ಮುರಿದ ಹೆಡ್‌ಲೈಟ್ ಬದಲು ಟಾರ್ಚ್ ಅಳವಡಿಸಿದ ಮಾಲೀಕ; ಬಿತ್ತು ದುಬಾರಿ ದಂಡ!.
ಪೊಲೀಸರು ದೃಶ್ಯ ಆಧರಿಸಿ ಕಾರಿನ ಚಾಲಕ ಯೂಸುಫ್‌ನನ್ನು ಅರೆಸ್ಟ್ ಮಾಡಿದ್ದಾರೆ. ಸೆಕ್ಷನ್ 428, 429 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಾರನ್ನು ಪೊಲೀಸರು ಸೀಝ್ ಮಾಡಿದ್ದಾರೆ. ಇನ್ನು ಚಾಲಕನ ಲೈಸೆನ್ಸ್ ಕ್ಯಾನ್ಸಲ್ ಮಾಡಿದ್ದಾರೆ. ಆದರೆ ನೆಟ್ಟಿಗರು ಚಾಲಕನಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ.