ಮೋಸ್ಟ್ ಬ್ಯೂಟಿಫುಲ್ ಬೈಕರ್ ಮೋಟೋ ತಾನ್ಯ ಭೀಕರ ರಸ್ತೆ ಅಪಘಾತಕ್ಕೆ ಬಲಿ!

Published : Jul 25, 2024, 02:44 PM IST
ಮೋಸ್ಟ್ ಬ್ಯೂಟಿಫುಲ್ ಬೈಕರ್ ಮೋಟೋ ತಾನ್ಯ ಭೀಕರ ರಸ್ತೆ ಅಪಘಾತಕ್ಕೆ ಬಲಿ!

ಸಾರಾಂಶ

ಮೋಟೋ ತಾನ್ಯ ಎಂದೇ ಜನಪ್ರಿಯವಾಗಿರುವ ಮಹಿಳಾ ಬೈಕರ್ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ರೇಸ್ ಬೈಕ್ ಮೂಲಕವೇ ಭಾರಿ ಸದ್ದು ಮಾಡಿದ್ದ ತಾನ್ಯ ಇದೀಗ ತಮ್ಮ ನೆಚ್ಚಿನ BMW S1000RR ಅಪಘಾತದಲ್ಲಿ ನಿಧನರಾಗಿದ್ದಾರೆ. ರೇಸಿಂಗ್ ಜಗತ್ತು ಕಂಬನಿ ಮಿಡಿದಿದೆ.

ಮಾಸ್ಕೋ(ಜು.25) ಖ್ಯಾತ ಮಹಿಳಾ ಬೈಕರ್  ಮೋಟೋ ತಾನ್ಯ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾಳೆ. ಅಪಘಾತದ ರಭಸಕ್ಕೆ ಈಕೆಯ BMW S1000RR ಬೈಕ್ ಸಂಪೂರ್ಣ ನಜ್ಜು ಗುಜ್ಜಾಗಿದೆ. ಈ ಅಪಘಾತದಲ್ಲಿ ಮೋಟೋ ತಾನ್ಯ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊರ್ವ  ರೈಡರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ರಷ್ಯಾದ ಮೋಸ್ಟ್ ಬ್ಯೂಟಿಫುಲ್ ಬೈಕರ್ ಎಂದೇ ಗುರುತಿಸಿಕೊಂಡಿರುವ ತಾಟ್ಯನ ಒಝೋಲಿನಾ ನಿಧನಕ್ಕೆ ರೇಸಿಂಗ್ ಜಗತ್ತು ಕಂಬನಿ ಮಿಡಿದಿದೆ. ಮುಗ್ಲಾದಿಂ ಬೋಡ್ರಮ್‌ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ.

ವೇಗವಾಗಿ ಸಾಗುತ್ತಿದ್ದ ಮೋಟೋ ತಾನ್ಯ ಏಕಾಏಕಿ ನಿಯಂತ್ರಣ ಕಳೆದುಕೊಂಡಿದ್ದಾಳೆ. ಇದರ ಪರಿಣಾಮ ಅದೇ ವೇಗದಲ್ಲಿ ಬೈಕ್ ನೇರವಾಗಿ ಟ್ರಕ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಬೈಕ್ ಸಂಪೂರ್ಣ ಪುಡಿ ಪುಡಿಯಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ವೈದ್ಯಕೀಯ ತಂಡ ಸ್ಥಳಕ್ಕೆ ಧಾವಿಸಿದೆ. ಆದರೆ ಡಿಕ್ಕಿಯ ರಸಭಕ್ಕೆ ತಾನ್ಯ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ರಸ್ತೆಯಲ್ಲಿ ರೀಲ್ಸ್ ಮಾಡುತ್ತಿದ್ದ ಮಹಿಳೆಯ ಚಿನ್ನದ ಸರ ಎಗರಿಸಿದ ಕಳ್ಳ, ವಿಡಿಯೋ ವೈರಲ್!

ಮೋಟಾ ತಾನ್ಯ ಹಾಗೂ ಇತರ ರೇಸಿಂಗ್ ಪಟುಗಳ ಜೊತೆ ವೇಗವಾಗಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಸ್ಥಳೀಯ ಮಾಧ್ಯಮಗಳ  ವರದಿಗಳ ಪ್ರಕಾರ, ತಾನ್ಯ ತಂಡದ ಇತರ ಸದಸ್ಯರ ಬೈಕ್ ಸ್ಕಿಡ್ ಆಗಿದೆ. ತಾನ್ಯ ಮುಂಭಾಗದಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದ ಕಾರಣ ಏಕಾಏಕಿ ಬ್ರೇಕ್ ಹಾಕಿದ್ದಾರೆ. ಇದರಿಂದ ಅತೀ ವೇಗದಲ್ಲಿದ್ದ ಬೈಕ್ ನಿಯಂತ್ರಣ ಕಳೆದುಕೊಂಡು ಟ್ರಕ್‌ಗೆ ಡಿಕ್ಕಿಯಾಗಿದೆ.

ಗಂಭೀರವಾಗಿ ಗಾಯಗೊಂಡ ಮೋಟೋ ತಾನ್ಯ ಕೆಲ ನಿಮಿಷಗಳ ಕಾಲ ತಂಡದ ಇತರ ಸದಸ್ಯರ ಜೊತೆ ಏನನ್ನೋ ಹೇಳುವ ಪ್ರಯತ್ನ ಮಾಡಿದ್ದಾಳೆ. ಆದರೆ ಸಾಧ್ಯವಾಗಿಲ್ಲ. ಇತ್ತ ವೈದ್ಯಕೀಯ ತಂಡ ಆ್ಯಂಬುಲೆನ್ಸ್ ಸ್ಥಳಕ್ಕೆ ಆಗಮಿಸುವ ಮೊದಲೇ ತಾನ್ಯ ಮೃತಪಟ್ಟಿದ್ದಾಳೆ. ಮೋಟೋ ತಾನ್ಯ ತನ್ನ 13 ವರ್ಷದ ಮಗನನ್ನು ಅಗಲಿದ್ದಾಳೆ.

ಮೋಟೋ ತಾನ್ಯ ಹಲವು ರಾಷ್ಟ್ರಗಳಲ್ಲಿ ಬೈಕ್ ರೈಡ್ ಮಾಡಿ ಜನಪ್ರಿಯಳಾಗಿದ್ದಾಳೆ. ಯೂರೋಪ್ ಟ್ರಿಪ್ ಸೇರಿದಂತೆ ಹಲವು ಟ್ರಿಪ್ ವಿಡಿಯೋಗಳು ಬಾರಿ ವೈರಲ್ ಆಗಿದೆ. ಇತ್ತೀಚೆಗೆ ಟರ್ಕಿ ರೈಡ್ ಹೊರಟಾಗ ಗಡಿಯಲ್ಲಿ ಆಕೆಯನ್ನು ತಡೆಯಲಾಗಿತ್ತು. ಉಕ್ರೇನ್ ಯುದ್ಧದ ಕಾರಣ ನಿರ್ಬಂಧ ಹಾಕಲಾಗಿತ್ತು. ಹೀಗಾಗಿ ಮೋಟೊ ತಾನ್ಯ ಟರ್ಕಿ ಗಡಿಯಿಂದ ವಿಡಿಯೋ ಮೂಲಕ ಅಭಿಮಾನಿಗಳಿಗೆ ಸಂದೇಶ ನೀಡಿದ್ದರು. ಶೀಘ್ರದಲ್ಲೇ ಟರ್ಕಿ ಪ್ರಯಾಣ ಮಾಡುವುದಾಗಿ ಫ್ಯಾನ್ಸ್‌ಗೆ   ಸೂಚಿಸಿದ್ದರು.

ಹಿಂದೆ ಮುಂದೆ ನೋಡದೇ ಕಾರು ಡೋರ್ ಒಪನ್... ಲಾರಿಯಡಿಗೆ ಬಿದ್ದ ಬೈಕ್ ಸವಾರ: ವೀಡಿಯೋ
 

PREV
Read more Articles on
click me!

Recommended Stories

ಭಾರತದ ಅತೀ ದುಬಾರಿ ನಂಬರ್ ಪ್ಲೇಟ್, ₹1.17 ಕೋಟಿಗೆ 8888 ಖರೀದಿಸಿದ ಯುವ ಉದ್ಯಮಿ ಯಾರು?
Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು