
ನಾಗ್ಪುರ(ಜು.18) ಒಂದೆಡೆ ಜಿಟಿ ಜಿಟಿ ಮಳೆ. ಬಹತೇಕರು ಈ ಸಮಯದಲ್ಲಿ ಟ್ರಿಪ್, ಲಾಂಗ್ ಡ್ರೈವ್ ಇಷ್ಟಪಡುತ್ತಾರೆ. ಇನ್ನು ಕೆಲವರು ಬೆಚ್ಚಗಿರಲು ಇಷ್ಟಪಡುತ್ತಾರೆ. ಆದರೆ ಇವೆರಡನ್ನು ಯುವಕ ಒಟ್ಟೊಟ್ಟಿಗೆ ಮಾಡಿ ಇದೀಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ತನ್ನ ಐ10 ಸಣ್ಣ ಕಾರಿನಲ್ಲಿ ಯುವತಿಯನ್ನು ಪಕ್ಕದಲ್ಲಿ ಸೀಟಿನಲ್ಲಿ ಕುಳ್ಳಿರಿಸಿಲ್ಲ, ಡ್ರೈವಿಂಗ್ ಸೀಟಿನಲ್ಲಿದ್ದ ತನ್ನ ತೊಡೆ ಮೇಲೆ ಕುಳ್ಳಿರಿಸಿದ ಗೆಳೆಯ ಡ್ರೈವಿಂಗ್ ಶುರುಮಾಡಿದ್ದಾರೆ. ಸಂಚಾರ ದಟ್ಟಣೆ ರಸ್ತೆಯಲ್ಲಿ ಕಾರು ಸಾಗುತ್ತಿದ್ದರೆ, ಕಾರಿನೊಳಗೂ ಡ್ರೈವಿಂಗ್ ಅವ್ಯಾಹತವಾಗಿ ಸಾಗುತ್ತಿತ್ತು. ಯುವತಿಗೆ ಕಿಸ್ ಮಾಡುತ್ತಾ, ರೊಮ್ಯಾನ್ಸ್ ಮಾಡುತ್ತಾ ಸಾಗಿದ ವಿಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲೇ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ ಘಟನೆ ನಾಗ್ಪುರದಲ್ಲಿ ನಡೆದಿದೆ.
ನಾಗ್ಪುರದ ಲಾ ಕಾಲಜ್ ಸ್ಕ್ವೇರ್‌ನಿಂದ ಶಂಕರ್ ನಗರಕ್ಕೆ ತೆರಳುತ್ತಿದ್ದ ಭಾರಿ ಸಂಚಾರ ದಟ್ಟಣೆ ರಸ್ತೆಯಲ್ಲಿ ಈ ರೊಮ್ಯಾನ್ಸ್ ನಡೆದಿದೆ. ಯುವಕ ಹಾಗೂ ಯುವತಿ ಇಬ್ಬರು 28 ವಯಸ್ಸಿನವರಾಗಿದ್ದಾರೆ. ಐ10 ಕಾರಿನಲ್ಲಿ ಈ ಜೋಡಿ ರೊಮ್ಯಾನ್ಸ್ ಮಾಡಿದ್ದಾರೆ. ಅದು ಕೂಡ ಟ್ರಾಫಿಕ್ ತುಂಬಿದ ರಸ್ತೆಯಲ್ಲಿ ಸಾಗುತ್ತಲೇ ಇವರ ರೊಮ್ಯಾನ್ಸ್ ಜೋರಾಗಿದೆ.
ಹೊಟೆಲ್‌ನಲ್ಲಿ ಎಲ್ಲರ ಮುಂದೆ ಜೋಡಿಯ ಖುಲ್ಲಂ ಖುಲ್ಲಾ ಸೆಕ್ಸ್, ವೈರಲ್ ವಿಡಿಯೋ ಬೆನ್ನಲ್ಲೇ ಅರೆಸ್ಟ್!
ಕಾರಿ ಡ್ರೈವಿಂಗ್ ಸೀಟಿನಲ್ಲಿ ಕುಳಿತ ಯುವಕ, ಗೆಳತಿಯನ್ನು ತನ್ನ ತೊಡೆ ಮೇಲೆ ಕೂರಿಸಿಕೊಂಡಿದ್ದಾನೆ. ಬಳಿಕ ಯುವತಿಯನ್ನು ಚುಂಬಿಸುತ್ತಾ, ರೊಮ್ಯಾನ್ಸ್ ಮಾಡುತ್ತಾ ಸಾಗಿದ್ದಾರೆ. ಈ ಜೋಡಿಯ ರೊಮ್ಯಾನ್ಸ್ ಹವಲರು ನೋಡಿ ಸುಮ್ಮನಾಗಿದ್ದಾರೆ. ಆದರೆ ಇದೇ ದಾರಿಯಲ್ಲಿ ಸಾಗಿದ ಸ್ಕೂಟರ್ ಸವಾರ ಇವರ ರೊಮ್ಯಾನ್ಸ್ ವಿಡಿಯೋವನ್ನು ಮೊಬೈಲ್ ಮೂಲಕ ರೆಕಾರ್ಡ್ ಮಾಡಿದ್ದಾನೆ.
ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ. ಬಳಿಕ ನಾಗ್ಪುರ ಪೊಲೀಸರು ಕ್ರಮಕ್ಕೆ ಆಗ್ರಹಿಸಲಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ನಾಗ್ಪುರದ ಅಂಬಜಾರಿ ಠಾಣಾ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾರನ್ನು ಗೆಳೆಯನ ಮನೆಯಲ್ಲಿ ಪಾರ್ಕ್ ಮಾಡಿ ಇಬ್ಬರು ಪರಾರಿಯಾಗಲು ನಿರ್ಧರಿಸಿದ್ದಾರೆ. ಆದರೆ ಅಷ್ಟರಲ್ಲೇ ಪೊಲೀಸರು ಯುವಕನ ಬಂಧಿಸಿದ್ದಾರೆ. ಬಳಿಕ ಯುವತಿಯನ್ನೂ ವಶಕ್ಕೆ ಪಡೆದಿದ್ದಾರೆ.
ಸಂಚಾರ ದಟ್ಟಣೆ ರಸ್ತೆಯಲ್ಲಿ ನಿರ್ಲಕ್ಷ್ಯದ ಡ್ರೈವಿಂಗ್, ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ಸೇರಿದಂತೆ ಹಲವು ಪ್ರಕರಣ ದಾಖಳಿಸಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಹಿಟ್ ಅಂಡ್ ರನ್ ಕೇಸ್, ನಿರ್ಲಕ್ಷ್ಯದ ಡ್ರೈವಿಂಗ್ ಸೇರಿದಂತೆ ಹಲವು ಪ್ರಕರಣಗಳು ಕೋಲಾಹಲ ಸೃಷ್ಟಿಸಿದೆ. ಈ ಸಾಲಿಗೆ ನಾಗ್ಪುರದ ರೊಮ್ಯಾನ್ಸ್ ಡ್ರೈವಿಂಗ್ ಇದೀಗ ಸೇರಿಕೊಂಡಿದೆ.
ತನ್ನ ಅರ್ಧ ವಯಸ್ಸಿನ ನಟಿ ಜೊತೆಗಿನ ರೊಮ್ಯಾನ್ಸ್ ವಿಡಿಯೋ ರಿಲೀಸ್ ಬೆನ್ನಲ್ಲೇ ರವಿ ತೇಜ ಟ್ರೋಲ್!