ವಾಹನ ಮಾಲೀಕರಿಗೆ ಸೂಚನೆ, ನಿಮ್ಮ ಮೊಬೈಲ್ ನಂಬರ್ ಲಿಂಕ್ ಕಡ್ಡಾಯ, ಆನ್‌ಲೈನ್ ಪ್ರಕ್ರಿಯೆ ಹೇಗೆ?

Published : Aug 15, 2025, 08:11 PM IST
Traffic Rules Mistakes

ಸಾರಾಂಶ

ವಾಹನ ಮಾಲೀಕರು ಹಾಗೂ ಡ್ರೈವಿಂಗ್ ಲೈಸೆನ್ಸ್ ಹೊಂದಿದವರು ತಮ್ಮ ಮೊಬೈಲ್ ನಂಬರ್ ಅಪ್‌ಡೇಟ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಆಧಾರ್ ಅಥೆಂಟಿಕೇಶನ್ ಮೂಲಕ ನಿಮ್ಮ ವಾಹನ ಹಾಗೂ ಡ್ರೈವಿಂಗ್ ಲೈಸೆನ್ಸ್ ಜೊತೆಗೆ ನಂಬರ್ ಲಿಂಕ್ ಮಾಡಿ. ಆನ್‌ಲೈನ್ ಪ್ರಕ್ರಿಯೆ ಹೇಗೆ?

ನವದೆಹಲಿ (ಆ.15) ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಮಹತ್ವದ ಅಪ್‌ಡೇಟ್ ನೀಡಿದೆ. ವಾಹನ ಮಾಲೀಕರು ಹಾಗೂ ಡ್ರೈವಿಂಗ್ ಲೈಸೆನ್ಸ್ ಹೋಲ್ಡರ್ ನಿಮ್ಮ ಮೊಬೈಲ್ ನಂಬರ್ ಅಪ್‌ಡೇಟ್ ಅಥವಾ ಲಿಂಕ್ ಮಾಡಿಕೊಳ್ಳಬೇಕು. ಇದು ಕಡ್ಡಾಯವಾಗಿದೆ. ದೇಶಾದ್ಯಂತ ಈ ಅಪ್‌ಡೇಟ್ ನಡೆಯಲಿದೆ. ಪಾರದರ್ಶಕತೆ, ಸಂವಹನ ಸೇರಿದಂತೆ ಇತರ ಹಲವು ತಾಂತ್ರಿಕ ಕಾರಣಗಳಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಸಚಿವಾಲಯ ಮಾರ್ಗಸೂಚಿ ಹೊರಡಿಸಿದೆ.ಸಾರಿಗೆಯ ಹಲವು ಸೇವೆಗಳಿಗೆ ಮೊಬೈಲ್ ನಂಬರ್ ಲಿಂಕಿಂಗ್ ಹಾಗೂ ಆಧಾರ್ ಅಥೆಂಟಿಕೇಶನ್ ಕಡ್ಡಾಯ ಮಾಡಲಾಗಿದೆ.

ಲೈಸೆನ್ಸ್, ವಾಹನ ಮಾಲೀಕರ ಮೊಬೈಲ್ ನಂಬರ್

ಪರಿವಾಹನ್ ಅಥವಾ ಇತರ ಸರ್ಕಾರಿ ಆ್ಯಪ್ ಮೂಲಕ ನಿಮಗೆ ಮೊಬೈಲ್ ನಂಬರ್ ಲಿಂಕ್ ಅಥವಾ ಅಪ್‌ಡೇಟ್ ಸಂದೇಶ ಬಂದಿರುವ ಸಾಧ್ಯತೆ ಇದೆ. ಒಂದು ವೇಳ ಸಂದೇಶ ಬರದಿದ್ದರೂ ವಾಹನ ಮಾಲೀಕರು, ಡ್ರೈವಿಂಗ್ ಲೈಸೆನ್ಸ್ ಹೊಂದಿದವರ ಮೊಬೈಲ್ ನಂಬರ್ ಅಪ್‌ಡೇಟ್ ಮಾಡಿಕೊಳ್ಳಬೇಕು. ಒಂದು ವೇಳೆ ನಿಮ್ಮ ವಾಹನ ಹಾಗೂ ಡ್ರೈವಿಂಗ್ ಲೈಸೆನ್ಸ್ ಜೊತೆ ಮೊಬೈಲ್ ನಂಬರ್ ಲಿಂಕ್ ಆಗಿದ್ದರೆ, ಹೊಸದಾಗಿ ಅಪ್‌ಡೇಟ್ ಮಾಡುವ ಅವಶ್ಯಕತೆ ಇಲ್ಲ.

MoRTH ಆದೇಶವೇನು?

ರಸ್ತೆ ಸಾರಿಗೆ ಹೆದ್ದಾರಿ ಸಚಿವಾಲಯ (MoRTH) ಹೊಸ ಆದೇಶದ ಪ್ರಕಾರ ಸಾರಿಗೆ ಡೇಟಾಬೇಸ್ ಮತ್ತಷ್ಟು ಬಲಪಡಿಸಲು ಈ ಲಿಂಕಿಂಗ್ ಕಡ್ಡಾಯಗೊಳಿಸಿದೆ. ಪ್ರಮುಖವಾಗಿ ರಿಯಲ್ ಅಪ್‌ಡೇಟ್, ದಂಡದ ವಿವರ, ಇತರ ಸಾರಿಗೆ ಮಾಹಿತಿಗಳನ್ನು ತಕ್ಷಣಕ್ಕೆ ವಾಹನ ಮಾಲೀಕರು ಹಾಗೂ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರಿಗೆ ಕಳುಹಿಸಲು ಈ ಅಪ್‌ಡೇಟ್ ನೆರವಾಗಲಿದೆ. ಇಷ್ಟೇ ಅಲ್ಲ ಅನಗತ್ಯ ಗೊಂದಲ, ತಪ್ಪಾಗಿ ನೋಟಿಸ್, ದಂಡ ಪಾವತಿ ನೋಟಿಸ್ ಬಂದರೂ ಸಂವನ ಮಾಡಲು ನೆರವಾಗಲಿದೆ.

ಆಧಾರ್ ಅಥೆಂಟಿಕೇಶನ್ ಮೂಲಕ ಲಿಂಕ್

ವಾಹನ ಮಾಲೀಕರ, ಲೈಸೆನ್ಸ್ ಹೊಂದಿದವರು ಮೊಬೈಲ್ ನಂಬರ್ ಲಿಂಕ್ ಮಾಡುವಾಗ ಆಧಾರ್ ಅಥೆಂಟಿಕೇಶನ್ ಕಡ್ಡಾಯವಾಗಿದೆ. ಅಂದರೆ ನಿಮ್ಮ ವಾಹನ ರಿಜಿಸ್ಟ್ರೇಶನ್ ನಂಬರ್, ಮೊಬೈಲ್ ನಂಬರ್, ಎಂಜಿನ್-ಚಾರ್ಸಿ ನಂಬರ್ ಹಾಕಿ ಮೊಬೈಲ್ ಲಿಂಕ್ ಮಾಡಬೇಕು. ಈ ವೇಳೆ ವೆರಿಫಿಕೇಶನ್ ಪ್ರಕ್ರಿಯೆಯಲ್ಲಿ ಆಧಾರ್ ಕಾರ್ಡ್ ನಂಬರ್ ನಮೂದಿಸಬೇಕು. ಇಷ್ಟೇ ಅಲ್ಲ ಆಧಾರ್ ಕಾರ್ಡ್ ನಂಬರ್‌ನಲ್ಲಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ. ಈ ಒಟಿಪಿ ಹಾಕಿ ಲಿಂಕ್ ಮಾಡಬೇಕು.

ಆನ್‌ಲೈನ್ ಮೂಲಕ ಸುಲಭವಾಗಿ ಲಿಂಕಿಂಗ್ ಪ್ರಕ್ರಿಯೆ

ವಾಹನ ಮಾಲೀಕರು, ಡ್ರೈವಿಂಗ್ ಲೈಸೆನ್ಸ್ ಹೊಂದಿದವರು ಮೊಬೈಲ್ ನಂಬರ್ ಲಿಂಕ್ ಮಾಡಲು ಹೆಚ್ಚು ಪ್ರಯಾಸ ಪಡಬೇಕಿಲ್ಲ. ಸುಲಭವಾಗಿ ಆನ್‌ಲೈನ್ ಮೂಲಕ ಲಿಂಕ್ ಮಾಡಬಹುದು. ಸರ್ಕಾರದ ಪರಿವಾಹನ್ ವೆಬ್‌ಸೈಟ್ (parivahan.gov.in) ಮೂಲಕ ಲಿಂಕ್ ಮಾಡಬಹುದು. ಇಲ್ಲಿ ಎರಡೂ ಆಯ್ಕೆ ಇರಲಿದೆ. ಒಂದು ವಾಹನದ ಜೊತೆ ಮಾಲೀಕರ ಮೊಬೈಲ್ ನಂಬರ್ ಲಿಂಕಿಂಗ್, ಮತ್ತೊಂದು ಡ್ರೈವಿಂಗ್ ಲೈಸೆನ್ಸ್ ಜೊತೆ ಮೊಬೈಲ್ ಲಿಂಕಿಂಗ್. ಲಿಂಕ್ ಕ್ಲಿಕ್ ಮಾಡಿ ನಿಮ್ಮ ವಾಹನದ ದಾಖಲೆಗಳನ್ನು ನೀಡಿ ಲಿಂಕ್ ಮಾಡಿಕೊಳ್ಳಬೇಕು. ಇತ್ತ ಲೈಸೆನ್ಸ್ ದಾಖಲೆ ನೀಡಿ ಮೊಬೈಲ್ ನಂಬರ್ ಲಿಂಕ್ ಮಾಡಿಕೊಳ್ಳಬೇಕು. ಎರಡೂ ಪ್ರಕ್ರಿಯೆಗೆ ಆಧಾರ್ ಅಥೆಂಟಿಕೇಶನ್ ಮಾಡಬೇಕು. ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ.

 

PREV
Read more Articles on
click me!

Recommended Stories

ಭಾರತದ ಅತೀ ದುಬಾರಿ ನಂಬರ್ ಪ್ಲೇಟ್, ₹1.17 ಕೋಟಿಗೆ 8888 ಖರೀದಿಸಿದ ಯುವ ಉದ್ಯಮಿ ಯಾರು?
Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು