
ನವದೆಹಲಿ (ಜು.22) ಹೆದ್ದಾರಿ ಸೇರಿಂತೆ ಟೋಲ್ ರಸ್ತೆಗಳಲ್ಲಿ ಸಂಚರಿಸುವ ವಾಹನಗಳು ಟೋಲ್ ಪಾವತಿ ಮಾಡಬೇಕು. ಫಾಸ್ಟ್ಯಾಗ್ ಮೂಲಕ ಭಾರತದಲ್ಲಿ ಟೋಲ್ ಪಾವತಿ ವ್ಯವಸ್ಥೆ ಜಾರಿಯಲ್ಲಿದೆ. ಹೆಚ್ಚಿನ ಸಮಯ ವಿಳಂಬವಿಲ್ಲದೆ ಟೋಲ್ ಗೇಟ್‌ಗಳಲ್ಲಿ ಟೋಲ್ ಪಾವತಿ ಮಾತಿ ಪ್ರಯಾಣ ಮುಂದುವರಿಸಬಹುದು. ಹೆಚ್ಚಾಗಿ ಪ್ರಯಾಣ ಮಾಡುವರು ಅಥವಾ ತಿಂಗಳಲ್ಲಿ ಒಂದು ಬಾರಿ ಪ್ರಯಾಣ ಮಾಡುವರಿಗೂ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ತಂದಿರುವ ಹೊಸ ಟೋಲ್ ವಾರ್ಷಿಕ ಪಾಸ್ ಸಾವಿರಾರು ರೂಪಾಯಿ ಉಳಿತಾಯ ಮಾಡಲಿದೆ. ಆಗಸ್ಟ್ 15ರಿಂದ ದೇಶದಲ್ಲಿ ವಾರ್ಷಿಕ ಟೋಲ್ ಪಾಸ್ ನಿಯಮ ಜಾರಿಯಾಗುತ್ತಿದೆ.
ವಾರ್ಷಿಕ ಟೋಲ್ ಪಾಸ್ ಬೆಲೆ ಎಷ್ಟು?
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಾರ್ಷಿಕ ಟೋಲ್ ಪಾಸ್ ದರ 3,000 ರೂಪಾಯಿ. ಒಮ್ಮೆ 3,000 ರೂಪಾಯಿ ಪಾವತಿ ಮಾಡಿ ಟೋಲ್ ಪಾಸ್ ಖರೀದಿ ಮಾಡಿದರೆ ಬಳಿಕ ಪದೇ ಪದೇ ಫಾಸ್ಟ್ಯಾಗ್ ರೀಚಾರ್ಚ್ ಮಾಡುವ ಅವಶ್ಯಕತೆ ಇಲ್ಲ. ಇಷ್ಟೇ ಅಲ್ಲ ಟ್ರಿಪ್ ಕುರಿತು ಚಿಂತೆ ಮಾಡಬೇಕಿಲ್ಲ.
ವಾರ್ಷಿಕ ಟೋಲ್ ಪಾಸ್‌ನಲ್ಲಿ ಎಷ್ಟು ಬಾರಿ ಪ್ರಯಾಣಿಸಬಹುದು?
3,000 ರೂಪಾಯಿ ಪಾವತಿಸಿ ವಾರ್ಷಿಕ ಟೋಲ್ ಪಾಸ್ ಆ್ಯಕ್ಟಿವೇಟ್ ಮಾಡಿಕೊಳ್ಳಬಹುದು. ಇದರ ಅವಧಿ ಒಂದು ವರ್ಷ. ಒಂದು ವರ್ಷದಲ್ಲಿ 200 ಟ್ರಿಪ್‌ಗೆ ಅವಕಾಶವಿದೆ.
ಬೆಂಗಳೂರು-ಚೆನ್ನೈ ಪ್ರಯಾಣಿಕರಿಗೆ 7,680 ರೂಪಾಯಿ ಉಳಿತಾಯ
ವಾರ್ಷಿಕ ಟೋಲ್ ಪಾಸ್ ಮೂಲಕ ಸಂಚರಿಸುವವರಿಗೆ ಸಾವಿರಾರು ರೂಪಾಯಿ ಉಳಿತಾಯಾಗಲಿದೆ. ಇದೇ ವಾರ್ಷಿಕ ಟೋಲ್ ಪಾಸ್ ಖರೀದಿಸುವ ಬೆಂಗಳೂರು-ಚೆನ್ನೈ ಹೆದ್ದಾರಿ, ಎಕ್ಸ್‌ಪ್ರೆಸ್‌ವೇ ಪ್ರಯಾಣಿಕರಿಗೆ ಬರೋಬ್ಬರಿ 7,680 ರೂಪಾಯಿ ಉಳಿತಾಯವಾಗಲಿದೆ. ಬೆಂಗಳೂರು-ಚೆನ್ನೈ ನಡುವೆ ಪ್ರಯಾಣಿಸುವರು ಒಟ್ಟು 6 ಟೋಲ್ ಪ್ಲಾಜಾ ಮೂಲಕ ಹಾದು ಹೋಗಬೇಕು. ಸದ್ಯ ಒನ್ ಸೈಡ್ ಪ್ರಯಾಣ ಮಾಡಲು 445 ರೂಪಾಯಿ ಟೋಲ್ ಪಾವತಿ ಮಾಡಬೇಕು. ತಿಂಗಳಿಗೆ ಒಂದು ಬಾರಿ ಬೆಂಗಳೂರಿನಿಂದ ಚೆನ್ನೈಗೆ ತೆರಳಿ ಮರಳಿಗೆ ಬೆಂಗಳೂರಿಗೆ ಆಗಮಿಸು ಪ್ರಯಾಣಿಕರು ವಾರ್ಷಿಕವಾಗಿ ಒಟ್ಟು 10,680 ರೂಪಾಯಿ ಟೋಲ್ ಪ್ಲಾಜಾಗೆ ಪಾವತಿಸಬೇಕು. ವಾರ್ಷಿಕ ಟೋಲ್ ಪಾಸ್ ಖರೀದಿಸಿದರೆ 3,000 ರೂಪಾಯಿಗೆ ಟೋಲ್ ಪಾವತಿಯಾಗಲಿದೆ. 200 ಟ್ರಿಪ್ ಕೂಡ ಸಿಗಲಿದೆ. ಒಂದು ಬಾರಿ ಪ್ರಯಾಣಿಸುವ ಪ್ರಯಾಣಿಕರಿಗೆ ಹೆಚ್ಚುವರಿ 56 ಟ್ರಿಪ್ ಸಿಗಲಿದೆ. ಬೆಂಗಳೂರು -ಚೆನ್ನೈ ಪ್ರಯಾಣಿಕರು 7,680 ರೂಪಾಯಿ ಉಳಿತಾಯ ಮಾಡಲು ಸಾಧ್ಯವಿದೆ.
ಯಾರಿಗೆಲ್ಲಾ ಟೋಲ್ ಪಾಸ್ ಪಡೆಯಲು ಸಾಧ್ಯ?
ವಾಣಿಜ್ಯ ವಾಹನಗಳಿಗೆ ಪಾಸ್ ನೀಡಲಾಗುವುದಿಲ್ಲ. ಅಂದರೆ ವೈಟ್ ಬೋರ್ಡ್ ವಾಹನಗಳಿಗೆ ವಾರ್ಷಿಕ ಪಾಸ್ ಪಡೆಯಲು ಸಾಧ್ಯವಿದೆ. ವೈಟ್ ಬೋರ್ಡ್ ವಾಹನಗಳಲ್ಲಿ ಕಾರು, ಜೀಪು ಹಾಗೂ ವ್ಯಾನ್ ವಾರ್ಷಿಕ ಟೋಲ್ ಪಾಸ್ ಪಡೆಯಲು ಅರ್ಹರಾಗಿದ್ದಾರೆ.
ವಾರ್ಷಿಕ ಟೋಲ್ ಪಾಸ್ ಆ್ಯಕ್ಟಿವೇಟ್ ಮಾಡುವುದು ಹೇಗೆ?
ವಾರ್ಷಿಕ ಟೋಲ್ ಪಾಸ್ ಆ್ಯಕ್ಟಿವೇಟ್ ಮಾಡಲು ರಾಜಮಾರ್ಗ್ ಯಾತ್ರಾ (Rajmarg yatra) ಮೊಬೈಲ್ ಆ್ಯಪ್ ಮೂಲಕ ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI ) ವೆಬ್‌ಸೈಟ್ ಮೂಲಕ ಮಾತ್ರ ಸಾಧ್ಯ. ವಾರ್ಷಿಕ ಟೋಲ್ ಪಾಸನ್ನು ಸದ್ಯ ವಾಹನ ಸವಾರರು ಬಳಸುತ್ತಿರುವ ಫಾಸ್ಟ್ಯಾಗ್ ಖಾತೆಗೆ ಆ್ಯಕ್ಟಿವೇಟ್ ಮಾಡಲಾಗುತ್ತಿದೆ. ಫಾಸ್ಟ್ಯಾಗ್ ವಾಹನದ ವಿಂಡ್‌ಶೀಲ್ಡ್‌ಗೆ ಅಂಟಿಸರಬೇಕು. ಇಷ್ಟೇ ಅಲ್ಲ ಫಾಸ್ಟ್ಯಾಗ್ ಬ್ಲಾಕ್‌ಲಿಸ್ಟ್‌ಗೆ ಸೇರಿರಬಾರದು. ವಾಣಿಜ್ಯ ವಾಹನಗಳಿಗೆ ಇತರ ವಾಹನಗಳ ಆಧಾರದ ಮೇಲೆ ಅಕ್ರಮವಾಗಿ ಟೋಲ್ ಪಾಸ್ ಪಡೆದರು ವಾಹನ ಫಾಸ್ಟಾಗ್ ಬ್ಲಾಕ್‌ಲಿಸ್ಟ್‌ಗೆ ಸೇರಿಸಲಾಗುತ್ತದೆ. ಇಷ್ಟೇ ಅಲ್ಲ ಈ ವಾಹನಕ್ಕೆ ಟೋಲ್ ರಸ್ತೆಯಲ್ಲಿ ಪ್ರವೇಶವಿರುವುದಿಲ್ಲ.