ತನಗಿಂತ 31 ವರ್ಷ ಕಿರಿಯ ವಯಸ್ಸಿನ ನಟಿಯೊಂದಿಗೆ ನಟ ರವಿ ತೇಜ ರೊಮ್ಯಾನ್ಸ್ ಇದೀಗ ವೈರಲ್ ಆಗಿದೆ. ರೊಮ್ಯಾಂಟಿಕ್ ಸೀನ್‌ಗಳು ಬಹಿರಂಗವಾಗುತ್ತಿದ್ದಂತೆ ನಟ ರವಿ ತೇಜ ಟ್ರೋಲ್ ಆಗಿದ್ದಾರೆ.
ಹೈದರಾಬಾದ್(ಜು.11) ಸಿನಿಮಾ ಇಂಡಸ್ಟ್ರಿಯಲ್ಲಿ ಹೀರೋ ಹಾಗೂ ಹೀರೋಯಿನ್ ಕಮೆಸ್ಟ್ರಿ ಬಗ್ಗೆ ತುಂಬಾ ತಲೆಕೆಡಿಸಿಕೊಳ್ಳುತ್ತಾರೆ. ಇದೀಗ ಇದೇ ನಾಯಕಿ ಹಾಗೂ ನಾಯಕಿ ನಡುವಿನ ವಯಸ್ಸಿನ ಅಂತರ ಭಾರಿ ವಿವಾದಕ್ಕೆ ಕಾರಣವಾಗಿದೆ. ತೆಲುಗು ನಟ ರವಿ ತೇಜಾ ಅಭಿನಯದ ಮಿ.ಬಚ್ಚನ್ ಚಿತ್ರದ ಹಾಡು ಬಿಡುಗಡೆಯಾಗಿದೆ. ಈ ರೊಮ್ಯಾಂಟಿಕ್ ಹಾಡು ಕೋಲಾಹಲಕ್ಕೆ ಕಾರಣವಾಗಿದೆ. ನಟ ರವಿ ತೇಜಾ, ತನಗಿಂತ ಅರ್ಧ ಕಿರಿಯ ವಯಸ್ಸಿನ ನಾಯಕಿ ಜೊತೆಗಿನ ರೊಮ್ಯಾನ್ಸ್ ಇದೀಗ ವಿವಾದಕ್ಕೆ ಗುರಿಯಾಗಿದೆ.
ಹರೀಶ್ ಶಂಕರ್ ನಿರ್ದೇಶನದ ಮಿ.ಬಚ್ಚನ್ ಚಿತ್ರದಲ್ಲಿ ರವಿ ತೇಜಾಗೆ ನಾಯಕಿಯಾಗಿ ಭಾಗ್ಯಶ್ರೀ ಬೋರ್ಸ್ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‌ನ ರೈಡ್ ಚಿತ್ರದ ರಿಮೇಕ್ ಇದಾಗಿದ್ದು, ಭಾರಿ ಕುತೂಹಲ ಹಾಗೂ ನಿರೀಕ್ಷೆ ಹುಟ್ಟಿಸಿದೆ. ಈ ಚಿತ್ರದ ಮೊದಲ ಹಾಡು ರಿಲೀಸ್ ಮಾಡಲಾಗಿದೆ. ಆದರೆ ಮೊದಲ ಹೆಜ್ಜೆಯಲ್ಲೇ ವಿವಾದ ಮೈಮೇಲೇರಿದೆ.
ಶೂಟಿಂಗ್ ಸೆಟ್‌ನಲ್ಲಿ ದೀಪಿಕಾ ಬಿಗಿದಪ್ಪಿ ಮುದ್ದಾಡಿದ್ದ ರಣವೀರ್ ಹಳೆ ರೊಮ್ಯಾನ್ಸ್ ವಿಡಿಯೋ ಬಹಿರಂಗ!
ಈ ಚಿತ್ರದ ರೊಮ್ಯಾಂಟಿಕ್ ಹಾಡಿನ ಕೆಲ ದೃಶ್ಯಗಳಿಗೆ ವಿರೋಧಗಳು ವ್ಯಕ್ತವಾಗಿದೆ. ಪ್ರಮುಖವಾಗಿಪಾಕೆಟ್ ಸ್ಟೆಪ್ಟ್ಸ್ ವಿವಾದಕ್ಕೆ ಗುರಿಯಾಗಿದೆ. ಹೀರೋಯಿನ್ ಸೊಂಟದ ಹಿಂಭಾದಲ್ಲಿನ ಪಾಕೆಟ್ ಒಳಗೆ ಕೈಹಾಕಿ ರವಿ ತೇಜಾ ಹಾಗೂ ನಟಿಯ ಸ್ಟೆಪ್ಸ್‌ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರವಿ ತೇಜ ವಯಸ್ಸು 56, ನಟಿಯ ವಯಸ್ಸು 25. ತನಗಿಂತ ಅರ್ಧ ಕಿರಿಯ ವಯಸ್ಸಿನ ನಟಿಯೊಂದಿಗೆ ಈ ರೀತಿಯ ರೊಮ್ಯಾನ್ಸ್ ಸರಿಯಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಬರೋಬ್ಬರಿ 31 ವರ್ಷದ ಕಿರಿಯ ವಯಸ್ಸಿನ ನಟಿ ಜೊತೆ ಈ ರೀತಿಯ ರೊಮ್ಯಾನ್ಸ್ ಸರಿಯಲ್ಲ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ. ಇಷ್ಟೇ ಅಲ್ಲ ಈ ಹಾಡಿನಲ್ಲಿ ನಟಿಯ ಸೊಂಟ, ಎದೆ, ಹಿಂಭಾಗ ದೃಶ್ಯಗಳನ್ನೇ ಚಿತ್ರೀಕರಿಸಲಾಗಿದೆ. ನಟಿ ಮುಖದ ಸೌಂದರ್ಯವನ್ನೇ ತೋರಿಸಿಲ್ಲ. ನಟಿಯರನ್ನು ಈ ರೀತಿ ಬಳಸಿಕೊಂಡಿರುವ ವಿರುದ್ಧವೂ ಆಕ್ರೋಶ ಹೆಚ್ಚಾಗುತ್ತಿದೆ.
ಈ ರೀತಿಯ ಚೀಪ್ ಟ್ರಿಕ್ಸ್ ಬಳಸುತ್ತಿರುವುದಕ್ಕೆ ಆಕ್ರೋಶಗಳು ಜೋರಾಗುತ್ತಿದೆ. ಉತ್ತಮ ವಿಷಯ ಹಾಗೂ ವಸ್ತು ಇದ್ದರೆ ಹೀರೋಯಿನ್ ಈ ರೀತಿ ಚಿತ್ರಿಸುವುದು, ತನಗಿಂತ ಅರ್ಧವಯಸ್ಸಿನ ನಟಿ ಜೊತೆ ಈ ರೀತಿಯ ರೊಮ್ಯಾನ್ಸ್ ಅವಶ್ಯಕತೆ ಇಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.ಈ ಹಾಡಿನ ವಿಡಿಯೋಗಳನ್ನು ಪೋಸ್ಟ್ ಮಾಡಿ ಕಮೆಂಟ್ ಮಾಡಿದ್ದಾರೆ.
ಮದುವೆ ಆದ್ಮೇಲೆ ಬಿಪಾಶಾ ಬಸು ಜೊತೆ ಡೇಟಿಂಗ್, ನಟಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ನಟ!
