ಕೊರೋನಾ ಸಂಕಷ್ಟದಲ್ಲಿ ನೆರವು; ಟಾಟಾ ವಾಣಿಜ್ಯ ವಾಹನ ಗ್ರಾಹಕರಿಗೆ ಬಂಪರ್ ಕೊಡುಗೆ!

By Suvarna News  |  First Published May 19, 2021, 5:29 PM IST
  • ಕೊರೋನಾ ಸಂಕಷ್ಟದಲ್ಲಿ ಗ್ರಾಹಕರಿಗೆ ಟಾಟಾ ಮೋಟಾರ್ಸ್ ನೆರವು
  • ವಾಣಿಜ್ಯ ವಾಹನ ಗ್ರಾಹಕರಿಗೆ ಉಚಿಕ ಸೇವಾ ಅವಧಿ, ವಾರೆಂಟಿ ವಿಸ್ತರಣೆ

ಬೆಂಗಳೂರು(ಮೇ.19) : ಕೊರೋನಾ ಸಂಕಷ್ಟದ ಸಮಯದಲ್ಲಿ ಟಾಟಾ ಸಮೂಹ ಸಂಸ್ಥೆ ಅಭೂತಪೂರ್ವ ನೆರವು ನೀಡಿದೆ. ಪಿಎಂ ಕೇರ್ಸ್, ಆಕ್ಸಿಜನ್, ಆ್ಯಂಬುಲೆನ್ಸ್, ವೆಂಟಿಲೇಟರ್ ಸೇರಿದಂತೆ ವೈದ್ಯಕೀಯ ಸಲಕರಣೆಗಳನ್ನು ವಿತರಿಸಿದೆ. ಇದೀಗ ಟಾಟಾ ಮೋಟಾರ್ಸ್ ಸಂಕಷ್ಟದ ಸಮಯದಲ್ಲಿ ವಾಣಿಜ್ಯ ವಾಹನ ಗ್ರಾಹಕರಿಗೆ ಬಂಪರ್ ಕೊಡುಗೆ ಘೋಷಿಸಿದೆ.

ಮ್ಯಾಜಿಕ್ ಎಕ್ಸ್‌ಪ್ರೆಸ್ ಆ್ಯಂಬುಲೆನ್ಸ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್!.

Tap to resize

Latest Videos

ಕೋವಿಡ್-19 ವೈರಸ್ ಹರಡುವುದನ್ನು ನಿಯಂತ್ರಿಸಲು ಭಾರತದಾದ್ಯಂತ ಹಲವು ರಾಜ್ಯ ಸರ್ಕಾರಗಳು ಲಾಕ್‌ಡೌನ್ ಘೋಷಿಸಿದೆ.  ಹೀಗಾಗಿ ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಟಾಟಾ ಮೋಟಾರ್ಸ್, 01 ಏಪ್ರಿಲ್ 2021 ರಿಂದ 30 ಜೂನ್ 2021 ರ ಅವಧಿಯಲ್ಲಿ ಮುಕ್ತಾಯಗೊಳ್ಳಬೇಕಾಗಿದ್ದ ತನ್ನ ಎಲ್ಲಾ ವಾಣಿಜ್ಯ ವಾಹನಗಳಿಗೆ ವಾರಂಟಿ ಮತ್ತು ಉಚಿತ ಸೇವಾ ಅವಧಿಯನ್ನು ವಿಸ್ತರಿಸುವುದಾಗಿ ಘೋಷಿಸಿದೆ. ಇದು ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅನ್ವಯವಾಗುವ ಒಂದು ತಿಂಗಳ ವಿಸ್ತರಣೆಯಾಗಲಿದೆ.

ಟಾಟಾ ವಾಣಿಜ್ಯ ವಾಹನ ಖರೀದಿ ಸುಲಭ; ಎಸ್‌ಬಿಐ ಜೊತೆ ಒಪ್ಪಂದ.

ಟಾಟಾ ಮೋಟಾರ್ಸ್ ತನ್ನ ಗ್ರಾಹಕರು, ಚಾನೆಲ್ ಪಾಲುದಾರರು ಮತ್ತು ಒಟ್ಟಾರೆ ಸಮುದಾಯದ ಸುರಕ್ಷತೆ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡುತ್ತದೆ. ಈ ಸವಾಲಿನ ಸಮಯದಲ್ಲಿ ಕಂಪನಿಯು ತನ್ನ ಗ್ರಾಹಕರಿಗೆ ಸುಗಮ ಮತ್ತು ಅನುಕೂಲಕರ ಮಾರಾಟದ ನಂತರದ ಅನುಭವವನ್ನು ಒದಗಿಸಲು ಬದ್ಧವಾಗಿದೆ.

ಇದರ ಜೊತೆಗೆ, ಟಾಟಾ ಮೋಟಾರ್ಸ್ ಸರಕುಗಳು ಮತ್ತು ಅಗತ್ಯ ಉತ್ಪನ್ನಗಳ ಸುಗಮ ಸಾರಿಗೆಯನ್ನು ಖಚಿತಪಡಿಸಿಕೊಳ್ಳಲು ತನ್ನ ಮಾರಾಟದ ನಂತರದ ಮತ್ತು ಮೌಲ್ಯವರ್ಧಿತ ಸೇವೆಗಳ ಈ ಕೆಳಗಿನ ವಿಸ್ತರಣೆಯನ್ನು ಘೋಷಿಸಿದೆ:

  • ಭಾರತದಾದ್ಯಂತ ಅನೇಕ ರಾಜ್ಯಗಳಲ್ಲಿನಿರ್ಬಂಧಗಳಿಂದಾಗಿ ಈ ಹಿಂದೆ ನಿಗದಿಪಡಿಸಲಾದ ಉಚಿತ ಸೇವೆಗಳಿಗೆ ಒಂದು ತಿಂಗಳ ಅವಧಿ ವಿಸ್ತರಣೆ
  • ಎಲ್ಲಾ ವಾಣಿಜ್ಯ ವಾಹನ ಗ್ರಾಹಕರಿಗೆ ವಾರಂಟಿ ಅವಧಿಯು ಒಂದು ತಿಂಗಳ ವಿಸ್ತರಣೆ
  • ಭಾರತದ ರಾಜ್ಯಗಳಾದ್ಯಂತ ಘೋಷಿಸಲಾದ ನಿರ್ಬಂಧಗಳ ಸಮಯದಲ್ಲಿ ಅವಧಿ ಮೀರಿದ ಎಲ್ಲರಿಗೂ ಟಾಟಾ ಸುರಕ್ಷಾ ಎಎಂಸಿ ವಿಸ್ತರಣೆ
  • ಟಾಟಾ ಮೋಟಾರ್ಸ್ ಸುರಕ್ಷಾ ಅಡಿಯಲ್ಲಿ ಎಲ್ಲಾ ಸಕ್ರಿಯ ಒಪ್ಪಂದಗಳ ಒಂದು ತಿಂಗಳ ಸಿಂಧುತ್ವ ಅವಧಿ ವಿಸ್ತರಣೆ
  • ಗ್ರಾಹಕರು ಎಎಂಸಿ ಸೇವೆಗಳನ್ನು ಪಡೆಯಲು ಒಂದು ತಿಂಗಳ ಅವಧಿ ವಿಸ್ತರಣೆ
click me!