ಮುಂಬೈ(ಡಿ.03): ಕೇಂದ್ರ ಸರ್ಕಾರ 2019ರಲ್ಲಿ ಮೋಟಾರು ವಾಹನ ಕಾಯ್ದೆಗೆ(Motor Vehicles Act) ತಿದ್ದುಪಡಿ ತಂದಿದೆ. ಇದರಿಂದ ಟ್ರಾಫಿಕ್ ನಿಯಮ ಉಲ್ಲಂಘನೆಗೆ(Traffic Offences) ದುಬಾರಿ ದಂಡ ವಿಧಿಸಲಾಗಿದೆ. ಈ ಮೂಲಕ ಎಲ್ಲರೂ ನಿಯಮ ಪಾಲನೆ ಮಾಡುವಂತೆ ಮಾಡಲು ಅತೀ ದೊಡ್ಡ ಯೋಜನೆ ಜಾರಿಗೊಳಿಸಿದೆ. ಇದೀಗ ಮಹಾರಾಷ್ಟ್ರ ಸರ್ಕಾರ ಮತ್ತೆ ಟ್ರಾಫಿಕ್ ನಿಯಮ ಉಲ್ಲಂಘನೆ ಶುಲ್ಕ(fine) ಹೆಚ್ಚಿಸಿದೆ. ಡಿಸೆಂಬರ್ ತಿಂಗಳಿನಿಂದ ಹೊಸ ದಂಡ ಜಾರಿಯಾಗಿದೆ.
ಹೊಸ ದಂಡ ಮತ್ತಷ್ಟು ದುಬಾರಿಯಾಗಿದೆ. ಇಷ್ಟೇ ಅಲ್ಲ ದಂಡದಲ್ಲಿ ಯಾವುದೇ ವಿನಾಯಿತಿ ಇಲ್ಲ. ಮಹಾರಾಷ್ಟ್ರ(Maharastra) ಸರ್ಕಾರ ಜಾರಿಗೆ ತಂದಿರುವ ಹೊಸ ಶುಲ್ಕದ ಪ್ರಕಾರ ಆ್ಯಂಬುಲೆನ್ಸ್(ambulance) ಸಂಚಾರಕ್ಕೆ ಅಡ್ಡಿ ಪಡಿಸಿದರೆ, ಆ್ಯಂಬುಲೆನ್ಸ್ ಹೋಗಲು ದಾರಿ ಬಿಡದಿದಿದ್ದರೆ, ಅಥವಾ ಆ್ಯಂಬುಲೆನ್ಸ್ ಹಿಂಭಾಗದಲ್ಲಿ ವೇಗಗವಾಗಿ ತೆರಳಿದರೂ ನಿಯಮ ಉಲ್ಲಂಘನೆ. ಇದಕ್ಕೆ 10,000 ರೂಪಾಯಿ ದಂಡ ಹಾಕಲಾಗಿದೆ.
Traffic violation:ನಿಯಮ ಉಲ್ಲಂಘಿಸಿದ ಓವೈಸಿಗೆ 200 ರೂ ಫೈನ್, ದಂಡ ಹಾಕಿದ ಅಧಿಕಾರಿಗೆ 5,000 ರೂ ಬಹುಮಾನ!
ಡ್ರೈವಿಂಗ್ ಲೈಸೆನ್ಸ್(Driving licence) ಇಲ್ಲದೆ ವಾಹನ ಚಲಾಯಿಸಿದರೆ 5,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಇನ್ನು ಮಾಲೀಕ ತನ್ನ ವಾಹನವನ್ನು ಲೈಸೆನ್ಸ್ ಇಲ್ಲದ ವ್ಯಕ್ತಿಗೆ ನೀಡಿದರೆ ಮಾಲೀಕನಿಗೂ 5,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಇನ್ನು ವಿಮೆ ಇಲ್ಲದೆ ವಾಹನ ಚಲಾಯಿಸಿದರೆ 2,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಈ ಮೂಲಕ ದಂಡವನ್ನು ದುಪ್ಪಟ್ಟುಗೊಳಿಸಲಾಗಿದೆ.
ಸಾರ್ವಜನಿಕ ರಸ್ತೆಯಲ್ಲಿ ರೇಸಿಂಗ್ ಮಾಡಿದರೆ ಮೊದಲ ಬಾರಿ ಟ್ರಾಫಿಕ್ ನಿಯಮ ಉಲ್ಲಂಘನೆಗೆ 5,000 ರೂಪಾಯಿ, ಎರಡನೇ ಬಾರಿ 10,000 ರೂಪಾಯಿ ಹಾಗೂ ಲೈಸೆನ್ಸ್ ಕ್ಯಾನ್ಸಲ್ ಮಾಡಲಾಗುತ್ತದೆ. ಇನ್ನು ನಂಬರ್ ಪ್ಲೇಟ್ ಇಲ್ಲದ ಅಥವಾ ನಂಬರ್ ಪ್ಲೇಟ್ ಸರಿಯಾಗಿ ಕಾಣಿಸದಿದ್ದರೆ, ಬ್ರೇಕ್ ಲೈಟ್ ಇಲ್ಲದಿದ್ದರೆ ಸೇರಿದಂತೆ ಇತರ ಮೋಟಾರು ವಾಹನ ನಿಯಮ ಉಲ್ಲಂಘನೆಗೆ 5,00 ರೂಪಾಯಿ ಇದ್ದ ದಂಡವನ್ನು 1,000 ರೂಪಾಯಿಗೆ ಹೆಚ್ಚಿಸಲಾಗಿದೆ.
Dangerous Wheeling:ಕೈಯಲ್ಲಿ ತಲ್ವಾರ್ ಹಿಡಿದು ಪುಂಡರ ವ್ಹೀಲಿಂಗ್; ಬೆಚ್ಚಿ ಬಿದ್ದ ಚನ್ನರಾಯಪಟ್ಟಣ ಜನಟ್ರಾಫಿಕ್ ನಿಯಮ ಉಲ್ಲಂಘನೆ ಹಾಗೂ ಪರಿಷ್ಕೃತ ದರದ ಪಟ್ಟಿ ಇಲ್ಲಿದೆ:
ಆ್ಯಂಬುಲೆನ್ಸ್‌ಗೆ ಅಡ್ಡಿ ಪಡಿಸಿದರೆ 10,000 ರೂಪಾಯಿ ದಂಡ
ಲೈಸೆನ್ಸ್ ಇಲ್ಲದ ವಾಹನ ಚಲಾಯಿಸಿದರೆ 5,000 ರೂಪಾಯಿ ದಂಡ
ಲೈಸೆನ್ಸ್ ಇಲ್ಲದ ವ್ಯಕ್ತಿಗೆ ವಾಹನ ನೀಡಿದರೆ ಮಾಲೀಕನಿಗೆ 5,000 ರೂಪಾಯಿ ದಂಡ
ವಿಮೆ ಇಲ್ಲದೆ ವಾಹನ ಓಡಿಸಿದರೆ 2,000 ರೂಪಾಯಿ ದಂಡ
ಸಾರ್ವಜನಿಕ ರಸ್ತೆಯಲ್ಲಿ ರೇಸಿಂಗ್(ಮೊದಲ ಬಾರಿ) 5,000 ರೂಪಾಯಿ ದಂಡ
ಸಾರ್ವಜನಿಕ ರಸ್ತೆಯಲ್ಲಿ ರೇಸಿಂಗ್(2ನೇ ಬಾರಿ) 10,000 ರೂಪಾಯಿ ದಂಡ
ವಾಹನ ನಂಬರ್ ಪ್ಲೇಟ್ ಇಲ್ಲ, ಕಾಣಿಸದಿದ್ದರೆ, ಬ್ರೇಕ್ ಲೈಟ್, ಮಿರ್ ಸೇರಿದಂತೆ ಇತರ ನಿಯಮ ಉಲ್ಲಂಘನೆಗೆ 1,000 ರೂಪಾಯಿ
ಇದರ ಜೊತೆಗೆ ಮಹಾರಾಷ್ಟ್ರ ಸರ್ಕಾರ ಸಾರಿಗೆ ಬಸ್‌ನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣದ ದಂಡವನ್ನು ಹೆಚ್ಚಿಸಿದೆ ಮೊದಲ ಬಾರಿ ನಿಯಮ ಉಲ್ಲಂಘಿಸಿದರೆ 5,00 ರೂಪಾಯಿ, ಎರಡನೇ ಬಾರಿಗೆ 1,500 ರೂಪಾಯಿ ಹಾಗೂ ಮತ್ತೆ ಉಲ್ಲಂಘಿಸಿದರೆ ದುಪ್ಪಟ್ಟು ದಂಡ ವಿಧಿಸಲಾಗುತ್ತದೆ.
ಮಹಾರಾಷ್ಟ್ರ ಸರ್ಕಾರ ಮೋಟಾರು ವಾಹನ ಹಾಗೂ ಟ್ರಾಫಿಕ್ ನಿಯಮ ಉಲ್ಲಂಘನೆ ದಂಡ ವಿಧಿಸಲು ಹಾಗೂ ದಂಡ ಸಂಗ್ರಹಿಸಲು ಮೋಟಾರು ವಾಹನ ವಿಭಾಗ ರ್ಯಾಂಕ್ ಪೊಲೀಸ್ ಅಧಿಕಾರಿಗೆ ಮಾತ್ರ ಅವಕಾಶ ಎಂದಿದೆ. ಟ್ರಾಫಿಕ್ ಪೊಲೀಸರಲ್ಲಿ ಎಲ್ಲರೂ ದಂಡ ಹಾಕುವಂತಿಲ್ಲ. ಅಸೆಸ್ಟೆಂಟ್ ಇನ್ಸ್‌ಪೆಕ್ಟರ್, ಅಸೆಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ರ್ಯಾಂಕ್ ಆಫೀಸರಿಗೆ ಮಾತ್ರ ದಂಡ ಹಾಕುವ ಹಾಗೂ ಸಂಗ್ರಹಿಸುವ ಅವಕಾಶವಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹೀಗಾಗಿ ಕಾನ್ಸ್‌ಸ್ಟೇಬಲ್ ಸೇರಿದಂತೆ ಇತರ ರ್ಯಾಂಕ್ ರಹಿತ ಪೊಲೀಸರಿಗ ದಂಡ ವಸೂಲಿ ಮಾಡುವ ಅಧಿಕಾರವಿಲ್ಲ.