Bounce Infinity E1‌ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ : ಐದು ಅತ್ಯಾಕರ್ಷಕ ಬಣ್ಣಗಳಲ್ಲಿ ಲಭ್ಯ!

By Suvarna News  |  First Published Dec 2, 2021, 3:17 PM IST

*ಬೌನ್ಸ್ ಇನ್ಫಿನಿಟಿ  E1 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
*ಐದು ಅತ್ಯಾಕರ್ಷಕ ಬಣ್ಣ ಆಯ್ಕೆಗಳಲ್ಲಿ ಬೌನ್ಸ್ ಇನ್ಫಿನಿಟಿ ಲಭ್ಯ
*ರಾಜ್ಯ ಸರ್ಕಾರಗಳಿಂದ ಸಬ್ಸಿಡಿಗಳನ್ನು ಪಡೆಯುವ ಸಾಧ್ಯತೆ!


ಬೆಂಗಳೂರು(ಡಿ. 02): ಬೆಂಗಳೂರು ಮೂಲದ ಬೌನ್ಸ್ ಇನ್ಫಿನಿಟಿ (Bounce Infinity) E1 ಎಲೆಕ್ಟ್ರಿಕ್ ಸ್ಕೂಟರ್ (E1 Electric Scooter) ಅನ್ನು ಬಿಡುಗಡೆ ಮಾಡುವ ಮೂಲಕ ಎಲೆಕ್ಟ್ರಿಕ್ ಮೊಬಿಲಿಟಿ ಮಾರುಕಟ್ಟೆಗೆ ಕಾಲಿಟ್ಟಿದೆ. ಬೌನ್ಸ್ ಇನ್ಫಿನಿಟಿ E1 ಸ್ಟ್ಯಾಂಡರ್ಡ್ ಲಿಥಿಯಂ ಐಯಾನ್ ಬದಲಾಯಿಸಬಹುದಾದ ಬ್ಯಾಟರಿಯೊಂದಿಗೆ ₹ 68,999 ಬೆಲೆಯಲ್ಲಿ ಸಿಗಲಿದೆ. ಕಂಪನಿಯು ಸ್ಕೂಟರ್ ಅನ್ನು ಬ್ಯಾಟರಿ  ಸೇವೆಯ ಆಯ್ಕೆಯೊಂದಿಗೆ (battery-as-a-service ) ಮಾರಾಟ ಮಾಡುತ್ತಿದೆ ಮತ್ತು ಇದರ ಬೆಲೆ ₹ 45,099 (ಎಲ್ಲಾ ಬೆಲೆಗಳು, ಎಕ್ಸ್ ಶೋ ರೂಂ ದೆಹಲಿ). ಈ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಾಡಿಗೆ ಆಧಾರದ ಮೇಲೆ ಲಭ್ಯವಿರುವ ಬ್ಯಾಟರಿಯೊಂದಿಗೆ ಖರೀದಿಸಬಹುದು. 

₹ 45,099 ಕೊಡುಗೆಯು ಸ್ವಾಪ್ ಮಾಡಬಹುದಾದ ಬ್ಯಾಟರಿಗಳೊಂದಿಗೆ ಬರುತ್ತದೆ, ಅದು ಕಂಪನಿಯು ವಿವಿಧ ಸ್ಥಳಗಳಲ್ಲಿ ಸ್ಥಾಪಿಸಿರುವ ಮೀಸಲಾದ ಸ್ವಾಪಿಂಗ್ ಸ್ಟೇಷನ್‌ಗಳ ಮೂಲಕ ಲಭ್ಯವಿರುತ್ತದೆ. ಬೌನ್ಸ್ ಇನ್ಫಿನಿಟಿಯ ಮುಂಗಡ ಬುಕಿಂಗ್ (Advanced Booking) ಇಂದಿನಿಂದ (ಡಿ. 02) ₹ 499 (ಮರುಪಾವತಿಸಬಹುದಾದ) ಪ್ರಾರಂಭವಾಗಿದೆ, ಆದರೆ ವಿತರಣೆಗಳು ಮಾರ್ಚ್ 2022 ರಿಂದ ಆರಂಭವಾಗಲಿದೆ ಎಂದು ಕಂಪನಿ ತಿಳಿಸಿದೆ.

Tap to resize

Latest Videos

undefined

ರಾಜ್ಯ ಸರ್ಕಾರಗಳಿಂದ ಸಬ್ಸಿಡಿಗಳನ್ನು ಪಡೆಯುವ ಸಾಧ್ಯತೆ!

ಬೌನ್ಸ್ ಇನ್ಫಿನಿಟಿ E1 FAME II (Faster Adoption and Manufacturing of Hybrid and Electric Vehicles) ಅರ್ಹವಾಗಿದೆ ಹಾಗಾಗಿ ರಾಜ್ಯ ಸರ್ಕಾರಗಳಿಂದ ಸಬ್ಸಿಡಿಗಳನ್ನು (Subsisdy) ಪಡೆಯಬಹುದು. ಇದು ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆಯನ್ನು ಕಡಿಮೆ ಮಾಡುತ್ತದೆ. ಆದಾಗ್ಯೂ, ಬ್ಯಾಟರಿಯು ಸೇವೆಯ ಆಯ್ಕೆಯಾಗಿ ಗ್ರಾಹಕರಿಗೆ ಮಾಲೀಕತ್ವದ ವೆಚ್ಚವನ್ನು ಇನ್ನೂ ಕಡಿಮೆ ಮಾಡುತ್ತದೆ ಎಂದು ಕಂಪನಿ ಹೇಳುತ್ತದೆ. ಸಾಂಪ್ರದಾಯಿಕ ಸ್ಕೂಟರ್‌ಗಳಿಗೆ ಹೋಲಿಸಿದರೆ ಇದು ಸ್ಕೂಟರ್‌ನ ಚಾಲನೆಯ ವೆಚ್ಚವನ್ನು ಗಣನೀಯವಾಗಿ 40 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ ಎಂದು ಬೌನ್ಸ್ ತಿಳಿಸಿದೆ. ಬೌನ್ಸ್ ಇನ್ಫಿನಿಟಿ E1 ಅನ್ನು ಬ್ಯಾಟರಿಯೊಂದಿಗೆ ಸಹ ನೀಡಲಾಗುವುದು, ಇದನ್ನು ಸ್ಕೂಟರ್‌ನಿಂದ ತೆಗೆಯಬಹುದು ಮತ್ತು ಗ್ರಾಹಕರು ತಮ್ಮ ಮನೆ ಅಥವಾ ಕಚೇರಿಯಲ್ಲಿ ಅಥವಾ ಅನುಕೂಲಕರ ಸ್ಥಳದಲ್ಲಿ ಚಾರ್ಜ್ (Batery Charge) ಮಾಡಬಹುದು.

ಐದು ಅತ್ಯಾಕರ್ಷಕ ಬಣ್ಣ ಆಯ್ಕೆಗಳಲ್ಲಿ ಬೌನ್ಸ್ ಇನ್ಫಿನಿಟಿ E1 

ಬೌನ್ಸ್ ಇನ್ಫಿನಿಟಿ E1 ಐದು ಅತ್ಯಾಕರ್ಷಕ ಬಣ್ಣ ಆಯ್ಕೆಗಳಲ್ಲಿ ಬರುತ್ತದೆ: ಸ್ಪೋರ್ಟಿ ರೆಡ್ (Sporty Red), ಸ್ಪಾರ್ಕಲ್ ಬ್ಲಾಕ್ (Sparkle Black), ಪರ್ಲ್ ವೈಟ್ )Pearl White), ಡೆಸಾಟ್ ಸಿಲ್ವರ್ (Desat Silver) ಮತ್ತು ಕಾಮೆಡ್ ಗ್ರೇ(Comed Grey). ಭಾರತದಾದ್ಯಂತ ತಡೆರಹಿತ ವಿತರಣೆಗಳಿಗಾಗಿ ಅದರ ಡೀಲರ್‌ಶಿಪ್ ನೆಟ್‌ವರ್ಕ್ ಮತ್ತು ಅದರ ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ಮಾರ್ಚ್ 2022 ಕ್ಕೆ ಡೆಲಿವರಿಗಳನ್ನು ಆರಂಭಿಸಲಾಗುವುದು ಜತಗೆ ಪೂರ್ವ-ಬುಕ್ಕಿಂಗ್‌ಗಳು ಇಂದಿನಿಂದ ಪ್ರಾರಂಭವಾಗುತ್ತವೆ ಎಂದು ಬೌನ್ಸ್‌ ತಿಳಿಸಿದೆ. ಇದು 50,000 ಕಿಮೀಗಳವರೆಗಿನ 3 ವರ್ಷಗಳ comprehensive warranty ಜತೆ ಸಿಗಲಿದೆ.

Winter care tips: ಚಳಿಗಾಲದಲ್ಲಿ ಕಾರ್, ಬೈಕ್ ಬಗ್ಗೆ ಕೇರ್ ತೆಗೆದುಕೊಳ್ಳುವುದು ಹೇಗೆ?

ಬೌನ್ಸ್ ಇನ್ಫಿನಿಟಿ E1 ಮಾರುಕಟ್ಟೆಯಲ್ಲಿ ಇತರ ಬೈಕ್‌ಗಳ ಜತೆ ಸ್ಪರ್ಧಿಸಲಿದೆ ಮತ್ತು ವ್ಯಾಪಕವಾದ ಗ್ರಾಹಕರನ್ನು ಆಕರ್ಷಿಸುತ್ತದೆ ಸಾಧ್ಯತೆ ಇದೆ. ಇದು ಸೊಗಸಾದ ಮಿಶ್ರಲೋಹದ ಚಕ್ರಗಳು, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕನ್ಸೋಲ್ ಮತ್ತು ಶೇಖರಣೆಗಾಗಿ 12-ಲೀಟರ್ ಬೂಟ್ ಅನ್ನು ಹೊಂದಿದೆ. ಸ್ಕೂಟರ್ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಎಲ್‌ಇಡಿ ಲೈಟಿಂಗ್‌ ಹೊಂದಿದ್ದು ಕೊಳವೆಯಾಕಾರದ ಚೌಕಟ್ಟು ಮಾದರಿ ರೀತಿಯಲ್ಲಿದೆ.  ಬೈಕ್ ಹೈಡ್ರಾಲಿಕ್ ಟೆಲಿಸ್ಕೋಪಿಕ್ ( hydraulic telescopic)  ಫ್ರಂಟ್ ಸಸ್ಪೆನ್ಷನ್ ಮತ್ತು ಹಿಂಭಾಗದಲ್ಲಿ ಎರಡು ಶಾಕ್ ಅಬ್ಸಾರ್ಬರ್ಗಳನ್ನು (twin shock absorbers) ಹೊಂದಿದೆ.

Royal Enfield bikes 2022:ಮುಂದಿನ ವರ್ಷ ರಾಯಲ್ ಎನ್‌ಫೀಲ್ಡ್ ಹೊಸ ಮಾಡೆಲ್‌ಗಳು ರೆಡಿ, ಯಾವೆಲ್ಲ ಇವೆ ಗೊತ್ತಾ?

ಬೌನ್ಸ್‌ನ ಸಿಇಒ ಮತ್ತು ಸಹ-ಸಂಸ್ಥಾಪಕ ವಿವೇಕಾನಂದ ಹಲ್ಲೇಕೆರೆ (Vivekananda Hallekere) ಮಾತನಾಡಿ, "ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಾಮರ್ಥ್ಯವನ್ನು ನಾನು ಬಲವಾಗಿ ನಂಬುತ್ತೇನೆ - ಈ ದೃಷ್ಟಿಯಿಂದಲೇ ನಾವು ಜೂನ್ 2019 ರಲ್ಲಿ ನಮ್ಮ ಆಂತರಿಕ ಇವಿ ಮೊಬಿಲಿಟಿ ಪ್ರಾರಂಭಿಸಿದ್ದೇವೆ. ಇಂದು ನಾವೇ ಇಲೆಕ್ರ್ಟಿಕ್‌ ವಾಹನಗಳನ್ನು ನಿರ್ಮಿಸುತ್ತಿದ್ದೇವೆ. ನಮ್ಮ ಯಶಸ್ಸು ಮತ್ತು EV ಗಳನ್ನು ವೇಗವಾಗಿ ಅಳವಡಿಸಿಕೊಳ್ಳಲು ಅನುಕೂಲವಾಗುವಂತೆ, Infinity E1 ಅನ್ನು ಅಭಿವೃದ್ಧಿಪಡಿಸಲು ಬೌನ್ಸ್ ಒಂದು ಹೆಜ್ಜೆ ಮುಂದಿಟ್ಟಿದೆ. ಭಾರತವನ್ನು ಜಾಗತಿಕವಾಗಿ ಪ್ರಮುಖ EV ಅಳವಡಿಕೆದಾರರನ್ನಾಗಿ ಮಾಡಲು ನಾವು ಎಲ್ಲಾ ಸವಾಲುಗಳನ್ನು ತೆಗೆದುಕೊಳ್ಳಲು ಬದ್ಧರಾಗಿದ್ದೇವೆ." ಎಂದು ಹೇಳಿದ್ದಾರೆ

click me!