ರಾಜ್ಯದ ಜನತೆಗೆ ಪೊಲೀಸ್ ಇಲಾಖೆಯಿಂದ ಗುಡ್ ನ್ಯೂಸ್ ಸಿಕ್ಕಿದ್ದು, ವಾಹನ ತಡೆಯೋ ವಿಚಾರಕ್ಕೆ DG-IGP ಮತ್ತೊಂದು ಆದೇಶ ಹೊರಡಿಸಿದ್ದಾರೆ.
ಬೆಂಗಳೂರು, (ಜುಲೈ.16): ದಾಖಲೆಗಳ ಪರಿಶೀಲನೆಗಾಗಿ ಸುಖಾಸುಮ್ಮನೆ ವಾಹನ ತಡೆಯದಂತೆ ಕರ್ನಾಟಕ DG-IGP ಪ್ರವೀಣ್ ಸೂದ್ ಮತ್ತೊಮ್ಮೆ ಆದೇಶ ಹೊರಡಿಸಿದ್ದಾರೆ.
ವಾಹನ ತಡೆಯೋ ವಿಚಾರಕ್ಕೆ ಸಂಬಂಧಿಸಿದಂತೆ ಎರಡನೇ ಬಾರಿಗೆ ಆದೇಶ ಹೊರಡಿಸಿರುವ ಪ್ರವೀಣ್ ಸೂದ್ ಅವರು ಸುಖಾಸುಮ್ಮನೆ ವಾಹನಗಳನ್ನ ನಿಲ್ಲಿಸದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಎಸ್‌ಪಿಗಳಿಗೆ ಖಡಕ್ ಸೂಚನೆ ನೀಡಿದ್ಧಾರೆ. ಪದೇ ಪದೇ ಜನರಿಂದ ದೂರುಗಳು ಬರುತ್ತಿವೆ. ಕೇವಲ ಡಾಕ್ಯುಮೆಂಟ್ ಪರಿಶೀಲನೆಗೆ ಗಾಡಿ ನಿಲ್ಲಿಸಬೇಡಿ ಎಂದಿದ್ದಾರೆ.
Bengaluru News: ವಾಹನ ಸವಾರರನ್ನು ಅನಾವಶ್ಯಕ ತಡೆದು ನಿಲ್ಲಿಸದಂತೆ ಡಿಜಿ & ಐಜಿಪಿ ಸೂಚನೆ
ಡಾಕ್ಯುಮೆಂಟ್ ಪರಿಶೀಲನೆಗೆ ವಾಹನ ಸವಾರರನ್ನ ನಿಲ್ಲಿಸಬೇಡಿ, ಡ್ರಿಂಕ್ & ಡ್ರೈವ್ ಮಾಡೋರನ್ನ ಮಾತ್ರ ಪರಿಶೀಲನೆ ಮಾಡಿ, ಕಣ್ಣಿಗೆ ಕಾಣುವಂತ ಅಪರಾಧ ಕಂಡು ಬಂದರೆ ಮಾತ್ರ ವಾಹನ ನಿಲ್ಲಿಸಿ, ಪಟ್ಟಣ ಮತ್ತು ಹೆದ್ದಾರಿಗಳಲ್ಲಿ ಎಲ್ಲಾ ಕಡೆ ಈ ಸೂಚನೆ ಅನುಸರಿಸಬೇಕು. ಸೂಚನೆಯನ್ನು ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು. ಬೆಂಗಳೂರು ಸೇರಿ ಎಲ್ಲಾ ಜಿಲ್ಲೆಗಳಿಗೂ ಈ ಆದೇಶ ಅನ್ವಯವಾಗಲಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಕಾನೂನು ಪಾಲಿಸುವವರ ಕಷ್ಟ ತಪ್ಪಿಸಲು ಸಮಯ ಇದು. ಕಣ್ಣಿಗೆ ಕಾಣಿಸೋ ಹಾಗೆ ಅಪರಾದ ಮಾಡಿದ್ರೆ ತಡೆದು ಪರಿಶೀಲಿಸಿ.
ದುರಾದೃಷ್ಟಕ್ಕೆ ಈ ಆದೇಶ ನಿರ್ಭಯದಿಂದ ಧಿಕ್ಕರಿಸಲಾಗ್ತಿದೆ. ಪಟ್ಟಣ ಮತ್ತು ಹೆದ್ದಾರಿಗಳಲ್ಲಿ ಎಲ್ಲಾ ಕಡೆ ಸೂಚನೆ ಅನುಸರಿಸಬೇಕು.
ಈ ಸೂಚನೆ ಕೆಳ ಹಂತದ ವರೆಗೆ ತಲುಪಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಈ ಹಿಂದೆಯೂ ಸಹ ಪ್ರವೀಣ್ ಸೂದ್ ಅವರು ರಾಜ್ಯದಲ್ಲಿ ವಾಹನ ತಡೆಯೋ ವಿಚಾರಕ್ಕೆ ಬೆಂಗಳೂರು ಪೊಲೀಸರಿಗೆ ಆದೇಶಿಸಿದ್ದರು. ಇದೀಗ ರಾಜ್ಯದ ಎಲ್ಲಾ ಎಸ್‌ಪಿಗಳಿಗೆ ಸೂಚನೆ ಕೊಟ್ಟಿದ್ದಾರೆ.