ಎಲೆಕ್ಟ್ರಿಕ್ ವಾಹನ ಉತ್ಪಾದನೆಯಲ್ಲಿ ಶೀಘ್ರ ಭಾರತ ನಂ.1: ಕೇಂದ್ರ ಸಚಿವ ಗಡ್ಕರಿ

By Suvarna News  |  First Published Apr 23, 2021, 2:32 PM IST

ಭಾರತವು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಮೈಲುಗಲ್ಲು ಸ್ಥಾಪಿಸುತ್ತಾ ಹೊರಟಿದೆ. ಈ ಹಿಂದಿನ ಐದಾರು ವರ್ಷಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳ ಬಳಕೆಯ ಪ್ರಮಾಣವೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಭಾರತವು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಭಾರತ ನಂ.1 ಸ್ಥಾನಕ್ಕೇರಲಿದೆ ಎಂದು ಕೇಂದ್ರ ಸಚಿವ ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.


ಭಾರತೀಯ ಆಟೋಮೊಬೈಲ್ ಉದ್ಯಮ ನಿಧಾನವಾಗಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ತೊಡಗಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲೇ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಇತ್ತೀಚೆಗೆ ಅಮೆಜಾನ್‌ನ ಸಂಭವ್ ಸಮ್ಮಿತ್‌ನಲ್ಲಿ ಮಾತನಾಡುತ್ತಾ, ಶೀಘ್ರವೇ ಭಾರತವು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ನಂಬರ್ 1 ರಾಷ್ಟ್ರವಾಗಲಿದೆ ಎಂದು ಹೇಳಿದ್ದಾರೆ.

ಮುಂದಿನ ಆರು ತಿಂಗಳಲ್ಲಿ ಲಿಥಿಯಂ-ಐಯಾನ್  ಬ್ಯಾಟರಿಗಳನ್ನು ಸಂಪೂರ್ಣವಾಗಿ ಭಾರತದಲ್ಲೇ ತಯಾರಿಸುವ ವ್ಯವಸ್ಥೆ ರೂಪುಗೊಳ್ಳಲಿದೆ ಎಂಬ ವಿಶ್ವಾಸವನ್ನು ಅವರು ಇದೇ ವೇಳೆ ವ್ಯಕ್ತಪಡಿಸಿದ್ದಾರೆ. ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಭಾರತವು ತುಂಬ ಮುಂದೆ ಸಾಗಿ ಬಂದಿದೆ. ಮುಂದಿನ ಕೆಲವು ದಿನಗಳಲ್ಲಿ ನಾವು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ನಂಬರ್ 1 ಸ್ಥಾನಕ್ಕೇರಲಿದ್ದೇವೆ. ಜಗತ್ತಿನ ಬಹುತೇಕ ಪ್ರತಿಷ್ಠಿತ ಬ್ರ್ಯಾಂಡ್‌ಗಳು ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ಅವರು ಹೇಳಿದ್ದಾರೆ.

Tap to resize

Latest Videos

undefined

ಒಂದೇ ಟ್ರಾಕ್ಟರ್‌ನಿಂದಲೇ 3 ಟ್ರಾಕ್ಟರ್‌ಗಳ ಲಾಭ; ಸೊಲಿಸ್ ಹೈಬ್ರಿಡ್ 5015 ಟ್ರಾಕ್ಟರ್ ಬಿಡುಗಡೆ

ಹಸಿರು ಶಕ್ತಿ ಉತ್ಪಾದನೆಗೆ ಸಂಬಂಧಿಸಿದಂತೆ ಭಾರತವು ಅಪರಿಮಿತ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಮುಂದಿನ ಆರು ತಿಂಗಳಲ್ಲಿ ಭಾರತದಲ್ಲೇ ಶೇ.100ರಷ್ಟು ಲಿಥಿಯಮ್-ಐಯಾನ್ ಬ್ಯಾಟರಿಗಳನ್ನು ಉತ್ಪಾದಿಸುವ ಸಾಮರ್ಥ್ಯ ಸಿಗಲಿದೆ ಎಂಬ ವಿಶ್ವಾಸ ನನಗಿದೆ. ಭವಿಷ್ಯದಲ್ಲಿ ಲಿಥಿಯಂ-ಐಯಾನ್ ಬ್ಯಾಟರಿಗಳ ಕೊರತೆ ಎದುರಾಗದು ಎಂದು ನಿತಿನ್ ಗಡ್ಕರಿ ಶೃಂಗದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಹೈಡ್ರೋಜನ್ ಫ್ಯೂಯೆಲ್ ಸೆಲ್ ಟೆಕ್ನಾಲಜಿ ಸಂಬಂಧವೂ ಸರ್ಕಾರವೂ ಕೆಲಸ ಮಾಡುತ್ತಿದ್ದು ಶಿಘ್ರವೇ ಇದನ್ನು ಉದ್ಘಾಟಿಸಲಿದೆ ಎಂಬ ಮಾಹಿತಿಯನ್ನು ಹೊರ ಹಾಕಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ವಿದ್ಯುತ್ ಉತ್ಪಾದನೆಗೆ ಸಂಬಂಧ ಈ ತಂತ್ರಜ್ಞಾನವು ಆಕ್ಸಿಜನ್ ಮತ್ತು ಹೈಡ್ರೋಜನ್ ನಡುವೆ ರಾಸಾಯನಿಕ ಪ್ರಕ್ರಿಯೆಗೆ ಕಾರಣವಾಗುತ್ತದೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಹೇಳುವ ಪ್ರಕಾರ, ಭಾರತವು 8 ಲಕ್ಷ ಕೋಟಿ ರೂ. ಮೌಲ್ಯದ ಕಚ್ಚಾ ಇಂಧನವನ್ನು ಆಮದು ಮಾಡಿಕೊಳ್ಳುತ್ತಿದೆ. ಮುಂದಿನ ನಾಲ್ಕೈದು ವರ್ಷಗಳಲ್ಲಿ ಈ ಮೊತ್ತವು ದುಪ್ಪಟ್ಟು ಆಗವುದು. ಅಂದರೆ, 16 ಲಕ್ಷ ಕೋಟಿ ರೂಪಾಯಿವರೆಗೂ ತಲುಪಬಹುದು. ಇಷ್ಟು ದೊಡ್ಡ ಮೊತ್ತದ ಹಣವನ್ನು ದೇಶವು ಇಂಧನ ಆಮದು ಮೇಲೆ ವೆಚ್ಚ ಮಾಡಿದರೆ ಅದು ಭಾರತದ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಹಾಗಾಗಿಯೇ ಪರ್ಯಾಯ ಇಂಧನ ಮೂಲಗಳನ್ನು ಬಳಸಿಕೊಳ್ಳುವುದು ಹೆಚ್ಚು ಸೂಕ್ತವಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಬಳಕೆಯು ಜಾಣ ನಡೆಯಾಗಲಿದೆ.

ಏಪ್ರಿಲ್ ತಿಂಗಳ ಸಖತ್ ಆಫರ್: ಕ್ವಿಡ್, ಟ್ರೈಬರ್, ಡಸ್ಟರ್ ಕಾರ್ ಖರೀದಿ ಮೇಲೆ 1 ಲಕ್ಷ ರೂ.ವರೆಗೆ ಲಾಭ

ಫ್ಲೆಕ್ಸಿ ಫ್ಯೂಯೆಲ್ಸ್‌ಗೆ ಸಪೋರ್ಟ್ ಮಾಡುವ ಎಂಜಿನ್‌ಗಳನ್ನು ಉತ್ಪಾದಿಸಲು ಭಾರತ ಸರ್ಕಾರವು ಆಟೋಮೊಬೈಲ್ ಉತ್ಪಾದಕರಿಗೆ ಉತ್ತೇಜಿಸುತ್ತಿದೆ ಎನ್ನುತ್ತಾರೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು. ಈ ಸಂಬಂಧ ಭಾರತದಲ್ಲಿರುವ ಆಟೋಮೊಬೈಲ್ ಉತ್ಪಾದಕರ ಸಂಬಂಧ ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗಷ್ಟೇ  ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಸಿಟ್ರೋಯೆನ್, ಸಿಸಿ21 ಕೋಡ್ ನೇಮ್‌ನೊಂದಿಗೆ ಮತ್ತೊಂದು ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಪ್ರಯತ್ನಿಸುತ್ತಿದೆ. ಈ ಹೊಸ ಎಸ್‌ಯುವಿನಲ್ಲಿ ಫ್ಲೆಕ್ಸಿ-ಫ್ಯೂಯೆಲ್ ಟೆಕ್ನಾಲಜಿಗೆ ಸಪೋರ್ಟ್ ಮಾಡುವ ಎಂಜಿನ್ ಅನ್ನು ಅಳವಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಫ್ಲೆಕ್ಸಿ-ಇಂಧನ ತಂತ್ರಜ್ಞಾನವನ್ನು ನೀಡುವ ಕೈಗೆಟುಕುವ ವಾಹನಗಳು ಭಾರತದಲ್ಲಿ ಇಲ್ಲದಿರುವುದರಿಂದ ಇದನ್ನು ಮಾಡುವುದರ ಮೂಲಕ ಪ್ರಯೋಜನವನ್ನು ಪಡೆಯಲು ಅವರು ಬಯಸುತ್ತಾರೆ ಎಂದು ತಯಾರಕರು ಹೇಳುತ್ತಾರೆ.

ಮುಂದಿನ ಎರಡು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನ ವೆಚ್ಚವೂ ಗಣನೀಯವಾಗಿ ಕಡಿಮೆಯಾಗಲಿದೆ ಎಂಬ ವಿಶ್ವಾಸವನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ವ್ಯಕ್ತಪಡಿಸಿದ್ದಾರೆ. ಸಾಂಪ್ರದಾಯಿಕ ಅಂದರೆ ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್‌ ವಾಹನಗಳ ವೆಚ್ಚದ ಸಮಕ್ಕೆ ಈ ಎಲೆಕ್ಟ್ರಿಕ್ ವಾಹನಗಳ ವೆಚ್ಚವೂ ಬರುವ ಸಾಧ್ಯತೆ ಎನ್ನಲಾಗುತ್ತಿದೆ. ಮಾಲಿನ್ಯ ಮುಕ್ತ ಸಾರಿಗೆ ಅಭಿವೃದ್ಧಿಗೆ ಇ ಮೊಬಿಲಿಟಿ ಪ್ರಮುಖ ಸಾಧನವಾಗಿದೆ ಎಂದು ಅವರು ಈ ಶೃಂಗದಲ್ಲಿ ಅಭಿಪ್ರಾಯಪಟ್ಟರು.

ಥಾರ್ ರಂಗೋಲಿ ಬಿಡಿಸಿ ಇಂಡಿಯಾ ಬುಕ್ ರೆಕಾರ್ಡ್ ಸೇರಿದ ಮಂಡ್ಯ ಕಲಾವಿದ

click me!