ಒಂದೇ ಟ್ರಾಕ್ಟರ್‌ನಿಂದಲೇ 3 ಟ್ರಾಕ್ಟರ್‌ಗಳ ಲಾಭ; ಸೊಲಿಸ್ ಹೈಬ್ರಿಡ್ 5015 ಟ್ರಾಕ್ಟರ್ ಬಿಡುಗಡೆ

By Suvarna News  |  First Published Apr 19, 2021, 3:53 PM IST

ಭಾರತದ ಪ್ರಮುಖ ಟ್ರಾಕ್ಟರ್ ಉತ್ಪಾದನೆಯ ಕಂಪನಿಯಾಗಿರುವ ಐಟಿಎಲ್ ಮಾರುಕಟ್ಟೆಗೆ ಹೊಸ ಟ್ರಾಕ್ಟರ್ ಬಿಡುಗಡೆ ಮಾಡಿದೆ. ಈ ಒಂದೇ ಟ್ರಾಕ್ಟರ್ ನಿಮಗೆ ಮೂರು ಟ್ರಾಕ್ಟರ್‌ಗಳು ನೀಡುವ ಲಾಭವನ್ನು ಒದಗಿಸುತ್ತದೆ. ಪವರ್ ಹಾಗೂ ಇಂಧನ ಕ್ಷಮತೆಯಿಂದಲೂ ಈ ಸೊಲಿಸ್ ಹೈಬ್ರಿಡ್ 5015 ಟ್ರಾಕ್ಟರ್ ಗಮನ ಸೆಳೆಯುತ್ತದೆ. ರೈತರಿಗೆ ಹೆಚ್ಚು ಲಾಭಕಾರಿಯಾಗಿದೆ.


ಟ್ರಾಕ್ಟರ್ ತಯಾರಿಕೆಯ ಮುಂಚೂಣಿಯಲ್ಲಿರುವ ಇಂಟರ್‌ನ್ಯಾಷನಲ್ ಟ್ರಾಕ್ಟರ್ಸ್ ಲಿಮಿಟೆಡ್(ಐಟಿಎಲ್) ಮತ್ತೊಂದು ಟ್ರಾಕ್ಟರ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಸೊಲಿಸ್ ಹೈಬ್ರಿಡ್ 5015 ಟ್ರಾಕ್ಟರ್ ಮಾರುಕಟ್ಟೆಗೆ ಬಿಡುಗಡೆಯಾದ ಹೊಸ ಟ್ರಾಕ್ಟರ್. ಇಂಟರ್‌ನ್ಯಾಷನಲ್ ಟ್ರಾಕ್ಟರ್ಸ್ ಲಿ.ಕಂಪನಿಯು ಜಪನೀಸ್ ಹೈಬ್ರಿಡ್ ತಂತ್ರಜ್ಞಾನ ನೆರವಿನೊಂದಿಗೆ ರೂಪಿಸಿದೆ. ಈ ಸೊಲಿಸ್ ಹೈಬ್ರಿಡ್ 5015 ಟ್ರಾಕ್ಟರ್ ಬೆಲೆ 7.21 ಲಕ್ಷ ರೂಪಾಯಿಯಾಗಿದೆ. ಇದು ದಿಲ್ಲಿ ಎಕ್ಸ್ ಶೋರೂಮ್ ಬೆಲೆ ಎಂಬುದನ್ನು ಬಳಕೆದಾರರು ಗಮನದಲ್ಲಿಟ್ಟುಕೊಳ್ಳಬೇಕು.

Tap to resize

Latest Videos

ಏಪ್ರಿಲ್ ತಿಂಗಳ ಸಖತ್ ಆಫರ್: ಕ್ವಿಡ್, ಟ್ರೈಬರ್, ಡಸ್ಟರ್ ಕಾರ್ ಖರೀದಿ ಮೇಲೆ 1 ಲಕ್ಷ ರೂ.ವರೆಗೆ ಲಾಭ

ಐಟಿಎಲ್(ಇಂಟರ್ನ್ಯಾಷನಲ್ ಟ್ರಾಕ್ಟರ್ಸ್ ಲಿ.) ಕಂಪನಿ ಜಪಾನ್ ಮೂಲದ ಯನ್ಮಾರ್ ಅಗ್ರಿಬಿಸಿನೆಸ್‌ ಕಂಪನಿಯೊಂದಿಗೆ ಸಹಭಾಗಿತ್ವವನ್ನು ಹೊಂದಿದ್ದು, ಈ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಈ ಹೊಸ ತಂತ್ರಜ್ಞಾನದ ಫಲವಾಗಿ ಬಳಕೆದಾರರು ಮೂರು ಟ್ರಾಕ್ಟರ್‌ಗಳಿಂದ ದೊರೆಯುವ ಲಾಭವನ್ನು ಈ ಒಂದೇ ಟ್ರಾಕ್ಟರ್‌ನಿಂದ ಪಡೆದುಕೊಳ್ಳಬಹುದು.

ಮತ್ತೊಂದು ವಿಶೇಷತೆ ಎಂದರೆ, ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಇ ಪವರ್‌ಬೂಸ್ಟ್ ಟ್ರಾಕ್ಟರ್ ಉತ್ಪಾದಿಸಿದ ಕೀರ್ತಿ ಇಂಟರ್‌ನ್ಯಾಷನಲ್ ಟ್ರಾಕ್ಟರ್ಸ್ ಕಂಪನಿಗೆ ಸಲ್ಲುತ್ತದೆ. ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೃಷಿಕರಿಗೆ ಅತ್ಯಾಧುನಿಕ ಟ್ರಾಕ್ಟರ್‌ಗಳ ಸೇವೆಯನ್ನು ಒದಗಿಸುವಲ್ಲಿ ಈ ಇಂಟರ್ ನ್ಯಾಷನಲ್ ಟ್ರಾಕ್ಟರ್ಸ್ ಕಂಪನಿ ಸದಾ ಮುಂಚೂಣಿಯಲ್ಲಿದೆ. ಇದರ ಭಾಗವಾಗಿಯೇ ನಾವು ಈಗ ಹೈಬ್ರಿಡ್ ತಂತ್ರಜ್ಞಾನದ ಸೊಲಿಸ್ ಹೊಸ ಟ್ರಾಕ್ಟರ್ ಅನ್ನು ಕಾಣಬಹುದಾಗಿದೆ. ಕಂಪನಿಯು ತನ್ನ ಸೊಲಿಸ್ ಯನ್ಮಾರ್ ವ್ಯಾಪ್ತಿಯಲ್ಲಿ ಜಪನೀಸ್ ಹೈಬ್ರಿಡ್ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ. ಆ ಮೂಲಕ ರೈತರಿಗೆ ನೆರವು ಒದಗಿಸುತ್ತಿದೆ.

50 ಬ್ರೆಕ್ ಹಾರ್ಸ್ ಪವರ್(ಬಿಎಚ್‌ಪಿ) ಸಾಮರ್ಥ್ಯದ ಎಂಜಿನ್ ಹೊಂದಿರುವ ಈ ಹೊಸ ಟ್ರಾಕ್ಟರ್ 60 ಬಿಹೆಚ್‌ಪಿ ಟ್ರಾಕ್ಟರ್‌ನ ಉತ್ತಮ ಕಾರ್ಯಕ್ಷಮತೆಯನ್ನು ತಲುಪಿಸಲು ಅಥವಾ 45 ಬಿಹೆಚ್‌ಪಿ ಟ್ರಾಕ್ಟರ್‌ನ ಇಂಧನ ದಕ್ಷತೆಯನ್ನು ಸಾಧಿಸಲು ಪರಿಸ್ಥಿತಿಗೆ ಅನುಗುಣವಾಗಿ ಸಂಪೂರ್ಣವಾಗಿ ಕೆಲಸ ಮಾಡಲು ಅನುವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ ರೈತರು ಒಂದೇ ಟ್ರಾಕ್ಟರ್‌ನಲ್ಲಿ ಮೂರು ಟ್ರಾಕ್ಟರ್‌ಗಳಿಂದ ದೊರೆಯುವ ಲಾಭವನ್ನು ಪಡೆದುಕೊಳ್ಳುತ್ತಾರೆಂಬ ಇಂಟರ್ ನ್ಯಾಷನಲ್ ಟ್ರಾಕ್ಟರ್ಸ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ರಮಣ್ ಮಿತ್ತಲ್ ಹೇಳಿಕೆಯನ್ನು ಉಲ್ಲೇಖಿಸಿ ಹಲವು ಸುದ್ದಿತಾಣಗಳು ವರದಿ ಮಾಡಿವೆ.

ಥಾರ್ ರಂಗೋಲಿ ಬಿಡಿಸಿ ಇಂಡಿಯಾ ಬುಕ್ ರೆಕಾರ್ಡ್ ಸೇರಿದ ಮಂಡ್ಯ ಕಲಾವಿದ

ಇಂಟರ್ ನ್ಯಾಷನಲ್ ಟ್ರಾಕ್ಟರ್ಸ್ ಲಿ. ಕಂಪನಿಯ ಈ ಹೊಸ 50 ಬಿಎಚ್‌ಪಿ ಸಾಮರ್ಥ್ಯದ ಸೊಲಿಸ್ ಹೈಬ್ರಿಡ್ 5015 ಟ್ರಾಕ್ಟರ್ ಕಸ್ಟಮೈಸ್ಡ್ ಪ್ರಾಡಕ್ಟ್ ರೀತಿಯಲ್ಲಿ ದೊರೆಯುತ್ತದೆ. 60 ಬ್ರೆಕ್ ಹಾರ್ಸ್ ಪವರ್ ಸಾಮರ್ಥ್ಯ ಎಂಜಿನ್ ಒದಗಿಸುವ ಪವರ್ ಅನ್ನು ಈ 50 ಬಿಎಚ್‌ಪಿ ಸಾಮರ್ಥ್ಯದ ಎಂಜಿನ್ ಒದಗಿಸುತ್ತದೆ. ಈ ಡಿಸೇಲ್ ಎಂಜಿನ್ ಎಲೆಕ್ಟ್ರಿಕ್ ಎನರ್ಜಿ ಶಕ್ತಿಯ ಸಂಯೋಜನೆಯಾಗಿದೆ. ಹಾಗಾಗಿ, ಹೆಚ್ಚು ಶಕ್ತಿಶಾಲಿಯೂ ಆಗಿದೆ.

ಆದರೆ, ಇಂಧನ ಕ್ಷಮತೆಯಲ್ಲಿ ಈ ಸೊಲಿಸ್ ಹೈಬ್ರಿಡ್ 5015 ಟ್ರಾಕ್ಟರ್ ಹಿಂದೆ ಬೀಳುವುದಿಲ್ಲ. 50 ಬಿಎಚ್‌ಪಿ ಎಂಜಿನ್‌ನ ಈ ಟ್ರಾಕ್ಟರ್ ನಿಮಗೆ 45 ಬಿಎಚ್‌ಪಿ ಸಾಮರ್ಥ್ಯದ ಎಂಜಿನ್ ಟ್ರಾಕ್ಟರ್ ಒದಗಿಸುವ ಇಂಧನ ಕ್ಷಮತೆಯನ್ನೇ ಒದಗಿಸುತ್ತಿದೆ. ಅಂದರೆ, 50 ಬಿಎಚ್‌ಪಿ ಎಂಜಿನ್ ಸೊಲಿಸ್ ಹೈಬ್ರಿಡ್ 5015 ಟ್ರಾಕ್ಟರ್ ನಿಮಗೆ 60 ಬಿಎಚ್‌ಪಿ ಎಂಜಿನ್‌ ಶಕ್ತಿಯನ್ನು ಮತ್ತು 45 ಬಿಎಚ್‌ಪಿ ಎಂಜಿನ್‌ನ ನೀಡುವ ಇಂಧನ ಕ್ಷಮತೆಯನ್ನು ಒದಗಿಸುತ್ತದೆ ಎಂದಾಯಿತು.

ಇಂಧನ ಕ್ಷಮತೆಯನ್ನು ಒದಗಿಸುವುದರಿಂದ ಕೃಷಿಕರಿಗೆ ವೆಚ್ಚವನ್ನು ತಗ್ಗಿಸುತ್ತದೆ ಈ ಟ್ರಾಕ್ಟರ್. ಟ್ರಾಕ್ಟರ್‌ನ ಡ್ಯಾಶ್‌ಬೋರ್ಡ್‌ನಲ್ಲಿ ಪವರ್ ಬೂಸ್ಟರ್ ಸ್ವಿಚ್ ನೀಡಲಾಗಿದೆ ಮತ್ತು ಈ ಪವರ್ ಬೂಸ್ಟ್‌ನ ಲಾಭವನ್ನು ಪಡೆಯಲು ಹ್ಯಾಂಡ್ ಆಪರೇಟೆಡ್ ಲೀವರ್ ನೀಡಲಾಗಿದ್ದು ಪವರ್ ಹೊಂದಾಣಿಕೆಯನ್ನು ಮಾಡಲು ಅದು ನೆರವು ನೀಡುತ್ತದೆ. ನಿಯಂತ್ರಕ ಶಕ್ತಿಯನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಅದರ ವಿದ್ಯುತ್ ಮೋಟರ್‌ನಿಂದ ವೇಗವರ್ಧನೆಯನ್ನು ಪಡೆಯುತ್ತದೆ. ಹೈಬ್ರಿಡ್ ಮಾದರಿಯು ತನ್ನ ವಿಭಾಗದಲ್ಲಿ ಅತ್ಯಂತ ಶಕ್ತಿಶಾಲಿ ಎಂದು ಹೇಳಿಕೊಳ್ಳುತ್ತದೆ.

ಈ ಸೊಲಿಸ್  ಹೈಬ್ರಿಡ್ ಟ್ರಾಕ್ಟರ್‌ನಲ್ಲಿ ಲಿಥಿಯಮ್ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಸಿಂಕ್ರೋ-ಕಂಟ್ರೋಲ್ ಮೂಲಕ ನಿರಂತರ ಪವರ್ ಅನ್ನು ಪೂರೈಸುತ್ತದೆ ಮತ್ತು ಇದು ಕನಿಷ್ಠ ನಿರ್ವಹಣೆಯನ್ನು ಬೇಡುತ್ತದೆ. ಬ್ಯಾಟರಿಯ ದೀರ್ಘಕಾಲದ ಬಾಳಿಕೆಯ ಹಿನ್ನೆಲೆಯಲ್ಲಿ ಆಟೋ ಚಾರ್ಜಿಂಗ್ ಕಟ್ ಆಫ್ ಫೀಚರ್ ಅಳವಡಿಸಲಾಗಿದೆ.

ಮಾರುತಿ ಕಾರು ಖರೀದಿಗೆ ಕರ್ನಾಟಕ ಬ್ಯಾಂಕಿನಿಂದ ಶೇ.85ರವರೆಗೂ ಸಾಲ!

click me!