ಸಾಲು ಸಾಲು ಹಬ್ಬಗಳ ಪ್ರಯುಕ್ತ ಭಾರತದಲ್ಲಿ ವಾಹನ ಖರೀದಿಗೆ ಬಂಪರ್ ಆಫರ್ ಘೋಷಿಸಲಾಗಿದೆ. ಇತ್ತ ಗ್ರಾಹಕರು ಹೊಸ ವಾಹನ ಖರೀದಿಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಇದರ ಪರಿಣಾಮ ಕಳೆದ ತ್ರೈಮಾಸಿಕದಲ್ಲಿ ದಾಖಲೆ ಪ್ರಮಾಣದಲ್ಲಿ ವಾಹನಗಳು ಮಾರಾಟಗೊಂಡಿದೆ.
ನವದೆಹಲಿ(ಅ.17) : ಕೊರೋನಾ ಬಳಿಕ ನಿಧಾನವಾಗಿ ಭಾರತದ ಆಟೋಮೊಬೈಲ್ ಕ್ಷೇತ್ರ ಚೇತರಿಸಿಕೊಳ್ಳುತ್ತಿದೆ. ಆಮದು ಸುಂಕ, ಚಿಪ್, ಸೆಮಿಕಂಡಕ್ಟರ್ ಕೊರತೆ, ಮಾರಾಟ ಕುಸಿತ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಿದ ಭಾರತದ ಆಟೋಮೊಬೈಲ್ ಕ್ಷೇತ್ರ ಇದೀಗ ಮತ್ತೆ ದಾಖಲೆ ಪ್ರಮಾಣದಲ್ಲಿ ಮಾರಾಟ ಸಾಧಿಸಿದೆ. ಜುಲೈ-ಸೆಪ್ಟೆಂಬರ್ ತ್ರೈಮಾಸಿಕದ ಅವಧಿಯಲ್ಲಿ ದೇಶದಲ್ಲಿ ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಗಣನೀಯ ಏರಿಕೆಯಾಗಿದ್ದು, ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಇದು ದಾಖಲೆಯಾಗಿದೆ ಎಂದು ಅಖಿಲ ಭಾರತ ವಾಹನ ತಯಾರಕರ ಒಕ್ಕೂಟ(SIAM) ವರದಿ ಹೇಳಿದೆ.
ಭಾರತದ ಪ್ಯಾಸೆಂಜರ್ ವಾಹನ ಮಾರಾಟದಲ್ಲಿ ಕಳೆದ ತ್ರೈಮಾಸಿಕದಲ್ಲಿ 10.74 ಲಕ್ಷ ವಾಹನಗಳು ಮಾರಾಟದ ದಾಖಲೆ ಬರೆದಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ 10.26 ಲಕ್ಷ ವಾಹನಗಳು ಮಾರಾಟಗೊಂಡಿತ್ತು. ಈ ವರ್ಷದಲ್ಲಿ ಪ್ರತಿ ತಿಂಗಳು ಪ್ಯಾಸೆಂಜರ್ ವಾಹನ ಮಾರಾಟ ಸರಾಸರಿ ಶೇಕಡಾ 1.8 ರಷ್ಟಿತ್ತು. ಆದರೆ ಕಳೆದ ತ್ರೈಮಾಸಿಕದಲ್ಲಿ ಈ ಪ್ರಮಾಣ ಶೇಕಡ 3.61 ರಷ್ಟು ಏರಿಕೆಯಾಗಿದೆ.
undefined
ಕಾರ್ ಪೂಲಿಂಗ್ ನಿಷೇಧಿಸಿಲ್ಲ, ಆದರೆ ಕಂಡೀಷನ್ ಅನ್ವಯ; ಸಚಿವ ರಾಮಲಿಂಗಾ ರೆಡ್ಡಿ!
ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ ತ್ರಿಚಕ್ರ ವಾಹನ ಮಾರಾಟದಲ್ಲೂ ದಾಖಲೆ ಬರೆದಿದೆ. 1.95 ಲಕ್ಷ ತ್ರಿಚಕ್ರ ವಾಹನ ಮಾರಾಟಗೊಂಡಿದೆ. ಆದರೆ ದ್ವಿಚಕ್ರ ವಾಹನ ಮಾರಾಟದಲ್ಲಿ ಅಲ್ಪ ಕುಸಿತ ಕಂಡಿದೆ. ಕಳೆದ ತ್ರೈಮಾಸಿಕದಲ್ಲಿ 45.98 ಲಕ್ಷ ದ್ವಿಚಕ್ರ ವಾಹನ ಮಾರಾಟಗೊಂಡಿದೆ.
ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಸಿಯಾಮ್ ಅಧ್ಯಕ್ಷ ವಿನೋದ್ ಅಗರ್ವಾಲ್, ‘ಒಟ್ಟಾರೆ ನಾಗರಿಕ ವಾಹನಗಳ ಮಾರಾಟದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 4.7ರಷ್ಟು ಹೆಚ್ಚಳದೊಂದಿಗೆ 10,74,189 ಯೂನಿಟ್‌ಗಳ ಮಾರಾಟವಾಗಿದೆ. ಮುಂದಿನ ತ್ರೈಮಾಸಿಕದಲ್ಲಿ ಹಬ್ಬಗಳು ಹೆಚ್ಚಾಗಿ ಬರುವುದರಿಂದ ಮಾರಾಟದಲ್ಲಿ ಮತ್ತಷ್ಟು ಹೆಚ್ಚಳವನ್ನು ನಿರೀಕ್ಷಿಸಲಾಗಿದೆ’ ಎಂದು ತಿಳಿಸಿದ್ದಾರೆ.
45 ಸಾವಿರ ರೂಗೆ ಮಾರುತಿ 800ನ್ನು ರೋಲ್ಸ್ ರಾಯ್ಸ್ ಕಾರಾಗಿ ಪರಿವರ್ತಿಸಿದ ಪಿಯುಸಿ ವಿದ್ಯಾರ್ಥಿ!
ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತಗೊಂಡಿದೆ. ಕಳೆದ ಕೆಲ ವರ್ಷದಿಂದ ತೆರಿಗೆ ಕಡಿತಕ್ಕೆ ಆಗ್ರಹಿಸಿದ್ದೇವೆ. ಒಟ್ಟಾರೆ ತೆರಿಗೆ ಕಡಿತಕ್ಕೆ ನಿರಾಕರಿಸಿರುವ ಸರ್ಕಾರ ಇದೀಗ ಕನಿಷ್ಠ ದ್ವಿಚಕ್ರ ವಾಹನದ ಮೇಲಿನ ಉತ್ಪದನಾ ತೆರಿಗೆ ಕಡಿತಗೊಳಿಸಬೇಕು ಎಂದು ವಿನೋದ್ ಆಗರ್ವಾಲ್ ಆಗ್ರಹಿಸಿದ್ದಾರೆ. ದ್ವಿಚಕ್ರ ವಾಹನ ಮೇಲಿನ ಉತ್ಪಾದನಾ ತೆರಿಗೆ ಹೆಚ್ಚಾಗಿದೆ. ಇದೀಗ ಸ್ಕೂಟರ್, ಬೈಕ್ ದುಬಾರಿಯಾಗಿದೆ. ಇದು ಮಾರಾಟದಲ್ಲಿ ಗೋಚರಿಸುತ್ತಿದೆ ಎಂದು ವಿನೋದ್ ಅಗರ್ವಾಲ್ ಹೇಳಿದ್ದಾರೆ.
ಕಳೆದ ತ್ರೈಮಾಸಿಕದ ವರದಿ ಒಟ್ಟಾರೆಯಾಗಿ ತೃಪ್ತಿ ತಂದಿದೆ. ಆಟೋಮೊಬೈಲ್ ಕ್ಷೇತ್ರ ಚೇತರಿಕೆ ಹಾದಿಯಲ್ಲಿ ಸಾಗುತ್ತಿದೆ. ಆದರೆ ಕೆಲ ವಿಚಾರಗಳ ಕುರಿತು ಕೇಂದ್ರ ಸರ್ಕಾರ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು. ಜಿಎಸ್‌ಟಿ ತೆರಿಗೆ, ಆಮದು ತೆರಿಗೆಯನ್ನು ಕಡಿತಗೊಳಿಸಿ ಆಟೋ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ನೀಡಬೇಕು ಎಂದು ವಿನೋದ್ ಅಗರ್ವಾಲ್ ಆಗ್ರಹಿಸಿದ್ದಾರೆ.