ಪ್ರಧಾನಿ ಮೋದಿಯ ವೋಕಲ್ ಫಾರ್ ಲೋಕಲ್ ಅಭಿಯಾನದಿಂದ ಪ್ರೇರಿತವಾಗಿರುವ 84ರ ಹರೆಯದ ಮುಂಶಿ ರಾಮ್ ಇದೀಗ ಲ್ಯಾಪ್‌ಟಾಪ್ ಬ್ಯಾಟರಿ, ಎಲೆಕ್ಟ್ರಾನಿಕ್ ತ್ಯಾಜ್ಯ ಬಳಸಿ ಎಲೆಕ್ಟ್ರಿಕ್ ಬೈಸಿಕಲ್ ನಿರ್ಮಿಸಿದ್ದಾರೆ. 31 ಕಿ.ಮೀ ದೂರದಲ್ಲಿರುವ ತನ್ನ ಪೋಷಕರು ಹಾಗೂ ಕುಟುಂಬಸ್ಥರ ಮನೆಗೆ ತೆರಳಲು ಈ ಆವಿಷ್ಕಾರ ಮಾಡಿದ್ದಾರೆ.
ಉಧಮಪುರ(ಅ.02) ಎಲೆಕ್ಟ್ರಾನಿಕ್ ತ್ಯಾಜ್ಯ ಎಲ್ಲಾ ದೇಶಗಳಿಗೂ ಅತೀ ದೊಡ್ಡ ಸಮಸ್ಸೆ. ಆದರೆ ಇದೇ ತ್ಯಾಜ್ಯದಿಂದ 84ರ ಹರೆಯ ಮುಂಶಿ ರಾಮ್ ಎಲೆಕ್ಟ್ರಿಕ್ ಬೈಸಿಕಲ್ ತಯಾರಿಸಿದ್ದಾರೆ. ಲ್ಯಾಪ್‌ಟಾಪ್ ಬ್ಯಾಟರಿ ಸೇರಿದಂತೆ ಹಲವು ಇ ತ್ಯಾಜ್ಯಗಳನ್ನು ಬಳಸಿಕೊಂಡು ಮುಂಶಿ ರಾಮ್ ಸಾಮಾನ್ಯ ಸೈಕಲನ್ನು ಎಲೆಕ್ಟ್ರಿಕ್ ಸೈಕಲ್ ಆಗಿ ಪರಿವರ್ತಿಸಲಾಗಿದೆ. ಇಕೋ ಫ್ರೆಂಡ್ಲಿ ಇ ಸೈಕಲ್ ಸೋಲಾರ್ ಹಾಗೂ ವಿದ್ಯುತ್‌ನಲ್ಲಿ ಚಾರ್ಜ್ ಆಗಲಿದೆ. ಜಮ್ಮು ಕಾಶ್ಮೀರದ ಉಧಮಪುರ ನಿವಾಸಿಯಾಗಿರುವ 84ರ ಹರೆಯದ ಮುಂಶಿ ರಾಮ್ ಈ ಆವಿಷ್ಕಾರ ಮಾಡಿ ಭಾರಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯ ವೋಕಲ್ ಫಾರ್ ಲೋಕಲ್ ಹಾಗೂ ಗ್ರೀನ್ ಇಂಡಿಯಾ ಯೋಜನೆಯಿಂದ ಪ್ರೇರಿತವಾಗಿರುವ ಮುಂಶಿ ರಾಮ್ ತಮ್ಮ ಅಗತ್ಯಕ್ಕೆ ತಕ್ಕಂತೆ ಸಾಮಾನ್ಯ ಸೈಕಲನ್ನು ಇದೀಗ ಎಲೆಕ್ಟ್ರಿಕ್ ಸೈಕಲ್ ಆಗಿ ಪರಿವರ್ತಿಸಿದ್ದಾರೆ. ನನ್ನ ಕುಟುಂಬಸ್ಥರು, ಪೋಷಕರ ಮನೆ ಇಲ್ಲಿಂದ 31 ಕಿಲೋಮೀಟರ್. ಪ್ರತಿ ಬಾರಿ ಸಾರ್ವಜನಿಕ ಸಾರಿಗೆಯನ್ನೇ ಬಳಸಿ ತೆರಳುತ್ತಿದ್ದೆ. ಆದರೆ ಒಂದೆರೆಡು ಬಸ್ ಸೇರಿದಂತೆ ಪ್ರಯಾಸದ ಕೆಲಸವಾಗಿತ್ತು. ಹೀಗಾಗಿ ಪರಿಸರಕ್ಕೆ ಪೂರಕವಾದ ಸಾರಿಗೆ ವ್ಯವಸ್ಥ ಕುರಿತು ಆಲೋಚಿಸಿ ನನ್ನಲ್ಲಿರುವ ಸೈಕಲನ್ನೇ ಎಲೆಕ್ಟ್ರಿಕ್ ಸೈಕಲ್ ಆಗಿ ಪರಿವರ್ತಿಸಲು ಮುಂದಾದೆ ಎಂದು ಮುಂಶಿ ರಾಮ್ ಹೇಳಿದ್ದಾರೆ.
45 ಸಾವಿರ ರೂಗೆ ಮಾರುತಿ 800ನ್ನು ರೋಲ್ಸ್ ರಾಯ್ಸ್ ಕಾರಾಗಿ ಪರಿವರ್ತಿಸಿದ ಪಿಯುಸಿ ವಿದ್ಯಾರ್ಥಿ!
ಎಲೆಕ್ಟ್ರಾನಿಕ್ ತ್ಯಾಜ್ಯಗಳನ್ನು ಬಳಸಿ ಈ ಇ ಬೈಸಿಕಲ್ ನಿರ್ಮಾಣ ಮಾಡಲಾಗಿದೆ. ಬಿಸಾಡಿದ ಲ್ಯಾಪ್‌ಟಾಪ್ ಬ್ಯಾಟರಿ, ಹಾಳಾಗಿದ್ದ ಎಲೆಕ್ಟ್ರಿಕ್ ಮೋಟಾರ್ ಬಳಸಿ ಇ ಬೈಸಿಕಲ್ ನಿರ್ಮಾಣ ಮಾಡಲಾಗಿದೆ. ಯಾವುದೇ ಹೊಸ ವಸ್ತುಗಳನ್ನು ಖರೀದಿಸಿಲ್ಲ. ಎಲ್ಲವೂ ಬಳಸಿ ಬಿಸಾಡಿದ್ದ ಎಲೆಕ್ಟ್ರಾನಿಕ್ ವಸ್ತುಗಳನ್ನೇ ಬಳಸಲಾಗಿದೆ. ಚಾರ್ಜ್ ಮಾಡಲು ಮನೆಯ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸಲಾಗಿದೆ. ಹೀಗಾಗಿ ಸುಲಭವಾಗಿ ಚಾರ್ಜ್ ಮಾಡಿ ಇ ಸೈಕಲ್ ಬಳಕೆ ಮಾಡಬಹುದು.
ಕೇವರ 59 ಸಾವಿರ ರೂ ನಿಂದ ಆರಂಭ, ಇಲ್ಲಿದೆ ಭಾರತದ ಕಡಿಮೆ ದರದ ಉತ್ತಮ ಬೈಕ್ ಲಿಸ್ಟ್!
ಒಂದು ಬಾರಿ ಚಾರ್ಜ್ ಮಾಡಿದರೆ ಸರಿಸುಮಾರು 50 ಕಿಲೋಮೀಟರ್‌ಗೂ ಹೆಚ್ಚು ದೂರ ಈ ಸೈಕಲ್ ಕ್ರಮಿಸಲಿದೆ. ಇದರಿಂದ ನನ್ನ ಪೋಷಕರ ಮನೆ, ಕುಟುಂಬಸ್ಥರ ಮನಗೆ ತೆರಳುವುದು ಸುಲಭವಾಗಿದೆ ಎಂದು ಮುಂಶಿ ರಾಮ್ ಹೇಳಿದ್ದಾರೆ. ಇದೀಗ ಮುಂಶಿ ರಾಮ್ ಉಧಮಪುರದಲ್ಲಿ ಭಾರಿ ಜನಪ್ರಿಯರಾಗಿದ್ದಾರೆ.ಮುಂಶಿ ರಾಮ್ ಗೆಳೆಯರು ಕೂಡ ಇದೀಗ ಇದೇ ರೀತಿ ತಮಗೂ ಇ ಸೈಕಲ್ ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ. ಇತ್ತ ವಿವಿದೆಡೆಗಳಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.