ಮಾರುತಿ ಕಾರು ಖರೀದಿಗೆ ಕರ್ನಾಟಕ ಬ್ಯಾಂಕಿನಿಂದ ಶೇ.85ರವರೆಗೂ ಸಾಲ!

By Suvarna News  |  First Published Apr 5, 2021, 3:20 PM IST

ಕಾರ್ ಖರೀದಿಯನ್ನು ಸರಳಗೊಳಿಸುವುದು ಮತ್ತು ಹಣಕಾಸು ನೆರವು ಒದಗಿಸುವ ಸಂಬಂಧ ಮಾರುತಿ ಸುಜುಕಿ ಇಂಡಿಯಾ ಮತ್ತು ಕರ್ನಾಟಕ  ಬ್ಯಾಂಕ್ ಪರಸ್ಪರ ಒಪ್ಪಂದ ಮಾಡಿಕೊಂಡಿವೆ. ಮಾರುತಿ ಕಾರುಗಳ ಖರೀದಿಗೆ ಶೇ.85ರ ವರೆಗೂ ಸಾಲವನ್ನು ಕರ್ನಾಟಕ ಬ್ಯಾಂಕ್ ಒದಗಿಸಲಿದೆ. ಈ ಮೂಲಕ ಮಾರುತಿ ಕಾರ್ ಖರೀದಿಯನ್ನು ಮತ್ತಷ್ಟು ಸರಾಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ.


ದೇಶದ ಅಗ್ರಗಣ್ಯ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ ಲಿ. ಗ್ರಾಹಕರಿಗೆ ಹಣಕಾಸು ಸಾಲದ ನೆರವು ಒದಗಿಸುವ ಸಂಬಂಧ ಮಂಗಳೂರು ಮೂಲದ ಖಾಸಗಿ ಬ್ಯಾಂಕ್ ಕರ್ನಾಟಕ ಬ್ಯಾಂಕ್ ಜತೆ ತಿಳಿವಳಿಕಾ ಒಪ್ಪಂದಕ್ಕೆ ಸಹಿ ಹಾಕಿದೆ.

ಸ್ವಿಫ್ಟ್ ನಾಗಾಲೋಟ ತಡೆಯೋರಿಲ್ಲ; ಟಾಪ್‌ 10 ಪಟ್ಟಿಯಲ್ಲಿ ಮಾರುತಿಯದ್ದೇ ಕಾರ್‌ಬಾರು.

Tap to resize

Latest Videos

undefined

ಮಾರುತಿ ಕಂಪನಿಯ ತಮ್ಮ ನೆಚ್ಚಿನ ವಾಹನಗಳ ಖರೀದಿಸುವ ಗ್ರಾಹಕರಿಗೆ ಕರ್ನಾಟಕ ಬ್ಯಾಂಕ್ ಆಕರ್ಷಕ ಹಣಕಾಸು ಆಯ್ಕೆಗಳನ್ನು ಒದಗಿಸಲಿದೆ. ಗ್ರಾಹಕರು ಈ ಸೇವೆಯನ್ನು ಬ್ಯಾಂಕಿನ 858 ಶಾಖೆಗಳಿಂದಲೂ  ಪಡೆದುಕೊಳ್ಳಬಹುದು. ಕರ್ನಾಟಕ ಬ್ಯಾಂಕ್ ಬೃಹತ್ ನಗರ, ನಗರ, ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದ್ದು, ಮಜಬೂತ್ತಾದ ಬ್ಯಾಂಕಿಂಗ್ ಜಾಲವನ್ನು ಹೊಂದಿದೆ. ಇದರಿಂದ ಮಾರುತಿ ಕಂಪನಿಗೂ ವ್ಯವಹಾರಕ್ಕೂ ಬಲ ದೊರೆಯಲಿದೆ ಎಂದು ಹೇಳಲಾಗುತ್ತಿದೆ.

ಕರ್ನಾಟಕ ಬ್ಯಾಂಕ್ ಜತೆಗಿನ ಒಪ್ಪಂದ ಬಗೆಗಿನ ಮಾಹಿತಿಯನ್ನು ಮಾರುತಿ ಸುಜುಕಿ ಇಂಡಿಯಾ ಕಂಪನಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿದ್ದು, ಗ್ರಾಹಕರಿಗೆ ಬ್ಯಾಂಕ್ ಸಾಲ ಒದಗಿಸಲಿದೆ ಎಂದು ಹೇಳಿದೆ.

ಈ ಸಯೋಗದಲ್ಲಿ ಗ್ರಾಹಕರು, ಮಾರುತಿ ಸುಜುಕಿ ಅರೆನಾ ಮತ್ತು ನೆಕ್ಸಾ ಶೋರೂಮ್‌ಗಳ ಎಲ್ಲ ಹೊಸ ಕಾರುಗಳ ಆನ್‌ರೋಡ್ ಬೆಲೆಯ ಪೈಕಿ ಶೇ.85ರವರೆಗೂ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಗ್ರಾಹಕರು 84 ಕಂತುಗಳವರೆಗೂ ಸಾಲವನ್ನು ಪಡೆದುಕೊಳ್ಳಬಹುದು. ಕಾರ್ ಲೋನ್‌ನ ಬಡ್ಡಿ ದರವು ಎಕ್ಸರ್ಟನಲ್ ಬೆಂಚ್ ಮಾರ್ಕ್ ಲೆಂಡಿಂಗ್ ದರಕ್ಕೆ ಅನ್ವಯವಾಗಿರುತ್ತದೆ.

ಕಂಪನಿಯು ಅರೇನಾ ಡೀಲರ್‌ಶಿಪ್‍ಗಳಡಿ ಗ್ರಾಹಕರು ಮಾರುತಿ ಸುಜುಕಿ ಅಲ್ಟೋ, ಮಾರುತಿ ಸುಜುಕಿ  ಎಸ್ ಪ್ರೆಸ್ಸೋ, ಇಕೋ, ಸೆಲೆರಿಯೋ, ವ್ಯಾಗನ್ ಆರ್, ಸ್ವಿಫ್ಟ್, ಡಿಸೈರ್, ಎರ್ಟಿಗಾ, ವಿಟಾರಾ ಬ್ರೆಜ್ ವಾಹನಗಳನ್ನು ಮಾರಾಟ ಮಾಡುತ್ತದೆ.

ಇದೇ ವೇಳೆ, ನೆಕ್ಸಾ ಡೀಲರ್‌ಶಿಪ್‌ಗಳಡಿ ಮಾರುತಿ ಸುಜಿ ಇಗ್ನಿಸ್, ಬಲೆನೋ, ಸಿಯಾಜ್, ಎಕ್ಸ್ಎಲ್ 6, ಎಸ್‌ ಕ್ರಾಸ್‌ ವಾಹನಗಳನ್ನು ಮಾರಾಟ ಮಾಡುತ್ತದೆ.

ಬರಲಿದೆ ಜಗತ್ತಿನ ಮೊದಲ ಸೋಲಾರ್ ಆಧರಿತ SUV, ಇದಕ್ಕೆ ಬಿಸಿಲು ಇದ್ದರೆ ಸಾಕಷ್ಟೇ

ಮಾರುತಿ ಸುಜುಕಿ ಇಂಡಿಯಾ ಮಂಗಳೂರು ಮೂಲದ ಖಾಸಗಿ ಸಾಲದಾತ ಕರ್ನಾಟಕ ಬ್ಯಾಂಕ್ ಜತೆ ತಿಳಿವಳಿಕಾ ಒಪ್ಪಂದಕ್ಕೆ ಸಹಿ ಹಾಕಿದ್ದು, ಗ್ರಾಹಕರಿಗೆ ಕಂಪನಿಯಿಂದ ತಮ್ಮ ಫೆವರಿಟ್ ಕಾರ್‌ ಖರೀದಿಗೆ ಸಾಲದ ನೆರವು ಒದಗಿಸಲಿದೆ. ಗ್ರಾಹಕರು ಕರ್ನಾಟಕದ ಎಲ್ಲ ಶಾಖೆಗಳಿಂದಲೂ ಶೇ.85ರವರೆಗೂ ಕಾರ್ ಖರೀದಿ ಮೇಲೆ ಸಾಲಪಡೆಯಬಹುದಾಗಿದೆ. ಈ ಬ್ಯಾಂಕ್, ಮೆಟ್ರೋದಿಂದ ಹಳ್ಳಿಯವರೆಗೂ ಶಾಖೆಗಳನ್ನು ಹೊಂದಿದೆ ಎಂದು ಮಾರುತಿ ಸುಜುಕಿ ಇಂಡಿಯಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಮಾರುತಿ ಸುಜುಕಿ ಕಂಪನಿಯ ಪ್ರಕಾರ ಸಾಲದ ಅವಧಿ 84 ತಿಂಗಳದ್ದಾಗಿರುತ್ತದೆ. ಹಾಗೆಯೇ, ಸಾಲದ ಬಡ್ಡಿದರವು ಎಕ್ಸರ್ಟರ್ನಲ್ ಬೆಂಚ್‌ಮಾರ್ಕ್ ಲೆಂಡಿಂಗ್  ರೇಟ್‌ಗೆ  ಅನ್ವಯವಾಗಿರುತ್ತದೆ.

ಗ್ರಾಹಕರಿಗೆ ಕಾರ್ ಖರೀದಿಯನ್ನು ಸುಲಭಗೊಳಿಸುವುದು ಮತ್ತು ಅವರಿಗೆ ಕೈಗೆಟುಕವಂತೆ ಮಾಡುವುದೇ ಈ ಜಂಟಿ ಸಹಭಾಗಿತ್ವದ ಗುರಿಯಾಗಿದೆ. ಭಾರತದಲ್ಲೀಗ ತೀವ್ರ ತಾಂತ್ರಿಕ  ಬೆಳವಣಿಗೆ ಮತ್ತು ಡಿಜಿಟಲ್ ಗ್ರಾಹಕ ನಡವಳಿಕೆಯು ಕಾರ್ ಮಾರಾಟವನ್ನು ನಿರ್ಧರಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಈ ದಿಶೆಯಲ್ಲಿ ಮಾರುತಿ ಕಂಪನಿಯ ಹಲವು ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಡಿಜಿಟಲ್ ಸ್ಮಾರ್ಟ್ ಫೈನಾನ್ಸ್ ವೇದಿಕೆ, ಗ್ರಾಹಕರಿಗೆ ಅಗತ್ಯಕ್ಕೆ ತಕ್ಕಂತೆ ಇಎಂಐ ಹೊಂದಾಣಿಗೆ ಮತ್ತು ಅವರಿಗೆ ಆಕರ್ಷಕ ಬಡ್ಡಿ ದರದಲ್ಲಿ ಹೊಸ ಕಾರು ಖರೀದಿಸಲು ಅನುವು ಮಾಡಿಕೊಡಲು ಅನೇಕ ಹೊಸ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕರ್ನಾಟಕ ಬ್ಯಾಂಕ್ ಜತೆಗಿನ ಒಪ್ಪಂದಿಂದಾಗಿ ನಮ್ಮ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗಲಿದೆ ಎಂದು ಭಾವಿಸ್ದದೇವೆ ಎಂದು ಮಾರುತಿ ಸುಜುಕಿ ಇಂಡಿಯಾ ಕಂಪನಿಯ ಮಾರ್ಕೆಟಿಂಗ್ ಮತ್ತು ಸೇಲ್ಸ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶಶಾಂಕ್ ಶ್ರೀವಾತ್ಸವ್ ತಿಳಿಸಿದ್ದಾರೆ.

ಕ್ರೆಟಾ, ಸೆಲ್ತೋಸ್‌ಗೆ ಟಕ್ಕರ್ ಕೊಡಲು ಬರ್ತಿದೆ ವೋಕ್ಸ್‌ವಾಗನ್‌ ‘ಟಿಗ್ವಾನ್’ ಎಸ್‌ಯುವಿ

ಮಾರುತಿ ಸುಜುಕಿ ಇಂಡಿಯಾದೊಂದಿಗಿನ ಈ ಸಹಭಾಗಿತ್ವವು ಗ್ರಾಹಕರ ಅನುಕೂಲ ಮತ್ತು ಸರಾಗತೆಯನ್ನು ಹೆಚ್ಚಿಸುತ್ತದೆ, ಅದೇ ಸಮಯದಲ್ಲಿ ಅವರು ನಮ್ಮ ಡಿಜಿಟಲ್ ಕಾರು ಸಾಲ ಉತ್ಪನ್ನದ ಅದ್ಭುತ ಅನುಭವವನ್ನು ಪಡೆಯಬಹುದು. ಮಾರುತಿ ಸುಜುಕಿಯಿಂದ ವಿಶ್ವ ದರ್ಜೆಯ ಉತ್ಪನ್ನಗಳನ್ನು ಹೊಂದುವ ಗ್ರಾಹಕರ ಆಕಾಂಕ್ಷೆಗಳನ್ನು ಈಡೇರಿಸಬಹುದು. ವಿಶಾಲ ಬ್ರ್ಯಾಂಚ್ ಜಾಲ ಹಾಗೂ ಡಿಜಿಟಲ್ ಮೂಲಕ  ಕರ್ನಾಟಕ ಬ್ಯಾಂಕ್ ಕಾರ್ ಲೋನ್‌ಗಳನ್ನು ಒದಗಿಸಲಿದೆ ಎಂದು ಕರ್ನಾಟಕ ಬ್ಯಾಂಕ್ ಎಂಡಿ ಮತ್ತು  ಸಿಇಒ ಮಹಾಬಲೇಶ್ವರ್ ಎಂ ಎಸ್ ತಿಳಿಸಿದ್ದಾರೆ.

click me!