3 ವರ್ಷಗಳ ಬಳಿಕ ಭಾರತದಲ್ಲಿ ಮತ್ತೆ ಆಟೋ ಎಕ್ಸ್‌ಪೋ, ಎಲೆಕ್ಟ್ರಿಕ್ ಸೇರಿ ಹಲವು ವಾಹನ ಅನಾವರಣ!

By Suvarna News  |  First Published Jan 10, 2023, 5:09 PM IST

ಕೊರೋನಾ ಕಾರಣದಿಂದ ಸ್ಥಗಿತಗೊಂಡಿದ್ದ ಭಾರತದ ಪ್ರತಿಷ್ಠಿತ ಆಟೋ ಎಕ್ಸ್‌ಪೋ ಪ್ರದರ್ಶನ ಇದೀಗ ಮತ್ತೆ ಬಂದಿದೆ. ನಾಳೆಯಿಂದ ದೆಹಲಿಯಲ್ಲಿ ಆಟೋ ಎಕ್ಸ್‌ಪೋ ಆರಂಭಗೊಳ್ಳುತ್ತಿದೆ. 114ಕ್ಕೂ ಹೆಚ್ಚು ಹೊಸ ಕಂಪನಿಗಳು, ಕಾರು, ಬ್ರ್ಯಾಂಡ್, ಇಂಡಸ್ಟ್ರಿ ಪ್ರದರ್ಶನಗೊಳ್ಳುತ್ತಿದೆ. ಆಟೋ ಎಕ್ಸ್‌ಪೋ ದಿನಾಂಕ, ಪ್ರದರ್ಶನದ ಸಂಪೂರ್ಣ ವಿವರ ಇಲ್ಲಿವೆ.


ನವದೆಹಲಿ(ಜ.10): ಕೊರೋನಾ ಕಾರಣದಿಂದ ಸ್ಥಗಿತಗೊಂಡಿದ್ದ ಭಾರತದ ಆಟೋ ಎಕ್ಸ್‌ಪೋ ಮತ್ತೆ ಬಂದಿದೆ. ಈ ಬಾರಿ ಎರಡು ಸ್ಥಳಗಳಲ್ಲಿ ಆಟೋ ಎಕ್ಸ್‌ಪೋ ಪ್ರದರ್ಶನ ನಡೆಯಲಿದೆ. ಜನವರಿ 11 ರಿಂದ ಆಟೋ ಎಕ್ಸ್‌ಪೋ ಆರಂಭಗೊಳ್ಳುತ್ತಿದೆ. ಜನವರಿ 18 ವರೆಗೆ ಅತೀ ದೊಡ್ಡ ಪ್ರದರ್ಶನ ನಡೆಯಲಿದೆ. ಆಟೋ ಎಕ್ಸ್‌ಪೋ ಕಾಂಪೋನೆಂಟ್ ಪ್ರದರ್ಶನ ದೆಹಲಿಯ ಪ್ರಗತಿ ಮೈದಾನದಲ್ಲಿ ಆಯೋಜಿಸಲಾಗಿದೆ. ಇನ್ನು ಆಟೋ ಎಕ್ಸ್‌ಪೋ ಮೋಟಾರು ಶೋ ಗ್ರೇಟರ್ ನೋಯ್ಡಾದಲ್ಲಿ ನಡೆಯಲಿದೆ. ಆರಂಭಿಕ 2 ದಿನಗಳು ಅಂದರೆ, ಜನವರಿ 11 ಹಾಗೂ 12 ಮಾಧ್ಯಮಕ್ಕೆ ಸೀಮಿತವಾಗಿದೆ. ಜನವರಿ 13ರಂದು ಆಟೋ ಉದ್ಯಮಕ್ಕೆ ತೆರೆದುಕೊಳ್ಳಲಿದೆ. ಬೆಳಗ್ಗೆ 11 ಗಂಟೆಯಿಂದ 7ಗಂಟೆ ವರೆಗೆ ನಡೆಯಲಿದೆ. ಇನ್ನು ಜವರಿ 14 ರಿಂದ 18 ವರೆಗೆ ಸಾರ್ವಜನಿಕರಿಗೆ ಮುಕ್ತವಾಗಲಿದೆ. ಪ್ರತಿ ದಿನ 11 ಗಂಟೆಗೆ ಆಟೋ ಎಕ್ಸ್‌ಪೋ ಆರಂಭಗೊಳ್ಳುತ್ತದೆ. ಆದರೆ ಮುಕ್ತಾಯದ ಸಮಯ ಪ್ರತಿ ದಿನ ಬದಲಾಗಲಿದೆ. ಜನವರಿ 14 ಮತ್ತು 15 ರಂದು ರಾತ್ರಿ 8 ಗಂಟೆಗೆ ಅಂತ್ಯಗೊಳ್ಳಲಿದೆ. ಇನ್ನು ಜನವರಿ 16 ಮತ್ತು 17 ರಂದು ಸಂಜೆ 7 ಗಂಟೆಗೆ ಅಂತ್ಯಗೊಂಡರೆ, ಜನವರಿ 18ಕ್ಕೆ ಸಂಜೆ 6 ಗಂಟಗೆ ಅಂತ್ಯವಾಗಲಿದೆ.

ಆಟೋ ಎಕ್ಸ್‌ಪೋ ಟಿಕೆಟ್ ಬೆಲೆ
ಆಟೋ ಎಕ್ಸ್‌ಪೋದಲ್ಲಿ ಪಾಲ್ಗೊಳ್ಳಲು ಟಿಕೆಟ್ ನಿಗದಿಪಡಿಸಲಾಗಿದೆ. ಜನವರಿ 13ಕ್ಕೆ 750 ರೂಪಾಯಿ ಟಿಕೆಟ್ ಬೆಲೆ ನಿಗದಿಪಡಿಸಲಾಗಿದೆ. ಇನ್ನು ಜನವರಿ 14 ಮತ್ತು 15ಕ್ಕೆ 475 ರೂಪಾಯಿ ನಿಗದಿಪಡಿಸಲಾಗಿದೆ. ಇನ್ನು ಅಂತಿಮ 3 ದಿನ 350 ರೂಪಾಯಿ ನಿಗದಿಪಡಿಸಲಾಗಿದೆ. ಆಟೋ ಎಕ್ಸ್‌ಪೋ ಟಿಕೆಟ್‌ಗಳು ಬುಕ್‌ಮೈಶೋ.ಕಾಂನಲ್ಲಿ ಲಭ್ಯವಿದೆ.

Tap to resize

Latest Videos

undefined

ಹೊಸ ವರ್ಷದಲ್ಲಿ ವಾಹನ ಖರೀದಿಸಲು ಸಕಾಲ, 5 ರಿಂದ 10 ಲಕ್ಷ ರೂಗೆ ಲಭ್ಯವಿಗೆ ಉತ್ತಮ ಕಾರು!

ದೆಹಲಿ ಆಟೋಎಕ್ಸ್‌ಪೋದಲ್ಲಿ ಬರೋಬ್ಬರಿ 114 ಇಂಡಸ್ಟ್ರೀಗಳು ಪಾಲ್ಗೊಳ್ಳುತ್ತಿದೆ. ವಿಶೇಷ ಅಂದರೆ 48 ವಾಹನಗಳು ಇದೇ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗುತ್ತಿದೆ. ಇಷ್ಟೇ ಅಲ್ಲ ಪ್ರತಿಷ್ಠಿತ ಆಟೋ ಕಂಪನಿಗಳು ತಮ್ಮ ತಮ್ಮ ವಾಹನ, ಟೆಕ್ನಾಲಜಿ, ಭವಿಷ್ಯದ ಕಾರುಗಳನ್ನು ಪ್ರದರ್ಶನ ಮಾಡಲಿದೆ. ಆಟೋ ಉತ್ಪಾದಕ ಕಂಪನಿಗಳು 16ಕ್ಕೂ ಹೆಚ್ಚು ಕಾರುಗಳನ್ನು ಪ್ರದರ್ಶನಕ್ಕಿಡಲಿದ್ದಾರೆ. ಇದರಲ್ಲಿ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರು, SUV ಕಾರುಗಳು ಸೇರಿವೆ.

ಭಾರಿ ಕುತೂಹಲ ಹುಟ್ಟಿಸಿರುವ ಹ್ಯುಂಡೈ ಕಂಪನಿಯ IONIQ5 ಎಲೆಕ್ಟ್ರಿಕ್ ಕಾರು ಇದೇ ಆಟೋ ಎಕ್ಸ್‌ಪೋ ಮೂಲಕ ಭಾರತದಲ್ಲಿ ಅನಾವರಣಗೊಳ್ಳಲಿದೆ. ಇದರ ಜೊತೆಗೆ ಬೆಂಗಳೂರು ಮೂಲಕ ಪ್ರೈವೈಗ್ ಎಲೆಕ್ಟ್ರಿಕ್ ಕಾರು ಕೂಡ ಪ್ರದರ್ಶನಗೊಳ್ಳಲಿದೆ. ಇನ್ನು ಬಿವೈಡಿ ಸೇರಿದಂತೆ ಇತರ ಹಲವು ಎಲೆಕ್ಟ್ರಿಕ್ ಕಾರುಗಳು ಅಟೋ ಎಕ್ಸ್‌ಪೋದ ಪ್ರಮುಕ ಆಕರ್ಷಣೆಯಾಗಿದೆ. ಇನ್ನು ಟಿವಿಎಸ್ ಮೋಟಾರ್ಸ್, ಯಮಹಾ, ಬಜಾಜ್, ಹೀರೋ ಕೂಡ ತಮ್ಮ ತಮ್ಮ ಬೈಕ್ ಸ್ಕೂಟರ್ ಲಾಂಚ್ ಮಾಡುತ್ತಿದೆ. 

2026ರಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಆ್ಯಪಲ್ ಕಾರ್, ಬೆಲೆ ಎಷ್ಟು ಗೊತ್ತಾ?

ಮಾರುತಿ ಸುಜುಕಿಯ ಗ್ರ್ಯಾಂಡ್ ವಿಟಾರ, ಹೊಚ್ಚ ಹೊಸ ಬೆಲೆನೋ, XL6, ಸಿಯಾಜ್, ಬ್ರೆಜಾ, ಸ್ವಿಫ್ಟ್ ಕಾರುಗಳು ಪ್ರದರ್ಶನಗೊಳ್ಳುತ್ತಿದೆ. ಇದರ ಜೊತೆಗೆ ಎಕ್ಸ್‌ಪೋಗೆ ಆಗಮಿಸಿದರಿಗೆ ಅನುಭವ ನೀಡಲು ಹಲವು ಜೋನ್ ಸೃಷ್ಟಿಸಲಾಗಿದೆ. ಇದರಲ್ಲಿ ಎಕ್ಸ್‌ಪೋವರ್ಸ್ ಲೊಬಿ, ಅಡ್ವೆಂಚರ್ ಜೋನ್, ಟೆಕ್ನಾಲಜಿ ಜೋನ್, ಸ್ಟುಡಿಯೋ ಜೋನ್, ಲಾಂಟ್ ಜೋನ್, ಎಂಟರ್ಟೈನ್ಮೆಂಟ್ ಜೋನ್, ಸಸ್ಟೆನೆಬಿಲಿಟಿ ಜೋನ್ ಹೊಸ ಅನುಭವ ನೀಡಲಿದೆ. 

click me!