ಮಂಗಳ ಗ್ರಹದಲ್ಲಿ ಥಾರ್ ಲ್ಯಾಂಡಿಂಗ್ ಯಾವಾಗ? ನೆಟ್ಟಿಗನ ಪ್ರಶ್ನೆಗೆ ಆನಂದ್ ಮಹೀಂದ್ರ ಪ್ರಾಸ ಉತ್ತರ!

By Suvarna News  |  First Published Jan 7, 2023, 3:55 PM IST

ಈ ಬಾರಿ ಆನಂದ್ ಮಹೀಂದ್ರಗೆ ವಿಶೇಷ ಹಾಗೂ ಕುತೂಹಲಕರ ಪ್ರಶ್ನೆಯೊಂದನ್ನು ಕೇಳಲಾಗಿದೆ. ಮಂಗಳ ಗ್ರಹದಲ್ಲಿ ಮಹೀಂದ್ರ ಥಾರ್ ಜೀಪ್ ಲ್ಯಾಂಡ್ ಯಾವಾಗ ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಆನಂದ್ ಮಹೀಂದ್ರ ಉತ್ತರ ಹಲವರ ಕುತೂಹಲ ಹೆಚ್ಚಿಸಿದೆ.


ಮುಂಬೈ(ಜ.07):  ಆನಂದ್ ಮಹೀಂದ್ರ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ. ಹೀಗಾಗಿ ಆನಂದ್ ಮಹೀಂದ್ರ ಹಿಂಬಾಲಕರು, ನೆಟ್ಟಿಗರು ಕೇಳುವ ಕುತೂಹಲ ಪ್ರಶ್ನೆಗೆ ಅಷ್ಟೆ ಸೊಗಸಾಗಿ ಉತ್ತರಿಸಿ ಎಲ್ಲರ ಗಮನಸೆಳೆಯುತ್ತಾರೆ. ಈ ಬಾರಿಯೂ ಆನಂದ್ ಮಹೀಂದ್ರ ಉತ್ತರ ಭಾರಿ ಸದ್ದು ಮಾಡುತ್ತಿದೆ. ಮಂಗಳ ಗ್ರಹದಲ್ಲಿ ಮಹೀಂದ್ರ ಥಾರ್ ಜೀಪ್ ಲ್ಯಾಂಡಿಂಗ್ ಯಾವಾಗ ಎಂದು ನೆಟ್ಟಿಗ ಪ್ರಶ್ನೆ ಕೇಳಿದ್ದಾನೆ. ಇದಕ್ಕೆ ಆನಂದ್ ಮಹೀಂದ್ರ ಕೂಡ ಪ್ರಶ್ನೆ ಮೂಲಕವೇ ಕುತೂಹಲ ಹೆಚ್ಚಿಸಿದ್ದಾರೆ. ಮಾರ್ಸ್ ಪೇ ಥಾರ್ಸ್?( ಮಂಗಳಲ್ಲಿ ಥಾರ್) ಎಂದು ಆನಂದ್ ಮಹೀದ್ರ ಪ್ರತಿಕ್ರಿಯೆ ನೀಡಿದ್ದಾರೆ. ಮೂರು ಪದದ ಉತ್ತರ ಇದೀಗ ಭಾರಿ ಕುತೂಹಲ ಕೆರಳಿಸಿದೆ.

ಇತ್ತೀಚೆಗೆ ಮಂಗಳಯಾನ ಕುರಿತು ಬಾರಿ ಚರ್ಚೆಗಳು ನಡೆಯುತ್ತಿದೆ. ಟೆಸ್ಲಾ ಮುಖ್ಯಸ್ಥ ಎಲನ್ ಮಸ್ಕ್ ಮಂಗಳಯಾನ ಘೋಷಣೆ ಮಾಡಿದ್ದರು. 2026ರಲ್ಲಿ ಮಂಗಳ ಗ್ರಹಕ್ಕೆ ಮಾನವನ್ನು ಕಳುಹಿಸಿ ಅಧ್ಯಯನ ನಡೆಸಲಾಗುವುದು ಎಂದಿದ್ದರು. ಇತ್ತ ನಾಸಾ 2033ರಲ್ಲಿ ಮಂಗಳ ಗ್ರಹಕ್ಕೆ ಮಾನವ ಕಾಲಿಡಲಿದ್ದಾರೆ ಅನ್ನೋ ಘೋಷಣೆ ಮಾಡಿದೆ. ಮಂಗಳಯಾನ ಕುರಿತು ಭಾರಿ ಚರ್ಚೆ ನಡುವೆ ಸಾಮಾಜಿಕ ಜಾಲತಾಣದಲ್ಲಿ ಮಂಗಳ ಗ್ರಹದ ಮೇಲ್ಮೈ  ಹಾಗೂ ಉಪಗ್ರಹದ ಫೋಟೋವೊಂದನ್ನು ಪೋಸ್ಟ್ ಮಾಡಿ, ಆನಂದ್ ಮಹೀಂದ್ರಗೆ ಪ್ರಶ್ನಿಸಲಾಗಿತ್ತು.

Tap to resize

Latest Videos

undefined

10 ರೂಗೆ 150 ಕಿ.ಮೀ ಮೈಲೇಜ್, 6 ಜನರ ಪ್ರಯಾಣಸಿಬಲ್ಲ ಎಲೆಕ್ಟ್ರಿಕ್ ಬೈಕ್‌ಗೆ ಮನಸೋತ ಮಹೀಂದ್ರ!

ಆನಂದ್ ಮಹೀಂದ್ರ ಉತ್ತರ ಬಂದ ಬೆನ್ನಲ್ಲೇ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಮಾರ್ಸ್ ಫೋಟೋಗೆ ಥಾರ್ ಜೀಪ್ ಎಡಿಟ್ ಮಾಡಿ ಕಲ್ಪನೆ ಅನ್ನೋ ಟ್ಯಾಗ್‌ನೊಂದಿಗೆ ಪೋಸ್ಟ್ ಮಾಡಲಾಗಿದೆ. ಇನ್ನೂ ಕೆಲವರು ಮಾರ್ಸ್‌ನಲ್ಲಿ ಥಾರ್ ಜೀಪ್ ಅವಶ್ಯಕತೆ ಇದೆ. ಮಂಗಳನ ಮೇಲ್ಮೈ ನೋಡಿದರೆ ಇಲ್ಲಿ ಥಾರ್ ವಾಹನವೇ ಉತ್ತಮ. ಇದನ್ನು ಹೊರತು ಪಡಿಸಿದರೆ ಉಳಿದ ವಾಹನಗಳು ನಿರೀಕ್ಷಿತ ಪರ್ಫಾಮೆನ್ಸ್ ನೀಡಲು ಸಾಧ್ಯವಾಗಲ್ಲ ಎಂದಿದ್ದಾರೆ.

 

Mars pe Thars? https://t.co/mGoCJ2tfCQ

— anand mahindra (@anandmahindra)

 

ಆನಂದ್ ಮಹೀಂದ್ರ ಟ್ವೀಟ್ ಮೂಲಕ ಖಡಕ್ ಉತ್ತರ ನೀಡುವುದು ಇದೇ ಮೊದಲಲ್ಲ.ಹಲವು ಬಾರಿ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುವ ಪ್ರಶ್ನೆಗಳಿಗೆ ಅದೇ ದಾಟಿಯಲ್ಲಿ ಉತ್ತರಿಸಿದ್ದಾರೆ. ಪ್ರಶ್ನೆಗಳು ಎಷ್ಟೇ ಖಾರವಾಗಿದ್ದರೂ, ಸಿರಿಯಸ್ ಆಗಿದ್ದರೂ ಆನಂದ್ ಮಹೀಂದ್ರ ಮಾತ್ರ ಎಂದಿನಂತೆ ತಮ್ಮ ಶೈಲಿಯಲ್ಲೇ ಉತ್ತರ ನೀಡುತ್ತಾರೆ.

ಇದು ಮೊಬೈಲ್‌ ಮದುವೆ ಮನೆ!
ಸೃಜನಶೀಲತೆಯನ್ನು ಸದಾ ಪ್ರೋತ್ಸಾಹಿಸುವ ಉದ್ಯಮಿ ಆನಂದ ಮಹೀಂದ್ರಾ, ಸರಕು ಸಾಗಾಣಿಕಾ ಕಂಟೇನರ್‌ನಲ್ಲಿ ಇಡೀ ಮದುವೆ ಮನೆಯನ್ನೇ ವಿನ್ಯಾಸಗೊಳಿಸಿರುವ ವಿಶಿಷ್ಟವಿಡಿಯೋವನ್ನು ಟ್ವೀಟ್‌ ಮಾಡಿದ್ದಾರೆ. ಈ ‘ಮೊಬೈಲ್‌ ಮದುವೆ ಮನೆ’ ಇಂಟರ್ನೆಟ್‌ನಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

 

ಫ್ರಾನ್ಸ್ ಯಾಕೆ? ಭಾರತದ ಅಳಿಯ ಸಿಕ್ಕಿಲ್ವಾ? ನೆಟ್ಟಿಗನ ಪ್ರಶ್ನೆಗೆ ಮಹೀಂದ್ರ ಖಡಕ್ ಉತ್ತರ!

40 ಅಡಿ ಉದ್ದದ ಈ ಸಾಗಾಣಿಕಾ ಕಂಟೇನರ್‌ನಲ್ಲಿ ಮಡಚಬಹುದಾದ ಭಾಗಗಳಿವೆ. ಈ ಭಾಗಗಳನ್ನು ಬಿಚ್ಚಿ ಜೋಡಿಸಿದರೆ 1200 ಚದರ್‌ ಅಡಿಯ ವಿಸ್ತಾರದ ‘ಮದುವೆ ಮನೆ’ ಸಿದ್ಧವಾಗುತ್ತದೆ. ಬೇಕಾದಲ್ಲಿ ಕೊಂಡೊಯ್ಯಬಹುದಾದ ಈ ಮೊಬೈಲ್‌ ಮದುವೆ ಮನೆ, ಸುಮಾರು 200 ಕುರ್ಚಿಗಳ ಸಾಮರ್ಥ್ಯವನ್ನು ಹೊಂದಿದೆ. ಮಡಚಬಹುದಾದ ವಿನ್ಯಾಸವುಳ್ಳ ಇದರಲ್ಲಿ 2 ಎ.ಸಿ. ಕೂಡಾ ಜೋಡಿಸಲಾಗಿದೆ. ವಧು-ವರರಿಗೆ ಮದುವೆಗೆ ತಯಾರಾಗಲು ಪ್ರತ್ಯೇಕ ಕೋಣೆಗಳಿವೆ. ಮದುವೆ ಅಥವಾ ಸಮಾರಂಭಕ್ಕೆ ಕಲ್ಯಾಣ ಮಂಟಪ ಸಿಗದವರು ಇದನ್ನು ಬಳಸಿ ಸಮಾರಂಭ ಮಾಡಿಕೊಳ್ಳಬಹುದಾಗಿದೆ.

click me!