ಯಾವ ರಾಜ್ಯಕ್ಕೆ ಹೋದರೂ ಒಂದೇ ವಾಹನ ನೋಂದಣಿ: ‘ಕೆಎ’ ಇದ್ದಂತೆ ಭಾರತಕ್ಕೆ ‘ಬಿಎಚ್‌’ ಸೀರೀಸ್‌!

By Suvarna NewsFirst Published Aug 29, 2021, 7:57 AM IST
Highlights

* ಕರ್ನಾಟಕಕ್ಕೆ ‘ಕೆಎ’ ಇದ್ದಂತೆ ಭಾರತಕ್ಕೆ ‘ಬಿಎಚ್‌’ ಸೀರೀಸ್‌

* ಯಾವ ರಾಜ್ಯಕ್ಕೆ ಹೋದರೂ ಒಂದೇ ವಾಹನ ನೋಂದಣಿ!

* ಸೆ.15ಕ್ಕೆ ಶುರು, ಆಗಾಗ್ಗೆ ವರ್ಗ ಆಗುವವರಿಗೆ ಅನುಕೂಲ

ನವದೆಹಲಿ(ಆ.29): ಖಾಸಗಿ ವಾಹನ ಹೊಂದಿರುವವರು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಾಸ್ತವ್ಯ ಬದಲಿಸಿದರೆ ವಾಹನ ಮರು ನೋಂದಣಿ ಮಾಡಿಸುವ ತಲೆನೋವು ಇನ್ನಿಲ್ಲ. ಇಡೀ ದೇಶಕ್ಕೆ ಅನ್ವಯಿಸುವ ನೋಂದಣಿ ಸಂಖ್ಯೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ವರ್ಷದ ಸೆ.15ರಿಂದ ‘ಬಿಎಚ್‌’ ಸರಣಿಯ ಹೊಸ ರೀತಿಯ ನೋಂದಣಿ ಸಂಖ್ಯೆ ಜನರಿಗೆ ಲಭಿಸಲಿದೆ.

"

‘ಬಿಎಚ್‌’ ಅಂದರೆ ಭಾರತ್‌ ಸೀರೀಸ್‌. ಈ ನೋಂದಣಿ ಸಂಖ್ಯೆ ಹೊಂದಿರುವ ವಾಹನಗಳು ದೇಶದೊಳಗೆ ಯಾವುದೇ ರಾಜ್ಯಕ್ಕೆ ಹೋದರೂ ಮರು ನೋಂದಣಿ ಮಾಡಿಸಿಕೊಳ್ಳುವ ಅಗತ್ಯವಿಲ್ಲ. ಹಾಲಿ ಇರುವ ನಿಯಮಗಳ ಪ್ರಕಾರ, ಒಂದು ರಾಜ್ಯದಲ್ಲಿ ನೋಂದಣಿಯಾದ ವಾಹನವನ್ನು ಮತ್ತೊಂದು ರಾಜ್ಯದಲ್ಲಿ ಬಳಸುವುದಿದ್ದರೆ 12 ತಿಂಗಳೊಳಗೆ ಆ ರಾಜ್ಯದಲ್ಲಿ ತೆರಿಗೆ ಪಾವತಿಸಿ ಮರು ನೋಂದಣಿ ಮಾಡಿಸಿಕೊಳ್ಳಬೇಕು. ಅಲ್ಲದೆ, ಒಂದು ರಾಜ್ಯ​ದಿಂದ ಇನ್ನೊಂದು ರಾಜ್ಯಕ್ಕೆ ಸ್ಥಳಾಂತ​ರ​ವಾ​ದಾಗ, ಹೊಸ​ದಾಗಿ ರಸ್ತೆ ತೆರಿಗೆ ಕಟ್ಟ​ಬೇಕು ಹಾಗೂ ಈ ಹಿಂದಿದ್ದ ರಾಜ್ಯ​ದಲ್ಲಿ ಕಟ್ಟಿದ್ದ ತೆರಿಗೆ ವಾಪಸು ಪಡೆ​ಯ​ಬೇಕು. ಇದು ಕಠಿಣ ಪ್ರಕ್ರಿಯೆ ಆಗಿತ್ತು. ಆದರೆ ಇನ್ನು ಬಿಎಚ್‌ ಸರಣಿಯಲ್ಲಿ ನೋಂದಣಿ ಮಾಡಿಸಿಕೊಂಡರೆ ಮರು ನೋಂದ​ಣಿ ಸಮಸ್ಯೆ ಇರುವುದಿಲ್ಲ.

ಈ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಆದೇಶ ಹೊರಡಿಸಿದ್ದು, 2021ರ ಸೆ.15ರಿಂದ ಭಾರತ್‌ ಸೀರೀಸ್‌ ಅಡಿ ವಾಹನ ನೋಂದಣಿ ಮಾಡಿಕೊಳ್ಳುವುದಾಗಿ ಹೇಳಿದೆ.

ತೆರಿಗೆ ಹಣ ಹೇಗೆ ಪಾವತಿ?:

ಭಾರತ್‌ ಸೀರೀಸ್‌ ಅಡಿ ನೋಂದಣಿ ಸಂಖ್ಯೆ ಖಾಸಗಿ ಬಳಕೆಯ ವಾಹನಗಳಿಗಷ್ಟೇ ಸಿಗಲಿದೆ. ಈ ಸಂಖ್ಯೆ ಪಡೆಯಲು 10 ಲಕ್ಷ ರು.ವರೆಗಿನ ಬೆಲೆಯ ವಾಹನಕ್ಕೆ ಶೇ.8, 10ರಿಂದ 20 ಲಕ್ಷ ರು. ವಾಹನಕ್ಕೆ ಶೇ.10 ಹಾಗೂ 20 ಲಕ್ಷ ರು.ಗಿಂತ ಹೆಚ್ಚಿನ ಬೆಲೆಯ ವಾಹನಕ್ಕೆ ಶೇ.12ರಷ್ಟುತೆರಿಗೆ ಪಾವತಿಸಬೇಕು. ಎಲೆಕ್ಟ್ರಿಕ್‌ ವಾಹನಕ್ಕೆ ಶೇ.2ರಷ್ಟುಕಡಿಮೆ ತೆರಿಗೆ ಮತ್ತು ಡೀಸೆಲ್‌ ವಾಹನಕ್ಕೆ ಶೇ.2ರಷ್ಟುಹೆಚ್ಚು ತೆರಿಗೆ ಪಾವತಿಸಬೇಕು.

ಕಾರು ಮಾಲೀ​ಕ​ರಿಗೆ ‘ಬಿ​ಎ​ಚ್‌’ ಸರ​ಣಿ​ಯಲ್ಲಿ ಎರ​ಡು ವರ್ಷದ ಅವ​ಧಿಗೆ ಅಥವಾ ನಾಲ್ಕು/ಆರು/ಎಂಟು ವರ್ಷ... ಹೀಗೆ ‘ಮ​ಲ್ಟಿ​ಪಲ್‌ ಟು’ ಮಾದ​ರಿ​ಯ​ಲ್ಲಿ ರಸ್ತೆ ತೆರಿಗೆ ಪಾವ​ತಿ​ಸಲು ಅವ​ಕಾ​ಶ​ವಿ​ರ​ಲಿ​ದೆ. ಇಡೀ ಪ್ರಕ್ರಿಯೆ ಆನ್‌​ಲೈ​ನ್‌​ನಲ್ಲಿ ನಡೆ​ಯ​ಲಿ​ದೆ.

ಯಾರಿಗೆ ಈ ನಂಬರ್‌ ಲಭ್ಯ?

ರಾಜ್ಯ, ಕೇಂದ್ರ ಸರ್ಕಾರಿ ನೌಕರರಿಗೆ, ಸೇನಾಪಡೆಗಳ ಸಿಬ್ಬಂದಿಗೆ, ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ನೌಕರರಿಗೆ, ನಾಲ್ಕಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಶಾಖೆಗಳನ್ನು ಹೊಂದಿರುವ ಖಾಸಗಿ ಕಂಪನಿಗಳ ನೌಕರರಿಗೆ ಮಾತ್ರ ಬಿಎಚ್‌ ಸೀರೀಸ್‌ನಡಿ ತಮ್ಮ ಖಾಸಗಿ ವಾಹನವನ್ನು ನೋಂದಣಿ ಮಾಡಿಸಿಕೊಳ್ಳುವ ಅವಕಾಶ ಸಿಗಲಿದೆ.

click me!