ಸ್ಕ್ರಾಪೇಜ್ ನೀತಿಗೆ ಚಾಲನೆ ಸಿಕ್ಕ ಬೆನ್ನಲ್ಲೇ ವಾಹನ ಗುಜುರಿ ಘಟಕ ಸ್ಥಾಪನೆಗೆ ಸರ್ಕಾರದ ಜೊತೆ ಟಾಟಾ ಒಪ್ಪಂದ!

By Suvarna News  |  First Published Aug 13, 2021, 10:08 PM IST
  • ವಾಹನ ಸ್ಕ್ರಾಪ್ ಪಾಲಿಸಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
  • ಇದರ ಬೆನ್ನಲ್ಲೇ ಸರ್ಕಾರದ ಜೊತೆ ಟಾಟಾ ಮೋಟಾರ್ಸ್ ಒಪ್ಪಂದ
  • ಅತೀ ದೊಡ್ಡ ವಾಹನ ಸ್ಕ್ರಾಪೇಜ್ ಘಟಕ ಸ್ಥಾಪನೆ

ಅಹಮ್ಮದಾಬಾದ್(ಆ.13) :  ಪ್ರಧಾನಿ ನರೇಂದ್ರ ಮೋದಿ ವಾಹನ ಸ್ಕ್ರಾಪೇಜ್ ನೀತಿಗೆ ಚಾಲನೆ ನೀಡಿದ್ದಾರೆ. ಈ ಮೂಲಕ ದೇಶದಲ್ಲಿನ ಹಳೆ ವಾಹನವನ್ನು ಸ್ವಯಂಪ್ರೇರಿತವಾಗಿ ಗುಜರಿಗೆ ಹಾಕುವ ನೀತಿ ಜಾರಿಗೆ ಬಂದಿದೆ. ಇದರ ಬೆನ್ನಲ್ಲೇ ಇದೀಗ ಟಾಟಾ ಮೋಟಾರ್ಸ್ ಮಹತ್ವದ ಹೆಜ್ಜೆ ಇಟ್ಟಿದೆ. ಹಳೇ ಪ್ಯಾಸೆಂಜರ್ ಮತ್ತು ವಾಣಿಜ್ಯ ವಾಹನಗಳಿಗಾಗಿ ಅಹಮ್ಮದಾಬಾದ್‌ನಲ್ಲಿ ವೆಹಿಕಲ್ ಸ್ಕ್ರಾಪ್ ಘಟಕ ಸ್ಥಾಪಿಸಲು ಗುಜರಾತ್ ಸರ್ಕಾರದ ಜೊತೆ ಟಾಟಾ ಮೋಟಾರ್ಸ್ ಒಪ್ಪಂದ ಮಾಡಿಕೊಂಡಿದೆ. 

ಟಾಟಾ ಮೋಟಾರ್ಸ್‌ನ ಅತೀ ದೊಡ್ಡ ಸ್ಕ್ರಾಪ್ ಘಟಕ ಅಹಮ್ಮದಾಬಾದ್‌ನಲ್ಲಿ ತಲೆಎತ್ತಲಿದೆ. ಈ ಘಟಕದಲ್ಲಿ ವರ್ಷಕ್ಕೆ 36,000 ವಾಹನಗಳನ್ನು ಸ್ಕ್ರಾಪ್ ಮಾಡಿ ಮರಬಳಕೆ ಮಾಡುವ  ಸಾಮರ್ಥ್ಯ ಹೊಂದಿದೆ.  ಕೇಂದ್ರ  ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ  ನಿತಿನ್ ಗಡ್ಕರಿ,  ಗುಜರಾತ್‌ನ ಮುಖ್ಯಮಂತ್ರಿ  ವಿಜಯ್ ರೂಪಾನಿ  ಸಮ್ಮುಖದಲ್ಲಿ ಟಾಟಾ ಮೋಟಾರ್ಸ್ ಒಪ್ಪಂದಕ್ಕೆ  ಸಹಿ ಹಾಕಲಾಯಿತು.

Tap to resize

Latest Videos

undefined

ವಾಹನ ಸ್ಕ್ರಾಪ್ ಘಟಕ ಸ್ಥಾನಪನೆಗೆ ಬಂದರು ಹಾಗು ಸಾರಿಗೆ ಇಲಾಖೆ, ಗುಜರಾತ್ ಸರ್ಕಾರದ ನಿಯಮ  ಹಾಗು ನಿಬಂಧನೆ, ಮತ್ತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಬಿಡುಗಡೆ ಮಾಡಿರುವ ಕರಡು ವಾಹನ ಸ್ಕ್ರಾಪ್ ನೀತಿಗಳಿಗೆ ಅನುಗುಣವಾಗಿ ಇರಲಿದೆ. ಇದರಿಂದ ಉದ್ಯೋಗವೂ ಸೃಷ್ಟಿಯಾಗುತ್ತಿದೆ. ಇಷ್ಟೇ ಅಲ್ಲ ಈ ಘಟಕದಿಂದ ಸರ್ಕಾರದ ಮೇಲಿರುವ ಸ್ಕ್ರಾಪ್ ಘಟಕದ ಬಹದೊಡ್ಡ ಸವಾಲು ನಿವಾರಣೆಯಾಗಲಿದೆ.  

ಅಹಮದಾಬಾದಿನಲ್ಲಿ ವಾಹನ ಗುಜುರಿ ಘಟಕ ಸ್ಥಾಪನೆಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಿದೆ. ವಾಹನ ಸ್ಕ್ರಾಪ್‌ ಘಟಕದಿಂದ ಪರಿಸರಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಲಿದೆ. ಭಾರತದಲ್ಲಿ ಸುರಕ್ಷಿತವಾದ ಹಾಗು ಹೊಸ  ವಾಹನಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇದು ಸರಿಯಾದ ಹೆಜ್ಜೆಯಾಗಿದೆ ಎಂದು ಟಾಟಾ ಮೋಟರ್ಸ್ ವಾಣಿಜ್ಯ ವಾಹನಗಳ ವ್ಯಾಪಾರ ಘಟಕದ ಕಾರ್ಯಕಾರಿ  ನಿರ್ದೇಶಕ ಗಿರೀಶ್ ವಾಘ್ ಹೇಳಿದ್ದಾರೆ.

click me!