ಕಾರಿನ ರಿಜಿಸ್ಟ್ರೇಶನ್ ನಂಬರ್ ಗಾಗಿ ಬರೋಬ್ಬರಿ 132 ಕೋಟಿ ರೂಪಾಯಿ ನೀಡಿದ ಉದ್ಯಮಿ!

By Suvarna News  |  First Published Jun 26, 2022, 6:18 PM IST
  • ಫ್ಯಾನ್ಸಿ, ಅದೃಷ್ಠದ ನಂಬರ್‌ಗೆ ಹೆಚ್ಚುವರಿ ಹಣ ನೀಡಬೇಕು
  • F1 ನಂಬರ್‌ಗಾಗಿ 132 ಕೋಟಿ ರೂಪಾಯಿ
  • ಇದು ವಿಶ್ವದ ಅತೀ ದುಬಾರಿ ರಿಜಿಸ್ಟ್ರೇಶನ್ ನಂಬರ್

ಲಂಡನ್(ಜೂ.26): ವಾಹನ ಖರೀದಿಸಿದ ಬಳಿಕ ರಿಜಿಸ್ಟ್ರೇಶನ್ ನಂಬರ್ ಬಗ್ಗೆ ಹಲವರು ತಲೆಕೆಡಿಸಿಕೊಳ್ಳುತ್ತಾರೆ. 30 ಲಕ್ಷ, 1 ಕೋಟಿ, 35 ಕೋಟಿ ಹೀಗೆ ಕೇವಲ ವಾಹನದ ರಿಜಿಸ್ಟ್ರೇಶನ್ ನಂಬರ್‌ಗಾಗಿ ಖರ್ಚು ಮಾಡಿದ ಹಲವು ಉದಾಹರಣೆಗಳಿವೆ. ಆದರೆ ಇಲ್ಲೊಬ್ಬ ತನ್ನ ಕಾರಿನ ರಿಜಿಸ್ಟ್ರೇಶನ್ ನಂಬರ್‌ಗಾಗಿ ಬರೋಬ್ಬರಿ 132 ಕೋಟಿ ರೂಪಾಯಿ ನೀಡಿದ್ದಾನೆ.

ಯುಕೆ ನಿವಾಸಿ ಹಾಗೂ ಉದ್ಯಮಿ ಅಫ್ಜಲ್ ಖಾನ್ 132 ಕೋಟಿ ರೂಪಾಯಿ ನೀಡಿ ರಿಜಿಸ್ಟ್ರೇಶನ್ ನಂಬರ್ ಪಡೆದಿದ್ದಾರೆ. ಖಾನ್ ಡಿಸೈನ್ಸ್ ಅನ್ನೋ ಅತೀ ದೊಡ್ಡ ಕಂಪನಿ ನಡೆಸುತ್ತಿರುವ ಅಫ್ಜಲ್ ಖಾನ್, ತನ್ನ ಬುಗಾಟಿ ವೆಯ್ರಾನ್ ಕಾರಿಗೆ F1 ನಂಬರ್ ಬೇಕು ಎಂದು ನಿರ್ಧರಿಸಿದ್ದಾರೆ. ಇದಕ್ಕಾಗಿ ಹರಾಜಿನಲ್ಲಿ ಪಾಲ್ಗೊಂಡಿದ್ದಾರೆ. ಈ ನಂಬರ್ 132 ಕೋಟಿ ರೂಪಾಯಿಗೆ ಹರಾಜಾಗಿದೆ.

Tap to resize

Latest Videos

ನಂಬರ್ ಪ್ಲೇಟ್ ಮೇಲೆ ನಿಗಮ, ಮಂಡಳಿ, ಅಧ್ಯಕ್ಷ ಯಾವುದೂ ಇರಬಾರದು, ಸರ್ಕಾರದ ಸುತ್ತೋಲೆ!

ಬುಗಾಟಿ ವೆಯ್ರಾನ್ ಕಾರಿನ ಬೆಲೆ ಸರಿ ಸುಮಾರು 20 ಕೋಟಿ ರೂಪಾಯಿ. ಆದರೆ ಈ ಕಾರಿನ ರಿಜಿಸ್ಟ್ರೇಶನ್ ನಂಬರ್ ಬೆಲೆ 132 ಕೋಟಿ ರೂಪಾಯಿ. ಈ ನಂಬರ್‌ಗೆ ಅಷ್ಟು ಬೇಡಿಕೆ ಇದೆ. ಕಾರಣ ಇದು ವಿಶ್ವದ ಅತೀ ಜನಪ್ರಿಯ ಫಾರ್ಮುಲಾ 1 ರೇಸಿಂಗ್‌ನ ಶಾರ್ಟ್ ಫಾರ್ಮ್ ಆಗಿದೆ. ಇಷ್ಟೇ ಅಲ್ಲ ಇದು ವಿಶ್ವದ ಅತೀ ಚಿಕ್ಕ ರಿಜಿಸ್ಟ್ರೇಶನ್ ನಂಬರ್ ಆಗಿದೆ.

ಎಫ್1 ಎಂದರೇ ತಕ್ಷಣವೆ ಫಾರ್ಮುಲಾ 1 ನೆನಪಾಗುತ್ತದೆ. ಇಷ್ಟೇ ಅಲ್ಲ ಈ ನಂಬರ್ ಎಸೆಕ್ಸ್ ಸಿಟಿ ಕೌನ್ಸಿಲ್ ಬಳಿ ಇತ್ತು. 1904 ರಿಂದ 2008ರ ವರೆಗೆ ಈ ನಂಬರ್‌ನ್ನು ಎಸೆಕ್ಸ್ ಸಿಟಿ ಕೌನ್ಸಿಲ್ ವಾಹನದಲ್ಲಿ ಬಳಕೆಯಾಗಿತ್ತು. ಈ ನಂಬರ್‌ಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ 2008ರಲ್ಲಿ ಈ ರಿಜಿಸ್ಟ್ರೇಶನ್ ನಂಬರ್ ಹರಾಜಿಗೆ ಇಡಲಾಗಿತ್ತು. ಈ ವೇಳೆ ಖಾಸಗಿ ಕಂಪನಿ ಈ ನಂಬರ್ ಖರೀದಿಸಿತ್ತು. ಇನ್ನು ಕೆಲ ಬಾರಿ ಈ ನಂಬರ್ ಮತ್ತೆ ಹರಾಜಿಗೆ ಬಂದಿದೆ. ಇದೀಗ 2022ರಲ್ಲಿ ಮತ್ತೆ ಹರಾಜಿಗೆ ಬಂದ ಈ ನಂಬರನ್ನು ಅಫ್ಜಲ್ ಖರೀದಿಸಿದ್ದಾರೆ.ಈ ಕಾರಿನ ನಂಬರ್ ಮುಂದೆ ಇದೀಗ ಬುಗಾಟಿ ವೆಯ್ರಾನ್ ಕಾರು ಕಡಿಮೆ ಬೆಲೆಯ ಕಾರಾಗಿ ಕಾಣುತ್ತಿದೆ.

ಬರೀ ನಂಬರ್‌ ಪ್ಲೇಟ್‌ಗೆ 17 ಲಕ್ಷ ಕೊಟ್ಟ ಜೂ.NTR, ಕಾರ್ ಬೆಲೆ ಎಷ್ಟು ?

2008ರಲ್ಲಿ ಮೊದಲ ಬಾರಿಗೆ ಎಫ್1 ನಂಬರ್ ಹರಾಜಿನಲ್ಲಿ ಬಿಕರಿಯಾಗಿತ್ತು. ಈ ವೇಳೆ ನಂಬರ್‌ 4 ಕೋಟಿ ರೂಪಾಯಿಗೆ ಹರಾಜಾಗಿತ್ತು. ಈ ರೀತಿ ದುಬಾರಿ ಮೊತ್ತಕ್ಕೆ ವಾಹನ ರಿಜಿಸ್ಟ್ರೇಶನ್ ನಂಬರ್ ಹರಾಜಾಗುವುದು ಇದೇ ಮೊದಲ್ಲ. ಅಬುಧಾಬಿಯಲ್ಲಿನ ಭಾರತೀಯ ಮೂಲದ ಉದ್ಯಮಿ D5 ರಿಜಿಸ್ಟ್ರೇಶನ್ ನಂಬರ್‌ನ್ನು 67 ಕೋಟಿ ರೂಪಾಯಿ ನೀಡಿ ಹರಾಜಿನಲ್ಲಿ ಖರೀದಿಸಿದ್ದರು. ಮತ್ತೊರ್ವ ಉದ್ಯಮಿ 1 ನಂಬರನ್ನು 66 ಕೋಟಿಗೆ ಖರೀದಿಸಿದ್ದರು.

ಭಾರತದಲ್ಲೂ ದುಬಾರಿ ರಿಜಿಸ್ಟ್ರೇಶನ್ ನಂಬರ್ ಖರೀದಿಸಿದ ಉದಾಹರಣೆಗಳಿವೆ. ಹಲವು ಫ್ಯಾನ್ಸಿ ನಂಬರ್, ತಮ್ಮ ಜನ್ಮದಿನಾಂಕ ಅಥವಾ ಅದೃಷ್ಠದ ಸಂಖ್ಯೆ ಸೇರಿದಂತೆ ಹಲವು ಕಾರಣಗಳಿಂದ ತಮ್ಮಿಷ್ಟದ ನಂಬರನ್ನು ಖರೀದಿಸುತ್ತಾರೆ. ಅತೀ ಹೆಚ್ಚಿನ ಬೇಡಿಕೆ ಇರುವ ನಂಬರನ್ನು ಹರಾಜಿಗಿ ಇಡಲಾಗುತ್ತದೆ
 

click me!