ಕಾರ್ ಕ್ಲೀನ್ ಮಾಡೋ ನೆಪದಲ್ಲಿ ಫಾಸ್ಟ್ಯಾಗ್‌ನಿಂದ ಹಣ ಎಗರಿಸಿದ ಬಾಲಕ! ಇದು ಸಾಧ್ಯವೇ ಇಲ್ಲ ಎಂದ FASTag!

By Santosh Naik  |  First Published Jun 25, 2022, 5:05 PM IST

ಟೋಲ್‌ಗಳಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಲ್ಲಾ ವಾಹನಗಳಿಗೆ ಫಾಸ್ಟ್ಯಾಗ್ಅನ್ನು ಕಡ್ಡಾಯ ಮಾಡಿತ್ತು. ಆದರೆ, ಕೆಲ ದಿನಗಳ ಹಿಂದೆ ವೈರಲ್ ಆದ ವಿಡಿಯೋದಲ್ಲಿ ಟೋಲ್ ಬಳಿ ಕಾರ್ ಕ್ಲೀನ್ ಮಾಡುವ ನೆಪದಲ್ಲಿ ಬರುವ ಹುಡುಗ ತನ್ನ ಕೈಯಲ್ಲಿರುವ ಸ್ಮಾರ್ಟ್ ವಾಚ್‌ನಿಂದ ಫಾಸ್ಟ್ಯಾಗ್‌ನಿಂದ ಹಣ ವಿತ್‌ ಡ್ರಾ ಮಾಡುತ್ತಾನೆ. ಆದರೆ, ಇದು ಫೇಕ್ ವಿಡಿಯೋ ಎಂದು ಫಾಸ್ಟ್ಯಾಗ್ ಹೇಳಿದೆ.
 


ನವದೆಹಲಿ (ಜೂನ್ 25): ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಕಾರಿನ ಗಾಜನ್ನು ಬಟ್ಟೆಯಿಂದ ಸ್ವಚ್ಛಗೊಳಿಸುವಾಗ, ಬಾಲಕನೊಬ್ಬ ಸ್ಮಾರ್ಟ್ ವಾಚ್‌ನಿಂದ ಫಾಸ್ಟ್‌ಟ್ಯಾಗ್‌ನ ಸ್ಕ್ಯಾನ್ ಕೋಡ್ ಅನ್ನು ಸ್ಕ್ಯಾನ್ ಮಾಡುತ್ತಾನೆ. ಆ ನಂತರ ಬಾಲಕ ಅಲ್ಲಿಂದ ಓಡಿಹೋಗುತ್ತಾನೆ. ವೀಡಿಯೊದ ಕೊನೆಯಲ್ಲಿ, ಕಾರು ಕ್ಲೀನ್ ಮಾಡುವ ನೆಪದಲ್ಲಿ ಬಾಲಕ ಮೋಸ ಮಾಡಿದ್ದಾನೆ ಎಂದು ಕಾರು ಚಾಲಕ ಹೇಳುತ್ತಾನೆ. ಫಾಸ್ಟ್‌ಟ್ಯಾಗ್‌ನಲ್ಲಿ ಹಾಕಿದ್ದ ಹಣವನ್ನು ತನ್ನ ಸ್ಮಾರ್ಟ್ ವಾಚ್‌ನಿಂದ ಸ್ಕ್ಯಾನ್ ಮಾಡಿ ಬಾಲಕ ವಿಥ್‌ಡ್ರಾ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದ್ದಾನೆ.

ಇದನ್ನು ಐಎಎಸ್ ಅಧಿಕಾರಿ ಅವ್ನೀಶ್ ಶರಣ್ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡು ಇದು ನಿಜವೇ ಎಂದು ಪ್ರಶ್ನೆ ಮಾಡಿದ್ದರು. ಇದರ ಬೆನ್ನಲ್ಲಿಯೇ ಫಾಸ್ಟ್ಯಾಗ್‌ ಸ್ಪಷ್ಟನೆಯನ್ನು ನೀಡಿದ್ದು, ಇದು ಫೇಕ್ ವಿಡಿಯೋ ಹಾಗೂ ಫೇಕ್ ನ್ಯೂಸ್ ಎಂದು ಹೇಳಿದ್ದಲ್ಲದೆ, ಈ ರೀತಿಯಲ್ಲಿ ಸ್ಕ್ಯಾನ್ ಮಾಡಿದರೆ, ಹಣ ಕಡಿತವಾಗುವುದೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಇದರ ಕುರಿತಂತೆ ಫಾಸ್ಟ್ಯಾಗ್‌ನ ಅಧಿಕೃತ ಸೋಷಿಯಲ್ ಮೀಡಿಯಾ ಅಕೌಂಟ್‌ ಸ್ಪಷ್ಟೀಕರಣವನ್ನು ನೀಡಿದೆ.

ಫಾಸ್ಟ್‌ಟ್ಯಾಗ್ ಬರೆದಿದ್ದು - ರಾಷ್ಟ್ರೀಯ ಎಲೆಕ್ಟ್ರಾನಿಕ್ ಟೋಲ್ ವಸೂಲಿ (NETC ) ಫಾಸ್ಟ್‌ಟ್ಯಾಗ್ ಅನ್ನು ನೋಂದಾಯಿತ ವ್ಯಾಪಾರಿಗಳು (ಟೋಲ್ ಮತ್ತು ಪಾರ್ಕಿಂಗ್ ಪ್ಲಾಜಾ ಆಪರೇಟರ್‌ಗಳು) ಮಾತ್ರ ವಹಿವಾಟು ಮಾಡಬಹುದು, ಅವರು ತಮ್ಮ ಭೌಗೋಳಿಕ ಸ್ಥಳದಿಂದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾದಿಂದ (ಎನ್‌ಪಿಸಿಐ) ಫಾಸ್ಟ್‌ಟ್ಯಾಗ್ ವ್ಯವಸ್ಥೆಯಲ್ಲಿ ಸೇರಿಸಿಕೊಳ್ಳಲಾಗಿರುತ್ತದೆ. ಯಾವುದೇ ಅನಧಿಕೃತ ಸಾಧನವು ಎನ್‌ಇಟಿಸಿ ಫಾಸ್ಟ್ಯಾಗ್‌ನಲ್ಲಿ ವಹಿವಾಟು ನಡೆಸಲು ಸಾಧ್ಯವಿಲ್ಲ. ಫಾಸ್ಟ್ಯಾಗ್ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಪೇಟಿಎಂ ಫಾಸ್ಟ್ಯಾಗ್‌ನಿಂದ ಇಂಥ ವಿತ್‌ಡ್ರಾ ನಡೆದಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು. ಪೇಟಿಎಂ ಕೂಡ ಈ ವಿಡಿಯೋ ನಕಲಿ, ಹೀಗೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.



This is anew scam being reported these days related to FastTag scam. Is this really true and should citizens made aware of this kind. Just sharing for your reference. pic.twitter.com/RIVg4Nw95u

— Raghuveer Rajanala (@rraghuveer)


ಈ ವಿಡಿಯೋ ಫೇಕ್ ಎಂದು ಪೇಟಿಎಂ ಸಂಸ್ಥೆ ಹೇಳಿದೆ. ಪೇಟಿಎಂ ಫಾಸ್ಟ್ಯಾಗ್ ಬಗ್ಗೆ ಸುಲ್ಲು ಸುದ್ದಿಗಳನ್ನು ಬಿತ್ತರಿಸಲಾಗುತ್ತಿದೆ. ಎನ್ಇಟಿಸಿ ನಿಯಮಾವಳಿಗಳ ಪ್ರಕಾರ, ನೋಂದಾಯಿತ ಮರ್ಚೆಂಟ್‌ಗಳ ಬಳಿ ಮಾತ್ರವೇ ಫಾಸ್ಟ್ಯಾಗ್ ಪಾವತಿ ಮಾಡಬಹುದು. ಇದನ್ನು ಹಲವಾರು ಬಾರಿ ಪರೀಕ್ಷೆಯನ್ನೂ ಮಾಡಲಾಗಿದೆ. ಪೇಟಿಎಂ ಫಾಸ್ಟ್ಯಾಗ್ ಸಂಪೂರ್ಣ ಸುರಕ್ಷಿತ. ಫಾಸ್ಟ್ಯಾಗ್ ಅನ್ನು ಅಧಿಕೃತ ಮರ್ಚೆಂಟ್‌ಗಳು ತಮ್ಮ ಭೌಗೋಳಿಕ ಸ್ಥಳದಿಂದ ಸ್ಕ್ಯಾನ್ ಮಾಡಿದಲ್ಲಿ ಮಾತ್ರವೇ ಪಾವತಿ ಆಗುತ್ತದೆ. ಅದರ ಹೊರತಾಗಿ ಉಳಿದೆಲ್ಲ ಕಡೆ ಸ್ಕ್ಯಾನ್ ಮಾಡಿದರೆ ಹಣ ಪಾವತಿಯಾಗುವುದಿಲ್ಲ ಎಂದಿದೆ.

Please note that there are baseless and false videos circulating on Social media. Do understand the below points:

1. No transactions can be executed through open internet connectivity. pic.twitter.com/AKqvcpVE1z

— FASTag NETC (@FASTag_NETC)

Tap to resize

Latest Videos


ಅನೇಕ ಬಳಕೆದಾರರು ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊವನ್ನು ಹಂಚಿಕೊಳ್ಳುತ್ತಾ, ಐಎಎಸ್ ಅವ್ನೀಶ್ ಶರಣ್ ಇದು ನಿಜವೇ? ಎಂದು ಬರೆದಿದ್ದರು. ಈ ವೀಡಿಯೊ ನಕಲಿ ಮತ್ತು ಸಂಪೂರ್ಣವಾಗಿ ಸ್ಕ್ರಿಪ್ಟ್ ಆಗಿದೆ ಎಂದು ಜನರು ಹೇಳಿದ್ದಾರೆ. ಇದಕ್ಕಾಗಿ ಐಎಎಸ್ ಅಧಿಕಾರಿ ಧನ್ಯವಾದವನ್ನೂ ಅರ್ಪಿಸಿದ್ದು ವಿಡಿಯೋವನ್ನು ತಮ್ಮ ಖಾತೆಯಿಂದ ಡಿಲೀಟ್‌ ಮಾಡಿದ್ದಾರೆ. ಫಾಸ್ಟ್ಯಾಗ್ ಹಗರಣದ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊ ಫೇಕ್ ಎನ್ನುವುದು ನಿಜ.

ಯೂಟ್ಯೂಬ್‌ ನಂಬ ಬೇಡಿ, ನಾನು ಈಗಲೂ ಇರುವುದು ಬಾಡಿಗೆ ಮನೆಯಲ್ಲಿ ಎಂದ ಕೆಜಿಎಫ್ ನಟಿ ಶ್ರೀನಿಧಿ

ನೈತಿಕ ಹ್ಯಾಕರ್ ಮತ್ತು ಸೈಬರ್ ಭದ್ರತಾ ತಜ್ಞ ಸನ್ನಿ ನೆಹ್ರಾ ಕೂಡ ಈ ವೀಡಿಯೊವನ್ನು ನಕಲಿ ಎಂದು ಹೇಳಿದ್ದಾರೆ. 'ಫಾಸ್ಟ್ಯಾಗ್ ಪಾವತಿಗಳನ್ನು ಫಾಸ್ಟ್‌ಟ್ಯಾಗ್ ಅನುಮೋದಿತ ವ್ಯಾಪಾರಿಗಳಿಗೆ ಮಾತ್ರ ಮಾಡಬಹುದಾಗಿದೆ. ಎನ್‌ಎಚ್ಎಐನಿಂದ ನೀಡಲಾದ ಗುರುತಿನ ಪರವಾನಿಗಿ ಪಡೆದ ಟೋಲ್ ಆಪರೇಟರ್‌ಗಳು ಮಾತ್ರವೇ ಹಣ ಪಾವತಿ ಪಡೆಯಬಹುದು' ಎಂದು ಅವರು ಹೇಳಿದರು.

Congress Gandhidoots : ಫೇಕ್ ನ್ಯೂಸ್ ಹಾಗೂ ಫ್ಯಾಕ್ಟ್ ಚೆಕ್ ಮಾಡ್ತಾರೆ "ಗಾಂಧಿದೂತರು"!

ಹಲವಾರು ಇತರ ತಜ್ಞರು ಮತ್ತು ವ್ಯಾಪಾರ ಮುಖಂಡರು ವೀಡಿಯೊದ ಸತ್ಯಾಸತ್ಯತೆಯ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ವೇದಾಂತ್ ಬಿರ್ಲಾ ಅವರು "ಹೈವೇ ಸ್ಕ್ಯಾನರ್ RF ನ ವಿಭಿನ್ನ ಬ್ಯಾಂಡ್‌ವಿಡ್ತ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರಣ ಈ ರೀತಿ ಹಣವನ್ನು ಕದಿಯಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

click me!