ಬೆಂಗಳೂರಲ್ಲಿ ಭಾರತೀಯ ರಾಷ್ಟ್ರೀಯ ರ‍್ಯಾಲಿ, ಕರ್ನಾಟಕ ಸೇರಿ 5 ರಾಜ್ಯದ 120 ಬೈಕರ್ಸ್ ಭಾಗಿ!

By Suvarna News  |  First Published Jul 1, 2023, 8:29 PM IST

ಬೆಂಗಳೂರಲ್ಲಿ  ಭಾರತೀಯ ರಾಷ್ಟ್ರೀಯ ರ‍್ಯಾಲಿ ಸ್ಪ್ರಿಂಟ್ ಆಯೋಜಿಸಲಾಗಿದೆ. ಭಾರತದ ಅಗ್ರ ಬೈಕರ್‌ಗಳು ಸೇರಿ ಒಟ್ಟು ದಾಖಲೆಯ 120 ಮಂದಿ ಭಾಗಿಯಾಗುತ್ತಿದ್ದಾರೆ.


ಬೆಂಗಳೂರು(ಜು.01): ಭಾರತೀಯ ರಾಷ್ಟ್ರೀಯ ರ್ಯಾಲಿ ಸ್ಪ್ರಿಂಟ್ ಚಾಂಪಿಯನ್‌ಶಿಪ್ ಜುಲೈ 2 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಭಾರತದ ಅಗ್ರ ಬೈಕರ್‌ಗಳು ಸೇರಿ ಒಟ್ಟು ದಾಖಲೆಯ 120 ಮಂದಿ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಮಹಾರಾಷ್ಟ್ರದ ಬೈಕರ್‌ಗಳು ಈ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ರಾಜೇಂದ್ರ ಆರ್., ಸ್ಯಾಮುಯಲ್ ಜೇಕಬ್ ಹಾಗೂ ಸಚಿನ್ ಡಿ., ಪ್ರಮುಖ ಆಕರ್ಷಣೆ ಎನಿಸಿದ್ದು ಮುಕ್ತ ವಿಭಾಗದಲ್ಲಿ 550 ಸಿಸಿ ಚಾಂಪಿಯನ್‌ಶಿಪ್‌ಗೆ ಸೆಣಸಲಿದ್ದಾರೆ. ಈ ಮೂವರು ರಾಷ್ಟ್ರೀಯ ಚಾಂಪಿಯನ್ನರಾಗಿದ್ದರು, ವಿವಿಧ ಪ್ರಶಸ್ತಿ, ರೇಸ್‌ಗಳನ್ನು ಜಯಿಸಿದ ಹಿರಿಮೆ ಹೊಂದಿದ್ದಾರೆ.

Latest Videos

undefined

 

ಕೋಟೆನಾಡಿನ ರೇಸ್‌ ಟ್ರ್ಯಾಕ್‌ ದೇಶದಲ್ಲಿಯೇ ಸೂಪರ್: ರೋಮಾಂಚಕರ ದಕ್ಷಿಣ ರೇಸ್‌ಗೆ ವಿದೇಶಿಗರೂ ಆಗಮನ

ರ‌್ಯಾಲಿ ಸ್ಪ್ರಿಂಟ್ ಎನ್ನುವುದು ರೇಸಿಂಗ್ ಹಾಗೂ ರ‌್ಯಾಲಿಯಿಂಗ್‌ನ ಹಿಬ್ರಿಡ್ ಮಾದರಿಯಾಗಿದ್ದರು, ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಈ ಮಾದರಿಯನ್ನು ರೂಪಿಸಲಾಗಿದೆ. ಇದೊಂದು ರೀತಿ ಟಿ20 ಕ್ರಿಕೆಟ್ ಪಂದ್ಯವಿದ್ದಂತೆ.ಆರಂಭಿಕ ದಕ್ಷಿಣ ವಲಯ ಸುತ್ತು ಬೆಂಗಳೂರಿನ ಸರ್ಜಾಪುರ ಬಳಿಕ ನಡೆಯಲಿದ್ದು, ಆ ಬಳಿಕ ಉತ್ತರ ವಲಯದ ಸುತ್ತು ಚಂಡೀಗಢ, ಪಶ್ಚಿಮ ವಲಯದ ಸುತ್ತು ಬರೋಡಾ, ಪೂರ್ವ ವಲಯದ ಸುತ್ತು ಗುವಾಹಟಿ ಹಾಗೂ ಗ್ರ್ಯಾಂಡ್ ಫಿನಾಲೆ ಗೋವಾದಲ್ಲಿ ನಡೆಯಲಿದೆ.

‘ರ‌್ಯಾಲಿ ಸ್ಪ್ರಿಂಟ್ ಒಂದು ರೋಚಕ ಮಾದರಿಯ ರೇಸ್ ಆಗಿದ್ದು, ಚಾಲಕರು ಬಹಳ ಇಷ್ಟಪಡಲಿದ್ದಾರೆ. ಪ್ರೇಕ್ಷಕರಿಗೂ ಅಪಾರ ಮನರಂಜನೆ ದೊರೆಯಲಿದೆ. ಈ ವರ್ಷ ಘಟಾನುಘಟಿ ಬೈಕರ್‌ಗಳು ಕಣದಲ್ಲಿದ್ದು, ಸ್ಪರ್ಧೆ ತೀವ್ರವಾಗಿರಲಿದೆ’ ಎಂದು ಚಾಂಪಿಯನ್‌ಶಿಪ್‌ನ ಆಯೋಜಕರು ಹಾಗೂ ಪ್ರಚಾರಕರು ಆಗಿರುವ ಮೋಟರ್‌ಸ್ಪೋರ್ಟ್ ಐಎನ್‌ಸಿಯ ಜೈ ದಾಸ್ ಮೆನನ್ ಹೇಳಿದ್ದಾರೆ.

10 ಕಿಲೋ ಮೀಟರ್‌ನ ಐಎನ್‌ಆರ್‌ಸಿಎ ಸ್ಪರ್ಧೆಯು ವಿವಿಧ ವಿಭಾಗಗಳನ್ನು ಹೊಂದಿದೆ. 131 ಸಿಸಿ ಯಿಂದ 165 ಸಿಸಿ, 166 ಸಿಸಿ ಯಿಂದ 260 ಸಿಸಿ, 261 ಸಿಸಿ ಯಿಂದ 400 ಸಿಸಿ ಹಾಗೂ ಅಂತಿಮವಾಗಿ 550 ಸಿಸಿ ವರೆಗಿನ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಇದಷ್ಟೇ ಅಲ್ಲದೇ ವಿವಿಧ ವಾಹನಗಳ ವಿಭಾಗಗಳಲ್ಲೂ ಪ್ರಶಸ್ತಿಗಳಿಗಾಗಿ ಪೈಪೋಟಿ ಏರ್ಪಡಲಿದೆ. ಸ್ಕೂಟರ್ ಕ್ಲಾಸ್, ಬುಲೆಟ್ ಕ್ಲಾಸ್ ಹಾಗೂ ಮಹಿಳಾ ವಿಭಾಗವೂ ಇದೆ. 6 ಮಹಿಳೆಯರು ಸ್ಪರ್ಧೆಗಿಳಿಯಲಿದ್ದಾರೆ.
 

click me!