ಹೊಸ ವರ್ಷದಿಂದ ಟಾಟಾ ವಾಣಿಜ್ಯ ವಾಹನ ಬೆಲೆ ಹೆಚ್ಚಳ!

By Suvarna NewsFirst Published Dec 22, 2020, 7:57 PM IST
Highlights

ಟಾಟಾ ಮೋಟಾರ್ಸ್  ತನ್ನ ವಾಣಿಜ್ಯ ವಾಹನ ಬೆಲೆ ಹೆಚ್ಚಿಸಿದೆ.  ಈ ಕುರಿತು ಟಾಟಾ ಮೋಟಾರ್ಸ್ ಅಧೀಕೃತ ಹೇಳಿಕೆ ಬಿಡುಗಡೆ ಮಾಡಿದೆ.
 

ಮುಂಬೈ(ಡಿ.22) : ಭಾರತದ ಪ್ರಮುಖ ವಾಹನ ತಯಾರಿಕೆ ಕಂಪನಿಯಾದ ಟಾಟಾ ಮೋಟರ್ಸ್, ಜನವರಿ 01, 2021 ರಿಂದ ಜಾರಿಗೆ ಬರುವಂತೆ ತನ್ನೆಲ್ಲಾ ವಾಣಿಜ್ಯ ವಾಹನಗಳ ಬೆಲೆ ಹೆಚ್ಚಿಸಲು ನಿರ್ಧರಿಸಿದೆ.

ಗೋ ಗ್ರೀನ್ ಅಭಿಯಾನ; ಹಸಿರುವ ಪರಿಸರಕ್ಕಾಗಿ ಪಣತೊಟ್ಟ ಟಾಟಾ ಮೋಟಾರ್ಸ್  

ಕಚ್ಚಾ ಸಾಮಗ್ರಿ/ವಸ್ತುಗಳ ಮತ್ತು ಇತರ ವಸ್ತುಗಳ ಬೆಲೆಗಳು ನಿರಂತರವಾಗಿ ಏರಿಕೆ, ವಿದೇಶಿ ವಿನಿಮಯದ ಮೇಲೀನ ಪರಿಣಾದಿಂದ ವಾಹನಗಳ ತಯಾರಿಕೆಯ ಬೆಲೆಗಳ ಮೇಲೆ ಸಂಚಿತವಾದ ಏರಿಕೆಯಾಗಿದೆ. ಇಲ್ಲಿಯವರೆಗೆ ಈ ಬೆಲೆ ಹೆಚ್ಚಳವನ್ನು ಕಂಪನಿಯೇ ಭರಿಸುತ್ತಿದ್ದು, ಸದ್ಯದ ಮಾರುಕಟ್ಟೆ ಪ್ರವೃತ್ತಿಗೆ ಅನುಗುಣವಾಗಿ ನಿರಂತರ ಏರಿಕೆಯಾಗುತ್ತಿರುವುದರಿಂದ, ಇನ್ನು ಮುಂದೆ ಈ ಹೆಚ್ಚಳದ ಸ್ವಲ್ಪ ಹೊರೆಯನ್ನು ಸೂಕ್ತ ಬೆಲೆ ಪರಿಷ್ಕರಣೆ ಮೂಲಕ ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯವಾಗಿದೆ.

10 ತಿಂಗಳಲ್ಲಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ದಾಖಲೆ; ಭಾರತದ EV ಲೋಕದಲ್ಲಿ ಹೊಸ ಸಂಚಲನ!

ಬಸ್‍ಗಳ ವಾಹನ ಶ್ರೇಣಿಗಳಲ್ಲಿ ಬೆಲ್ಲೆ ಹೆಚ್ಚಳವಾಗುವ ನಿರೀಕ್ಷೆಯಿದೆ. .ವೈಯಕ್ತಿಕ ಮಾಡಲ್, ಪ್ರಭೇದ ಮತ್ತು ಇಂಧನ ಮಾದರಿಗೆ ಅನುಗುಣವಾಗಿ ವಾಸ್ತವ ಬೆಲೆ ಹೆಚ್ಚಳ ನಿರ್ಧಾರವಾಗಲಿದೆ. ಅತಿ ಕಡಿಮೆ ಒಟ್ಟಾರೆ ಮಾಲಿಕತ್ವ ವೆಚ್ಚ ಮತ್ತು ವಾಹನ ಮಾಲಿಕರಿಗೆ ಲಾಭ ಹೆಚ್ಚಿಸಿಕೊಳ್ಳುವ ಅವಕಾಶಗಳೊಂದಿಗೆ ಪ್ರತಿ ವರ್ಗದಲ್ಲಿ ವರ್ಗ ಶ್ರೇಷ್ಟವಾದ ಮೌಲ್ಯವನ್ನು ಒದಗಿಸಲು ಟಾಟಾ ಮೋಟರ್ಸ್ ತನ್ನ ಪ್ರಯತ್ನಗಳನ್ನು ಮುಂದುವರಿಸುತ್ತದೆ ಎಂದು ಟಾಟಾ ಹೇಳಿದೆ.

click me!