ಆನ್‌ಲೈನ್‌ ಗೇಮಿಂಗ್‌ನಲ್ಲಿ 19 ಕೋಟಿ ಗೆದ್ದರೂ ಹಣ ನೀಡದ ಕಾರಣಕ್ಕೆ ಯುವಕ ಆತ್ಮಹತ್ಯೆ!

Published : Jul 03, 2025, 04:21 PM IST
Davanagere Death

ಸಾರಾಂಶ

ಆನ್‌ಲೈನ್‌ ಬೆಟ್ಟಿಂಗ್‌ನಲ್ಲಿ 18 ಲಕ್ಷ ರೂಪಾಯಿಗಳನ್ನು ಕಳೆದುಕೊಂಡ 25 ವರ್ಷದ ಯುವಕ ಶಶಿಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೆದ್ದ 19ಕೋಟಿ ರೂಪಾಯಿಗಳನ್ನು ನೀಡದ ಕಾರಣ ಮತ್ತು ಪೊಲೀಸ್ ದೂರಿನಿಂದ ಯಾವುದೇ ಪ್ರಯೋಜನವಾಗದ ಕಾರಣ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದಾವಣಗೆರೆ (ಜು.3): ಆನ್‌ಲೈನ್‌ ಬೆಟ್ಟಿಂಗ್‌ಗೆ 25 ವರ್ಷದ ಯುವಕನೊಬ್ಬ ತನ್ನ ಜೀವನ ಮುಗಿಸಿದ್ದಾನೆ.ದಾವಣಗೆರೆಯಸರಸ್ವತಿ ನಗರದ ಯುವ 25 ವರ್ಷದ ಶಶಿಕುಮಾರ್ ನೇಣಿಗೆ ಶರಣಾದ ಯುವಕ. ಸುದೀರ್ಘ 6 ಪುಟಗಳ ಡೆತ್‌ನೋಟ್ ಬರೆದು. ಸೆಲ್ಫಿ ವಿಡಿಯೋ ಮಾಡಿ ಸೂಸೈಡ್ ಮಾಡಿಕೊಂಡಿದ್ದಾನೆ. 'ಆನ್‌ಲೈನ್ ಗೇಮಿಂಗ್‌ನಲ್ಲಿ 18 ಲಕ್ಷ ಹಣ ಕಳೆದುಕೊಂಡಿದ್ದೇನೆ. ಇದಕ್ಕೂ ಮುನ್ನ ಆನ್‌ಲೈನ್ ಗೇಮಿಂಗ್‌ನಲ್ಲಿ 19 ಕೋಟಿಗೂ ಹೆಚ್ಚಿನ ಹಣ ಗೆದ್ದಿದ್ದರೂ ಅದನ್ನು ನನಗೆ ನೀಡಿಲ್ಲ. ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಮಾನಸಿಕ ಖಿನ್ನತೆಗೊಳಗಾಗಿದ್ದೇನೆ' ಎಂದು ಡೆತ್‌ ನೋಟ್‌ನಲ್ಲಿ ಬರೆದಿದ್ದಾನೆ.

ಆನ್‌ಲೈನ್ ಗೇಮಿಂಗ್ ಹಿಂದಿರುವ ಕಾಣದ ಕೈಗಳ ವಿರುದ್ಧ ಕ್ರಮ ಕೈಗೊಳ್ಳಿ. ಮುಂದಿನ ಪೀಳಿಗೆಗೆ ಸಮಸ್ಯೆ ಆಗದಿರಲಿ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖ ಮಾಡಿದ್ದಾನೆ. ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಶಶಿಕುಮಾರ್‌ ಬರೆದ ಡೆತ್‌ನೋಟ್‌ನ ಸಂಕ್ಷಿಪ್ತ ರೂಪ..

ನಾನು ಸರಿಸುಮಾರು ಒಂದು ವರ್ಷದಿಂದ ಆನ್‌ಲೈನ್‌ ಗೇಮಿಂಗ್ ಆಡುತ್ತಾ ಬಂದಿದ್ದೇನೆ. ಈ ಗೇಮ್‌ನಲ್ಲಿ ಎರಡು ವಿಧ. ಕೌಶಲದ ಆಟಗಳು ಮತ್ತು ಅದೃಷ್ಟದ ಆಟಗಳು. ಕೌಶಲದ ಆಟಗಳಿಗೆ ಭಾರತ ಸರ್ಕಾರ ಅವಕಾಶ ನೀಡಿದೆ. ಆದರೆ, ಅದೃಷ್ಟದ ಆಟಗಳಿಗೆ ಯಾವುದೇ ರೀತಿಯಲ್ಲಿ ಅವಕಾಶ ನೀಡಿಲ್ಲ. ಆದರೆ, ಭಾರತದಲ್ಲಿ ಹಾಗೂ ರಾಜ್ಯದಲ್ಲಿ ದಿನೇ ದಿನೇ ಅದೃಷ್ಟದ ಆಟಗಳ ವೆಬ್‌ಸೈಟ್‌ ಹಾವಳಿ ಹೆಚ್ಚುತ್ತಾ ಇದೆ. ಇದರಿಂದ ಈ ಆಟಗಳ ಹುಚ್ಚಿನಿಂದ ನಂತರದ ದಿನಗಳಲ್ಲಿ ಸರಿಸುಮಾರು 18 ಲಕ್ಷಕ್ಕಿಂತ ಹೆಚ್ಚಿನ ಹಣ ಕಳೆದುಕೊಂಡಿದ್ದೇನೆ.

CROWN246 ಎಂಬ ವೆಬ್‌ಸೈಟ್‌ನಲ್ಲಿ ನಾನು 19 ಕೋಟಿ 85 ಲಕ್ಷ 21,722 ರೂಪಾಯಿ ಹಣವನ್ನು ಗೆದ್ದಿರುತ್ತೇನೆ. ನಂತರ ವೆಬ್‌ಸೈಟ್‌ ಮಾಲೀಕನಿಗೆ ಹಣ ಕೇಳಿದರೆ ಕೊಡುವುದಿಲ್ಲ ಎಂದು ಉತ್ತರಿಸಿದ್ದಾರೆ. ಹೀಗೆ 2 ತಿಂಗಳು ಕಳೆದಿವೆ. ದಿನೇ ದಿನೇ ಮಾನಸಿಕ ಸ್ಥಿತಿ ಸರಿ ಹೋಗದ ಕಾರಣ ಹೆಲ್ಪ್‌ ಲೈನ್‌ ನಂಬರ್‌ಗೆ ಕರೆ ಮಾಡಿದ್ದೇನೆ. ಆದರೆ, ಪ್ರಯೋಜನವಾಗಿಲ್ಲ.

ಈ ಬಗ್ಗೆ ಡಿಸಿ ಕಚೇರಿ, ಎಸ್‌ಪಿ ಕಚೇರಿ, ಹೈಕೋರ್ಟ್‌, ಲೋಕಾಯುಕ್ತ, ಮಾನವ ಹಕ್ಕು ಆಯೋಗ ಹಾಗೂ ಪ್ರಧಾನಮಂತ್ರಿಗಳ ಕಚೇರಿಗಳಿಗೆ ಲಿಖಿತ ದೂರು ನೀಡಿದ್ದೇನೆ. ಇದರಿಂದ ಯಾವುದೇ ಪ್ರಯೋಜನ ಆಗೋದಿಲ್ಲ ಅನ್ನೋದು ಗೊತ್ತು. ಹಲವು ನ್ಯೂಸ್‌ ಚಾನೆಲ್‌ಗಳಿಗೆ ಇದರ ಬಗ್ಗೆ ತಿಳಿಸಿದರೂ ಯಾರೂ ಇದರ ಬಗ್ಗೆ ಮಾತನಾಡಿಲ್ಲ.

ಈ ಅನಧಿಕೃತ ವೆಬ್‌ಸೈಟ್‌ ನಡೆಸುತ್ತಿರುವವರು ಈ ಭ್ರಷ್ಟ ರಾಜಕಾರಣಿಗಳು. ಈ ಎಲ್ಲಾ ವೆಬ್‌ಸೈಟ್‌ಗಳಿಂದ ಜಿಲ್ಲೆಯಲ್ಲಿರುವ ಕಾನ್ಸ್‌ಸ್ಟೇಬಲ್‌ ಇಂದ ಎಸ್‌ಪಿವರೆಗೂ ಹಣ ಹೋಗುತ್ತಿರುವ ಕಾರಣಕ್ಕೆ ಇಲ್ಲಿಯವರೆಗೆ ಮಾತನಾಡಿಲ್ಲ. ಹಾಗೇನಾದರೂ ಈ ವಿಚಾರ ಹೊರಗೆ ಬಂದರೆ ಇದನ್ನು ಮುಚ್ಚಿಹಾಕುವ ಸಾಧ್ಯತೆಯೇ ಹೆಚ್ಚು. ಇದರ ಬಗ್ಗೆ ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಅವರು ಮಾತನಾಡಬೇಕು.

 

PREV
Read more Articles on
click me!

Recommended Stories

ಕಾಂಗ್ರೆಸ್‌ನಲ್ಲಿ ಆಂತರಿಕ ಕಚ್ಚಾಟದಿಂದ ರಾಜ್ಯದ ಆಡಳಿತ ಕುಸಿತ: ಬಿ.ವೈ.ವಿಜಯೇಂದ್ರ
ಹಾವೇರಿ: ಆಕಳ ಕರುವನ್ನು ತೊಟ್ಟಿಲಲ್ಲಿ ಹಾಕಿ ನಾಮಕರಣ ಮಾಡಿ ಸಂಭ್ರಮಿಸಿದ ಕುಟುಂಬ!