ಬೈಕ್ ರ‍್ಯಾಲಿ ವೇಳೆ ಬಿದ್ದ ಮಾಜಿ ಸಚಿವ ರೇಣುಕಾಚಾರ್ಯಾಗೆ ಗಾಯ, ಆಸ್ಪತ್ರೆ ದಾಖಲು

Published : Jun 27, 2025, 09:10 PM ISTUpdated : Jun 27, 2025, 09:11 PM IST
mp renukacharya

ಸಾರಾಂಶ

ಮಾಜಿ ಸಚಿವ, ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ ಸ್ಕೂಟರ್ ಸ್ಕಿಡ್ ಆಗಿ ಗಾಯಗೊಂಡಿದ್ದಾರೆ. ಬೈಕ್ ರ‍್ಯಾಲಿ ವೇಳೆ ಮಾಜಿ ಸಚಿವರು ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ.

ದಾವಣಗೆರೆ (ಜೂ.27) ಭದ್ರಾ ಬಲದಂಡೆ ನಾಲೆ ಸೀಳಿ ಕಾಮಗಾರಿಗೆ ವಿರೋಧಿಸಿ ದಾವಣೆಗೆ ಬಂದ್‌ಗೆ ಕರೆ ನೀಡಿರುವ ರೈತ ಚಳವಳಿಗೆ ಬೆಂಬಲ ನೀಡುವಂತೆ ನಡೆಸಿದ ಬೈಕ್ ರ್ಯಾಲಿಯಲ್ಲಿ ಬಿಜೆಪಿ ನಾಯಕ, ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಗಾಯಗೊಂಡಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಚಾನಕ್ಕಾಗಿ ರೇಣುಕಾಚಾರ್ಯ ಸ್ಕೂಟರ್ ಸ್ಕಿಡ್ ಆಗಿದೆ. ಇದರಿಂದ ಕೈ, ಕಾಲು ಹಾಗೂ ದೇಹದ ಇತರೆಡೆ ಗಾಯವಾಗಿದೆ.

ದಾವಣೆಗೆ ಬಂದ್ ಬೆಂಬಲಿಸಿ ಬೈಕ್ ರ್ಯಾಲಿ

ಭದ್ರಾ ಬಲದಂಡೆ ನಾಲೆ ಸೀಳಿ ಕಾಮಗಾರಿಯನ್ನು ಹಲವು ರೈತರು, ರೈತ ಸಂಘಟನೆಗಳು ವಿರೋಧಿಸಿದೆ. ಈ ಕಾಮಗಾರಿಗೆ ವಿರೋಧಿಸಿ ರೈತರು ಕರೆ ನೀಡಿದ ದಾವಣೆಗೆ ಬಂದ್‌ಗೆ ಎಂಪಿ ರೇಣುಕಾಚಾರ್ಯ ಬೆಂಬಲಿಸಿದ್ದಾರೆ. ನಾಳೆ (ಜೂ. 28) ದಾವಣೆಗೆರೆ ಬಂದ್‌ಗೆ ರೈತ ಒಕ್ಕೂಟಗಳು ಕರೆ ನೀಡಿದೆ. ಈ ಬಂದ್ ಬೆಂಬಲಿಸಿ ಇಂದು ರೇಣುಕಾಚಾರ್ಯ ಬೈಕ್ ರ್ಯಾಲಿ ನಡೆಸಿದ್ದರು. ಬಂದ್‌ಗೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲು ಈ ರ್ಯಾಲಿ ಆಯೋಜಿಸಲಾಗಿತ್ತು.

ದಾವಣೆಗೆರೆ ಕೆಳ ಸೇತುವೆ ಬಳಿ ಘಟನೆ

ದಾವಣಗೆರೆ ಮಹಾನಗರ ಪಾಲಿಕೆ ಕಚೇರಿ ಬಳಿಯ ಕೆಳಸೇತುವೆ ಬಳಿ ರೇಣುಕಾಚಾರ್ಯ ಅವರು ರೈಡ್ ಮಾಡುತ್ತಿದ್ದ ಸ್ಕೂಟರ್ ಸ್ಕಿಡ್ ಆಗಿದೆ. ದಾವಣಗೆರೆಯ ಹಳೆಯ ಪ್ರವಾಸ ಮಂದಿರದಿಂದ ಆರಂಭಗೊಂಡ ರ್ಯಾಲಿ ಪಾಲಿಕೆ ಕಚೇರಿ ಕೆಳಸೇತುವೆ ಮೂಲಕ ಸಾಗಿತ್ತು. ಈ ವೇಳೆ ಸ್ಕೂಟರ್ ಸ್ಕಿಡ್ ಆಗಿ ಮಾಜಿ ಸಚಿವರು ಗಾಯಗೊಂಡಿದ್ದಾರೆ.

ಬುಲೆಟ್ ಬಳಿಕ ಸ್ಕೂಟರ್ ಮೂಲಕ ರ್ಯಾಲಿ

ಬೈಕ್ ರ್ಯಾಲಿ ಆರಂಭಗೊಂಡಾಗ ರೇಣುಕಾಚಾರ್ಯ ಬುಲೆಟ್ ಬೈಕ್ ಏರಿ ರ್ಯಾಲಿ ಆರಂಭಿಸಿದ್ದರು. ಕೆಲ ಕಿಲೋಮೀಟರ್ ಬುಲೆಟ್ ಏರಿ ರೇಣುಕಾಚಾರ್ಯ ರ್ಯಾಲಿ ಮಾಡಿದ್ದಾರೆ. ಬಳಿಕ ಬುಲೆಟ್ ಬಿಟ್ಟು ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಬೈಕ್ ರ್ಯಾಲಿ ಮುಂದುವರಿಸಿದ್ದಾರೆ. ಈ ವೇಳೆ ಅವಘಡ ನಡೆದಿದೆ.

ದಾವಣೆಗೆರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ದಾವಣೆಗೆರೆ ಖಾಸಗಿ ಆಸ್ಪತ್ರೆಯಲ್ಲಿ ರೇಣುಕಾಚಾರ್ಯಗೆ ಚಿಕಿತ್ಸೆ ನೀಡಲಾಗಿದೆ. ಕೆಲ ದಿನಗಳ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ.

 

PREV
Read more Articles on
click me!

Recommended Stories

ಕಾಂಗ್ರೆಸ್‌ನಲ್ಲಿ ಆಂತರಿಕ ಕಚ್ಚಾಟದಿಂದ ರಾಜ್ಯದ ಆಡಳಿತ ಕುಸಿತ: ಬಿ.ವೈ.ವಿಜಯೇಂದ್ರ
ಹಾವೇರಿ: ಆಕಳ ಕರುವನ್ನು ತೊಟ್ಟಿಲಲ್ಲಿ ಹಾಕಿ ನಾಮಕರಣ ಮಾಡಿ ಸಂಭ್ರಮಿಸಿದ ಕುಟುಂಬ!