'ಮಹಾ ಸುಳ್ಳುಗಾರ ಸಿದ್ದುಗೆ ನೋಬೆಲ್‌ ಪ್ರಶಸ್ತಿ ನೀಡಲಿ'..!

By Kannadaprabha News  |  First Published Oct 31, 2019, 3:39 PM IST

ನೆರೆ ಸಂತ್ರಸ್ತರಿಗೆ 10 ಸಾವಿರ ರು. ಪರಿಹಾರವನ್ನೂ ಕೊಟ್ಟಿಲ್ಲವೆಂಬ ಆರೋಪ ಮಾಡಿಸುವ ವಿಪಕ್ಷ ನಾಯಕ, ಮಹಾ ಸುಳ್ಳುಗಾರ ಸಿದ್ದರಾಮಯ್ಯಗೆ ನೋಬೆಲ್‌ ಪ್ರಶಸ್ತಿನೀಡಬೇಕಷ್ಟೇ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.  ಸಂತ್ರಸ್ಥರಿಗೆ ದುಡ್ಡನ್ನೇ ಕೊಟ್ಟಿಲ್ಲವೆಂಬ ಗಿನ್ನೆಸ್‌ ದಾಖಲೆಯ ಸುಳ್ಳುಗಾರ ಸಿದ್ದರಾಮಯ್ಯ. ರಾಜ್ಯವನ್ನು ಸುತ್ತಾಡಿದರೆ ಗೊತಾಗುತ್ತದೆ ಎಷ್ಟುಜನರಿಗೆ ಹತ್ತು ಸಾವಿರ ರು.ಗಳಂತೆ ನೀಡಿದ್ದೇವೆಂಬುದು ಎಂದು ತಿರುಗೇಟು ನೀಡಿದ್ದಾರೆ.


ದಾವಣಗೆರೆ(ಅ.31): ನೆರೆ ಸಂತ್ರಸ್ತರಿಗೆ 10 ಸಾವಿರ ರು. ಪರಿಹಾರವನ್ನೂ ಕೊಟ್ಟಿಲ್ಲವೆಂಬ ಆರೋಪ ಮಾಡಿಸುವ ವಿಪಕ್ಷ ನಾಯಕ, ಮಹಾ ಸುಳ್ಳುಗಾರ ಸಿದ್ದರಾಮಯ್ಯಗೆ ನೋಬೆಲ್‌ ಪ್ರಶಸ್ತಿನೀಡಬೇಕಷ್ಟೇ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತ್ರಸ್ಥರಿಗೆ ದುಡ್ಡನ್ನೇ ಕೊಟ್ಟಿಲ್ಲವೆಂಬ ಗಿನ್ನೆಸ್‌ ದಾಖಲೆಯ ಸುಳ್ಳುಗಾರ ಸಿದ್ದರಾಮಯ್ಯ. ರಾಜ್ಯವನ್ನು ಸುತ್ತಾಡಿದರೆ ಗೊತಾಗುತ್ತದೆ ಎಷ್ಟುಜನರಿಗೆ ಹತ್ತು ಸಾವಿರ ರು.ಗಳಂತೆ ನೀಡಿದ್ದೇವೆಂಬುದು ಎಂದು ತಿರುಗೇಟು ನೀಡಿದ್ದಾರೆ.

Tap to resize

Latest Videos

ಸಿದ್ದರಾಮಯ್ಯ ಪುನಃ ಸಿಎಂ ಆಗುವ ಪ್ರಶ್ನೆಯೇ ಇಲ್ಲ ಎಂದ್ರು ಈಶ್ವರಪ್ಪ

ಸುಳ್ಳನ್ನೇ ಹತ್ತಾರು ಸಲ ಹೇಳುತ್ತಾ ಹೋಗುತ್ತಿರುವ ಸುಳ್ಳುಗಾರ ಸಿದ್ದರಾಮಯ್ಯಗೆ ರಾಜ್ಯ ಸುತ್ತಿ ಸತ್ಯ ತಿಳಿಯಲಿ. ಸಿದ್ದರಾಮಯ್ಯ ಸರ್ಕಾರವಿದ್ದಾಗ ತೀವ್ರ ಬರ ಆವರಿಸಿದ್ದರೂ ಸಿಎಂ ಸೇರಿದಂತೆ ಯಾವೊಬ್ಬ ಸಚಿವರೂ ಜಿಲ್ಲಾ ಪ್ರವಾಸ ಮಾಡಲಿಲ್ಲ. ಮೈತ್ರಿ ಕಾಲದಲ್ಲೂ ಬಡಕೊಂಡೆ ನಾನು. ಸಿದ್ದರಾಮಯ್ಯ, ದೇವೇಗೌಡರಿಗೆ ಪ್ರವಾಸ ಮಾಡಿ, ಜಿಲ್ಲಾ ಸಚಿವರು, ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆಂದರೂ ಯಾರೂ ಹೋಗಲಿಲ್ಲ ಎಂದು ಅವರು ಟೀಕಿಸಿದ್ದಾರೆ.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ಕ್ಯಾಬಿನೆಟ್‌ ಆದ ನಂತರ ಎಲ್ಲಾ ಉಸ್ತುವಾರಿ ಜಿಲ್ಲೆ ಪ್ರವಾಸ ಮಾಡಿದೆವು. ಸಂತ್ರಸ್ಥರಿಗೆ 10 ಸಾವಿರ ಪರಿಹಾರ, ಮನೆ ಕಟ್ಟಿಕೊಳ್ಳಲು 1 ಲಕ್ಷ ರು. ನೀಡುತ್ತಿದ್ದೇವೆ. ಆದರೆ, ಸಿದ್ದರಾಮಯ್ಯ ದುಡ್ಡೇ ಕೊಟ್ಟಿಲ್ಲವೆಂದು ಸುಳ್ಳು ಹೇಳುತ್ತಾ ಹೊರಟಿದ್ದಾರೆ ಎಂದು ಅವರು ವಿಪಕ್ಷ ನಾಯಕನ ವಿರುದ್ಧ ಹರಿಹಾಯ್ದಿದ್ದಾರೆ.

ಚಿಕ್ಕಮಗಳೂರು: ಸತತ ಮಳೆ, ಕೊಚ್ಚಿ ಹೋಯ್ತು ಈರುಳ್ಳಿ ಬೆಳೆ...

click me!