ಬೆಂಗಳೂರಿಗೆ ನೂತನ KSRTC ಬಸ್ ಸೇವೆ ಆರಂಭ ಮಾಡಲಾಗಿದೆ. ದಾವಣಗೆರೆ-ಶಿವಮೊಗ್ಗ ಮಾರ್ಗವಾಗಿ ಹೊಸ ಬಸ್ ಗಳು ಸಂಚಾರ ಮಾಡಲಿದೆ.
ನ್ಯಾಮತಿ [ಅ.22]: ಹೊನ್ನಾಳಿಯಿಂದ ನ್ಯಾಮತಿ-ಸವಳಂಗ-ಶಿವಮೊಗ್ಗ ಮಾರ್ಗವಾಗಿ ಬೆಂಗಳೂರಿಗೆ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು. ಪಟ್ಟಣದ ಮಹಂತೇಶ್ವರ ರಸ್ತೆಯ ಬಸ್ ನಿಲ್ದಾಣದಲ್ಲಿ ಸೋಮವಾರ ಅವರು ರಾಜ್ಯ ರಸ್ತೆ ಸಾರಿಗೆ ಬಸ್‌ಗೆ ಚಾಲನೆ ನೀಡಿ ಮಾತನಾಡಿದರು. ಹೊನ್ನಾಳಿಯಿಂದ ಬೆಳಗಿನ ಝಾವ 5-30ಕ್ಕೆ ಬಿಟ್ಟು ನ್ಯಾಮತಿಗೆ 5-45ಕ್ಕೆ ಬಂದು ಸವಳಂಗ ಮಾರ್ಗವಾಗಿ ಶಿವಮೊಗ್ಗ ಆನಂತರ ಬೆಂಗಳೂರು ಸೇರುತ್ತದೆ. ನಂತರ ಎರಡನೇ ಬಸ್ ಹೊನ್ನಾಳಿಯಿಂದ ಬೆಳಗ್ಗೆ 7-30ಕ್ಕೆ ಬಿಟ್ಟು ನ್ಯಾಮತಿಗೆ 7-45ಕ್ಕೆ ಬಂದು ಸವಳಂಗ ಮಾರ್ಗವಾಗಿ ಶಿವಮೊಗ್ಗ ತಲುಪಿ ಬೆಂಗಳೂರು ತಲುಪುತ್ತದೆ ಎಂದರು.
ಶಿವಮೊಗ್ಗದಿಂದ ರಾತ್ರಿ 10ಕ್ಕೆ ಬಿಟ್ಟು ಸವಳಂಗ ನ್ಯಾಮತಿ ಮಾರ್ಗವಾಗಿ ಹೊನ್ನಾಳಿ ಸೇರುತ್ತದೆ. ಮತ್ತೊಂದು ಬಸ್ ರಾತ್ರಿ 11-30ಕ್ಕೆ ಬಿಟ್ಟು ಸವಳಂಗ ನ್ಯಾಮತಿ ಮಾರ್ಗವಾಗಿ ಹೊನ್ನಾಳಿಗೆ ಬರುತ್ತದೆ. ಇನ್ನು ಕೆಲವೇ ದಿನಗಳಲ್ಲಿ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆ ಸಾರಿಗೆಯ 6 ಬಸ್‌ಗಳನ್ನು ಹೊನ್ನಾಳಿಯಿಂದ ನ್ಯಾಮತಿ ಮಾರ್ಗವಾಗಿ ಶಿವಮೊಗ್ಗಕ್ಕೆ ಹೋಗಿ ಬರುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ವೇಳೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ತಾಪಂ ಉಪಾಧ್ಯಕ್ಷ ಎಸ್.ಪಿ.ರವಿಕುಮಾರ, ಸಿ.ಕೆ.ರವಿ, ಎಚ್.ಎನ್.ವಿರುಪಾಕ್ಷಪ್ಪ, ತಾ. ಕಸಾಪ ಅಧ್ಯಕ್ಷ ಜಿ.ನಿಜಲಿಂಗಪ್ಪ, ಎನ್.ಆರ್.ಸುಂದರೇಶ, ತಾ. ಬಿಜೆಪಿ ಘಟಕ ಅಧ್ಯಕ್ಷ ಅಜೇಯರೆಡ್ಡಿ, ಎ.ಪ್ರಸಾದ್, ಗ್ರಾಪಂ ಸದಸ್ಯರು ಇತರರು ಇದ್ದರು.