ದಾವಣಗೆರೆಯಲ್ಲೂ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್: ಕಾಂಗ್ರೆಸ್ ಆರೋಪ

By Suvarna News  |  First Published Nov 19, 2022, 4:27 PM IST

ದಾವಣಗೆರೆ ನಗರ ವ್ಯಾಪ್ತಿಯಲ್ಲಿಯೂ ಮತದಾರರ ಪಟ್ಟಿಯಿಂದ ಸಾವಿರಾರು ಹೆಸರನ್ನು ಅನಧಿಕೃತವಾಗಿ ಪಟ್ಟಿಯಿಂದ ಕೈಬಿಟ್ಟುವ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಇದೊಂದು ರಾಜಕೀಯ ಪ್ರೇರಿತ ಕಾರ್ಯವಾಗಿದೆ ಎಂದು ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯ ಎ. ನಾಗರಾಜ್ ಆರೋಪಿಸಿದ್ದಾರೆ.


ವರದಿ : ವರದರಾಜ್ ಏಷ್ಯಾನೆಟ್ ಸುವರ್ಣನ್ಯೂಸ್ 

ದಾವಣಗೆರೆ (ನ.19): ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿರುವ ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕುವ ಮತ್ತು ಸೇರ್ಪಡೆಯ ಗೊಂದಲದ ಮಾದರಿಯಲ್ಲಿಯೇ ದಾವಣಗೆರೆ ನಗರ ವ್ಯಾಪ್ತಿಯಲ್ಲಿಯೂ ಮತದಾರರ ಪಟ್ಟಿಯಿಂದ ಸಾವಿರಾರು ಹೆಸರನ್ನು ಅನಧಿಕೃತವಾಗಿ ಪಟ್ಟಿಯಿಂದ ಕೈಬಿಟ್ಟುವ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಪ್ರತಿ ವಾರ್ಡ್‌ ಮಟ್ಟದಲ್ಲಿ ಸಾವಿರಾರು ಮತದಾರರ ಹೆಸರು ಡಿಲಿಟ್‌ ಮಾಡಲಾಗಿದೆ. ಇದೊಂದು ರಾಜಕೀಯ ಪ್ರೇರಿತ ಕಾರ್ಯವಾಗಿದೆ ಎಂದು ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯ ಎ. ನಾಗರಾಜ್ ಆರೋಪಿಸಿದ್ದಾರೆ.

Tap to resize

Latest Videos

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಜಾಪ್ರಭುತ್ವ (Democracy) ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ಮತದಾನದ (Voting) ಹಕ್ಕು ಇರುತ್ತದೆ. ಅಂತಹದರಲ್ಲಿ ಅವರ ಗಮನಕ್ಕೆ ತರದೇ ಮತದಾರರ ಪಟ್ಟಿ (Voters list)ಯಲ್ಲಿ ಹೆಸರನ್ನು ತೆಗೆದು ಹಾಕಲಾಗಿದೆ. ಈ ಮೂಲಕ ಸಂವಿಧಾನಬದ್ಧವಾಗಿ ನೀಡಲಾದ ಮತದಾನದ ಹಕ್ಕನ್ನು (Right) ಬಲವಂತವಾಗಿ ಕಿತ್ತುಕೊಳ್ಳಲಾಗಿದೆ. ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕುವ ಮುನ್ನ, ಆ ಮತದಾರನ ಹೇಳಿಕೆಯನ್ನು ಪಡೆದು ಅವರಿಂದ ಫಾರಂ-7 ನ್ನು ಭರ್ತಿ ಮಾಡಿ ಸಹಿ ಪಡೆಯಬೇಕು. ಆದರೆ, ಬಹಳಷ್ಟು ಜನ ಕೂಲಿ ಕಾರ್ಮಿಕರು (Labours) ಬೆಳಗ್ಗೆ 7 ಗಂಟೆಗೆ ಕೆಲಸಕ್ಕೆ ಹೋದರೆ ಸಂಜೆ (Evening)ಮನೆಗೆ ಬರುತ್ತಾರೆ. ಅಂತಹವರ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೋ, ಇಲ್ಲವೋ ಎಂಬುದನ್ನು ಪರಿಶೀಲಿಸಲು (Check) ಆಗುವುದಿಲ್ಲ. ಅಂತಹವರ ಹೆಸರು ತೆಗೆದು ಹಾಕಲಾಗಿದ್ದು, ಡಿಲೀಟ್ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Bengaluru: ಚಿಲುಮೆಗೆ ಅನುಮತಿ ನೀಡಿದ್ದು ಸರ್ಕಾರವಲ್ಲ: ಅನುಮೋದನೆ ಕೊಟ್ಟಿದ್ದು ಚುನಾವಣಾಧಿಕಾರಿ

ಒಂದು ವಾರ್ಡಲ್ಲಿ 1,718 ಹೆಸರು ಡಿಲೀಟ್: ವಿಧಾನಸಭಾ ಚುನಾವಣೆ (Assembly Election) ಸಮೀಪಿಸುತ್ತಿರುವುದರಿಂದ ಇಂತಹ ಘಟನೆಗಳು ಆಗದ ರೀತಿ  ಜಿಲ್ಲಾಧಿಕಾರಿಗಳು ಗಮಿಸಬೇಕು. ಮತದಾರರ ಪಟ್ಟಿಯಿಂದ ತೆಗೆದು ಹಾಕಿರುವ ಹೆಸರನ್ನು ಪುನಃ ಸೇರ್ಪಡೆಗೊಳಿಸಬೇಕು. ಈಗ ಆಧಾರ್ ಕಾರ್ಡ್ (Adhar card) ಮತ್ತು ಚುನಾವಣಾ ಗುರುತಿನ ಚೀಟಿ ಜೋಡಣೆ (link) ಮಾಡುತ್ತಿದ್ದು, ಬ್ಲಾಕ್‌ ಮಟ್ಟದ ಅಧಿಕಾರಿಗಳು (ಬಿಎಲ್‌ಒ)ಗಳು ವಾರ್ಡ್‌ಗಳಲ್ಲಿ ಮತದಾರರಿಗೆ ಲಿಂಕ್ ಮಾಡದೇ ಹೋದರೆ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಆಗುತ್ತದೆ ಎಂದು ತಪ್ಪು ಮಾಹಿತಿ (Wrong Information) ನೀಡುತ್ತಿದ್ದಾರೆ. ಅಂತಹ ಹೇಳಿಕೆ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಬೇಕು. ಪರಿಷ್ಕೃತ (Revised) ಪಟ್ಟಿಯಲ್ಲಿ ಡಿಲಿಟೇಷನ್ ಎಂದು ತಿಳಿಸದೇ ಬಹಳಷ್ಟು ಮತದಾರರ ಹೆಸರು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ‌. ವಿನೋಬನಗರದ 10 ನೇ  ವಾರ್ಡ್ ನಲ್ಲಿ ಸುಮಾರು 1,718 ಜನರ ಪಟ್ಟಿಯನ್ನು ಡಿಲೀಟ್ (Delete) ಮಾಡಲಾಗಿದೆ‌ ಎಂದು‌ ಆರೋಪಿಸಿದರು.

ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ದೂರು: ಒಂದೇ ಅವಧಿಯಲ್ಲಿ ಅತಿ ಹೆಚ್ಚು ಮತದಾರರನ್ನು ಪಟ್ಟಿಯಿಂದ ಕೈಬಿಡುವುದಕ್ಕೆ ಕಾರಣವಾದ ಅಧಿಕಾರಿಗಳ (Officers) ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದೇವೆ. ಈ ಬಗ್ಗೆ ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಗುವುದು. ಜೊತೆಗೆ ಅರ್ಹರ ಮತದಾನದ ಹಕ್ಕು ಕಸಿದಿರುವ ಕುರಿತು ಚುನಾವಣಾ ಆಯೋಗಕ್ಕೂ ಮನವಿ‌ ನೀಡಲಾಗುವುದು ಎಂದು ಹೇಳಿದರು. ಈ ವೇಳೆ ಪಾಲಿಕೆ‌ ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್, ಇನೇಶ್ ಕೆ.ನಶೆಟ್ಟಿ, ಅಬ್ದುಲ್ ಲತೀಫ್,ನಆಯೂಬ್ ಪೈಲ್ವಾನ್,ನಸತೀಶ್,ನಚಮನ್ ಖಾನ್,ನಅಹಮದ್ ಖಾನ್, ಸಿದ್ಧಿಕ್ ಮತ್ತಿತರರಿದ್ದರು.
 

click me!