ದಾವಣಗೆರೆಯಲ್ಲಿಯೂ ಬಿಚ್ಚಿಕೊಂಡ ವಂಚಕ ಕಂಪನಿ ಜಾಲ

By Web Desk  |  First Published Jun 10, 2019, 11:57 PM IST

ಲಕ್ಷಾಂತರ ಹೂಡಿಕೆದಾರರಿಗೆ ಪಂಗನಾಮ ಹಾಕಿರುವ ಐಎಮ್ ಎ ಮೋಸದ ಜಾಲದ ವಿಸ್ತಾರ ದಾವಣಗೆರೆಗೂ ವ್ಯಾಪಿಸಿದೆ.


ದಾವಣಗೆರೆ[ಜೂ. 10]  ಬಹುಕೋಟಿ ವಂಚನೆಯ  ಐಎಮ್ ಎ ಮೋಸದ ಜಾಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ದಾವಣಗೆರೆಯಲ್ಲಿಯೂ ಜನರು ಅಪಾರ ಹಣ ಕಳೆದುಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ.

ದಾವಣಗೆರೆ ವಿವಿಧ ಬಡಾವಣೆಗಳ  ನೂರಾರು  ಜನರು ವಂಚನೆ ಮಾಡಿದ ಕಂಪನಿಯಲ್ಲಿ ಹೂಡಿಕೆ ಮಾಡಿದ್ದರು. ಬೆಂಗಳೂರಿನಿಂದ ಐಎಮ್ ಎ ಮೋಸದ ಸುದ್ದಿ ಸ್ಫೋಟವಾಗುತ್ತಿದ್ದಂತೆ ದಾವಣಗೆರೆ ಶಂಕರ್ ವಿಹಾರ್ ಭಾಗದಲ್ಲಿರುವ ಕಚೇರಿ ಮುಂದೆ ಜನ ಜಮಾಯಿಸಿದರು.

Tap to resize

Latest Videos

50 ಕ್ಕು ಹೆಚ್ಚು ಹೂಡಿಕೆದಾರರು ದಾವಣಗೆರೆ ಪೊಲೀಸರಿಗೆ ದೂರು ನೀಡಿದ್ದಾರೆ. 3 ಸಾವಿರಕ್ಕೂ ಹೆಚ್ಚು ಜನರು ದಾವಣಗೆರೆ ವ್ಯಾಪ್ತಿಯಲ್ಲಿ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ಜೂನ್ 11 ರಂದು ಬೆಳಗ್ಗೆ ಎಸ್ ಪಿಗೆ ದೂರು ನೀಡಲು ನಿರ್ಧರಿಸಲಾಗಿದೆ.

click me!