ಮದುವೆಯಾದ 11 ದಿನಕ್ಕೆ ಯುವತಿ ಆತ್ಮಹತ್ಯೆ: ಕೈ ಮೇಲೆ ನಾಲ್ವರ ಹೆಸರು ಪತ್ತೆ

By Web Desk  |  First Published May 5, 2019, 7:33 PM IST

ಹೊಸ ಕನಸುಗಳೊಂದಿಗೆ ಹೊಸ ಜೀವನಕ್ಕೆ ಕಾಲಿರಿಸಿದ್ದ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ ಕೈ ಮೇಲೆ ನಾಲ್ವರ ಹೆಸರುಗಳಿದ್ದು, ಪ್ರಕರಣದ ಸುತ್ತ ಹಲವು ಅನುಮಾನಗಳ ಹುತ್ತ ಹುಟ್ಟಿಕೊಂಡಿವೆ. 


ದಾವಣಗೆರೆ, [ಮೇ.05]: ಇನ್ನು ಬಾಳಿ ಬದುಕಬೇಕಿದ್ದ ನವವಿವಾಹಿತೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಇಂದು [ಭಾನುವಾರ] ಘಟನೆ ದಾವಣಗೆರೆಯ ಕೆಟಿಜೆ ನಗರದಲ್ಲಿ ನಡೆದಿದೆ. 

ಚಿತ್ರದುರ್ಗ ಜಿಲ್ಲೆ ಕೋಣುರು ಗ್ರಾಮದ ಯುವತಿ ಶಿಲ್ಪಾ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ. ಕೈ ಮೇಲೆ ನಾಲ್ವರ ಹೆಸರು ಬರೆದುಕೊಂಡು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
 
ಚಿತ್ರದುರ್ಗ ಜಿಲ್ಲೆ ಕೋಣುರು ಗ್ರಾಮದ ಯುವತಿ ಶಿಲ್ಪಾ ಹಾಗೂ ಅದೇ ಗ್ರಾಮದ ಮಂಜು ನಡುವೆ ಕಳೆದ ಒಂದು ವಾರದ ಹಿಂದೆ ಮದುವೆಯಾಗಿತ್ತು.  ಆದ್ರೆ, ಮಂಜು ಹಾಗೂ ಶಿಲ್ಪಾ ಬೇರೆ ಬೇರೆ ಸಮುದಾಯಕ್ಕೆ ಸೇರಿದ್ದಾರೆ ಎಂದು ತಿಳಿದುಬಂದಿದೆ.

Tap to resize

Latest Videos

click me!