ಡಿವೋರ್ಸ್ ಕೇಸ್ ವಿಚಾರಣೆಗೆ ಆಗಮಿಸಿದ್ದ ಪತ್ನಿಗೆ ಕೋರ್ಟ್ ಒಳಗಡೆ ಚಾಕು ಇರಿದ ಪತಿ

Published : Sep 20, 2025, 03:27 PM IST
Davanagere News

ಸಾರಾಂಶ

ಡಿವೋರ್ಸ್ ಕೇಸ್ ವಿಚಾರಣೆಗೆ ಆಗಮಿಸಿದ್ದ ಪತ್ನಿಗೆ ಕೋರ್ಟ್ ಒಳಗಡೆ ಚಾಕು ಇರಿದ ಪತಿ, 30 ವರ್ಷದ ಪದ್ಮಾವತಿ ತೀವ್ರ ಗಾಯಗೊಂಡಿದ್ದು ಆಸ್ಪತ್ರೆ ದಾಖಲಿಸಲಾಗಿದೆ. ಇತ್ತ ಪತಿ ಪ್ರವೀಣ್ ಕುಮಾರ್‌ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದಾವಣಗೆರೆ (ಸೆ.20) ಪತಿ ಹಾಗೂ ಪತ್ನಿ ನಡುವೆ ಹಲವು ದಿನಗಳಿಂದ ನಡೆಯುತ್ತಿದ್ದ ಮನಸ್ತಾಪ, ಜಗಳಕ್ಕೆ ಅಂತ್ಯ ಹಾಡಲು ಡಿವೋರ್ಸ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಕೌಟುಂಬಿಕ ನ್ಯಾಯಾಲಯದಲ್ಲಿ ಈ ಕುರಿತು ಪ್ರಕರಣ ವಿಚಾರಣೆ ನಡೆಯುತ್ತಿತ್ತು. ಕೋರ್ಟ್ ಸೂಚನೆ ಮೇರೆ ಡಿವೋರ್ಸ್ ಅರ್ಜಿ ವಿಚಾರಣೆಗೆ ಕೋರ್ಟ್‌ಗೆ ಆಗಮಿಸಿದ್ದಾರೆ. ಇತ್ತ ಪತಿ ಕೂಡ ಅರ್ಜಿ ವಿಚಾರಣೆಗಾಗಿ ಆಗಮಿಸಿದ್ದಾರೆ. ಕೋರ್ಟ್ ಹಾಲ್ ಒಳಗೆ ಬರುತ್ತಿದ್ದಂತೆ ಪತ್ನಿ ಮೇಲೆ ಪತಿ ಚಾಕು ಇರಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣೆಗೆರೆ ಕೋರ್ಟ್ ಒಳಗಡೆ ಈ ಘಟನೆ ನಡೆದಿದೆ. ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆ ದಾಖಲಿಸಲಾಗಿದೆ.

ಡಿವೋರ್ಸ್ ಕೇಸ್ ವಿಚಾರಣೆಗೆ ಆಗಮಿಸಿದ ವೇಳೆ ಘಟನೆ

ದಾವಣೆಗೆರ ನಿವಾಸಿಯಾದ 30 ವರ್ಷದ ಪದ್ಮಾವತಿ, ಪತತಿ ಪ್ರವೀಣ್ ಕುಮಾರ್‌ನಿಂದ ವಿಚ್ಚೇದನ ಬಯಸಿದ್ದರು. ಪತಿ ಜೊತೆಗಿನ ಮನಸ್ತಾಪ ಸೇರಿದಂತೆ ಹಲವು ಕಾರಣಗಳಿಂದ ಸಂಸಾರ ಮುಂದವರಿಸಲು ಸಾಧ್ಯವಾಗದೇ ವಿಚ್ಚೇದನ ಬಯಸಿದ್ದರು. ಇಬ್ಬರು ಬೇರೆ ಬೇರೆಯಾಗಿದ್ದರು. ಪದ್ಮಾವತಿ ತಾಯಿ ಮನೆಗೆ ಹಿಂದಿರುಗಿದ್ದರು. ಹೀಗಾಗಿ ವಿಚ್ಚೇದನ ಅರ್ಜಿ ದಾವಣೆಗೆರೆ ಕೋರ್ಟ್‌ನಲ್ಲಿ ದಾಖಲಾಗಿತ್ತು. ಕೋರ್ಟ್ ಸೂಚನೆಯಂತೆ ಅರ್ಜಿ ವಿಚಾರಣೆಗೆ ಪತಿ ಪ್ರವೀಣ್ ಕುಮಾರ್ ಹಾಗೂ ಪತ್ನಿ ಪದ್ಮಾವತಿ ಆಗಮಿಸಿದ್ದರು. ಮೊದಲೇ ಪ್ಲಾನ್ ಮಾಡಿದ್ದ ಪ್ರವೀಣ್ ಕುಮಾರ್ ಚಾಕು ತೆಗೆದುಕೊಂಡು ಕೋರ್ಟ್ ಹಾಲ್‌ಗೆ ಆಗಮಿಸಿದ್ದ. ಪದ್ಮಾವತಿ ಕೋರ್ಟ್ ಹಾಲ್ ಪ್ರವೇಶಿಸಿದ ಬೆನ್ನಲ್ಲೇ ಅರ್ಜಿ ವಿಚಾರಣೆ ಆರಂಭಗೊಂಡಿತ್ತು. ಆದರೆ ಈ ಕ್ಷಣದಲ್ಲಿ ಪ್ರವೀಣ್ ಕುಮಾರ್, ಪತ್ನಿ ಪದ್ಮಾವತಿ ಮೇಲೆ ದಾಳಿ ಮಾಡಿದ್ದಾನೆ. ಚಾಕುವಿನಿಂದ ಇರಿದಿದ್ದಾನೆ.

ವಂದೇ ಭಾರತ್‌ ರೈಲಿಗೆ ಮತ್ತೆ ಕಲ್ಲು ತೂರಾಟ: ಗಾಜಿಗೆ ಹಾನಿ

ತಕ್ಷಣವೇ ಪ್ರವೀಣ್ ಕುಮಾರ್ ವಶಕ್ಕೆ ಪಡೆದ ಪೊಲೀಸರು

ಪ್ರವೀಣ್ ಕುಮಾರ್ , ಪತ್ನಿ ಪದ್ಮಾವತಿ ಮೇಲೆ ದಾಳಿ ಮಾಡುತ್ತಿದ್ದಂತೆ ಪೊಲೀಸರು ಸೇರಿದಂತೆ ಇತರ ಸಿಬ್ಬಂದಿಗಳು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರವೀಣ್ ಕುಮಾರ್ ಹಿಡಿದ ಪೊಲೀಸರು ಚಾಕು ಕಸಿದುಕೊಂಡಿದ್ದಾರೆ. ಬಳಿಕ ಪ್ರವೀಣ್ ಕುಮಾರ್ ವಶಕ್ಕೆ ಪಡೆದಿದ್ದಾರೆ. ಇತ್ತ ಪದ್ಮಾವತಿಯನ್ನು ಪೊಲೀಸರು ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ತೀವ್ರವಾಗಿ ಗಾಯಗೊಂಡ ಪದ್ಮಾವತಿ

ಪತಿ ಪ್ರವೀಣ್ ಕುಮಾರ್ ಏಕಾಏಕಿ ಚಾಕು ಹಿಡಿದು ದಾಳಿ ಮಾಡಿದ್ದಾರೆ. ಹಲವು ಬಾರಿ ಇರಿದಿದ್ದಾರೆ. ಇದರಿಂದ ಪದ್ಮಾವತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಪದ್ಮಾವತಿ ಅಸ್ವಸ್ಥಗೊಂಡು ಕುಸಿದಿದ್ದಾರೆ. ಚಿಗಟೇರಿ ಆಸ್ಪತ್ರೆಯಲ್ಲಿ ಪದ್ಮಾವತಿಗೆ ಚಿಕಿತ್ಸೆ ಮುಂದುವರಿದಿದೆ.

ದಾಳಿ ವೇಳೆ ಪ್ರವೀಣ್ ಕುಮಾರ್ ಕೈಗೂ ಗಾಯ

ಪತ್ನಿ ಪದ್ಮಾವತಿ ಮೇಲೆ ದಾಳಿ ಮಾಡುವಾಗ ಪತಿ ಪ್ರವೀಣ್ ಕುಮಾರ್ ಕೈಗೆ ಗಾಯವಾಗಿದೆ. ಪದ್ಮಾವತಿ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಚಾಕು ಪ್ರವೀಣ್ ಕುಮಾರ್ ಕೈಗೆ ತಾಗಿದೆ. ಹೀಗಾಗಿ ಪ್ರವೀಣ್ ಕುಮಾರ್ ಕೈಗೆ ಗಾಯವಾಗಿದೆ. ಇತ್ತ ಪೊಲೀಸರು ಧಾವಿಸಿ ಪ್ರವೀಣ್ ಕುಮಾರ್‌ನಿಂದ ಚಾಕು ವಶಕ್ಕೆ ಪಡೆಯುವಾಗಲೂ ಗಾಯವಾಗಿದೆ. ಹೀಗಾಗಿ ಪ್ರವೀಣ್ ಕುಮಾರ್‌ನನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಾಗಿದೆ.

ಪ್ರಕರಣ ದಾಖಲಿಸಿ ಬಡಾವಣೆ ಪೊಲೀಸ್

ದಾವಣೆಗೆರೆ ಬಡಾವಣೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬಸವ ಎಕ್ಸ್‌ಪ್ರೆಸ್ ರೈಲಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ; ಬೋಗಿ ಗಾಜು ಪುಡಿಪುಡಿ!

 

 

PREV
Read more Articles on
click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ದಾವಣಗೆರೆ ಮಹಿಳೆಯನ್ನ ಕಚ್ಚಿಕೊಂದ 2 ರಾಟ್‌ವೀಲರ್ ನಾಯಿಗಳು ಜನರ ಹಲ್ಲೆಯಿಂದ ಸಾವು; ಶ್ವಾನಗಳ ಮಾಲೀಕ ಬಂಧನ