ಬಿ.ಎಸ್. ಯಡಿಯೂರಪ್ಪ ವಿರುದ್ಧ ವೇದಿಕೆಯಲ್ಲೇ ಧಿಕ್ಕಾರ ಕೂಗಿದ ಶಾಸಕ

Published : Oct 14, 2019, 12:33 PM ISTUpdated : Oct 14, 2019, 12:35 PM IST
ಬಿ.ಎಸ್. ಯಡಿಯೂರಪ್ಪ ವಿರುದ್ಧ ವೇದಿಕೆಯಲ್ಲೇ ಧಿಕ್ಕಾರ ಕೂಗಿದ ಶಾಸಕ

ಸಾರಾಂಶ

ಕಾರ್ಯಕ್ರಮದ ವೇದಿಕೆಯಲ್ಲೇ  ಶಾಸಕರೋರ್ವರು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಧಿಕ್ಕಾರ ಕೂಗಿದರು.

ದಾವಣಗೆರೆ [ಅ.14]:  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ವೇದಿಕೆಯಲ್ಲೇ ಧಿಕ್ಕಾರದ ಘೋಷಣೆ ಕೂಗಿದ ಹರಿಹರದ ಕಾಂಗ್ರೆಸ್ ಶಾಸಕ ಎಸ್.ರಾಮಪ್ಪ, ತಮ್ಮ ಕ್ಷೇತ್ರದ ಅಭಿವೃದ್ಧಿಗೆ ನೀಡುವ ಅನುದಾನದಲ್ಲಿ ಕಡಿತ ಮಾಡಿದರೆ ಕ್ಷೇತ್ರದ ಜನರ ಸಮೇತ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಬೆದರಿಕೆಯೊಡ್ಡಿದರು.

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಇನ್ನು 2- 3 ತಿಂಗಳಷ್ಟೇ ಅಧಿಕಾರದಲ್ಲಿರುತ್ತದೆ. ಆ ನಂತರ ಮತ್ತೆ ನಮ್ಮ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಾಡಿನ ಜನತೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಮೇಲಿರಲಿ ಎಂದು ಮನವಿ ಮಾಡಿದರು.

ಹಿಂದುತ್ವ, ಕೋಮುವಾದದ ಮೇಲೆ ಅಧಿಕಾರಕ್ಕೆ ಬರುವ ಬಿಜೆಪಿಯವರಿಗೆ ತಕ್ಕ ಪಾಠ ಕಲಿಸುವ ಕೆಲಸವನ್ನು ಜನರು ಮಾಡಬೇಕು. ಜಗತ್ತಿನಲ್ಲೇ ಅತೀ ಹೆಚ್ಚು ಸುಳ್ಳು ಹೇಳುವ ಪ್ರಧಾನಿಯೆಂದರೆ ಅದು ನರೇಂದ್ರ ಮೋದಿ ಎಂದು ದೂರಿದರು.

PREV
click me!

Recommended Stories

ಕಾಂಗ್ರೆಸ್‌ನಲ್ಲಿ ಆಂತರಿಕ ಕಚ್ಚಾಟದಿಂದ ರಾಜ್ಯದ ಆಡಳಿತ ಕುಸಿತ: ಬಿ.ವೈ.ವಿಜಯೇಂದ್ರ
ಹಾವೇರಿ: ಆಕಳ ಕರುವನ್ನು ತೊಟ್ಟಿಲಲ್ಲಿ ಹಾಕಿ ನಾಮಕರಣ ಮಾಡಿ ಸಂಭ್ರಮಿಸಿದ ಕುಟುಂಬ!