ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪೊಲೀಸ್ ಪೇದೆಯೊಬ್ಬರು ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 44 ವರ್ಷದ ಕುಮಾರ್ ಮೃತಪಟ್ಟ ಪೊಲೀಸ್ ಪೇದೆ.
ಬೆಂಗಳೂರು: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪೊಲೀಸ್ ಪೇದೆಯೊಬ್ಬರು ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 44 ವರ್ಷದ ಕುಮಾರ್ ಮೃತಪಟ್ಟ ಪೊಲೀಸ್ ಪೇದೆ, ಕುಮಾರ್ ಬೆಂಗಳೂರು ನಗರದ ಅಶೋಕನಗರ ಟ್ರಾಫಿಕ್ ಸ್ಟೇಷನ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಕುಮಾರ್ ಅವರ ಮಗಳಿಗೂ ಕ್ಸಾನ್ಸರ್ ಕಾಣಿಸಿಕೊಂಡಿತ್ತು, ಮಗಳಿಗೂ ಚಿಕಿತ್ಸೆ ನೀಡಲಾಗಿದ್ದು, ಆಕೆ ಚೇತರಿಸಿಕೊಂಡಿದ್ದರು. ಆದರೆ ತನ್ನಿಂದಲೇ ಮಗಳಿಗೂ ಕ್ಯಾನ್ಸರ್ ಬಂತು ಎಂದು ನೊಂದು ಕುಮಾರ್ ಬದುಕಿಗೆ ಗುಡ್‌ಬಾಯ್ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಮೂಲದ ಕುಮಾರ್ ಬೆಂಗಳೂರಿನ ಡೈರಿ ಸರ್ಕಲ್ (Dairy circle) ಬಳಿಯಿರುವ ಪೊಲೀಸ್ ಕ್ವಾಟ್ರಸ್ ನಲ್ಲಿ ಕುಟುಂಬದೊಂದಿಗೆ ವಾಸವಿದ್ದರು. ಕೆಲ ವರ್ಷಗಳಿಂದ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಇತ್ತೀಚೆಗೆ ಮಗಳಲ್ಲಿಯೂ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಮಗಳಿಗೂ ಚಿಕಿತ್ಸೆ ನೀಡಿದ್ದು, ಆಕೆ ಹುಷಾರಾಗಿದ್ದರು. ಆದರೆ ಮುಂದೆ ಉಲ್ಬಣಿಸಬಹುದು, ನನ್ನ ಕಾರಣಕ್ಕೆ ಆಕೆಗೂ ಬಂತು ಎಂದು ನೊಂದು ಕುಮಾರ್ ಸಾವಿಗೆ ಶರಣಾಗಿದ್ದಾರೆ.
ಸಾವಿನಲ್ಲೂ ಸಾರ್ಥಕತೆ
ಕುಮಾರ್ ಅವರ ಸಾವಿನ ಶೋಕದ ನಡುವೆಯೂ ಕುಮಾರ್ (Kumar) ಅವರ ಕಣ್ಣುಗಳನ್ನು ದಾನ (Eye Donate) ಮಾಡಿ ಕುಟುಂಬಸ್ಥರು ಸಾವಿನಲ್ಲು ಸಾರ್ಥಕತೆ ಮೆರೆದಿದ್ದಾರೆ. ಅವರ ಮೃತದೇಹವನ್ನು ನಂತರ ಹುಟ್ಟೂರು ದಾವಣಗೆರೆಯ ಚೆನ್ನಗಿರಿಗೆ ತೆಗೆದುಕೊಂಡು ಹೋಗಲಾಗಿದೆ.
ಬಾಗಲಕೋಟೆ: ಬಡತನದಿಂದ ಬೇಸತ್ತ ತಾಯಿ: ಮೂವರು ಹೆಣ್ಣು ಮಕ್ಕಳಿಗೆ ವಿಷವುಣಿಸಿ ತಾನೂ ಸಾವಿಗೆ ಶರಣು