ಪ್ರವೀಣ್ ಶವಯಾತ್ರೆ ವೇಳೆ ಲಾಠಿ ಚಾರ್ಜ್ ಮಾಡಿದ್ದ ಪೊಲೀಸರ ವರ್ಗಾವಣೆ

By Ramesh BFirst Published Jul 29, 2022, 1:11 PM IST
Highlights

ಪ್ರವೀಣ್ ನೆಟ್ಟಾರು ಅವರ ಶವಯಾತ್ರೆ ವೇಳೆ ಲಾಠಿ ಚಾರ್ಜ್ ಮಾಡಿದ್ದ ಇಬ್ಬರು ಪಿಎಸ್‌ಐಗಳನ್ನ ವರ್ಗಾವಣೆ ಮಾಡಲಾಗಿದೆ.  ವರ್ಗಾವಣೆಯಾದ ಪಿಎಸ್ಸೈಗಳಿಗೆ ಜಾಗ ತೋರಿಸದೇ ಮಂಗಳೂರು ಐಜಿ ಕಚೇರಿಯಲ್ಲಿ ವರದಿ ಮಾಡಿಕೊಳ್ಳಲು ಸೂಚನೆ ನೀಡಿಲಾಗಿದೆ.

ಮಂಗಳೂರು, (ಜುಲೈ.29): ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಶವಯಾತ್ರೆ ವೇಳೆ ಲಾಠಿ ಚಾರ್ಜ್ (Lathi Charge) ಮಾಡಿದ ಪೊಲೀಸರನ್ನು ವರ್ಗಾವಣೆ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಮತ್ತು ಸುಬ್ರಹ್ಮಣ್ಯ ಠಾಣೆಯ ಪಿಎಸ್ಸೈಗಳನ್ನು ವರ್ಗಾವಣೆ ಮಾಡಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಆದೇಶ ಇಂದು(ಶುಕ್ರವಾರ) ಆದೇಶ ಹೊರಡಿಸಿದ್ದಾರೆ.ಅಲ್ಲದೇ ವರ್ಗಾವಣೆಯಾದ ಪಿಎಸ್ಸೈಗಳಿಗೆ ಜಾಗ ತೋರಿಸದೇ ಮಂಗಳೂರು ಐಜಿ ಕಚೇರಿಯಲ್ಲಿ ವರದಿ ಮಾಡಿಕೊಳ್ಳಲು ಸೂಚನೆ ನೀಡಿಲಾಗಿದೆ.

ಬೆಳ್ಳಾರೆಗೆ ನೂತನ ಪಿಎಸೈ ಆಗಿ ಕುಂದಾಪುರ ಠಾಣೆಯಯ ಸುಹಾಸ್ ಹಾಗೂ ವಿಟ್ಲ ಠಾಣಾ PSI ಆಗಿದ್ದ ಮಂಜುನಾಥ್ ಅವರನ್ನ ಸುಬ್ರಹ್ಮಣ್ಯ ಠಾಣೆಗೆ ನೇಮಕ ಮಾಡಲಾಗಿದೆ.

ಪ್ರವೀಣ್ ಹತ್ಯೆ: ಎನ್‌ಐಎ ತನಿಖೆಗೆ ಹಿಂದೂ ಮುಖಂಡರಿಂದ ಆಗ್ರಹ

ಮಂಗಳವಾರ ದುಷ್ಕರ್ಮಿಗಳಿಂದ ಹತ್ಯೆಗೊಳಗಾಗಿದ್ದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಶವಯಾತ್ರೆ ವೇಳೆ ಪೊಲೀಸರು ಮತ್ತಯ ಹಿಂದೂ ಸಂಘಟನೆ ಯುವಕರ ನಡುವೆ ವಾಗ್ವಾದ ನಡೆದಿದೆ. ಈ ವೇಳೇ ಕೆಲವರು ಪೊಲೀಸರತ್ತ ಕಲ್ಲುತೂರಾಟ ನಡೆಸಿದ್ದರಿಂದ, ಪರಿಸ್ಥಿತಿಯನ್ನು ತಿಳಿಗೊಳಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು.

ಕಾಸರಗೋಡಿನ ಹಿರಿಯ ಆರ್ ಎಸ್ ಎಸ್ ಕಾರ್ಯಕರ್ತ ರಮೇಶ್ ಮೇಲೂ ಲಾಠಿ ಚಾರ್ಜ್ ಮಾಡಿದ್ದರು. ಈ ವಿಡಿಯೋ ಸಾಮಾಜಿ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿತ್ತು. ಅಲ್ಲದೇ ಈ ಘಟನೆ ವಿರುದ್ಧ ಹಿಂದೂ ಪರ ಸಂಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದವು. ಅಲ್ಲದೇ ಪೊಲೀಸರ ಮೇಲೆ ಕ್ರಮ ಕೈಗೊಳ್ಳದ ಹಿನ್ನೆಲೆ ನಿನ್ನೆ(ಗುರುವಾರ) ಬೆಳ್ಳಾತೆಗೆ ಆಗಮಿಸಿದ್ದ ಸಿಎಂ ಬೊಮ್ಮಾಯಿಗೂ ಧಿಕ್ಕಾರ ಕೂಗಿದ್ದರು. ಇದೀಗ ಹಿಂದೂ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಲಾಠಿ ಚಾರ್ಜ್ ಮಾಡಿದ್ದ ಪೊಲೀಸರನ್ನು ವರ್ಗಾವಣೆ ಮಾಡಿದೆ.

 ಪ್ರವೀಣ್ ನೆಟ್ಟಾರು ಅಂತ್ಯ ಸಂಸ್ಕಾರ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆಯೇ ಲಾಠಿಜಾರ್ಜ್ ನಡೆದಿರುವುದು ಉರಿವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಅದರಲ್ಲೂ ಈ ಲಾಠಿ ಜಾರ್ಜ್ ಸಂದರ್ಭದಲ್ಲಿ  ಕಾಸರಗೋಡು ನಗರಸಭೆಯ ವಿಪಕ್ಷ ನಾಯಕ ಪಿ.ರಮೇಶ್ ತೋರಿದ ಪ್ರತಿರೋಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೊಡೆಯುವುದಾದ್ರೆ ಹೊಡಿ ಯೂನಿಫಾರ್ಮ್ ಹಾಕಿ ಹೊಡಿ ಎಂದು ಆಕ್ರೋಶಭರಿತಾಗಿ ಹೇಳಿದ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಅನಂತ ಕುಮಾರ್ ಹೆಗಡೆ ಜೊತೆಯಲ್ಲಿ ರಾಷ್ಟ್ರ ಧ್ವಜ ಹಾರಿಸಿದ್ದ ಇವರನ್ನು ಕಾಸರಗೋಡಿನಲ್ಲಿ ಹುಬ್ಬಳ್ಳಿ ರಮೇಶ್ ಎಂದೇ ಕರೆಯಲಾಗುತ್ತದೆ.

click me!