ಅಂಗಡಿ ಎದುರಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ಭೀಕರ ದಾಳಿ ಮಾಡಿ ಕಣ್ಣಗುಡ್ಡೆ ಕಿತ್ತು ಸಾಯಿಸಿದ ಬೀದಿ ನಾಯಿ!

Published : Nov 15, 2025, 09:14 PM IST
Ullal Dog Attack Dakshina Kannada

ಸಾರಾಂಶ

ಉಳ್ಳಾಲದ ಕುಂಪಲದಲ್ಲಿ ಬೀದಿ ನಾಯಿಯೊಂದು ನಡೆಸಿದ ಭೀಕರ ದಾಳಿಗೆ ದಯಾನಂದ (54) ಎಂಬವರು ಮೃತಪಟ್ಟಿದ್ದಾರೆ. ನಸುಕಿನಲ್ಲಿ ವ್ಯಕ್ತಿಯನ್ನು ಅಟ್ಟಾಡಿಸಿ ಕೊಂದ ನಾಯಿಯು, ಮೃತದೇಹದ ಬಳಿ ರಕ್ತ ನೆಕ್ಕುತ್ತಾ ಕುಳಿತಿತ್ತು.

ಉಳ್ಳಾಲ (ನ.15): ನಾಯಿ ದಾಳಿಯಿಂದ ಮಧ್ಯವಯಸ್ಕ ಭೀಬತ್ಸವಾಗಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕು ಕುಂಪಲ ಬೈಪಾಸ್‌ನಲ್ಲಿರುವ ಮನೆಯೊಂದರ ಅಂಗಳದಲ್ಲಿ ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಕುಂಪಲ ಮೂರುಕಟ್ಟೆ ನಿವಾಸಿ ದಯಾನಂದ (54) ಮೃತರು.

ಅಂಗಡಿಯೊಂದರ ಎದುರು ಮಲಗಿದ್ದ ಅವರ ಮೇಲೆ ಬೆಳಗ್ಗೆ 3 ರಿಂದ 4 ಗಂಟೆ ಹೊತ್ತಿಗೆ ಬೀದಿ ನಾಯಿ ದಾಳಿ ನಡೆಸಿದ್ದು, ಅವರು ರಸ್ತೆ ಬದಿಯಿಂದ ತಪ್ಪಿಸಿಕೊಂಡು ಪಕ್ಕದ ಮನೆಯೊಂದಕ್ಕೆ ಹೋದರೂ ಅಟ್ಟಿಸಿಕೊಂಡು ಬಂದು ದಾಳಿ ಮಾಡಿದೆ. ಮುಖ, ಕೈ, ಕಾಲು, ದೇಹಕ್ಕೆ ಭೀಕರವಾಗಿ ಕಚ್ಚಿದಾಳಿ ಮಾಡಿದೆ. ಮೂಗಿನ ಎಡ ಭಾಗ ಮತ್ತು ಎಡ ಕಣ್ಣಿನ ಗುಡ್ಡೆ ಕಿತ್ತೋಗಿದ್ದು ಮುಖದ ಎಡ ಭಾಗವೇ ಜರ್ಜರಿತವಾಗಿತ್ತು.

ಬೆಳಗ್ಗೆ ಮನೆ ಅಂಗಳದಲ್ಲಿ ದಯಾನಂದ ಮೃತದೇಹ ಪತ್ತೆಯಾಗಿದೆ. ನಾಯಿ ಕೂಡಾ ಮೃತದೇಹದ ಮೇಲೆ ಕುಳಿತು ರಕ್ತ ನೆಕ್ಕುತ್ತಲೇ ಇತ್ತು. ಓಡಿಸಿದರೂ ನಾಯಿ ತೆರಳಿರಲಿಲ್ಲ. ಬಳಿಕ ರಿಕ್ಷಾ ಅಲ್ಲಿಂದ ತೆಗೆಯುವಾಗ ಸ್ಥಳದಿಂದ ತೆರಳಿ ಮತ್ತೆ ಅಂಗಡಿ ಸಮೀಪವಿದ್ದ ರಕ್ತವನ್ನು ನೆಕ್ಕುತ್ತಲೇ ಇತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪೊಲೀಸರು ನಾಯಿಯನ್ನು ವಶಕ್ಕೆ ಪಡೆದು ಅದರ ಮುಖದಲ್ಲಿ ಮೆತ್ತಿಕೊಂಡಿದ್ದ ರಕ್ತ ಮಾದರಿಗಳೆಲ್ಲವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಘಟನೆ ಆಗಿದ್ದು ಹೇಗೆ?

ಕುಂಪಲದ ನಿವಾಸಿ ದಯಾನಂದ ಅವರು ಅವಿವಾಹಿತರಾಗಿದ್ದು, ಕುಡಿತದ ಚಟ ಹೊಂದಿದ್ದರು. ಅವರು ಸಾಮಾನ್ಯವಾಗಿ ರಾತ್ರಿ ವೇಳೆ ಅಂಗಡಿಗಳ ಮುಂದೆ ಮಲಗಿ ಬೆಳಗ್ಗೆ ಮನೆಗೆ ಸೇರುತ್ತಿದ್ದರು. ಶುಕ್ರವಾರ ಮುಂಜಾನೆ 3:30 ರಿಂದ 4:00 ಗಂಟೆಯ ನಡುವೆ, ದಯಾನಂದ್ ಅವರು ಅಂಗಡಿ ಎದುರು ಮಲಗಿದ್ದಾಗ ಬೀದಿ ನಾಯಿಯೊಂದು ಅವರ ಮೇಲೆ ಭೀಕರವಾಗಿ ದಾಳಿ ಮಾಡಿದೆ.

ಬೀದಿ ನಾಯಿಯು ದಯಾನಂದ ಅವರ ಮುಖ, ಕೈ, ಕಾಲು ಮತ್ತು ದೇಹದ ಹಲವು ಭಾಗಗಳನ್ನು ಕಚ್ಚಿದ್ದು, ನಿರ್ದಿಷ್ಟವಾಗಿ ಎಡ ಕಣ್ಣಿನ ಗುಡ್ಡೆಯನ್ನು ಕಿತ್ತು, ಮುಖದ ಎಡಭಾಗವನ್ನು ಜರ್ಜರಿತಗೊಳಿಸಿತ್ತು. ಬೆಳಗ್ಗೆ 7:30ರ ಸುಮಾರಿಗೆ ಪಕ್ಕದ ಮನೆಯ ಅಂಗಳದಲ್ಲಿ ದಯಾನಂದ ಅವರ ರಕ್ತಸಿಕ್ತ ಮೃತದೇಹ ಪತ್ತೆಯಾಗಿದ್ದು, ಹತ್ತಿರದ ರಸ್ತೆಯಲ್ಲಿ ಕಣ್ಣಗುಡ್ಡೆಯು ಬಿದ್ದಿರುವುದು ಕಂಡುಬಂದಿದೆ

ಪ್ರಕರಣ ದಾಖಲಿಸಿದ ಉಳ್ಳಾಲ ಪೊಲೀಸ್‌

ದಾಳಿ ಮಾಡಿದ ನಾಯಿ ಸ್ಥಳೀಯರಿಗೆ ಕಂಡುಬಂದಿದ್ದು, ಅದು ಮೃತದೇಹದ ಪಕ್ಕದಲ್ಲೇ ಕುಳಿತು ರಕ್ತ ನೆಕ್ಕುತ್ತಿತ್ತು. ಸ್ಥಳೀಯರು ಓಡಿಸಿದರೂ ಅದು ಸುಲಭವಾಗಿ ಜಾಗ ಬಿಟ್ಟಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಉಳ್ಳಾಲ ಠಾಣೆ ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ತನಿಖೆಗಾಗಿ FSL ಮತ್ತು ಸೋಕೋ (SOCO - Scene of Crime Officers) ತಂಡಗಳು ಸಾಕ್ಷ್ಯಗಳನ್ನು ಸಂಗ್ರಹಿಸಿವೆ. ದಾಳಿಗೆ ಬಳಸಿದ ನಾಯಿಯ ಮುಖದ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಸ್ಥಳೀಯರ ಆತಂಕ

ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕುಂಪಲದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದೆ ಎಂದು ಸ್ಥಳೀಯರು ಆರೋಪಿಸಿದ್ದು, ಈ ದುರಂತದಿಂದ ಪೋಷಕರು "ದೊಡ್ಡವರನ್ನೇ ಬಿಡದ ನಾಯಿಗಳು ಮಕ್ಕಳನ್ನು ಬಿಡಬಹುದೇ?" ಎಂದು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ನಂತರ, ಸೋಮೇಶ್ವರ ಪುರಸಭೆಯ ಉಪಾಧ್ಯಕ್ಷ ರವಿಶಂಕರ್ ಅವರು ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

PREV
Read more Articles on
click me!

Recommended Stories

ಮಂಗಳೂರು: 'ಡಿಕೆಶಿ ಮುಂದಿನ ಸಿಎಂ’ ಘೋಷಣೆ ಕೂಗಿದ ಐವನ್, ಮಿಥುನ್‌ಗೆ ನೋಟಿಸ್?
ಕರಾವಳಿಯಲ್ಲಿ ಶಿವಗಿರಿ ಮಠ ಶಾಖೆಗೆ 5 ಎಕರೆ: ಸಿಎಂ ಸಿದ್ದರಾಮಯ್ಯ ಭರವಸೆ