
ಮಂಗಳೂರು (ನ.03) ಅಫಾಘಾತದಲ್ಲಿ ಹಲವು ಗಾಯಗೊಂಡಿದ್ದಾರೆ. ಈ ಪೈಕಿ ಪೋಷಕರು ಹಾಗೂ ಮೂರು ತಿಂಗಳ ಮಗು ಕೂಡ ಸೇರಿತ್ತು. ಪೋಷಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ ಮಗುವಿನ ಮೇಲ್ನೋಟಕ್ಕೆ ಗಾಯವಿಲ್ಲ. ಆದರೆ ಮೂರು ತಿಂಗಳ ಹಸುಗೂಸು, ಹೀಗಾಗಿ ತಲೆ ಸ್ಕ್ಯಾನಿಂಗ್ ಸೇರಿದಂತೆ ಪರೀಕ್ಷೆಗಳು ಅನಿವಾರ್ಯವಾಗಿತ್ತು. ಮಗುವನ್ನು ಎತ್ತಿಕೊಂಡು ತಪಾಸಣೆ ನಡೆಸಲು ಪೋಷಕರು ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ಈ ವೇಳೆ ಮಹಾತಾಯಿಯೊಬ್ಬರು ಈ ಮೂರು ತಿಂಗಳ ಕಂದಮ್ಮನ ಎದೆಗಪ್ಪಿ ನಗರದೆಲ್ಲೆಡೆ ಸಂಚರಿ ಮಗುವಿನ ಸ್ಕ್ಯಾನಿಂಗ್ ಸೇರಿದಂತೆ ಎಲ್ಲಾ ತಪಾಸಣೆ ನಡೆಸಿದ್ದಾರೆ. ಮಗು ಸೇಫ್ ಅನ್ನೋದು ಖಚಿತವಾಗಿದೆ. ಇತ್ತ ಮಹಾ ತಾಯಿ ಮಾನವೀಯ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಘಟನೆ ಕುರಿತು ಉಡುಪಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯೋಗೇಶ್ ಆಚಾರ್ಯ ಹೇಳಿಕೊಂಡಿದ್ದಾರೆ.
ಯೋಗೇಶ್ ಆಚಾರ್ಯ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ. ನಡೆದ ಘಟನೆಯನ್ನು ವಿವರಿಸಿದ್ದಾರೆ. ಮಂಗಳೂರಿನಿಂದ ಸುಳ್ಯ ಬರುತ್ತಿದ್ದ ನಾನು ಸಂಪ್ಯ ದಾಟಿ ಮುಂದೆ ಬರುತ್ತಿದ್ದಂತೆ ಭೀಕರ ಅಪಘಾತದ ಮಾಹಿತಿ ಬಂತು,ತಕ್ಷಣ ನಾನು AIKMCC ಅಂಬುಲನ್ಸ್ ನೊಂದಿಗೆ ಮೆಡ್ ಲ್ಯಾನ್ಡ್ ಆಸ್ಪತ್ರೆಯತ್ತ ಧಾವಿಸಿ ಬಂದೆ,ಹಲವರು ತೀವ್ರ ಗಾಯಗೊಂಡಿದ್ದರು,ಅವರಲ್ಲಿ ಇಬ್ಬರನ್ನು ಮಂಗಳೂರು ಶಿಫ್ಟ್ ಮಾಡಿದೆವು ಎಂದು ಯೋಗೇಶ್ ಆಚಾರ್ಯ ಹೇಳಿಕೊಂಡಿದ್ದಾರೆ. ಉಳಿದವರ ಆರೋಗ್ಯ ವಿಚಾರಿಸುತ್ತಾ ಆಸ್ಪತ್ರೆಯ ತೀವ್ರ ನಿಘಾ ಘಟಕದ ಒಳಗಿದ್ದಾಗ ಮಹಿಳೆಯೊಬ್ಬರು ಅಂದಾಜು ಮೂರು ತಿಂಗಳ ಮಗುವೊಂದನ್ನು ಎದೆಗೆ ಅಪ್ಪಿ ಹಿಡಿದು ಓಡೋಡಿ ಬಂದು ನನ್ನ ಅಂಬುಲನ್ಸ್ ನಲ್ಲಿ ಕುಳಿತು ಸರಕಾರಿ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದರು,ಕೆಲವೇ ನಿಮಿಷಗಳಲ್ಲಿ ಸರಕಾರಿ ಆಸ್ಪತ್ರೆಗೆ ತಲುಪಿದೆವು,ಅಲ್ಲಿ ಪರಿಚಯದ ಡಾ,ಕರುಣಾಕರ್ ಸರ್ ಕೂಡಾ ಇದ್ದರು. ಆ ಮಹಿಳೆ ಮಗುವಿಗೆ ಬೇಕಾದ ಹಾಲು ಹಾಗೂ ಫೀಡಿಂಗ್ ಬಾಟಲ್ ಕೂಡಾ ಆಸ್ಪತ್ರೆಗೆ ತರಿಸಿಕೊಂಡು ಮಗುವಿಗೆ ಹಾಲುಣಿಸಿದಳು
ವೈದ್ಯರ ಸಲಹೆಯಂತೆ ಮಗುವಿನ ತಲೆ ಸ್ಕ್ಯಾನಿಂಗ್ ಮಾಡಬೇಕೆಂದು ತಕ್ಷಣ ಸಿಟಿ ಆಸ್ಪತ್ರೆಗೆ ಹೋಗಲು ನನ್ನಲ್ಲಿ ತಿಳಿಸಿದರು. ಸಿಟಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಸ್ಕ್ಯಾನ್ ಮಾಡಲು ಸಾಧ್ಯವಿಲ್ಲ ಎಂದಾಗ ಆ ಮಗುವನ್ನು ಎತ್ತಿಕ್ಕೊಂಡು ಮತ್ತೆ ಬೈ ಪಾಸ್ ಸ್ಕ್ಯಾನ್ ಸೆಂಟರಿನತ್ತ ಬಂದೆವು. ಮಗುವಿನ ಸ್ಕ್ಯಾನ್ ಆಯಿತು ರಿಪೋರ್ಟ್ ಕೂಡಾ ಬಂತು ಮಗು ಸೇಫ್ ಎಂಬ ಮಾಹಿತಿ ಬಂದಾಗ ನಿಟ್ಟುಸಿರು ಬಿಟ್ಟೆವು,ಆ ತಾಯಿಯ ಕಣ್ಣಿನಲ್ಲಿ ಕಣ್ಣೀರು ಸುರಿಯುತ್ತಿತ್ತು. ನಂತರ ನಾವು ಮಗುವನ್ನು ಕರೆದುಕೊಂಡು ಸೀದಾ ಮೆಡ್ಲ್ಯಾನ್ಡ್ ಆಸ್ಪತ್ರೆಗೆ ಬಂದೆವು,ನಾವು ಬರುತ್ತಿದ್ದಂತೆ ಅಲ್ಲಿ ಬುರ್ಕಾ ದಾರಿಗಳಾದ ಹಲವಾರು ಹೆಂಗಸರು ನಮ್ಮನ್ನು ಸುತ್ತುವರಿದರು,ಎಲ್ಲರಿಗೂ ಮಗುವಿನ ಆರೋಗ್ಯ ವಿಚಾರಿಸುವ ತವಕ ಅದೆಲ್ಲವೂ ನನಗೆ ಗೊಂದಲಾಮಯವಾಗಿತ್ತು
ಆ ಗುಂಪಿನಲ್ಲಿ ನಾನು ನನ್ನೊಂದಿಗೆ ಮಗುವನ್ನು ಎತ್ತಿಕ್ಕೊಂಡು ಬಂದ ಮಹಿಳೆಗಾಗಿ ಹುಡುಕಾಡಿದೆ ಆದರೂ ಅವರನ್ನು ನನಗೆ ಕಾಣಲಿಲ್ಲ ನಂತರ ನಾನು ಆ ಮಹಿಳೆಗೆ ಫೋನ್ ಮಾಡಿದೆ. ಫೋನ್ ನಲ್ಲಿ ಮಾತನಾಡಿದಾಗ ನನಗೆ ಆಶ್ಚರ್ಯವಾಯಿತು, ಆ ತಾಯಿಗೂ ಮಗುವಿಗೂ ಯಾವುದೇ ಸಂಬಂದ ಇರಲಿಲ್ಲ,ಮಗುವಿನ ಹೆಸರು ರಿನ್ ಹಾ ಫಾತಿಮಾ ಎಂದೂ ತಿಳಿಯಿತು. ಮಾತು ಮುಂದುವರೆಸಿದಾಗ ಅಪಘಾತ ಗಂಭೀರತೆ ಅರಿತಾಗ ಆ ಮಹಿಳೆ ಆಸ್ಪತ್ರೆಗೆ ಬಂದರೆಂದೂ ಅಲ್ಲಿ ಆ ಮಗುವಿಗೆ ತುರ್ತಾಗಿ ತಲೆಯ ಸ್ಕ್ಯಾನ್ ಮಾಡಬೇಕೆಂದು ಅರಿತಾಗ ಮಗುವಿನ ಪೋಷಕರು ತೀವ್ರ ಗಾಯಗಳೊಂದಿಗೆ ಇದ್ದಾರೆಂದು ತಿಳಿದು ಮಗುವು ಗಂಡಸರ ಕೈಯಲ್ಲಿ ಉಳಿಯಲು ನಿರಾಕರಿಸುವುದನ್ನು ಕಂಡು ಆ ಮಹಿಳೆ ತನ್ನ ತಾಯ್ಥನ ಪ್ರದರ್ಶಿಸಿ ಮಗುವನ್ನು ತನ್ನ ಎದೆಗಪ್ಪಿ ಕ್ಕೊಂಡು ಅಂಬುಲನ್ಸ್ ನಲ್ಲಿ ಬಂದರೆಂದೂ ತಿಳಿಯಿತು. ಇಂತಹ ತಾಯಂದಿರನ್ನು ಪಡೆದ ಪುತ್ತೂರು ಜನತೆ ಧನ್ಯರು.
ಒಂದು ಹಸುಗೂಸಿನ ಹೃದಯ ಮಿಡಿತ ಕಂಡು ತನ್ನ ಮಗುವಿನಂತೆ ಹಾಲು ಕೊಟ್ಟು ಜೀವ ರಕ್ಷಣೆ ಗಾಗಿ ಸುಮಾರು 3 ಗಂಟೆಗಳ ಕಾಲ ಓಡಾಡಿದ ದಿಟ್ಟ ಮಾನವೀಯ ಮನಸ್ಸಿನ ಮಹಾ ತಾಯಿ ಚಂದ್ರ ಪ್ರಭಾ ಗೌಡ. ಪುತ್ತೂರು ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ. ತಾಲೂಕಿನ ಜನತೆ ತಮ್ಮ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸ್ಥಾನವನ್ನು ಸೂಕ್ತ ಅರ್ಹ ಮಹಿಳೆಯ ಕೈ ನೀಡಿದ್ದು ಅದು ಭದ್ರವಾಗಿದೆ ಎಂದು ನನ್ನ ಅನಿಸಿಕೆ ಎಂದು ಯೋಗೇಶ್ ಆಚಾರ್ಯ ಬರೆದುಕೊಂಡಿದ್ದಾರೆ.